ಜಿಎಸ್‌ಟಿ ಕ್ಯಾಲ್ಕುಲೇಟರ್

ನಿಮ್ಮ ಜಿಎಸ್‌ಟಿ ಯನ್ನು ತಕ್ಷಣವೇ ಅಂದಾಜು ಮಾಡಿ.

ಜಿಎಸ್‌ಟಿ ಕ್ಯಾಲ್ಕುಲೇಟರ್

ಜಿಎಸ್‌ಟಿ ಕ್ಯಾಲ್ಕುಲೇಟರ್ ಒಂದು ರೆಡಿ-ಟು-ಯೂಸ್ ಆನ್ಲೈನ್ ಟೂಲ್ ಆಗಿದ್ದು, ಸರಕುಗಳನ್ನು ಅವಲಂಬಿಸಿ ನೀವು ತಿಂಗಳು ಅಥವಾ ತ್ರೈಮಾಸಿಕಕ್ಕೆ ಎಷ್ಟು ಜಿಎಸ್‌ಟಿ ನೀಡಬೇಕು ಎಂಬುದನ್ನು ಕಂಡುಹಿಡಿಯಲು ನಿಮಗೆ ಅನುವು ಮಾಡಿಕೊಡುತ್ತದೆ. ವಿವಿಧ ರೀತಿಯ ಬಿಸಿನೆಸ್ ಖರೀದಿಸುವ, ಮಾರಾಟ ಮಾಡುವ ಮತ್ತು ನಡೆಸುವ ಜನರಿಗೆ ಈ ಕ್ಯಾಲ್ಕುಲೇಟರ್ ಉತ್ತಮವಾಗಿದೆ. ಸರಳವಾದ ಜಿಎಸ್‌ಟಿ ಕ್ಯಾಲ್ಕುಲೇಟರ್ ಮೊತ್ತವನ್ನು ಅವಲಂಬಿಸಿ ಪ್ರಾಡಕ್ಟ್‌ನ ಒಟ್ಟು ಅಥವಾ ನಿವ್ವಳ ಬೆಲೆಯನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ ಮತ್ತು ಶೇಕಡಾವಾರು ಆಧಾರಿತ ಜಿಎಸ್‌ಟಿ ದರಗಳ ಬ್ರೇಕ್‌ಡೌನ್ ಅನ್ನು ನಿಮಗೆ ನೀಡುತ್ತದೆ. ಇದು ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ನಡುವಿನ ದರವನ್ನು ವಿಂಗಡಿಸಲು ಸಹಾಯ ಮಾಡುತ್ತದೆ ಅಥವಾ ಸರಿಯಾದ ಐಜಿಎಸ್‌ಟಿ ಯನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

ಜಿಎಸ್‌ಟಿ ಅಡಿಯಲ್ಲಿ ತೆರಿಗೆ ಘಟಕಗಳು

ಜಿಎಸ್‌ಟಿಯಲ್ಲಿ 4 ಘಟಕಗಳಿವೆ:

  • ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ):
    ಜಿಎಸ್‌ಟಿ ಅಡಿಯಲ್ಲಿ, ರಾಜ್ಯ-ಒಳಗಣ ಟ್ರಾನ್ಸಾಕ್ಶಃಅನ್‌ಗಳು ಕೇಂದ್ರ ಸರಕುಗಳು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ), ಪರೋಕ್ಷ ತೆರಿಗೆಗೆ ಒಳಪಟ್ಟಿರುತ್ತವೆ
  • ರಾಜ್ಯ ಸರಕು ಮತ್ತು ಸೇವೆಗಳ ತೆರಿಗೆ (ಎಸ್‌ಜಿಎಸ್‌ಟಿ):
    ಸರಕು ಮತ್ತು ಸೇವೆಗಳ ಪೂರೈಕೆಗೆ ಸಂಬಂಧಿಸಿದ ರಾಜ್ಯಗಳ ಒಳ-ರಾಜ್ಯ ಟ್ರಾನ್ಸಾಕ್ಷನ್‌ಗಳು ಈ ತೆರಿಗೆಗೆ ಒಳಪಟ್ಟಿರುತ್ತವೆ. ಇದನ್ನು ಸಂಗ್ರಹಿಸಲು ಪ್ರತಿ ಆಯಾ ರಾಜ್ಯ ಸರ್ಕಾರವು ಜವಾಬ್ದಾರರಾಗಿರುತ್ತದೆ
  • ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವೆಗಳ ತೆರಿಗೆ (ಯುಟಿಜಿಎಸ್‌ಟಿ):
    ಇದು ಸರಕು ಮತ್ತು ಸೇವೆಗಳ ರಾಜ್ಯದೊಳಗಿನ ಪೂರೈಕೆಗಳ ಮೇಲೆ ವಿಧಿಸಲಾಗುವ ಪರೋಕ್ಷ ತೆರಿಗೆಯಾಗಿದೆ
  • ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ):
    ಇದು ಜಿಎಸ್‌ಟಿ ಅಡಿಯಲ್ಲಿ ಒಳಗೊಂಡಿರುವ ಪ್ರತ್ಯೇಕ ತೆರಿಗೆಯಾಗಿದೆ
    ಆಮದು ಮತ್ತು ರಫ್ತುಗಳು ಹಾಗೂ ಸರಕು ಮತ್ತು ಸೇವೆಗಳ ಅಂತರರಾಜ್ಯ ಮಾರಾಟಗಳು ಈ ತೆರಿಗೆಗೆ ಒಳಪಟ್ಟಿರುತ್ತವೆ ಕೇಂದ್ರ ಸರ್ಕಾರವು ಐಜಿಎಸ್‌ಟಿ ಕಾಯಿದೆಗೆ ಅನುಗುಣವಾಗಿ ಐಜಿಎಸ್‌ಟಿ ಅನ್ನು ನಿರ್ವಹಿಸುತ್ತದೆ ಮತ್ತು ಸಂಗ್ರಹಿಸುತ್ತದೆ. ನಂತರ ಅದು ಮಾರಾಟದಲ್ಲಿ ತೊಡಗಿರುವ ವಿವಿಧ ರಾಜ್ಯಗಳ ನಡುವೆ ಸಂಚಿತ ತೆರಿಗೆಯನ್ನು ವಿಭಜಿಸುತ್ತದೆ

ಹಕ್ಕುತ್ಯಾಗ

ಕ್ಯಾಲ್ಕುಲೇಟರ್(ಗಳು) ಜನರೇಟ್ ಮಾಡಿದ ಫಲಿತಾಂಶಗಳು ಸೂಚಕವಾಗಿವೆ. ಲೋನ್ ಮೇಲೆ ಅಪ್ಲೈ ಮಾಡಲಾದ ಬಡ್ಡಿ ದರವು ಲೋನ್ ಬುಕಿಂಗ್ ಸಮಯದಲ್ಲಿ ಚಾಲ್ತಿಯಲ್ಲಿರುವ ದರಗಳ ಮೇಲೆ ಅವಲಂಬಿತವಾಗಿರುತ್ತದೆ.

ಕ್ಯಾಲ್ಕುಲೇಟರ್ (ಗಳು) ಅದರ ಬಳಕೆದಾರರಿಗೆ/ಗ್ರಾಹಕರಿಗೆ ಬಜಾಜ್ ಫೈನಾನ್ಸ್ ಲಿಮಿಟೆಡ್ ("ಬಿಎಫ್ಎಲ್")ನಿಂದ ಪ್ರಮಾಣೀಕರಿಸಿದ ಫಲಿತಾಂಶಗಳನ್ನು ಅಥವಾ ಯಾವುದೇ ಸಂದರ್ಭಗಳಲ್ಲಿ ಬಿಎಫ್ಎಲ್‌ನಿಂದ ಬಾಧ್ಯತೆ, ಭರವಸೆ, ಖಾತರಿ, ಕೈಗೊಳ್ಳುವುದು ಅಥವಾ ಬದ್ಧತೆ, ಹಣಕಾಸು ಮತ್ತು ವೃತ್ತಿಪರ ಸಲಹೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿಲ್ಲ. ಬಳಕೆದಾರರು/ಗ್ರಾಹಕರು ಡೇಟಾ ಇನ್ಪುಟ್‌ನಿಂದ ಜನರೇಟ್ ಮಾಡಲಾದ ವಿವಿಧ ವಿವರಣಾತ್ಮಕ ಸನ್ನಿವೇಶಗಳ ಫಲಿತಾಂಶಗಳನ್ನು ಪಡೆಯಲು ಕ್ಯಾಲ್ಕುಲೇಟರ್ ಬಳಕೆದಾರರಿಗೆ/ಗ್ರಾಹಕರಿಗೆ ಸಹಾಯ ಮಾಡುವ ಸಾಧನವಾಗಿದೆ. ಕ್ಯಾಲ್ಕುಲೇಟರ್ ಬಳಕೆಯು ಸಂಪೂರ್ಣವಾಗಿ ಬಳಕೆದಾರ/ಗ್ರಾಹಕರ ಹೊಣೆಯಾಗಿದೆ, ಕ್ಯಾಲ್ಕುಲೇಟರ್ ಬಳಕೆಯಿಂದ ಉಂಟಾಗುವ ಯಾವುದೇ ಫಲಿತಾಂಶದಲ್ಲಿ ಯಾವುದೇ ದೋಷಗಳಿಗೆ ಬಿಎಫ್ಎಲ್ ಯಾವುದೇ ಕಾರಣಕ್ಕೆ ಜವಾಬ್ದಾರರಲ್ಲ.

ಆಗಾಗ ಕೇಳುವ ಪ್ರಶ್ನೆಗಳು

GST ಎಂದರೇನು?

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಎಂಬುದು ಗ್ರಾಹಕರ ಸರಕು ಅಥವಾ ಸೇವೆಗಳನ್ನು ನೀಡುವ, ಮಾರಾಟ ಮಾಡುವ ಅಥವಾ ಖರೀದಿಸುವ ಪ್ರತಿಯೊಬ್ಬರೂ ಪಾವತಿಸಲು ಜವಾಬ್ದಾರರಾಗಿರುವ ಪರೋಕ್ಷ ತೆರಿಗೆಯಾಗಿದೆ. ಇದು ಮೌಲ್ಯವು ಎಲ್ಲಿಗೆ ಹೋಗುತ್ತಿದೆ ಮತ್ತು ಒಂದಕ್ಕಿಂತ ಹೆಚ್ಚು ಹಂತವನ್ನು ಹೊಂದಿದೆ ಎಂಬುದರ ಆಧಾರದ ಮೇಲೆ ವಿಧಿಸುವ ತೆರಿಗೆಯಾಗಿದೆ. ಭಾರತದ ಸಂಸತ್ತು ಮಾರ್ಚ್ 29, 2017 ರಂದು ಕಾಯ್ದೆಯನ್ನು ಪಾಸ್ ಮಾಡಿದ್ದು, ಮತ್ತು ಅದು ಜುಲೈ 1, 2017 ರಂದು ಜಾರಿಗೆ ಬಂದಿದೆ. ಕೇಂದ್ರ ಆಬಕಾರಿ ಶುಲ್ಕ, ಸೇವಾ ತೆರಿಗೆ, ಕಸ್ಟಮ್ಸ್ ಡ್ಯೂಟಿ, ವ್ಯಾಟ್, ಆಕ್ಟ್ರಾಯ್ ಮತ್ತು ಹೆಚ್ಚುವರಿ ಶುಲ್ಕಗಳಂತಹ ಎಲ್ಲಾ ಪರೋಕ್ಷ ತೆರಿಗೆಗಳನ್ನು ಬದಲಾಯಿಸಿರುವುದರಿಂದ ಬಿಸಿನೆಸ್‌ಗಳಿಗೆ ತೆರಿಗೆಗಳನ್ನು ಪಾವತಿಸುವುದನ್ನು ಜಿಎಸ್‌ಟಿ ಸುಲಭಗೊಳಿಸಿದೆ.

ನೀವು ಜಿಎಸ್‌ಟಿ ಅನ್ನು ಹೇಗೆ ಲೆಕ್ಕ ಹಾಕುತ್ತೀರಿ?

ಜಿಎಸ್‌ಟಿ ಕ್ಯಾಲ್ಕುಲೇಟರ್ ಎಂಬುದು ನೀಡಲಾದ ತಿಂಗಳು ಅಥವಾ ತ್ರೈಮಾಸಿಕಕ್ಕೆ ನೀವು ಎಷ್ಟು ಜಿಎಸ್‌ಟಿ ನೀಡಬೇಕು ಎಂಬುದನ್ನು ಕಂಡುಹಿಡಿಯಲು ನೀವು ಬಳಸಬಹುದಾದ ಆನ್ಲೈನ್ ಸಾಧನವಾಗಿದೆ.
ಈ 2 ಹಂತಗಳನ್ನು ಅನುಸರಿಸಿ:

  • ನಿಮ್ಮ ಸೇವೆ ಅಥವಾ ಪ್ರಾಡಕ್ಟ್‌ನ ನಿವ್ವಳ ಬೆಲೆ ಮತ್ತು ಅನ್ವಯವಾಗುವ ಜಿಎಸ್‌ಟಿ ಬ್ಯಾಂಡ್‌ಗಳಾದ 5%, 12%, 18%, ಅಥವಾ 28% ನಲ್ಲಿ ಟೈಪ್ ಮಾಡಿ.
  • ಸರಕು ಮತ್ತು ಸೇವೆಗಳ ಅಂತಿಮ ಅಥವಾ ಒಟ್ಟು ಬೆಲೆಯನ್ನು ನೋಡಲು "ಲೆಕ್ಕ ಹಾಕಿ" ಕ್ಲಿಕ್ ಮಾಡಿ, ಮತ್ತು ತೆರಿಗೆ ಪಾವತಿಸಬೇಕಾಗುತ್ತದೆ.
GST ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು ಯಾವುವು?

ಆನ್ಲೈನ್ ಜಿಎಸ್‌ಟಿ ಕ್ಯಾಲ್ಕುಲೇಟರ್ ಜಿಎಸ್‌ಟಿ ದರವನ್ನು ಶೇಕಡಾವಾರು ಆಧಾರದ ಮೇಲೆ ಪ್ರಾಡಕ್ಟಿನ ಒಟ್ಟು ಅಥವಾ ನಿವ್ವಳ ಬೆಲೆಯನ್ನು ಕಂಡುಹಿಡಿಯಲು ನಿಮಗೆ ಅವಕಾಶ ನೀಡುತ್ತದೆ. ಇದು ಸಮಯವನ್ನು ಉಳಿಸುತ್ತದೆ ಮತ್ತು ಸರಕು ಮತ್ತು ಸೇವೆಗಳ ಒಟ್ಟು ವೆಚ್ಚವನ್ನು ಕಂಡುಹಿಡಿಯುವಾಗ ಒಬ್ಬ ವ್ಯಕ್ತಿಯು ತಪ್ಪು ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ.

GST ಕ್ಯಾಲ್ಕುಲೇಟರ್ ಬಳಸಿ GST ಅನ್ನು ಹೇಗೆ ಲೆಕ್ಕ ಮಾಡುವುದು?

ಈ ಕೆಳಗಿನವುಗಳನ್ನು ಮಾಡುವ ಮೂಲಕ ನೀವು ಸುಲಭವಾಗಿ ಆನ್ಲೈನ್ ಜಿಎಸ್‌ಟಿ ಕ್ಯಾಲ್ಕುಲೇಟರ್ ಬಳಸಬಹುದು:

  • 5%, 12%, 18%, ಮತ್ತು 28% ನಂತಹ ಸೇವೆ ಅಥವಾ ಸರಕುಗಳ ನಿವ್ವಳ ಬೆಲೆ ಮತ್ತು ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ನಮೂದಿಸಿ.
  • ಸರಕು ಮತ್ತು ಸೇವೆಗಳ ಅಂತಿಮ ಅಥವಾ ಒಟ್ಟು ಬೆಲೆಯನ್ನು ನೋಡಲು "ಲೆಕ್ಕ ಹಾಕಿ" ಬಟನ್ ಮೇಲೆ ಕ್ಲಿಕ್ ಮಾಡಿ.

GST ಕ್ಯಾಲ್ಕುಲೇಶನ್ ಫಾರ್ಮುಲಾ:

ಜಿಎಸ್‌ಟಿ ಕಂಡುಹಿಡಿಯಲು ಬಿಸಿನೆಸ್‌ಗಳು, ಉತ್ಪಾದಕರು, ಹೋಲ್‌ಸೇಲರ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸುಲಭವಾಗಲು ಕ್ಯಾಲ್ಕುಲೇಟರ್ ಈ ಕೆಳಗೆ ನಮೂದಿಸಿದ ಫಾರ್ಮುಲಾವನ್ನು ಬಳಸುತ್ತದೆ:

ಸರಳ ಜಿಎಸ್‌ಟಿ ಲೆಕ್ಕಾಚಾರ

  • GST ಸೇರಿಸಿ:
    GST ಮೊತ್ತ = (ಅಸಲು ವೆಚ್ಚ x GST%)/100
    ನಿವ್ವಳ ಬೆಲೆ = ಅಸಲು ವೆಚ್ಚ + GST ಮೊತ್ತ
  • GST ತೆಗೆದುಹಾಕಿ:
    GST ಮೊತ್ತ = ಅಸಲು ವೆಚ್ಚ - [ಅಸಲು ವೆಚ್ಚ x {100/(100+GST%)}]
    ನಿವ್ವಳ ಬೆಲೆ = ಅಸಲು ವೆಚ್ಚ - GST ಮೊತ್ತ

 

ದರ (%)

ಸರಕುಗಳ ಅಸಲು ವೆಚ್ಚ

 

ಜಿಎಸ್‌ಟಿ

18%

ಮಾರಾಟವಾದ ಸರಕುಗಳ ವೆಚ್ಚ

 

ತಯಾರಕರಿಗೆ GST ಲೆಕ್ಕಾಚಾರ:

 

ದರ (%)

ಪ್ರಿ- GST

ಉತ್ಪನ್ನದ ವೆಚ್ಚ

 

10000

ಎಕ್ಸೈಸ್ ಡ್ಯೂಟಿ

12%

1200

ಲಾಭ

10%

1000

ಒಟ್ಟು

 

12200

VAT

12.50%

1525

ಸಿಜಿಎಸ್‌ಟಿ

6%

ಇಲ್ಲ

ಎಸ್‌ಜಿಎಸ್‌ಟಿ

6%

ಇಲ್ಲ

ಹೋಲ್‌ಸೇಲರ್‌ಗೆ ಅಂತಿಮ ಇನ್‌ವಾಯ್ಸ್

 

13725

ರೂ. 10,000 ವೆಚ್ಚದಲ್ಲಿ, ಉತ್ಪಾದಕರು ರೂ. 1405 ಉಳಿತಾಯ ಮಾಡುತ್ತಾರೆ, ಇದು 14% ತೆರಿಗೆ ಉಳಿತಾಯಕ್ಕೆ ಸಮನಾಗಿರುತ್ತದೆ. ಇದು ಉತ್ಪಾದಕರಿಗೆ ವೆಚ್ಚಗಳನ್ನು ಕಡಿಮೆ ಮಾಡುತ್ತದೆ, ಮತ್ತು ಅಂತಿಮವಾಗಿ ಹೋಲ್‌ಸೇಲರ್‌ಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಉಳಿತಾಯವನ್ನು ಒದಗಿಸುತ್ತದೆ.

ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ GST ಲೆಕ್ಕಾಚಾರ:

 

ದರ (%)

ಪ್ರಿ- GST

ಉತ್ಪನ್ನದ ವೆಚ್ಚ

 

13725

ಲಾಭ

10%

1373

ಒಟ್ಟು

 

15098

VAT

12.50%

1887

ಸಿಜಿಎಸ್‌ಟಿ

6%

ಇಲ್ಲ

ಎಸ್‌ಜಿಎಸ್‌ಟಿ

6%

ಇಲ್ಲ

ಗ್ರಾಹಕರಿಗೆ ಅಂತಿಮ ಇನ್‌ವಾಯ್ಸ್

 

16985

ಜಿಎಸ್‌ಟಿಯು ಪ್ರಾಡಕ್ಟ್ ಬೆಲೆಯನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ಹೋಲ್‌ಸೇಲರ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಅದೇ ಪ್ರಮಾಣದ ಲಾಭವನ್ನು ಗಳಿಸಿದರೂ ಗ್ರಾಹಕರು ಸರಕುಗಳಿಗೆ ಕಡಿಮೆ ಪಾವತಿಸುತ್ತಾರೆ.

ರಿವರ್ಸ್ ಶುಲ್ಕದ ಸಂದರ್ಭದಲ್ಲಿ ಜಿಎಸ್‌ಟಿ ಅನ್ನು ಲೆಕ್ಕ ಹಾಕುವುದು ಹೇಗೆ?

ರಿವರ್ಸ್ ಶುಲ್ಕವನ್ನು ಲೆಕ್ಕ ಹಾಕುವುದು ಜಿಎಸ್‌ಟಿ ಅನ್ನು ಕಂಡುಹಿಡಿಯಲು ತುಂಬಾ ಭಿನ್ನವಾಗಿಲ್ಲ. ರಿವರ್ಸ್ ಶುಲ್ಕ ಎಂದರೆ ಸರಕುಗಳನ್ನು ಖರೀದಿಸುವ ವ್ಯಕ್ತಿಯು ಅವುಗಳನ್ನು ಮಾರಾಟ ಮಾಡುವ ವ್ಯಕ್ತಿಗೆ ಬದಲಾಗಿ ಜಿಎಸ್‌ಟಿ ಯನ್ನು ಪಾವತಿಸಬೇಕಾಗುತ್ತದೆ. ಎರಡೂ ಸಂದರ್ಭಗಳಲ್ಲಿ, ತೆರಿಗೆ ಒಂದೇ ಆಗಿದೆ. ಉದಾಹರಣೆಗೆ, ನೀವು ರೂ. 10,000 ಮೌಲ್ಯದ ಐಟಂಗಳನ್ನು ಖರೀದಿಸಿದ್ದರೆ. 18% ರಲ್ಲಿ, ಪಾವತಿಸಬೇಕಾದ ಜಿಎಸ್‌ಟಿ ರೂ. 1,800 ಆಗಿರುತ್ತದೆ. ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಶುಲ್ಕ ವಿಧಿಸಲಾಗಿದ್ದರೆ, ಪ್ರತಿಯೊಂದಕ್ಕೆ ರೂ. 900 ವೆಚ್ಚವಾಗುತ್ತದೆ. ಏಕೈಕ ವ್ಯತ್ಯಾಸವೆಂದರೆ ರಿವರ್ಸ್ ಶುಲ್ಕದಲ್ಲಿ, ಈ ಸಂದರ್ಭದಲ್ಲಿ ತೆರಿಗೆ ಮೊತ್ತವು ರೂ. 1,800, ಆಗಿದ್ದು, ಸ್ವೀಕರಿಸುವವರಿಂದ ಬಾಕಿ ಇರುತ್ತದೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ