ಆಗಾಗ ಕೇಳುವ ಪ್ರಶ್ನೆಗಳು
ಫಿಕ್ಸೆಡ್ ಡೆಪಾಸಿಟ್ ಒಂದು ಉಳಿತಾಯ ಆಯ್ಕೆಯಾಗಿದ್ದು, ಇದು ನಿಮ್ಮ ಆಯ್ಕೆಯ ಹಣಕಾಸುದಾರರೊಂದಿಗೆ ಇಡಲಾದ ಉಳಿತಾಯದ ಮೇಲೆ ಬಡ್ಡಿಯನ್ನು ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ನಿಯತಕಾಲಿಕವಾಗಿ ಅಥವಾ ಮೆಚ್ಯೂರಿಟಿಯ ನಂತರ ಆದಾಯವನ್ನು ಪಡೆಯಲು ಆಯ್ಕೆ ಮಾಡಬಹುದು. ಬಡ್ಡಿ ದರಗಳು ಸಾಮಾನ್ಯವಾಗಿ ಸೇವಿಂಗ್ಸ್ ಅಕೌಂಟ್ಗಳಿಗಿಂತ ಹೆಚ್ಚಾಗಿರುತ್ತವೆ ಏಕೆಂದರೆ ಹಣವು ನಿರ್ದಿಷ್ಟ ಅವಧಿಗೆ ಲಾಕ್ ಆಗಿರುತ್ತದೆ ಮತ್ತು ಅದರಲ್ಲಿ ಗ್ರಾಹಕರು ಅಕಾಲಿಕ ವಿತ್ಡ್ರಾವಲ್ಗೆ ದಂಡವನ್ನು ಭರಿಸಲು ಸಿದ್ಧರಾಗಿರುವ ನಿರ್ದಿಷ್ಟ ಸನ್ನಿವೇಶಗಳನ್ನು ಹೊರತುಪಡಿಸಿ ಡೆಪಾಸಿಟರ್ ಇಚ್ಛೆಯಂತೆ ವಿತ್ಡ್ರಾ ಮಾಡಲಾಗುವುದಿಲ್ಲ.
18 ವರ್ಷಗಳಿಗಿಂತ ಹೆಚ್ಚು ವಯಸ್ಸಿನ ಎಲ್ಲಾ ನಿವಾಸಿಗಳು ಆನ್ಲೈನ್ ಮತ್ತು ಆಫ್ಲೈನ್ ಎರಡೂ ವಿಧಾನದ ಮೂಲಕ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೂಡಿಕೆ ಮಾಡಬಹುದು. ಬಜಾಜ್ ಫೈನಾನ್ಸ್ ಎಫ್ಡಿ ಯಲ್ಲಿ ಹೂಡಿಕೆ ಮಾಡಲು ಬಯಸುವ ಮೈನರ್ಗಳು, ಎನ್ಆರ್ಐ ಗಳು ಮತ್ತು ವ್ಯಕ್ತಿಗಳು ದಯವಿಟ್ಟು ನಮ್ಮ ಪ್ರತಿನಿಧಿಯನ್ನು ಸಂಪರ್ಕಿಸಿ ಅಥವಾ wecare@bajajfinserv.in ಗೆ ಇಮೇಲ್ ಕಳುಹಿಸಿ.
ಬಜಾಜ್ ಫೈನಾನ್ಸ್ ಒಗ್ಗೂಡಿಸಿದ ಮತ್ತು ಒಗ್ಗೂಡಿಸದ ಬಡ್ಡಿ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ.
- ಒಟ್ಟುಗೂಡಿಸದ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ, ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಲಾಗುತ್ತದೆ. ನಿಮಗೆ ನಿಯತಕಾಲಿಕ ಬಡ್ಡಿ ಪಾವತಿಗಳು ಅಗತ್ಯವಿದ್ದರೆ ಈ ಯೋಜನೆಯು ಅನುಕೂಲಕರವಾಗಿರುತ್ತದೆ.
- ಸಂಚಿತ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ, ಮೆಚ್ಯೂರಿಟಿ ಸಮಯದಲ್ಲಿ ಅಸಲಿನೊಂದಿಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ ಮತ್ತು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ. ನಿಯತಕಾಲಿಕ ಬಡ್ಡಿ ಪಾವತಿಗಳ ಅಗತ್ಯವಿಲ್ಲದ ವ್ಯಕ್ತಿಗೆ ಈ ಯೋಜನೆಯು ಸೂಕ್ತವಾಗಿದೆ. ಮೆಚ್ಯೂರಿಟಿಯಲ್ಲಿ ಅಂತಿಮ ಪಾವತಿಯು ಅನ್ವಯವಾಗುವಲ್ಲಿ ತೆರಿಗೆ ಕಡಿತಕ್ಕೆ ಒಳಪಟ್ಟಿರುತ್ತದೆ.
ಹೌದು. ಹಿರಿಯ ನಾಗರಿಕರು (ಅಂದರೆ, 60 ವರ್ಷಕ್ಕಿಂತ ಮೇಲ್ಪಟ್ಟವರು) ರೂ. 5 ಕೋಟಿಯವರೆಗಿನ ಡೆಪಾಸಿಟ್ಗಳ ಮೇಲೆ ವರ್ಷಕ್ಕೆ 0.25% ವರೆಗಿನ ಹೆಚ್ಚುವರಿ ಬಡ್ಡಿ ದರದ ಪ್ರಯೋಜನಗಳನ್ನು ಪಡೆಯುತ್ತಾರೆ.
ಇಲ್ಲ, ಡೆಪಾಸಿಟ್ ನವೀಕರಣದ ಮೇಲೆ ಯಾವುದೇ ಪ್ರಯೋಜನವಿಲ್ಲ.
ಇಲ್ಲ. ನೀವು ನಿರ್ದಿಷ್ಟ ದರದಲ್ಲಿ ನಮ್ಮೊಂದಿಗೆ ನಿಮ್ಮ ಹಣವನ್ನು ಲಾಕ್ ಮಾಡಿರುವುದರಿಂದ, ಮೆಚ್ಯೂರಿಟಿಯವರೆಗೆ ನೀವು ಆ ದರವನ್ನು ಪಡೆಯುವುದನ್ನು ಮುಂದುವರೆಸುತ್ತೀರಿ. ನೀವು ಹೊಸ ದರವನ್ನು ಪಡೆಯಲು ಬಯಸಿದರೆ, ನೀವು ನಮ್ಮೊಂದಿಗೆ ಹೊಸ ಡೆಪಾಸಿಟ್ನಲ್ಲಿ ಹೂಡಿಕೆ ಮಾಡಬಹುದು.
ಭಾರತದಲ್ಲಿ ಅತ್ಯಂತ ಹೆಸರಾಂತ ಬ್ರ್ಯಾಂಡ್ಗಳಲ್ಲಿ ಒಂದಾದ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಅನೇಕ ಪ್ರಯೋಜನಗಳನ್ನು ಹೊಂದಿದೆ:
- ಕನಿಷ್ಠ ಡೆಪಾಸಿಟ್ ಗಾತ್ರ ರೂ. 15,000. ಗರಿಷ್ಠ ಡೆಪಾಸಿಟ್ ಮಿತಿ ರೂ. 5 ಕೋಟಿ
- ಕ್ರಿಸಿಲ್ನಿಂದ ಎಫ್ಎಎಎ/ಸ್ಟೇಬಲ್ ಮತ್ತು ಐಸಿಆರ್ಎ ನಿಂದ ಎಂಎಎಎ/ಸ್ಥಿರ ರೇಟ್ ಮಾಡಲಾಗಿದೆ, ಇದರರ್ಥ ನಿಮ್ಮ ಹಣದ ಅತ್ಯಧಿಕ ಸುರಕ್ಷತೆ
- ನಿಮ್ಮ ಹಣ ಅವಧಿಗೆ ತಕ್ಕಂತೆ ಬೆಳೆಯಲು ಆಕರ್ಷಕ ಮತ್ತು ಭರವಸೆಯ ಬಡ್ಡಿದರಗಳು
- ಎಲ್ಲರ ಅಗತ್ಯಗಳಿಗೆ ಸರಿಹೊಂದುವಂತೆ ವಿವಿಧ ಬಡ್ಡಿ ದರಗಳನ್ನು ಹೊಂದಿರುವ 12 ರಿಂದ 60 ತಿಂಗಳವರೆಗಿನ ಅವಧಿಗಳು
- ಭಾರತದಲ್ಲಿ 1,000+ ಕ್ಕೂ ಹೆಚ್ಚು ಸ್ಥಳಗಳಲ್ಲಿ ಬ್ರಾಂಚ್ ಉಪಸ್ಥಿತಿ
- ನಮ್ಮ ಗ್ರಾಹಕರ ಪೋರ್ಟಲ್ - ಎಕ್ಸ್ಪೀರಿಯದಲ್ಲಿ ಎಲ್ಲ ಪ್ರಾಡಕ್ಟ್ಗಳಿಗೆ ಅಕ್ಸೆಸ್ ಪಡೆಯಿರಿ
- ಎಲೆಕ್ಟ್ರಾನಿಕ್ ಅಥವಾ ಫಿಸಿಕಲ್ ವಿಧಾನಗಳ ಮೂಲಕ ಪಾವತಿ ಆಯ್ಕೆಗಳ ಫ್ಲೆಕ್ಸಿಬಿಲಿಟಿ
- ಹಿರಿಯ ನಾಗರಿಕರಿಗೆ ವಿಶೇಷ ದರಗಳು ಅನ್ವಯವಾಗುತ್ತವೆ
ನಾವು ಉತ್ತಮ ಅನುಭವವನ್ನು ಒದಗಿಸುವತ್ತ ಸಂಪೂರ್ಣ ಗಮನವನ್ನು ಹೊಂದಿರುವ ಸೇವಾ-ಆಧಾರಿತ ಸಂಸ್ಥೆಯಾಗಿದ್ದೇವೆ. ನಮ್ಮ ಗ್ರಾಹಕರು ಈ ಪ್ರಯೋಜನಗಳನ್ನು ಪಡೆಯುತ್ತಾರೆ:
- ಸುಲಭವಾಗಿ ಅಕ್ಸೆಸ್ ಮಾಡಬಹುದಾದ ಟಚ್ ಪಾಯಿಂಟ್ಗಳು
- ಸುಲಭದ ಮತ್ತು ಪಾರದರ್ಶಕ ನೀತಿಗಳು
- ನಿಮ್ಮ ಹೂಡಿಕೆಯನ್ನು ಯೋಜಿಸಲು ನಿಮಗೆ ಸಹಾಯ ಮಾಡುವ ಸುಲಭವಾಗಿ ಲಭ್ಯವಿರುವ ಫಿಕ್ಸೆಡ್ ಡೆಪಾಸಿಟ್ ಆನ್ಲೈನ್ ಕ್ಯಾಲ್ಕುಲೇಟರ್
- ಫಿಕ್ಸೆಡ್ ಡೆಪಾಸಿಟ್ ಅನ್ನು ಕೋರಿಕೆಯಿಂದ ಮೆಚ್ಯೂರಿಟಿವರೆಗೆ ಬುಕ್ ಮಾಡುವಾಗ ವಿವರವಾದ SMS ಮತ್ತು ಇಮೇಲ್ ಸಂವಹನಗಳನ್ನು ಗ್ರಾಹಕರಿಗೆ ಕಳುಹಿಸಲಾಗುವುದು
- ನೀವು ಸಲ್ಲಿಸಿದ ಎಲ್ಲ ಡಾಕ್ಯುಮೆಂಟ್ಗಳ ಸ್ಕ್ಯಾನ್ ಮಾಡಿದ ಪ್ರತಿ ಆನ್ಲೈನ್ನಲ್ಲಿ ಸುಲಭ ಅಕ್ಸೆಸ್ನಲ್ಲಿ ಲಭ್ಯವಿವೆ
ಇಲ್ಲ, ಡೆಪಾಸಿಟ್ ನವೀಕರಣದ ಮೇಲೆ ಯಾವುದೇ ಪ್ರಯೋಜನವಿಲ್ಲ.
ಆಫ್ಲೈನ್ ಎಫ್ಡಿ ಅರ್ಜಿದಾರರು ಚೆಕ್ ಡೆಪಾಸಿಟ್ ಮಾಡಬಹುದು ಅಥವಾ ಆರ್ಟಿಜಿಎಸ್/ ಎನ್ಇಎಫ್ಟಿ ಮೂಲಕ ಟ್ರಾನ್ಸ್ಫರ್ ಮಾಡಬಹುದು.
ಆನ್ಲೈನ್ ಎಫ್ಡಿ ಅರ್ಜಿದಾರರು ಯುಪಿಐ, ಆರ್ಟಿಜಿಎಸ್/ ಎನ್ಇಎಫ್ಟಿ, ನೆಟ್ ಬ್ಯಾಂಕಿಂಗ್ ಮೂಲಕ ಟ್ರಾನ್ಸ್ಫರ್ ಮಾಡಬಹುದು.
ಗಮನಿಸಿ: ಡೆಬಿಟ್ ಕಾರ್ಡ್ ಮೂಲಕ ಟ್ರಾನ್ಸ್ಫರ್ ಅನ್ನು ಅಂಗೀಕರಿಸಲಾಗಿಲ್ಲ.
ಇಲ್ಲ. ನಗದು ಪಾವತಿ ಮಾಡುವ ಮೂಲಕ ನೀವು ಫಿಕ್ಸೆಡ್ ಡೆಪಾಸಿಟ್ ತೆರೆಯಲು ಸಾಧ್ಯವಿಲ್ಲ.
ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯುವಾಗ ವ್ಯಕ್ತಿಗೆ ಅಗತ್ಯವಿರುವ ಡಾಕ್ಯುಮೆಂಟ್ಗಳು ಇಲ್ಲಿವೆ:
1. ಇತ್ತೀಚಿನ ಒಂದು ಫೋಟೋ
2. ಪ್ಯಾನ್ ಅಥವಾ ಫಾರಂ 60
3. ಕೆಳಗೆ ನಮೂದಿಸಿದ ಅಧಿಕೃತವಾಗಿ ಮಾನ್ಯವಾದ ಡಾಕ್ಯುಮೆಂಟ್ಗಳಲ್ಲಿ (ಒವಿಡಿಗಳು) ಯಾವುದೇ 1 ಪ್ರಮಾಣೀಕೃತ ಪ್ರತಿ:
- ಪಾಸ್ಪೋರ್ಟ್
- ಡ್ರೈವಿಂಗ್ ಲೈಸೆನ್ಸ್
- ವೋಟರ್ ID ಕಾರ್ಡ್
- NREGA ಕೆಲಸದ ಕಾರ್ಡ್
- ಆಧಾರ್ ಕಾರ್ಡ್
ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯಲು ಬಜಾಜ್ ಫೈನಾನ್ಸ್ ಯಾವುದೇ ಶುಲ್ಕ ಅಥವಾ ಪ್ರಕ್ರಿಯಾ ಶುಲ್ಕಗಳನ್ನು ವಿಧಿಸುವುದಿಲ್ಲ.
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಗಳು ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗಳ ಪ್ರಯೋಜನಕ್ಕೆ ಅರ್ಹವಾಗಿರುವುದಿಲ್ಲ.
ಈ ಕೆಳಗಿನ ಯೋಜನೆಗಳ ಪ್ರಕಾರ ಬಡ್ಡಿ ಮೊತ್ತದ ಪಾವತಿಯು ಬದಲಾಗುತ್ತದೆ:
ಒಟ್ಟುಗೂಡಿಸದ - ಈ ಯೋಜನೆಯು ಈ ಕೆಳಗಿನ ಆವರ್ತನಗಳ ಮೇಲೆ ಬಡ್ಡಿ ಪಾವತಿಗಳನ್ನು ಆಯ್ಕೆ ಮಾಡಲು ನಿಮಗೆ ಅನುಮತಿ ನೀಡುತ್ತದೆ:
- ಮಾಸಿಕ ಆಯ್ಕೆ - ಈ ಸಂದರ್ಭದಲ್ಲಿ, ನೀವು ಪ್ರತಿ ತಿಂಗಳ ಕೊನೆಯ ದಿನಾಂಕದಂದು ಬಡ್ಡಿ ಪಾವತಿಯನ್ನು ಪಡೆಯಬಹುದು.
- ತ್ರೈಮಾಸಿಕ ಆಯ್ಕೆ - ನೀವು ಈ ಆಯ್ಕೆಯನ್ನು ಆರಿಸಿದರೆ, ಬಡ್ಡಿಯನ್ನು ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಪಾವತಿಸಲಾಗುತ್ತದೆ, ಅಂದರೆ, ಜೂನ್ 30, ಸೆಪ್ಟೆಂಬರ್ 30, ಡಿಸೆಂಬರ್ 31, ಮತ್ತು ಮಾರ್ಚ್ 31
- ಅರ್ಧ-ವಾರ್ಷಿಕ ಆಯ್ಕೆ - ಇಲ್ಲಿ, ಬಡ್ಡಿ ಡೆಪಾಸಿಟ್ಗಳನ್ನು ವರ್ಷಕ್ಕೆ ಎರಡು ಬಾರಿ ಮಾಡಲಾಗುತ್ತದೆ - ಸೆಪ್ಟೆಂಬರ್ 30 ಮತ್ತು ಮಾರ್ಚ್ 31
- ವಾರ್ಷಿಕ ಆಯ್ಕೆ - ಬಡ್ಡಿಯನ್ನು ವಾರ್ಷಿಕವಾಗಿ ಸಂಗ್ರಹಿಸಲಾಗುತ್ತದೆ ಮತ್ತು ಮಾರ್ಚ್ 31 ರಂದು ಪಾವತಿಸಲಾಗುತ್ತದೆ
ಒಟ್ಟುಗೂಡಿಸಿದ ಸ್ಕೀಮ್ - ಮೆಚ್ಯೂರಿಟಿಯ ನಂತರ ಎಫ್ಡಿಯ ಸಂಪೂರ್ಣ ಅವಧಿಗೆ ನೀವು ಸಂಯುಕ್ತ ಬಡ್ಡಿಯನ್ನು ಪಡೆಯುತ್ತೀರಿ. ಆದಾಗ್ಯೂ, ಮೆಚ್ಯೂರಿಟಿ ಮೊತ್ತವು ಅನ್ವಯವಾಗುವಲ್ಲಿ ತೆರಿಗೆ ಕಡಿತಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ನೀವು ಗಮನಿಸಬೇಕು.
ಈ ವಿವರಗಳಿಗಾಗಿ, ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್ಪೀರಿಯದಲ್ಲಿ ಲಭ್ಯವಿರುವ ನಿಮ್ಮ ಎಫ್ಡಿಆರ್ ಅಥವಾ ಅಕೌಂಟ್ ಸ್ಟೇಟ್ಮೆಂಟನ್ನು ನೀವು ನೋಡಬಹುದು.
ನಕಲಿ ಎಫ್ಡಿ ರಶೀದಿಯ ಅಗತ್ಯವಿದ್ದರೆ, ದಯವಿಟ್ಟು ಎಲ್ಲಾ ಎಫ್ಡಿ ಅಕೌಂಟ್ ಹೋಲ್ಡರ್ಗಳು ಸಹಿ ಮಾಡಿದ ಲಿಖಿತ ವಿನಂತಿಯನ್ನು ನಮ್ಮ ಬ್ರಾಂಚಿನಲ್ಲಿ ಅಥವಾ wecare@bajajfinserv.in ನಲ್ಲಿ ನಿಮ್ಮ ಕೋರಿಕೆಯನ್ನು ಸಲ್ಲಿಸಿ.
ನಾಮಿನಿ ಹೆಸರನ್ನು ಬದಲಾಯಿಸುವ ಯಾವುದೇ ಕೋರಿಕೆಗಾಗಿ, ದಯವಿಟ್ಟು ಇಲ್ಲಿ ಲಭ್ಯವಿರುವ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ . ಅದನ್ನು ಪ್ರವಾಸ ವಿವರಗಳೊಂದಿಗೆ ಭರ್ತಿ ಮಾಡಿ ಮತ್ತು ನಮ್ಮ ಬ್ರಾಂಚ್/ನಿಮ್ಮ ಪ್ರಾದೇಶಿಕ ಮ್ಯಾನೇಜರ್ (ರಿಲೇಶನ್ಶಿಪ್ ಮ್ಯಾನೇಜರ್)/ಬ್ರೋಕರ್ಗೆ ಸಹಿ ಮಾಡಿದ ಪ್ರತಿಯನ್ನು ಸಲ್ಲಿಸಿ. ನಂತರ ನಮ್ಮ ದಾಖಲೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುತ್ತೇವೆ.
ಎಲ್ಲ ತ್ರೈ ವಾರ್ಷಿಕವಾಗಿ TDS ಸರ್ಟಿಫಿಕೇಟ್ ಅನ್ನು ಡೆಪಾಸಿಟರ್ಗೆ ಈ ಮೇಲ್ ಮಾಡಲಾಗುವುದು.
ತಮ್ಮ ಫಿಕ್ಸೆಡ್ ಡೆಪಾಸಿಟ್ ಅಕೌಂಟನ್ನು ರಚಿಸಿದ ಮೂರು ವಾರಗಳ ಒಳಗೆ ಕೊರಿಯರ್ ಮೂಲಕ ಡೆಪಾಸಿಟರ್ ಫಿಕ್ಸೆಡ್ ಡೆಪಾಸಿಟ್ ರಶೀದಿಯನ್ನು ಪಡೆಯುತ್ತಾರೆ.
ಐವಿಆರ್ ನಂಬರ್- 8698010101 ಬಳಸಿಕೊಂಡು ನಿಮ್ಮ ಫಿಕ್ಸೆಡ್ ಡೆಪಾಸಿಟ್ ರಶೀದಿಯನ್ನು ನೀವು ಟ್ರ್ಯಾಕ್ ಮಾಡಬಹುದು. ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್ಪೀರಿಯದಲ್ಲಿ ಲಭ್ಯವಿರುವ ಎಫ್ಡಿ ರಶೀದಿಯ ವರ್ಚುವಲ್ ಪ್ರತಿಯನ್ನು ಕೂಡ ನೀವು ನೋಡಬಹುದು ಅಥವಾ ಡೌನ್ಲೋಡ್ ಮಾಡಬಹುದು.
ನೀವು ಆಯ್ಕೆ ಮಾಡಿದ ಯೋಜನೆಯ ಆಧಾರದ ಮೇಲೆ ಬಡ್ಡಿ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಬಡ್ಡಿಯನ್ನು ಕ್ರೆಡಿಟ್ ಮಾಡಿದ ನಂತರ, ನೀವು ಎಸ್ಎಂಎಸ್/ಇಮೇಲ್ ಮೂಲಕ ಸಂವಹನವನ್ನು ಪಡೆಯುತ್ತೀರಿ. ಪಾವತಿ ವಿವರಗಳಿಗಾಗಿ ನಿಮ್ಮ ಅಕೌಂಟ್ ಸ್ಟೇಟ್ಮೆಂಟನ್ನು ನೋಡಿ.
ಮೆಚ್ಯೂರಿಟಿ ಮೊತ್ತವನ್ನು ಎನ್ಇಎಫ್ಟಿ ಅಥವಾ ಆರ್ಟಿಜಿಎಸ್ ಮೂಲಕ ಅಪ್ಲಿಕೇಶನ್ ಫಾರ್ಮಿನಲ್ಲಿ ಡೆಪಾಸಿಟರ್ ನಮೂದಿಸಿದ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ. ಮೆಚ್ಯೂರಿಟಿ ದಿನಾಂಕದಂದು ಮಾತ್ರ ನೀವು ಮೊತ್ತವನ್ನು ಪಡೆಯುತ್ತೀರಿ. ಒಂದು ವೇಳೆ ಎಲೆಕ್ಟ್ರಾನಿಕ್ ಅಕೌಂಟ್ ಟ್ರಾನ್ಸ್ಫರ್ ಬೌನ್ಸ್ ಆದರೆ, ನಮ್ಮೊಂದಿಗೆ ನೋಂದಾಯಿಸಲಾದ ಬ್ಯಾಂಕ್ ಅಕೌಂಟ್ ವಿವರಗಳನ್ನು ಅಪ್ಡೇಟ್ ಮಾಡಲು ವಿನಂತಿಸುವ ಫೋನ್ ಕರೆ, ಇಮೇಲ್ ಮತ್ತು ಲಿಖಿತ ಪತ್ರದ ಮೂಲಕ ಡೆಪಾಸಿಟರ್ಗೆ ತಿಳಿಸಲಾಗುತ್ತದೆ.
ಇಲ್ಲಿಂದ ಸಂಬಂಧಿತ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಮತ್ತು ನಿಮ್ಮ ಎಫ್ಡಿಆರ್ ಮತ್ತು ರದ್ದುಗೊಂಡ ಚೆಕ್ನ ಪ್ರತಿಯೊಂದಿಗೆ ಅದನ್ನು ಸಲ್ಲಿಸಿ.
ಫಿಕ್ಸೆಡ್ ಡೆಪಾಸಿಟ್ ಮೇಲೆ ನೀವು ನಿಮ್ಮ ಬಡ್ಡಿಯನ್ನು ಪಡೆದಿಲ್ಲವಾದರೆ, ಅದು ಕ್ರೆಡಿಟ್ ಆಗುವುದನ್ನು ಖಚಿತಪಡಿಸಿಕೊಳ್ಳಲು ಈ ಮೂರು ಹಂತಗಳನ್ನು ಅನುಸರಿಸಿ:
ಹಂತ 1: ನಮ್ಮೊಂದಿಗೆ ನೋಂದಾಯಿಸಲಾದ ಅಕೌಂಟ್ನ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ನೀವು ಎಚ್ಚರಿಕೆಯಿಂದ ಪರಿಶೀಲಿಸಿದ್ದೀರಿ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. ನೀವು ಬಡ್ಡಿಯನ್ನು ಸ್ವೀಕರಿಸಿಲ್ಲ ಎಂದು ದೃಢವಾದರೆ, 2 ನೇ ಹಂತಕ್ಕೆ ಮುಂದುವರಿಯಿರಿ.
ಹಂತ 2: ದಯವಿಟ್ಟು ಮೇಲೆ ನಮೂದಿಸಿದ ಬಡ್ಡಿ ಡೆಪಾಸಿಟ್ ದಿನಾಂಕವನ್ನು ಪರಿಶೀಲಿಸಿ. ನೀವು ಬಡ್ಡಿಯನ್ನು ಪಡೆಯಲು ಜವಾಬ್ದಾರರಾಗಿದ್ದೀರಿ ಆದರೆ ಪಡೆದಿಲ್ಲ ಎಂದಾದರೆ, ಹಂತ 3 ಕ್ಕೆ ಮುಂದುವರೆಯಿರಿ.
ಹಂತ 3: ದಯವಿಟ್ಟು ಇಲ್ಲಿ ಪಟ್ಟಿ ಮಾಡಲಾದ ಒಂದು ವಿಧಾನದ ಮೂಲಕ ನಮ್ಮನ್ನು ಸಂಪರ್ಕಿಸಿ, ಎಫ್ಡಿಆರ್ ನಂಬರ್ ಮತ್ತು ನೀವು ಬಡ್ಡಿಯನ್ನು ಪಡೆದಿಲ್ಲದ ತಿಂಗಳು/ತ್ರೈಮಾಸಿಕ/ವರ್ಷವನ್ನು ನಮೂದಿಸಿ.
ಎಫ್ಡಿ ಬುಕ್ ಮಾಡಿದ ಮೂರು ತಿಂಗಳ ನಂತರ, ಗ್ರಾಹಕರು ಡೆಪಾಸಿಟ್ ಮೊತ್ತದ 75% ವರೆಗೆ ಲೋನ್ ಪಡೆಯಬಹುದು. ಎಫ್ಡಿ ಬುಕಿಂಗ್ ದರದ ಮೇಲೆ ನೀವು ವರ್ಷಕ್ಕೆ ಕೇವಲ 2% ಹೆಚ್ಚುವರಿ ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ. ಎಫ್ಡಿಯ ಉಳಿದ ಮೆಚ್ಯೂರಿಟಿಯು ಕಾಲಾವಧಿಯಾಗಿರುತ್ತದೆ.
ರೂ. 4 ಲಕ್ಷದವರೆಗಿನ ಲೋನ್ಗಳಿಗಾಗಿ, ನೀವು ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್ಪೀರಿಯಗೆ ಭೇಟಿ ನೀಡಬಹುದು. ನಿಮಗೆ ಎಫ್ಡಿ ಮೇಲೆ ರೂ. 4 ಲಕ್ಷಕ್ಕಿಂತ ಹೆಚ್ಚಿನ ಲೋನ್ ಅಗತ್ಯವಿದ್ದರೆ ದಯವಿಟ್ಟು ನಿಮ್ಮ ರಿಲೇಶನ್ಶಿಪ್ ಮ್ಯಾನೇಜರ್/ಶಾಖೆಯನ್ನು ಸಂಪರ್ಕಿಸಿ.
ಇಲ್ಲ, ಎಫ್ಡಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿಮ್ಮ ಬಾಕಿ ಉಳಿದಿರುವ ಮೊತ್ತಗಳನ್ನು ಎಫ್ಡಿ ಮೆಚ್ಯೂರಿಟಿ ಮುಂದುವರಿಕೆಗಳ ಮೇಲೆ ಸರಿಹೊಂದಿಸಲಾಗುತ್ತದೆ ಮತ್ತು ಬ್ಯಾಲೆನ್ಸ್ ಅನ್ನು ನಿಮಗೆ ಪಾವತಿಸಲಾಗುತ್ತದೆ.
ಇಲ್ಲ, ಎಫ್ಡಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಬಾಕಿ ಉಳಿದ ಬಾಕಿಗಳನ್ನು ಎಫ್ಡಿ ಮೇಲೆ ಸರಿಹೊಂದಿಸಲಾಗುವುದಿಲ್ಲ. ಆದಾಗ್ಯೂ, ಬಾಕಿ ಉಳಿಕೆಗಳನ್ನು ಮರುಪಾವತಿಸಲು ನೀವು ಎಫ್ಡಿಯನ್ನು ಮೆಚ್ಯೂರಿಟಿಗಿಂತ ಮೊದಲು ಲಿಕ್ವಿಡೇಟ್ ಮಾಡಲು ಆಯ್ಕೆ ಮಾಡಬಹುದು.
ಇಲ್ಲ, ಇದು ಟರ್ಮ್ ಲೋನ್ ಆಗಿದೆ.
ಹೌದು, ಎಫ್ಡಿ ಮೇಲಿನ ನಿಮ್ಮ ಅಸ್ತಿತ್ವದಲ್ಲಿರುವ ಲೋನ್ ಅನ್ನು ಪೂರ್ಣವಾಗಿ ಮರುಪಾವತಿಸುವುದರಿಂದ ನೀವು ಎಫ್ಡಿ ಮೇಲಿನ ಹೊಸ ಲೋನ್ಗೆ ಅರ್ಹರಾಗುತ್ತೀರಿ.
ಇಲ್ಲ. ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಪಾವತಿಸಿದ ಇಎಂಐಗಳ ಮೇಲೆ ಆದಾಯ ತೆರಿಗೆ ಕಡಿತ ಅನ್ವಯವಾಗುವುದಿಲ್ಲ.
ಇಲ್ಲ. ಬಜಾಜ್ ಫೈನಾನ್ಸ್ ಲಿಮಿಟೆಡ್ (ಬಿಎಫ್ಎಲ್)ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ಗಳ ಮೇಲೆ ಮಾತ್ರ ಲೋನ್ಗಳನ್ನು ಒದಗಿಸುತ್ತದೆ.
ನೀವು ನಿಮ್ಮ ಎಫ್ಡಿ ಯನ್ನು ಮೂರು ವಿಧಾನಗಳಲ್ಲಿ ನವೀಕರಿಸಬಹುದು:
- ನಮ್ಮ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ
- ನಿಮ್ಮ FDR ನೊಂದಿಗೆ ಹತ್ತಿರದ BFL ಬ್ರಾಂಚ್ಗೆ ಭೇಟಿ ನೀಡುವ ಮೂಲಕ (ಶಿಫಾರಸ್ಸು ಮಾಡಲಾಗಿದೆ, ಆದರೆ ಕಡ್ಡಾಯವಲ್ಲ) ಕೊನೇ ಪಕ್ಷ ಮೆಚ್ಯೂರಿಟಿಯ 2 ದಿನಗಳ ಮೊದಲು
- ಮೆಚ್ಯೂರಿಟಿಗೆ ಕನಿಷ್ಠ ಎರಡು ದಿನಗಳ ಮೊದಲು ನಿಮ್ಮ ರಿಲೇಶನ್ಶಿಪ್ ಮ್ಯಾನೇಜರ್ನೊಂದಿಗೆ ರಿನೀವಲ್ ಕೋರಿಕೆಯನ್ನು ಲಾಗ್ ಮಾಡುವ ಮೂಲಕ
ನಮಗೆ ಎಫ್ಡಿ ನವೀಕರಣ ಫಾರ್ಮ್ ಮಾತ್ರ ಬೇಕಾಗುತ್ತದೆ. ನೀವು ಅದರೊಂದಿಗೆ ಒರಿಜಿನಲ್ ಎಫ್ಡಿಆರ್ ಅಟ್ಯಾಚ್ ಮಾಡಬಹುದು (ಶಿಫಾರಸು ಮಾಡಲಾಗಿದೆ, ಆದರೆ ಕಡ್ಡಾಯವಲ್ಲ).
ಇಲ್ಲ. ಎಫ್ಡಿ ನವೀಕರಣದ ಸಮಯದಲ್ಲಿ ನೀವು ಮತ್ತೊಮ್ಮೆ ಕೆವೈಸಿ ಡಾಕ್ಯುಮೆಂಟ್ಗಳು ಮತ್ತು ಫೋಟೋಗಳನ್ನು ಸಲ್ಲಿಸಬೇಕಾಗಿಲ್ಲ.
ಹೌದು, ನೀವು ನಾಮಿನಿಯ ಹೆಸರನ್ನು ಬದಲಾಯಿಸಬಹುದು, ಆದರೆ ಸಹ-ಅರ್ಜಿದಾರರ ಹೆಸರನ್ನು ಬದಲಾಯಿಸಲಾಗುವುದಿಲ್ಲ.
ನೀವು ನಿಮ್ಮ ಹೂಡಿಕೆ ಸಲಹೆಗಾರರನ್ನು ಸಂಪರ್ಕಿಸಬಹುದು ಅಥವಾ ಇಲ್ಲಿ ಕ್ಲಿಕ್ ಮಾಡುವ ಮೂಲಕ ಮೇಲ್ ಕಳುಹಿಸಬಹುದು. ನೀವು ಇಲ್ಲಿ ಕ್ಲಿಕ್ ಮಾಡುವ ಮೂಲಕ ನಿಮ್ಮ ಸಂಪರ್ಕ ವಿವರಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು ಮತ್ತು ನಮ್ಮ ಪ್ರತಿನಿಧಿ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ.
ನೀವು ನಿಮ್ಮ ಪ್ರಾದೇಶಿಕ ಮ್ಯಾನೇಜರ್ (ರಿಲೇಶನ್ಶಿಪ್ ಮ್ಯಾನೇಜರ್)/ ಬ್ರೋಕರ್ ಅನ್ನು ಸಂಪರ್ಕಿಸಬಹುದು ಅಥವಾ ಇಲ್ಲಿ ಕ್ಲಿಕ್ ಮಾಡುವ ಮೂಲಕ ಮೇಲ್ ಕಳುಹಿಸಬಹುದು.
ನೀವು ನಿಮ್ಮ ಪ್ರಾದೇಶಿಕ ಮ್ಯಾನೇಜರ್ (ರಿಲೇಶನ್ಶಿಪ್ ಮ್ಯಾನೇಜರ್)/ ಬ್ರೋಕರ್ ಅನ್ನು ಸಂಪರ್ಕಿಸಬಹುದು ಅಥವಾ ಇಲ್ಲಿ ಕ್ಲಿಕ್ ಮಾಡುವ ಮೂಲಕ ಮೇಲ್ ಕಳುಹಿಸಬಹುದು. ನಿಮ್ಮ ಎಫ್ಡಿಆರ್ ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಿ.
ಹೌದು, ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 194ಎ ಅಡಿಯಲ್ಲಿ, ಎಲ್ಲಾ ಎನ್ಬಿಎಫ್ಸಿಗಳಲ್ಲಿ ಫಿಕ್ಸೆಡ್ ಡೆಪಾಸಿಟ್ಗಳಿಂದ ಗಳಿಸಿದ ಬಡ್ಡಿಯು ರೂ. 5,000 ಮೀರಿದರೆ, ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ಡೆಪಾಸಿಟರ್ ಗಳಿಸಿದ ಒಟ್ಟು ಬಡ್ಡಿಯನ್ನು ಅವರ ಎಲ್ಲಾ ಫಿಕ್ಸೆಡ್ ಡೆಪಾಸಿಟ್ಗಳನ್ನು ಒಟ್ಟುಗೂಡಿಸಿದ ನಂತರ ಲೆಕ್ಕ ಹಾಕಲಾಗುತ್ತದೆ. ಬಜಾಜ್ ಫೈನಾನ್ಸ್ ಟಿಡಿಎಸ್ ಅನ್ನು ಲೆಕ್ಕ ಹಾಕುತ್ತದೆ ಮತ್ತು ಪ್ರತಿ ತ್ರೈಮಾಸಿಕದಲ್ಲಿ ಅದನ್ನು ಸರ್ಕಾರಕ್ಕೆ ಪಾವತಿಸಲಾಗುತ್ತದೆ. ಅಪ್ಲಿಕೇಶನ್ ಹಂತದಲ್ಲಿ ಡೆಪಾಸಿಟರ್ 15G/15H ಅನ್ನು ಒದಗಿಸಿದರೆ, ಅವರು ಬಡ್ಡಿಯ ಮೇಲೆ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆಯುತ್ತಾರೆ. ಆದಾಗ್ಯೂ, ಹಣಕಾಸು ವರ್ಷದಲ್ಲಿ ಪಾವತಿಸಲಾದ ಅಥವಾ ಪಾವತಿಸಬೇಕಾದ ಒಟ್ಟು ಬಡ್ಡಿಯು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರಿಗೆ ರೂ. 2.5 ಲಕ್ಷಗಳನ್ನು ಮೀರಿದರೆ, ಮತ್ತು ಹಿರಿಯ ನಾಗರಿಕರು ಮತ್ತು ಸೂಪರ್ ಹಿರಿಯ ನಾಗರಿಕರಿಗೆ (80 ವರ್ಷಕ್ಕಿಂತ ಮೇಲ್ಪಟ್ಟವರು) ರೂ. 5 ಲಕ್ಷಗಳನ್ನು ಮೀರಿದರೆ, ಫಾರ್ಮ್ 15G/15H ಮಾನ್ಯವಾಗಿರುವುದಿಲ್ಲ ಮತ್ತು ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.
- ಎಕ್ಸ್ಪೀರಿಯ: ನಮ್ಮ ಗ್ರಾಹಕ ಪೋರ್ಟಲ್ಗೆ ಲಾಗಿನ್ ಆಗಿ ಎಕ್ಸ್ಪೀರಿಯ> ಅಕೌಂಟ್ ಮಾಹಿತಿ> ನನ್ನ ಸಂಬಂಧಗಳು> ಫಿಕ್ಸೆಡ್ ಡೆಪಾಸಿಟ್ ವಿವರಗಳು> ವಿವರಗಳನ್ನು ನೋಡಿ (ಪ್ರತಿ ಡೆಪಾಸಿಟ್ಗೆ)>ಫಾರ್ಮ್15 ಜಿ/ಎಚ್. ನಿಮ್ಮ ಫಾರ್ಮ್ ಅನ್ನು ಆನ್ಲೈನ್ನಲ್ಲಿ ಸಲ್ಲಿಸಲು ಚೆಕ್ಬಾಕ್ಸ್ ಕ್ಲಿಕ್ ಮಾಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಒಟಿಪಿಯನ್ನು ರಚಿಸಿ ಮತ್ತು ನಮೂದಿಸಿ, ಮತ್ತು ಘೋಷಣೆಯನ್ನು ಸಲ್ಲಿಸಿ.
- ಬ್ರೋಕರ್: ನಮ್ಮ ವೆಬ್ಸೈಟ್ ನಿಂದ ಫಾರ್ಮ್ 15 ಜಿ/ಎಚ್ ಅನ್ನು ಡೌನ್ಲೋಡ್ ಮಾಡಿ ಮತ್ತು ಅದನ್ನು ನಿಮ್ಮ ಬ್ರೋಕರಿಗೆ ಸಲ್ಲಿಸಿ, ಅವರು ಅದನ್ನು ನಮಗೆ ಕಳುಹಿಸುತ್ತಾರೆ.
- ಶಾಖೆ: ನಮ್ಮ ವೆಬ್ಸೈಟ್ ನಿಂದ ಫಾರ್ಮ್ 15 ಜಿ/ಎಚ್ ಅನ್ನು ಡೌನ್ಲೋಡ್ ಮಾಡಿ ಮತ್ತು ನಿಮ್ಮ ಹತ್ತಿರದ ಬಜಾಜ್ ಫೈನಾನ್ಸ್ ಲಿಮಿಟೆಡ್ ಶಾಖೆಗೆ ಸಲ್ಲಿಸಿ.
ಮಾಸಿಕವನ್ನು ಹೊರತುಪಡಿಸಿ ಪಾವತಿ ವಿಧಾನಗಳಿಗೆ ತ್ರೈಮಾಸಿಕವಾಗಿ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
ನೀವು ನಿಮ್ಮ ಪ್ರಾದೇಶಿಕ ಮ್ಯಾನೇಜರ್/ ಬ್ರೋಕರ್ ಅನ್ನು ಸಂಪರ್ಕಿಸಬಹುದು ಅಥವಾ ಇಲ್ಲಿ ಕ್ಲಿಕ್ ಮಾಡುವ ಮೂಲಕ ಮೇಲ್ ಕಳುಹಿಸಬಹುದು.
ಯಾವುದೇ ಎಫ್ಡಿ ಗೆ ಲಾಕ್-ಇನ್ ಅವಧಿಯು ಮೂರು ತಿಂಗಳಾಗಿರುತ್ತದೆ, ಆ ಸಮಯಕ್ಕಿಂತ ಮೊದಲು ನೀವು ಎಫ್ಡಿ ಯನ್ನು ವಿತ್ಡ್ರಾ ಮಾಡಲು ಸಾಧ್ಯವಿಲ್ಲ. ಪ್ರಿಮೆಚ್ಯೂರ್ ವಿತ್ಡ್ರಾವಲ್ಗಾಗಿ, ಪೆನಾಲ್ಟಿ ಸ್ಲ್ಯಾಬ್ಗಳು ಈ ಕೆಳಗಿನಂತಿವೆ:
- 0-3 ತಿಂಗಳು: ಮರಣ ಸಂಭವಿಸಿದ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ವಿತ್ಡ್ರಾವಲ್ಗೆ ಅನುಮತಿಯಿಲ್ಲ
- 3-6 ತಿಂಗಳು: ಡೆಪಾಸಿಟ್ ಮೇಲೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಅಸಲು ಮಾತ್ರ ಪಾವತಿಸಲಾಗುತ್ತದೆ
- >6 ತಿಂಗಳು: 6 ತಿಂಗಳ ನಂತರ ಆದರೆ ಮೆಚ್ಯೂರಿಟಿ ದಿನಾಂಕಕ್ಕಿಂತ ಮೊದಲು, ಈ ಸನ್ನಿವೇಶದಲ್ಲಿ ಪ್ರಿಮೆಚ್ಯೂರಿಟಿಗೆ ಎರಡು ಸಂದರ್ಭಗಳಿವೆ.
1. ಗ್ರಾಹಕರು ತಮ್ಮ ಎಫ್ಡಿಯನ್ನು 12 – 60 ತಿಂಗಳ ನಡುವೆ ಪ್ರಿಮೆಚ್ಯೂರ್ ಮಾಡಲು ಬಯಸಿದರೆ, ಪಾವತಿಸಲಾದ ಬಡ್ಡಿಯು ಡೆಪಾಸಿಟ್ನ ಪೂರ್ಣಗೊಂಡ ಅವಧಿಯ ಬಡ್ಡಿದರಕ್ಕಿಂತ 2% ಕಡಿಮೆ ಇರುತ್ತದೆ.
2. ಗ್ರಾಹಕರು ತಮ್ಮ ಎಫ್ಡಿಯನ್ನು 6 – 12 ತಿಂಗಳ ನಡುವೆ ಪ್ರಿಮೆಚ್ಯೂರ್ ಮಾಡಲು ಬಯಸಿದರೆ, ಈ ಸಂದರ್ಭದಲ್ಲಿ, ಅನ್ವಯವಾಗುವ ಬಡ್ಡಿಯು ಪ್ರತಿ ವರ್ಷಕ್ಕೆ ಕನಿಷ್ಠ ಬಡ್ಡಿದರಕ್ಕಿಂತ 3% ಕಡಿಮೆಯಾಗಿರುತ್ತದೆ.
ಹೌದು, ಸಹ-ಅರ್ಜಿದಾರರು ಲಿಖಿತ ಕೋರಿಕೆ, ಮರಣ ಪ್ರಮಾಣಪತ್ರ ಮತ್ತು ಎಫ್ಡಿಆರ್ ಅನ್ನು ಪ್ರಾದೇಶಿಕ ಮ್ಯಾನೇಜರ್/ ಬ್ರೋಕರ್ಗೆ ಸಲ್ಲಿಸಬೇಕು. ಅಪ್ಲಿಕೇಶನ್ ಸ್ವೀಕರಿಸಿದ 8 ದಿನಗಳ ಒಳಗೆ ನಮ್ಮೊಂದಿಗೆ ನೋಂದಣಿಯಾದ ಬ್ಯಾಂಕ್ ಅಕೌಂಟ್ಗೆ ಎಫ್ಡಿ ಆದಾಯವನ್ನು (ಟಿಡಿಎಸ್ ಕಡಿತದ ನಂತರ) ನಾವು ಟ್ರಾನ್ಸ್ಫರ್ ಮಾಡುತ್ತೇವೆ.
ಹೌದು, ಎಫ್ಡಿ ಅನ್ನು ಮೆಚ್ಯೂರಿಟಿಗೆ ಮುಂಚಿತವಾಗಿ ವಿತ್ಡ್ರಾ ಮಾಡಿದರೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
ಯಾವುದೇ ನಾಮಿನಿಗಳು/ಜಂಟಿ ಡೆಪಾಸಿಟರ್ಗಳಿಲ್ಲದೆ ಪ್ರಾಥಮಿಕ ಅರ್ಜಿದಾರರ ಸಾವಿನ ಸಂದರ್ಭದಲ್ಲಿ, ಕಾನೂನು ಉತ್ತರಾಧಿಕಾರಿಯು ಈ ಕೆಳಗಿನ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕು:
- ಸಾವಿಗೀಡಾದ ವ್ಯಕ್ತಿಯ ಕ್ಲೈಮ್ಗಾಗಿ ಅಪ್ಲಿಕೇಶನ್ (ಕಡ್ಡಾಯ)
- ಮರಣ ಪ್ರಮಾಣ ಪತ್ರದ ದಸ್ತಾವೇಜು ಪ್ರತಿ (ಕಡ್ಡಾಯ)
- ಉತ್ತರಾಧಿಕಾರಿ ಪ್ರಮಾಣಿಕರಣ/ಆಡಳಿತದ ಪತ್ರ/ವಿಲ್ ಪ್ರಸ್ತಾಪ (ಶಿಫಾರಸ್ಸು ಮಾಡಲಾಗಿದೆ, ಆದರೆ ಕಡ್ಡಾಯವಲ್ಲ)
- ಕಾನೂನು ಉತ್ತರಾಧಿಕಾರಿ/ಪ್ರತಿನಿಧಿಯು ನಷ್ಟ ಪರಿಹಾರ ಬಾಂಡ್ ಸಲ್ಲಿಸಬೇಕು (ಕಡ್ಡಾಯ)
ಇಲ್ಲ. ಹಿಂದಿನ ಎಫ್ಡಿ ಮೆಚ್ಯೂರ್ ಆದ ನಂತರ ಎಫ್ಡಿ ನವೀಕರಣದ ಸಮಯದಲ್ಲಿ ಸಹ-ಅರ್ಜಿದಾರರು ಹೊಸ ಪ್ರಾಥಮಿಕ ಅಪ್ಲಿಕೇಶನ್ ಸೇರಿಸಲು ಸಾಧ್ಯವಿಲ್ಲ.
ಇಲ್ಲ, ಮರಣ ಹೊಂದಿದ ಸಹ-ಅರ್ಜಿದಾರರ ಹೆಸರನ್ನು ಬೇರೊಂದು ಸಹ-ಅರ್ಜಿದಾರರೊಂದಿಗೆ ಬದಲಾಯಿಸಲು ಸಾಧ್ಯವಿಲ್ಲ. ಆದಾಗ್ಯೂ, ಸರಿಯಾದ ಡಾಕ್ಯುಮೆಂಟ್ಗಳನ್ನು ಒದಗಿಸುವ ಮೂಲಕ, ಹೆಸರನ್ನು ಎಫ್ಡಿಯಿಂದ ತೆಗೆದುಹಾಕಬಹುದು.
ಈ ಎರಡೂ ಸನ್ನಿವೇಶಗಳಲ್ಲಿ, ಹೊಸ ಕರ್ತಾಗೆ ಈ ಕೆಳಗಿನ ಡಾಕ್ಯುಮೆಂಟ್ಗಳನ್ನು ನೀಡಬೇಕಾಗುತ್ತದೆ:
- ಡೆಪಾಸಿಟರ್ನ ಮರಣ ಪ್ರಮಾಣ ಪತ್ರ
- ಎಚ್ಯುಎಫ್ನ ಭಾಗವಾಗಿರುವ ಸದಸ್ಯರಿಂದ ಕುಟುಂಬದ ಹಿರಿಯ ಸದಸ್ಯನನ್ನು ಎಚ್ಯುಎಫ್ನ ಹೊಸ ಕರ್ತಾ ಎಂದು ಘೋಷಣೆ / ಅಫಿಡವಿಟ್ / ಖಾತರಿಪಡಿಸುವಿಕೆ
- ಕರ್ತಾ ಮತ್ತು ವಯಸ್ಕ ಸಹಭಾಗಿಗಳು ಸಹಿ ಮಾಡಿದ ಹಿಸ್ಸೇದಾರರ ಪಟ್ಟಿಯನ್ನು ಒಳಗೊಂಡಂತೆ ಎಚ್ಯುಎಫ್ ಘೋಷಣೆಯ ಹೊಸ ಪತ್ರ
- ಹೊಸ ಕರ್ತಾನ ಆಧಾರ್ ಮತ್ತು ಪ್ಯಾನ್
ಹೌದು, ಏಕೆಂದರೆ ಬಜಾಜ್ ಫೈನಾನ್ಸ್ ಲಿಮಿಟೆಡ್ ಕಾನೂನುಬದ್ಧವಾಗಿ ಬಡ್ಡಿಯನ್ನು ಪಾವತಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲ ಮತ್ತು ಮರಣ ಹೊಂದಿದ ವ್ಯಕ್ತಿಯ ಪ್ಯಾನ್ನಲ್ಲಿ ಟಿಡಿಎಸ್ ಕಡಿತಗೊಳಿಸಲು ಸಾಧ್ಯವಿಲ್ಲ.
ಅಂತಹ ಸಂದರ್ಭದಲ್ಲಿ, ಡೆಪಾಸಿಟರ್ ತಮ್ಮ ನಾಗರಿಕತ್ವದ ಸ್ಥಿತಿಯಲ್ಲಿನ ಬದಲಾವಣೆಯ ಬಗ್ಗೆ ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಬರವಣಿಗೆ ನೀಡಬೇಕು ಮತ್ತು ಸಂಬಂಧಿತ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕು. ನಂತರ ನಾವು ಡೆಪಾಸಿಟರ್ನ ನಾಗರಿಕತ್ವದ ಸ್ಥಿತಿಯನ್ನು ಎನ್ಆರ್ಐಗೆ ಬದಲಾಯಿಸುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ತೆರಿಗೆ ಮಾರ್ಗಸೂಚಿಗಳು ಅನ್ವಯವಾಗುತ್ತವೆ.
ಇಲ್ಲ. , ಬಜಾಜ್ ಫೈನಾನ್ಸ್ ಲಿಮಿಟೆಡ್ ಸಂಗ್ರಹಿಸುವ ಎಲ್ಲಾ ಫಿಸಿಕಲ್ ಎಫ್ಡಿ ಅಪ್ಲಿಕೇಶನ್ಗಳನ್ನು ಚೆಕ್ನೊಂದಿಗೆ ಸಲ್ಲಿಸಬೇಕು. ಒಂದು ವೇಳೆ ಪಾಲುದಾರರು ನಿಮಗೆ ಸಹಾಯ ಮಾಡುತ್ತಿದ್ದರೆ, ದಯವಿಟ್ಟು ಚೆಕ್ನೊಂದಿಗೆ ಸಿಎಂಎಸ್ ಪೇ-ಇನ್-ಸ್ಲಿಪ್ (ಪಾಲುದಾರ ಪೋರ್ಟಲ್ನಲ್ಲಿ ಲಭ್ಯವಿದೆ) ಸಲ್ಲಿಸಿ.
ಹೌದು. ನೀವು RTGS, NEFT ಅಥವಾ IMPS ಮೂಲಕ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ ಮಾಡಲು ಆಯ್ಕೆ ಮಾಡಿದರೆ, ದಯವಿಟ್ಟು ನಿಮ್ಮ ಅಪ್ಲಿಕೇಶನ್ ಫಾರ್ಮ್ನಲ್ಲಿ ಟ್ರಾನ್ಸಾಕ್ಷನ್ ID ನಮೂದಿಸಿ.
ಎನ್ಆರ್ಐ ಎಫ್ಡಿಯಲ್ಲಿ ಹೂಡಿಕೆ ಮಾಡಲು, ಪಾವತಿಯನ್ನು ಎನ್ಆರ್ಒ (ಅನಿವಾಸಿ ಸಾಮಾನ್ಯ) ಅಕೌಂಟಿನಿಂದ ಮಾತ್ರ ಕ್ರೆಡಿಟ್ ಮಾಡಬೇಕು. ನೀವು ಆಕಸ್ಮಿಕವಾಗಿ ಎನ್ಆರ್ಇ ಅಕೌಂಟಿನಿಂದ ಹಣವನ್ನು ಟ್ರಾನ್ಸ್ಫರ್ ಮಾಡಿದರೆ, ನೀವು ಅದನ್ನು ನಮಗೆ ತಿಳಿಸಬೇಕಾಗುತ್ತದೆ. ನಂತರ ನೀವು ಬೇರೊಂದು ಬ್ಯಾಂಕ್ ಅಕೌಂಟ್ (ಎನ್ಆರ್ಒ/ಸೇವಿಂಗ್ ಅಕೌಂಟ್) ವಿವರಗಳನ್ನು ಒದಗಿಸಬೇಕಾಗುತ್ತದೆ, ಮತ್ತು ನಾವು ಈ ಅಕೌಂಟಿಗೆ ಹಣವನ್ನು ಹಿಂದಿರುಗಿಸುತ್ತೇವೆ.
ಹೌದು, ನಿಮ್ಮ ಎಫ್ಡಿ ಅನ್ನು 15 ದಿನಗಳ ಒಳಗೆ ಬುಕ್ ಮಾಡದಿದ್ದರೆ ನೀವು ರಿಫಂಡ್ ಪಡೆಯುತ್ತೀರಿ.
ಸಂಚಿತ ಯೋಜನೆಯಡಿಯಲ್ಲಿ 12 ತಿಂಗಳ ಆರ್ಒಐಗೆ ಸಮನಾದ ಬಡ್ಡಿ ದರದೊಂದಿಗೆ ನೀವು ಅಸಲು ಮೊತ್ತದ ರಿಫಂಡ್ ಅನ್ನು ಪಡೆಯುತ್ತೀರಿ.
ನಿಮ್ಮ ಹಣವನ್ನು ರಿಫಂಡ್ ಮಾಡಲಾಗುವ ಎರಡು ಸಂದರ್ಭಗಳು ಇಲ್ಲಿವೆ:
- ಒಂದು ವೇಳೆ ಗ್ರಾಹಕರ ಡೆಪಾಸಿಟ್ಗಳನ್ನು (ಅಪೂರ್ಣ ಡಾಕ್ಯುಮೆಂಟ್ಗಳು, ಬ್ಲರ್ಡ್ ಡಾಕ್ಯುಮೆಂಟ್ಗಳು, ಅಪೂರ್ಣ ಬ್ಯಾಂಕ್ ವಿವರಗಳು ಇತ್ಯಾದಿ) ಕಾರಣದಿಂದಾಗಿ ತಡೆಹಿಡಿಯಲಾಗಿದ್ದರೆ
- ಡೆಪಾಸಿಟ್ ಮೊತ್ತವನ್ನು ನೇರವಾಗಿ ನಾವು ಪಡೆದರೆ (ಯುಪಿಐ, ನೆಟ್ ಬ್ಯಾಂಕಿಂಗ್, ಎನ್ಇಎಫ್ಟಿ ಮೂಲಕ)
ಆದಾಗ್ಯೂ, ತಾಂತ್ರಿಕ ದೋಷಗಳಿಂದಾಗಿ ಡೆಪಾಸಿಟ್ಗಳನ್ನು ಬುಕ್ ಮಾಡದಿದ್ದರೆ ಯಾವುದೇ ರಿಫಂಡ್ ಇರುವುದಿಲ್ಲ.
ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅಪ್ಲಿಕೇಶನ್ ಬುಕ್ ಆಗಲು:
- ಅಪ್ಲಿಕೇಶನ್ ಫಾರ್ಮ್ ಅಪೂರ್ಣವಾಗಿದೆ
- ಕೆವೈಸಿ ಡಾಕ್ಯುಮೆಂಟ್ಗಳನ್ನು ಸಲ್ಲಿಸಲಾಗಿಲ್ಲ
- ಅಪ್ಲಿಕೇಶನ್ ಫಾರ್ಮ್ನಲ್ಲಿ ಬರೆದ ಯುಟಿಆರ್ ನಂಬರ್ ಮತ್ತು ನಿಜವಾದ ಯುಟಿಆರ್ ತಾಳೆಯಾಗದೇ ಪಾವತಿ ವಿವರಗಳಲ್ಲಿ ಯುಟಿಆರ್ ಪಾವತಿ ವಿವರಗಳು ಹೋಲಿಕೆಯಾಗುತ್ತಿಲ್ಲ
ಫಂಡ್ ಟ್ರಾನ್ಸ್ಫರ್ ಮಾಡಿದ 15 ದಿನಗಳ ಒಳಗೆ ಈ ವಿವರಗಳನ್ನು ಪರಿಹರಿಸದಿದ್ದರೆ ಅಥವಾ ಪರಿಷ್ಕರಿಸದಿದ್ದರೆ ನಿಮ್ಮ ಅಕೌಂಟಿನಲ್ಲಿ ರಿಫಂಡ್ ಅನ್ನು ನೀವು ಪಡೆಯುತ್ತೀರಿ.
ಒಂದು ವೇಳೆ ನಿಮ್ಮ ಡೆಪಾಸಿಟ್ ನಮ್ಮೊಂದಿಗೆ ಬುಕ್ ಆಗದಿದ್ದರೆ, ಫಂಡ್ ಟ್ರಾನ್ಸ್ಫರ್ ಆದ 15 ದಿನಗಳ ಒಳಗೆ ಮೊತ್ತವನ್ನು ನಿಮ್ಮ ಅಕೌಂಟಿಗೆ ಮರಳಿ ಕ್ರೆಡಿಟ್ ಮಾಡಲಾಗುತ್ತದೆ. ಆದಾಗ್ಯೂ, ಈ ಪಾಲಿಸಿಯು ಎನ್ಆರ್ಐ ಮತ್ತು ಕಾರ್ಪೊರೇಟ್ ಎಫ್ಡಿ ಗ್ರಾಹಕರಿಗೆ ಅನ್ವಯವಾಗುವುದಿಲ್ಲ. ಎನ್ಆರ್ಐ ಡೆಪಾಸಿಟ್ಗಳಿಗೆ, ರಿಫಂಡ್ ಅವಧಿ 45 ದಿನಗಳು, ಮತ್ತು ಕಾರ್ಪೊರೇಟ್ ಡೆಪಾಸಿಟ್ ಗ್ರಾಹಕರಿಗೆ, ರಿಫಂಡ್ ಅವಧಿ 30 ದಿನಗಳು. ಈ ಕೆಳಗಿನ ಪರಿಸ್ಥಿತಿಗಳ ಸಂದರ್ಭದಲ್ಲಿ ರಿಫಂಡ್ ಅವಧಿಯು 15 ದಿನಗಳನ್ನು ಮೀರಬಹುದು:
- ರಿಫಂಡ್ ಗಡುವು ದಿನಾಂಕವು ರಜಾದಿನದಲ್ಲಿ ಬರುತ್ತಿದ್ದರೆ (ಈ ಸಂದರ್ಭದಲ್ಲಿ, ಮುಂದಿನ ಕೆಲಸದ ದಿನದಂದು ರಿಫಂಡ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ)
- ಆಂತರಿಕ ಸಮಸ್ಯೆಗಳಿಂದಾಗಿ ಘಟನೆ ನಡೆದ ಸಂದರ್ಭಗಳಿಗೆ, ಉದಾ: ಕಾರ್ಯಾಚರಣೆ ಅಥವಾ ತಾಂತ್ರಿಕ ದೋಷಗಳು
- ಒಂದು ವೇಳೆ ಒರಿಜಿನಲ್ ಬ್ಯಾಂಕ್ ಅಕೌಂಟ್ ವಿವರಗಳನ್ನು ಪಡೆದಿಲ್ಲವಾದರೆ
ಪಾವತಿಯ ವಿಧಾನಗಳ ಪ್ರಕಾರ ರಿಫಂಡ್ ಪ್ರಕ್ರಿಯೆಗಳು ಬದಲಾಗುತ್ತವೆ. ಅವಲೋಕನವನ್ನು ಇಲ್ಲಿ ನೀಡಲಾಗಿದೆ:
- ಐಎಂಪಿಎಸ್ – ರಿಫಂಡ್ ಕ್ಲೈಮ್ ಮಾಡಲು ನೀವು ಸರಿಯಾದ ಐಎಫ್ಎಸ್ಸಿ ಮತ್ತು ಅಕೌಂಟ್ ನಂಬರನ್ನು ಒದಗಿಸಬೇಕು. ನಿಮ್ಮ ಬ್ಯಾಂಕಿನ ಕೇಂದ್ರ ಕಚೇರಿ/ ಟ್ರೆಜರಿಯ ಐಎಫ್ಎಸ್ಸಿ ಅನ್ನು ಬಳಸಿಕೊಂಡು ಬಜಾಜ್ ಫೈನಾನ್ಸ್ ಲಿಮಿಟೆಡ್ ಐಎಂಪಿಎಸ್ ಮೂಲಕ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ರೂ. 1 ಟ್ರಾನ್ಸಾಕ್ಷನ್ ಅನ್ನು ನಡೆಸುತ್ತದೆ. ಪರಿಶೀಲನೆಯ ನಂತರ, ರಿಫಂಡನ್ನು ಪ್ರಕ್ರಿಯೆಗೊಳಿಸಬಹುದು.
- ಯುಪಿಐ – ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ ಅಥವಾ ರದ್ದುಗೊಂಡ ಚೆಕ್ನ ಪ್ರತಿಯೊಂದಿಗೆ ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ನೀವು ಒದಗಿಸಬೇಕಾಗುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳ ಪರಿಶೀಲನೆಯ ನಂತರ ರಿಫಂಡನ್ನು ಪ್ರಕ್ರಿಯೆಗೊಳಿಸಲಾಗುತ್ತದೆ..
- ಚೆಕ್/ಟಿಪಿಟಿ ಫಂಡ್ ಟ್ರಾನ್ಸ್ಫರ್/ಎನ್ಇಎಫ್ಟಿ/ಆರ್ಟಿಜಿಎಸ್ – ಬಜಾಜ್ ಫೈನಾನ್ಸ್ ಲಿಮಿಟೆಡ್ ನಿಮ್ಮ ಬ್ಯಾಂಕಿನ ಸೆಂಟ್ರಲ್ ಆಫೀಸ್/ಟ್ರೆಜರಿಯ ಐಎಫ್ಎಸ್ಸಿ ಬಳಸಿ ಐಎಂಪಿಎಸ್ ಮೂಲಕ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ರೂ. 1 ಟ್ರಾನ್ಸಾಕ್ಷನ್ ಅನ್ನು ನಡೆಸುತ್ತದೆ. ಅಕೌಂಟ್ ಪರಿಶೀಲನೆಯ ನಂತರ, ರಿಫಂಡ್ ಅನ್ನು ಪ್ರಕ್ರಿಯೆಗೊಳಿಸಬಹುದು.
- ಎನ್ಆರ್ಒ ಎಫ್ಡಿ – ರಿಫಂಡ್ ಕ್ಲೈಮ್ ಮಾಡಲು ನೀವು ಸರಿಯಾದ ಐಎಫ್ಎಸ್ಸಿ ಮತ್ತು ಅಕೌಂಟ್ ನಂಬರನ್ನು ಒದಗಿಸಬೇಕು. ನಿಮ್ಮ ಬ್ಯಾಂಕಿನ ಕೇಂದ್ರ ಕಚೇರಿ/ಟ್ರೆಷರಿಯ ಐಎಫ್ಎಸ್ಸಿ ಬಳಸಿಕೊಂಡು ಐಎಂಪಿಎಸ್ ಮೂಲಕ ಬಜಾಜ್ ಫೈನಾನ್ಸ್ ಲಿಮಿಟೆಡ್ನಿಂದ ರೂ. 1 ಟ್ರಾನ್ಸಾಕ್ಷನ್ ನಡೆಸಲಾಗುತ್ತದೆ. ಅಕೌಂಟನ್ನು ಪರಿಶೀಲಿಸಿದ ನಂತರ, ರಿಫಂಡ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
- ಆನ್ಲೈನ್ ಬಿಲ್ಡೆಸ್ಕ್ ಪಾವತಿ - ಬಿಲ್ ಡೆಸ್ಕ್ ಹಂಚಿಕೊಂಡ ವಿವರಗಳ ಪ್ರಕಾರ ಮೊತ್ತವನ್ನು ನಿಮ್ಮ ಅಕೌಂಟಿಗೆ ರಿಫಂಡ್ ಮಾಡಲಾಗುತ್ತದೆ. ಅಕೌಂಟ್ ಮೌಲ್ಯಮಾಪನಕ್ಕಾಗಿ ನಿಮ್ಮ ಅಕೌಂಟ್ ವಿವರಗಳನ್ನು ನೀವು ಪರಿಶೀಲಿಸಬೇಕಾಗಬಹುದು.
ಡಿಸೆಂಬರ್ 1, 2020 ರಿಂದ, ಪ್ಯಾನ್ ಮಟ್ಟದಲ್ಲಿ ತೆರಿಗೆಗಳನ್ನು (ಅನ್ವಯವಾದರೆ) ಕಡಿತಗೊಳಿಸಲಾಗುತ್ತದೆ. ಗ್ರಾಹಕರು ಬಜಾಜ್ ಫೈನಾನ್ಸ್ ಲಿಮಿಟೆಡ್ನಲ್ಲಿ ಐದು ಡೆಪಾಸಿಟ್ಗಳನ್ನು ಹೊಂದಿದ್ದಾರೆ ಎಂದುಕೊಳ್ಳಿ. ಈ ಸಂದರ್ಭದಲ್ಲಿ, ಈ ಐದು ಡೆಪಾಸಿಟ್ಗಳ ಮೇಲೆ ಕಡಿತಗೊಳಿಸಬೇಕಾದ ಒಟ್ಟು ತೆರಿಗೆಯನ್ನು ಬಿಎಫ್ಎಲ್ ಲೆಕ್ಕ ಹಾಕುತ್ತದೆ ಮತ್ತು ಈ ಯಾವುದೇ ಡೆಪಾಸಿಟ್ಗಳ ಮೂಲಕ ಪಾವತಿಸಿದ ಬಡ್ಡಿಯಿಂದ ಈ ಸಂಪೂರ್ಣ ತೆರಿಗೆಯನ್ನು ಕಡಿತಗೊಳಿಸುತ್ತದೆ.