ಎಫ್ಡಿ ಕ್ಯಾಲ್ಕುಲೇಟರ್
ನಿಮ್ಮ ಹೂಡಿಕೆಯನ್ನು ಉತ್ತಮವಾಗಿ ಯೋಜಿಸಿ
ಎನ್ಆರ್ಐ ಎಫ್ಡಿ ಕ್ಯಾಲ್ಕುಲೇಟರ್
ಉತ್ತಮವಾಗಿ ಹೂಡಿಕೆ ಮಾಡಲು ನಿಮ್ಮ ಆದಾಯವನ್ನು ಲೆಕ್ಕ ಹಾಕಿ
ಆಗಾಗ ಕೇಳುವ ಪ್ರಶ್ನೆಗಳು
ಎಫ್ಡಿ ಬಡ್ಡಿದರದ ಕ್ಯಾಲ್ಕುಲೇಟರ್ ಬಳಸುವುದು ಒಂದು ಸರಳ ಪ್ರಕ್ರಿಯೆಯಾಗಿದೆ. FD ಕ್ಯಾಲ್ಕುಲೇಟರ್ ಉಪಯೋಗಿಸಲು ಇಲ್ಲಿದೆ ಕೆಲವು ಹಂತಗಳು.
1. ನಿಮ್ಮ ಗ್ರಾಹಕರ ಪ್ರಕಾರವನ್ನು ಆಯ್ಕೆ ಮಾಡಿ, ಅಂದರೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರು (ಆಫ್ಲೈನ್ ಅಥವಾ ಆನ್ಲೈನ್ನಲ್ಲಿ ಹೂಡಿಕೆ ಮಾಡುವುದು) ಅಥವಾ ಹಿರಿಯ ನಾಗರಿಕರು
2. ನೀವು ಬಯಸುವ ಫಿಕ್ಸೆಡ್ ಡೆಪಾಸಿಟ್ ಪ್ರಕಾರವನ್ನು ಆಯ್ಕೆ ಮಾಡಿ, ಅಂದರೆ ಒಟ್ಟುಗೂಡಿಸಿದ ಅಥವಾ ಒಟ್ಟುಗೂಡಿಸದ
3. ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೊತ್ತವನ್ನು ಆರಿಸಿ
4. ಫಿಕ್ಸೆಡ್ ಡೆಪಾಸಿಟ್ನ ಆದ್ಯತೆಯ ಅವಧಿಯನ್ನು ಆರಿಸಿ
5. ಫಿಕ್ಸೆಡ್ ಡೆಪಾಸಿಟ್ ಬಡ್ಡಿ ಕ್ಯಾಲ್ಕುಲೇಟರ್ ಸ್ವಯಂಚಾಲಿತವಾಗಿ ನಿಮ್ಮ ಬಡ್ಡಿ ಪಾವತಿಯನ್ನು ಮತ್ತು ಮೆಚ್ಯೂರಿಟಿಯಲ್ಲಿ ಗಳಿಸಿದ ಒಟ್ಟು ಮೊತ್ತವನ್ನು ಪ್ರದರ್ಶಿಸುತ್ತದೆ. ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ಕ್ಯಾಲ್ಕುಲೇಟರ್ ಬಳಸುವುದು ಹೂಡಿಕೆ ಮಾಡುವ ಮೊದಲು ನಿಮ್ಮ ಆದಾಯವನ್ನು ನಿರ್ಧರಿಸಲು ಉತ್ತಮ ಮಾರ್ಗವಾಗಬಹುದು. ಇದು ನಿಮ್ಮ ಹಣಕಾಸನ್ನು ಸುಲಭವಾಗಿ ಸುವ್ಯವಸ್ಥಿತಗೊಳಿಸಲು ಮತ್ತು ನಿಮ್ಮ ಹೂಡಿಕೆಯ ಮೇಲಿನ ಆದಾಯವನ್ನು ಗರಿಷ್ಠಗೊಳಿಸಲು ಸಹಾಯ ಮಾಡುತ್ತದೆ.
ಎಫ್ಡಿ ಮೆಚ್ಯೂರಿಟಿ ಮೊತ್ತವನ್ನು ಕಂಡುಹಿಡಿಯಲು ನೀವು ಎಫ್ಡಿ ಕ್ಯಾಲ್ಕುಲೇಟರ್ ಅಥವಾ ಟರ್ಮ್ ಡೆಪಾಸಿಟ್ ಕ್ಯಾಲ್ಕುಲೇಟರ್ ಬಳಸಬಹುದು. ಆನ್ಲೈನ್ ಎಫ್ಡಿ ಬಡ್ಡಿ ಕ್ಯಾಲ್ಕುಲೇಟರ್ಗೆ ಹೋಗಿ ಮತ್ತು ಗ್ರಾಹಕರ ವರ್ಗವನ್ನು ಆಯ್ಕೆ ಮಾಡಿ - ಹಿರಿಯ ನಾಗರಿಕರು ಅಥವಾ 60 ಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರು. ಮುಂದೆ, ನೀವು ಎಫ್ಡಿ ಪ್ರಕಾರವನ್ನು ಆಯ್ಕೆ ಮಾಡಬೇಕು - ಒಟ್ಟುಗೂಡಿಸಿದ ಅಥವಾ ಒಟ್ಟುಗೂಡಿಸದ. ಮತ್ತು ಅಂತಿಮವಾಗಿ, ನಿಮ್ಮ ಆದ್ಯತೆಯ ಡೆಪಾಸಿಟ್ ಮೊತ್ತ ಮತ್ತು ಅವಧಿಯನ್ನು ಆಯ್ಕೆಮಾಡಿ. ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತವನ್ನು ಸ್ಕ್ರೀನಿನಲ್ಲಿ ಸ್ವಯಂಚಾಲಿತವಾಗಿ ತೋರಿಸಲಾಗುತ್ತದೆ.
ನಿಮ್ಮ ಫಿಕ್ಸೆಡ್ ಡೆಪಾಸಿಟ್ನ ಮೆಚ್ಯೂರಿಟಿ ಮೊತ್ತವನ್ನು ಕಂಡುಹಿಡಿಯಲು ನೀವು ಎಫ್ಡಿ ಕ್ಯಾಲ್ಕುಲೇಟರ್ ಬಳಸಬಹುದು. ನೀವು ಆಯ್ಕೆ ಮಾಡಿದ ಎಫ್ಡಿ ಪ್ರಕಾರಕ್ಕೆ ಅನುಗುಣವಾಗಿ ಬಡ್ಡಿ ದರಗಳು ಬದಲಾಗುತ್ತವೆ, ಅಂದರೆ ಒಟ್ಟುಗೂಡಿಸಿದ/ ಒಟ್ಟುಗೂಡಿಸದ ಮತ್ತು ಅವಧಿ. ಈ ಎಫ್ಡಿ ಬಡ್ಡಿ ಕ್ಯಾಲ್ಕುಲೇಟರ್ ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಮೆಚ್ಯೂರಿಟಿ ಮೊತ್ತವನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ.
ನಿಮ್ಮ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲಿನ ಆದಾಯವನ್ನು ನಿಮ್ಮ ಬಡ್ಡಿ ದರಗಳು ಮತ್ತು ಬಡ್ಡಿ ಪಾವತಿಗಳ ಆವರ್ತನದಿಂದ ನಿರ್ಧರಿಸಲಾಗುತ್ತದೆ. ಈ ಬಡ್ಡಿದರಗಳನ್ನು ನಿಯತಕಾಲಿಕವಾಗಿ ಕ್ರೋಡೀಕರಿಸಲಾಗುತ್ತದೆ ಮತ್ತು FD ಬಡ್ಡಿದರ ಕ್ಯಾಲ್ಕುಲೇಟರ್ ಅನ್ನು ಬೆಂಬಲಿಸುವ ಸೂತ್ರವನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಎಫ್ಡಿ ಲೆಕ್ಕಾಚಾರ ಫಾರ್ಮುಲಾ ಇಲ್ಲಿದೆ:
A=P(1+r/n)^n*t
ಎಲ್ಲಿ;
A ಎಂದರೆ ಮೆಚ್ಯೂರಿಟಿ ಮೊತ್ತವಾಗಿದೆ
ಪಿ ಎಂದರೆ ಅಸಲು ಮೊತ್ತ
ಆರ್ ಎಂದರೆ ಬಡ್ಡಿ ದರ
t ಎಂದರೆ ವರ್ಷಗಳ ಸಂಖ್ಯೆ
n ಒಟ್ಟುಗೂಡಿಸಲಾದ ಬಡ್ಡಿ ಆವರ್ತನವಾಗಿದೆ.
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ಕ್ಯಾಲ್ಕುಲೇಟರ್ ಡೆಪಾಸಿಟ್ ಮೆಚ್ಯೂರಿಟಿಯ ನಂತರ ನೀವು ಪಡೆಯುವ ಮೊತ್ತವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಡೆಪಾಸಿಟ್ ಮೊತ್ತ, ಕಾಲಾವಧಿ ಮತ್ತು ಬಡ್ಡಿ ಪಾವತಿ ಫ್ರೀಕ್ವೆನ್ಸಿಯನ್ನು ಬದಲಾಯಿಸುವ ಮೂಲಕ ಪಡೆಯಬಹುದಾದ ಬಡ್ಡಿಯನ್ನು ಲೆಕ್ಕ ಹಾಕಲು ಮತ್ತು ಹೋಲಿಕೆ ಮಾಡಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.
ಹೌದು, ನೀವು ಪಾವತಿ ಮೋಡ್ ಡ್ರಾಪ್ಡೌನ್ನಲ್ಲಿ 'ಮಾಸಿಕ' ಎಂದು ಆರಿಸಿದರೆ ನೀವು ಮಾಸಿಕ ಬಡ್ಡಿ ಪಾವತಿಗಳನ್ನು ಪಡೆಯಬಹುದು. ನೀವು ನಿಮ್ಮ ಹಣವನ್ನು ಎಫ್ಡಿಗಳಲ್ಲಿ ಹೂಡಿಕೆ ಮಾಡಿದಾಗ, ನಿಮ್ಮ ಅಸಲು ಮೊತ್ತದ ಮೇಲೆ ನೀವು ಬಡ್ಡಿಯನ್ನು ಪಡೆಯುತ್ತೀರಿ. ಆನ್ಲೈನ್ ಎಫ್ಡಿ ಕ್ಯಾಲ್ಕುಲೇಟರ್ ಬಳಸುವುದರಿಂದ, ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ನಿಮ್ಮ ಆದ್ಯತೆಯ ಅವಧಿಯನ್ನು ಆಯ್ಕೆ ಮಾಡಲು ಮತ್ತು ನೀವು ಮಾಡಲಿರುವ ಲಾಭಗಳನ್ನು ನಿರ್ಧರಿಸಲು ಪಾವತಿಯ ಆವರ್ತನದ ಅನುಮತಿಯನ್ನು ನಿಮಗೆ ನೀಡುತ್ತದೆ. ನಿಮ್ಮ ಹೂಡಿಕೆಯಿಂದ ಮಾಸಿಕ ಆದಾಯವನ್ನು ನೀವು ಹುಡುಕುತ್ತಿದ್ದರೆ, ಪ್ರತಿ ತಿಂಗಳು ನಿಮ್ಮ ಬಡ್ಡಿ ಪಾವತಿಗಳನ್ನು ಪಡೆಯಲು ನೀವು ಆಯ್ಕೆ ಮಾಡಬಹುದು. ಫಿಕ್ಸೆಡ್ ಡೆಪಾಸಿಟ್ ಬಡ್ಡಿ ಕ್ಯಾಲ್ಕುಲೇಟರ್ ಸಹಾಯದಿಂದ, ನಿಮ್ಮ ಮಾಸಿಕ ಬಡ್ಡಿಯನ್ನು ಪರಿಣಾಮಕಾರಿಯಾಗಿ ಲೆಕ್ಕ ಹಾಕಬಹುದು.
ಆದಾಗ್ಯೂ, ನಿಮ್ಮ ಬಡ್ಡಿ ಪಾವತಿ ಆವರ್ತನವು ಬಡ್ಡಿದರದ ಮೇಲೆ ಕೂಡ ಪರಿಣಾಮ ಬೀರಬಹುದು. ನೀವು ಆಗಾಗ್ಗೆ ನಿಮ್ಮ ಬಡ್ಡಿಯನ್ನು ವಿತ್ಡ್ರಾ ಮಾಡಿದರೆ, ನೀವು ಕಡಿಮೆ ಬಡ್ಡಿಯನ್ನು ಗಳಿಸುತ್ತೀರಿ. ಹೂಡಿಕೆ ಮಾಡುವ ಮೊದಲು ನಿಮ್ಮ ಆದಾಯವನ್ನು ತಿಳಿಯಲು ನೀವು ಬಜಾಜ್ ಫೈನಾನ್ಸ್ ಎಫ್ಡಿ ರಿಟರ್ನ್ ಕ್ಯಾಲ್ಕುಲೇಟರ್ ಅನ್ನು ಪರಿಶೀಲಿಸುತ್ತಿರಬಹುದು.
ನಿಮ್ಮ ಫಿಕ್ಸೆಡ್ ಡೆಪಾಸಿಟ್ನ ಮೆಚ್ಯೂರಿಟಿ ಮೊತ್ತವು ಆಯ್ಕೆ ಮಾಡಿದ ಅವಧಿಯಲ್ಲಿ ಪೂರ್ವ-ನಿರ್ಧರಿತ ಆದಾಯದೊಂದಿಗೆ ಹೂಡಿಕೆ ಮಾಡಲಾದ ನಿಮ್ಮ ಅಸಲು ಮೊತ್ತದ ಒಟ್ಟು ಮೊತ್ತವಾಗಿದೆ. ಹೂಡಿಕೆ ಮಾಡುವ ಮೊದಲು, ನೀವು ಎಫ್ಡಿ ಮೆಚ್ಯೂರಿಟಿ ಮೊತ್ತವನ್ನು ಆನ್ಲೈನ್ನಲ್ಲಿ ಎಫ್ಡಿ ಕ್ಯಾಲ್ಕುಲೇಟರ್ನೊಂದಿಗೆ ಸುಲಭವಾಗಿ ಲೆಕ್ಕ ಹಾಕಬಹುದು. ಆದ್ಯತೆಯ ಹೂಡಿಕೆ ಮೊತ್ತವನ್ನು ನಮೂದಿಸಿ, ಮತ್ತು ನಿಮ್ಮ ಎಫ್ಡಿ ಮೆಚ್ಯೂರಿಟಿ ಮೊತ್ತವನ್ನು ಶೀಘ್ರವಾಗಿ ಲೆಕ್ಕ ಹಾಕಲಾಗುತ್ತದೆ.
ನಿಮ್ಮ ಹೂಡಿಕೆ ಮೊತ್ತ, ಕಾಲಾವಧಿ ಮತ್ತು ಪಾವತಿ ಆಯ್ಕೆಯ ಆಧಾರದ ಮೇಲೆ, ಬಜಾಜ್ ಫೈನಾನ್ಸ್ ಎಫ್ಡಿ ಕ್ಯಾಲ್ಕುಲೇಟರ್ ನಿಮ್ಮ ಹೂಡಿಕೆಯ ಮೇಲೆ ಅನ್ವಯವಾಗುವ ಬಡ್ಡಿ ದರವನ್ನು ಒದಗಿಸುತ್ತದೆ ಮತ್ತು ಮೆಚ್ಯೂರಿಟಿ ಮೊತ್ತದೊಂದಿಗೆ ನಿಮ್ಮ ಬಡ್ಡಿಯನ್ನು ಲೆಕ್ಕ ಹಾಕುತ್ತದೆ.
ಪಾವತಿ ಫ್ರೀಕ್ವೆನ್ಸಿಯ ಆಧಾರದ ಮೇಲೆ, ಈ ಎರಡು ಫಿಕ್ಸೆಡ್ ಡೆಪಾಸಿಟ್ ಪ್ರಕಾರಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಒಟ್ಟುಗೂಡಿಸಿದ ಫಿಕ್ಸೆಡ್ ಡೆಪಾಸಿಟ್ನಲ್ಲಿ ಬಡ್ಡಿಯನ್ನು ವಾರ್ಷಿಕವಾಗಿ ಸಂಯೋಜಿಸಿದ ನಂತರ ಮೆಚ್ಯೂರಿಟಿಯಲ್ಲಿ ಪಾವತಿಸಲಾಗುತ್ತದೆ. ಒಟ್ಟುಗೂಡಿಸದ ಫಿಕ್ಸೆಡ್ ಡೆಪಾಸಿಟ್ನಲ್ಲಿ, ನಿಮ್ಮ ಅಗತ್ಯಗಳನ್ನು ಅವಲಂಬಿಸಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಲಾಗುತ್ತದೆ.