ಹಕ್ಕುತ್ಯಾಗ
ಕ್ಯಾಲ್ಕುಲೇಟರ್(ಗಳು) ಜನರೇಟ್ ಮಾಡಿದ ಫಲಿತಾಂಶಗಳು ಸೂಚಕವಾಗಿವೆ. ಲೋನ್ ಮೇಲೆ ಅಪ್ಲೈ ಮಾಡಲಾದ ಬಡ್ಡಿ ದರವು ಲೋನ್ ಬುಕಿಂಗ್ ಸಮಯದಲ್ಲಿ ಚಾಲ್ತಿಯಲ್ಲಿರುವ ದರಗಳ ಮೇಲೆ ಅವಲಂಬಿತವಾಗಿರುತ್ತದೆ. ಕ್ಯಾಲ್ಕುಲೇಟರ್ (ಗಳು) ಅದರ ಬಳಕೆದಾರರಿಗೆ/ಗ್ರಾಹಕರಿಗೆ ಬಜಾಜ್ ಫೈನಾನ್ಸ್ ಲಿಮಿಟೆಡ್ ("ಬಿಎಫ್ಎಲ್")ನಿಂದ ಪ್ರಮಾಣೀಕರಿಸಿದ ಫಲಿತಾಂಶಗಳನ್ನು ಅಥವಾ ಯಾವುದೇ ಸಂದರ್ಭಗಳಲ್ಲಿ ಬಿಎಫ್ಎಲ್‌ನಿಂದ ಬಾಧ್ಯತೆ, ಭರವಸೆ, ಖಾತರಿ, ಕೈಗೊಳ್ಳುವುದು ಅಥವಾ ಬದ್ಧತೆ, ಹಣಕಾಸು ಮತ್ತು ವೃತ್ತಿಪರ ಸಲಹೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿಲ್ಲ. ಕ್ಯಾಲ್ಕುಲೇಟರ್(ಗಳು) ಬಳಕೆದಾರರು/ಗ್ರಾಹಕರು ಡೇಟಾ ಇನ್ಪುಟ್‌ನಿಂದ ಜನರೇಟ್ ಮಾಡಲಾದ ವಿವಿಧ ವಿವರಣಾತ್ಮಕ ಸನ್ನಿವೇಶಗಳ ಫಲಿತಾಂಶಗಳನ್ನು ಪಡೆಯುವ ಸಾಧನವಾಗಿದೆ. ಕ್ಯಾಲ್ಕುಲೇಟರ್ ಬಳಕೆಯು ಸಂಪೂರ್ಣವಾಗಿ ಬಳಕೆದಾರ/ಗ್ರಾಹಕರ ಹೊಣೆಯಾಗಿದೆ, ಕ್ಯಾಲ್ಕುಲೇಟರ್ ಬಳಕೆಯಿಂದ ಉಂಟಾಗುವ ಯಾವುದೇ ಫಲಿತಾಂಶದಲ್ಲಿ ಯಾವುದೇ ದೋಷಗಳಿಗೆ ಬಿಎಫ್ಎಲ್ ಯಾವುದೇ ಕಾರಣಕ್ಕೆ ಜವಾಬ್ದಾರರಲ್ಲ.
ಆಗಾಗ ಕೇಳುವ ಪ್ರಶ್ನೆಗಳು
ಬಜಾಜ್ ಫಿನ್‌ಸರ್ವ್ ಒಂದು ಅನ್‌ಸೆಕ್ಯೂರ್ಡ್ ಮಶಿನರಿ ಲೋನ್ ಅಥವಾ ಇಕ್ವಿಪ್‌ಮೆಂಟ್ ಲೋನ್ ನೀಡುತ್ತದೆ, ಇದನ್ನು ಹೊಸ ಯಂತ್ರಗಳನ್ನು ಖರೀದಿಸಲು ಅಥವಾ ಈಗಿನ ಯಂತ್ರಗಳನ್ನು ರಿಪೇರಿ ಮಾಡಿಸಲು ಬಳಸಬಹುದು, ಆ ಮೂಲಕ ವ್ಯಾಪಾರದ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಮಶಿನರಿ ಲೋನ್ ಇಎಂಐ ಎಂದರೆ ಲೋನ್ ಹಿಂತಿರುಗಿಸಲು ಸಾಲಗಾರರು ಲೋನ್‌ನ ಸಂಪೂರ್ಣ ಅವಧಿಯವರೆಗೆ ಪ್ರತಿ ತಿಂಗಳು ಪಾವತಿಸಬೇಕಾದ ನಿಗದಿತ ಮೊತ್ತವಾಗಿದೆ. ಇದು ಲೋನ್ ಪಾವತಿಸುವ ಸುಲಭ ಮಾರ್ಗಗಳಲ್ಲಿ ಒಂದಾಗಿದೆ, ಏಕೆಂದರೆ ಇಲ್ಲಿ ಮರುಪಾವತಿಸಬೇಕಾದ ಮೊತ್ತವನ್ನು ಪೂರ್ಣ ಅವಧಿಯುದ್ದಕ್ಕೆ ಸಣ್ಣಸಣ್ಣ ಕಂತುಗಳಲ್ಲಿ ವಿತರಿಸಲಾಗಿರುತ್ತದೆ.
ಇಎಂಐ, ಲೋನ್ ಅಸಲು ಮತ್ತು ಅದರ ಮೇಲಿನ ಬಡ್ಡಿಯನ್ನು ಒಳಗೊಂಡ ಒಂದು ನಿರ್ದಿಷ್ಟ ಮೊತ್ತವಾಗಿದೆ. ಹೀಗೆ, ಬಜೆಟ್‌ಗೆ ಪೆಟ್ಟಾಗದಂತೆ ಒಟ್ಟು ಲೋನ್ ಮೊತ್ತ, ಜೊತೆಗೆ ಬಡ್ಡಿಯು ಪಾವತಿಯಾಗುತ್ತದೆ.
ಈಗ ನೀವು ಲೋನ್‌ಗೆ ಅಪ್ಲೈ ಮಾಡುವ ಮೊದಲು ಮಶಿನರಿ ಫೈನಾನ್ಸ್ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಇಎಂಐಗಳನ್ನು ಸುಲಭವಾಗಿ ಲೆಕ್ಕ ಹಾಕಬಹುದು.
ಇದನ್ನು ಹೆವಿ ಇಕ್ವಿಪ್‌ಮೆಂಟ್ ಲೋನ್ ಕ್ಯಾಲ್ಕುಲೇಟರ್ ಅಥವಾ ಇಕ್ವಿಪ್‌ಮೆಂಟ್ ಲೀಸ್ ಪೇಮೆಂಟ್ ಕ್ಯಾಲ್ಕುಲೇಟರ್ ಎಂದು ಕೂಡ ಕರೆಯಲಾಗುತ್ತದೆ. ಬಜಾಜ್ ಫಿನ್‌ಸರ್ವ್ ಮಶಿನರಿ ಲೋನ್ ಕ್ಯಾಲ್ಕುಲೇಟರ್ ಒಂದು ಆನ್‌ಲೈನ್ ಇಎಂಐ ಕ್ಯಾಲ್ಕುಲೇಟರ್ ಆಗಿದ್ದು, ಇದು ನಿಮ್ಮ ಮಾಸಿಕ ಕಂತು ಅಥವಾ ಇಎಂಐಗಳನ್ನು ತಕ್ಷಣವೇ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.
ಈ ಮಶಿನರಿ ಲೋನ್ ಕ್ಯಾಲ್ಕುಲೇಟರ್ ಬಳಸುವುದರಿಂದಾಗುವ ಪ್ರಯೋಜನಗಳನ್ನು ಕೆಳಗೆ ನೀಡಲಾಗಿದೆ.
- ಇಎಂಐಗಳ ಒಂದು ಅಂದಾಜು ಮೊದಲೇ ಇದ್ದರೆ, ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಆಧರಿಸಿ ನಿಮಗೆ ಹೆಚ್ಚು ಸೂಕ್ತವಾಗುವ ಲೋನ್ ಮೊತ್ತವನ್ನು ಆಯ್ಕೆ ಮಾಡಬಹುದು
- ಇದು ನಿಮಗೆ ನಿಮ್ಮ ಲೋನ್ ಅವಧಿಯನ್ನು ಆಯ್ಕೆ ಮಾಡಲು ಮತ್ತು ನಿಮ್ಮ ಹಣಕಾಸನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ
- ಇದು ಒಂದು ವ್ಯಾಪಾರಕ್ಕೆ ತನ್ನ ನಗದು ಹರಿವನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಎಲ್ಲಾ ಅಲ್ಪಾವಧಿಯ ಹಣಕಾಸು ಅಗತ್ಯವನ್ನು ಸುಲಭವಾಗಿ ಪೂರೈಸಲು ಸಹಾಯ ಮಾಡುತ್ತದೆ
ನಿಮ್ಮ ಇಎಂಐಗಳನ್ನು ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿಯನ್ನು ಮಶಿನರಿ ಲೋನ್ ಕ್ಯಾಲ್ಕುಲೇಟರ್‌ನಲ್ಲಿ ನಮೂದಿಸಬೇಕು.
- ನಿಮಗೆ ಬೇಕಾದ ಒಟ್ಟು ಲೋನ್ ಮೊತ್ತ
- ಬಡ್ಡಿದರ
- ಲೋನ್‌ನ ಅವಧಿ
ಇದು ಈ ಕೆಳಗಿನ ಸೂತ್ರದ ಪ್ರಕಾರ ಇಎಂಐಗಳನ್ನು ಲೆಕ್ಕ ಹಾಕುತ್ತದೆ:
E = P * r * (1+r)^n/ ((1+r)^n-1)
ಇಲ್ಲಿ,
‘E' ಎಂದರೆ ಇಎಂಐ
‘P' ಎಂದರೆ ಅಸಲು ಮೊತ್ತ
‘R' ಎಂದರೆ ಪ್ರತಿ ತಿಂಗಳ ಬಡ್ಡಿದರ
‘n' ಎಂದರೆ ಲೋನ್ ಅವಧಿ, ತಿಂಗಳುಗಳಲ್ಲಿ