ಎಂಬಿಎ/ ಪಿಜಿಡಿಎಂಗಾಗಿ ಆಸ್ತಿ ಮೇಲಿನ ಎಜುಕೇಶನ್ ಲೋನ್

2 ನಿಮಿಷದ ಓದು

ಎಂಬಿಎ/ಪಿಜಿಡಿಎಂ ಭಾರತದ ಅತ್ಯಂತ ಬೇಡಿಕೆಯ ಪದವಿಗಳಲ್ಲಿ ಒಂದಾಗಿದೆ. ಆದಾಗ್ಯೂ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಟ್ಯೂಷನ್ ಶುಲ್ಕಗಳಿಂದಾಗಿ, ಈ ಪದವಿಗೆ ಹಣಕಾಸು ಒದಗಿಸುವುದು ಕಷ್ಟಕರ ಕೆಲಸವಾಗಿದೆ. ಅಗ್ರ ಮಾನ್ಯತೆ ಪಡೆದ ರಾಷ್ಟ್ರೀಯ ಸಂಸ್ಥೆಗಳು ಕೋರ್ಸ್‌ಗೆ ರೂ. 5 ಲಕ್ಷದಿಂದ ರೂ. 20 ಲಕ್ಷಗಳವರೆಗೆ ಶುಲ್ಕ ವಿಧಿಸುವುದರಿಂದ ಅನೇಕ ಪೋಷಕರಿಗೆ ಈ ಶುಲ್ಕ ಹೊಂದಿಸುವುದೇ ಪ್ರಮುಖ ಅಡಚಣೆಯಾಗಬಹುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಶುಲ್ಕಗಳು ಇನ್ನೂ ಹೆಚ್ಚಿರುತ್ತವೆ, ಮತ್ತು ನೀವು ವೀಸಾ ಮತ್ತು ವಸತಿ ಶುಲ್ಕಗಳನ್ನು ಕೂಡ ಲೆಕ್ಕ ಹಾಕಬೇಕು. ಈ ಸಂದರ್ಭದಲ್ಲಿ ಎಂಬಿಎ/ಪಿಜಿಡಿಎಂಗಾಗಿ ಆಸ್ತಿ ಮೇಲಿನ ಸ್ಟಡಿ ಲೋನ್ ಸಹಾಯಕ್ಕೆ ಬರುತ್ತದೆ.

ಎಂಬಿಎ/ಪಿಜಿಡಿಎಂ ಆಸ್ತಿ ಮೇಲಿನ ಲೋನ್‌ಗೆ ಅಪ್ಲೈ ಮಾಡುವ ಹಂತಗಳು

ಬಜಾಜ್ ಫಿನ್‌ಸರ್ವ್ ಶಿಕ್ಷಣಕ್ಕಾಗಿ ಆಸ್ತಿ ಮೇಲಿನ ಲೋನ್ ಅನ್ನು ಪರಿಗಣಿಸಲು ಉತ್ತಮ ಆಯ್ಕೆಯಾಗಿದೆ. ಇದು ಕೈಗೆಟಕುವ ಮರುಪಾವತಿ ನಿಯಮಗಳ ಜೊತೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಕಾರ್ಯಕ್ರಮಗಳಿಗೆ ಸಾಕಷ್ಟು ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಇಎಂಐ ಗಳನ್ನು ಕೈಗೆಟಕುವಂತೆ ಮತ್ತು ಬಜೆಟ್ ಒಳಗೆ ಇರಿಸಲು ನಿಮಗೆ ಅನುಮತಿ ನೀಡಲು 20 ವರ್ಷಗಳವರೆಗಿನ ಹೊಂದಿಕೊಳ್ಳುವ ಅವಧಿಯೊಂದಿಗೆ ಬರುತ್ತದೆ. ಮರುಪಾವತಿಯನ್ನು ಪರಿಣಾಮಕಾರಿಯಾಗಿ ಯೋಜಿಸಲು, ನಿಮ್ಮ ಇಎಂಐ ಗಳನ್ನು ಮೊದಲೇ ನಿಖರವಾಗಿ ಅಂದಾಜು ಮಾಡಲು ಆಸ್ತಿ ಮೇಲಿನ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ. ಭಾರತದಲ್ಲಿ ಈ ಆಸ್ತಿ ಮೇಲಿನ ಲೋನ್‌ಗೆ ಅಪ್ಲೈ ಮಾಡಲು, ಅನುಸರಿಸಬೇಕಾದ ಹಂತಗಳು ಇಲ್ಲಿವೆ.

  • ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
  • ಅಧಿಕೃತ ಪ್ರತಿನಿಧಿಯಿಂದ ಸಂವಹನಕ್ಕಾಗಿ ಕಾಯಿರಿ
  • ಲೋನ್ ಅನುಮೋದನೆಗಾಗಿ ಕಾಯಿರಿ
  • ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ಪರಿಶೀಲನೆಯ ನಂತರ ವಿತರಣೆಯನ್ನು ಪಡೆಯಿರಿ
ಇನ್ನಷ್ಟು ಓದಿರಿ ಕಡಿಮೆ ಓದಿ