ನೀವು ಪರ್ಸನಲ್ ಲೋನ್ ಮರುಪಾವತಿ ಮಾಡದಿದ್ದರೆ ಏನಾಗುತ್ತದೆ?
ನೀವು ಪರ್ಸನಲ್ ಲೋನನ್ನು ಮರುಪಾವತಿಸಲು ವಿಫಲವಾದರೆ, ಸಾಲದಾತರು ಸಾಮಾನ್ಯವಾಗಿ ದಂಡದ ಬಡ್ಡಿಯನ್ನು ವಿಧಿಸುತ್ತಾರೆ. ಇತರ ಪರಿಣಾಮಗಳು ಕೂಡ ಇವೆ ಅವುಗಳೆಂದರೆ:
1. ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ
ಎಲ್ಲಾ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು ಕ್ರೆಡಿಟ್ ಬ್ಯೂರೋಗಳಾದ ಸಿಬಿಲ್ ಮತ್ತು ಇಕ್ವಿಫ್ಯಾಕ್ಸ್‌ಗಳಿಗೆ ವಿಫಲ ಪಾವತಿಗಳು ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ಡೀಫಾಲ್ಟ್‌ಗಳನ್ನು ರಿಪೋರ್ಟ್ ಮಾಡುತ್ತದೆ. ಆದ್ದರಿಂದ, ಸಿಬಿಲ್ ಸ್ಕೋರ್ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರನ್ನು ಮರುನಿರ್ಮಿಸುವುದು ಸಾಕಷ್ಟು ಶ್ರಮವನ್ನು ತೆಗೆದುಕೊಳ್ಳುವುದರ ಕಾರಣ ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಮತ್ತು ಅದನ್ನು ನಿರ್ಲಕ್ಷಿಸಿಕೊಳ್ಳಬೇಡಿ.
2. ನಿಮ್ಮ ಸಹ-ಸಹಿದಾರ ಅಥವಾ ಗ್ಯಾರಂಟರ್ ಮೇಲೆ ಪರಿಣಾಮ ಬೀರುತ್ತದೆ
ಒಂದು ವೇಳೆ ನಿಮ್ಮ ಲೋನ್‌ಗೆ ಸಹ-ಸಹಿದಾರರು ಲಿಂಕ್ ಆಗಿದ್ದರೆ, ನಿಮ್ಮ ಪರ್ಸನಲ್ ಲೋನ್ ಮರುಪಾವತಿಯಲ್ಲಾಗುವ ಡೀಫಾಲ್ಟ್‌ನಿಂದ ಅವರ ಕ್ರೆಡಿಟ್ ಸ್ಕೋರ್ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಲೋನ್ ರಿಕವರಿ ಏಜೆಂಟ್‌ಗಳು ಲೋನ್ ಮೊತ್ತದ ಮರುಪಾವತಿಗಾಗಿ ನಿಮ್ಮನ್ನು ಮಾತ್ರವಲ್ಲದೆ ಅವರನ್ನೂ ಸಂಪರ್ಕಿಸುತ್ತಾರೆ.
3. ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳಿಂದ ಕಾನೂನು ಕ್ರಮ ಎದುರಿಸಬೇಕಾಗುವುದು
ಪರ್ಸನಲ್ ಲೋನ್ ಡಿಫಾಲ್ಟರ್‌ಗಳಿಂದ ಹಣ ಮರುಪಡೆಯಲು ಸಾಲದಾತರು ವಿವಿಧ ಕಾನೂನು ಕ್ರಮಗಳನ್ನು ಅನುಸರಿಸಬಹುದು.
ಇನ್ನಷ್ಟು ಓದಿರಿ: ಸಾಲಗಾರ ಸಾವಿಗೀಡಾದರೆ ಪರ್ಸನಲ್ ಲೋನಿಗೆ ಏನಾಗುತ್ತದೆ
ಹಾಗಾಗಿ, ಪರ್ಸನಲ್ ಲೋನ್ ಪಡೆಯುವುದಕ್ಕೆ ಮುಂಚೆ, ಸರಿಯಾದ ಮರುಪಾವತಿ ಯೋಜನೆ ರೂಪಿಸಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.