ಪರ್ಸನಲ್ ಲೋನ್ ಮತ್ತು ಕಾರ್ ಲೋನ್ ನಡುವಿನ ವ್ಯತ್ಯಾಸವೇನು?
ಪರ್ಸನಲ್ ಲೋನ್‌ಗಳು ವೈವಿಧ್ಯಮಯ ಹಾಗೂ ಅಡಮಾನ-ರಹಿತ ಲೋನ್‌ಗಳಾಗಿವೆ ಮತ್ತು ಈ ಲೋನ್ ಮೊತ್ತವನ್ನು ನಿಮಗೆ ಸೂಕ್ತವೆನಿಸುವ ರೀತಿಯಲ್ಲಿ ಬಳಸಬಹುದು. ಮತ್ತೊಂದೆಡೆ, ಕಾರ್ ಲೋನ್ ಅಥವಾ ಬಳಸಿದ ಕಾರ್‌ನ ಲೋನ್, ವಿಶೇಷವಾಗಿ ಹೊಸ ಅಥವಾ ಸೆಕೆಂಡ್-ಹ್ಯಾಂಡ್ ಕಾರನ್ನು ಖರೀದಿಸಲು ಕೊಡುವ ಲೋನ್ ಆಗಿರುತ್ತದೆ.
ಎರಡು ಲೋನ್‌ಗಳು ಹೇಗೆ ಬೇರೆಬೇರೆಯಾಗಿವೆ ಎಂಬುದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದಿರಿ.
|
ಕಾರು ಲೋನ್ |
ಪರ್ಸನಲ್ ಲೋನ್ |
ಲೋನ್ ಪ್ರಕಾರ |
ಕಾರು ಅಡಮಾನವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಭದ್ರತೆ ಇರುವ ಲೋನ್. |
ಸುರಕ್ಷಿತವಲ್ಲದ ಲೋನ್. |
ಲೋನ್ ಮೊತ್ತ |
ಕಾರಿನ ಮೌಲ್ಯವನ್ನು ಅವಲಂಬಿಸಿರುತ್ತದೆ. |
ಬಜಾಜ್ ಫಿನ್‌ಸರ್ವ್‌ನಂತಹ ಅತ್ಯುತ್ತಮ ಸಾಲದಾತರು ರೂ. 40 ಲಕ್ಷದವರೆಗೆ ಲೋನ್ ನೀಡುತ್ತಾರೆ. ನೀವು ಪಡೆಯುವ ಮಂಜೂರಾತಿಯು ನಿಮ್ಮ ಅರ್ಹತೆ ಮತ್ತು ಮರುಪಾವತಿ ಸಾಮರ್ಥ್ಯಗಳನ್ನು ಅವಲಂಬಿಸಿರುತ್ತದೆ. |
ಫಂಡ್‌ಗಳ ಬಳಕೆ |
ಕಾರು ಖರೀದಿಗೆ ಮಾತ್ರ. |
ಅಂತಿಮ ಬಳಕೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಇದನ್ನು ಯೋಜಿತ ಅಥವಾ ಯೋಜಿತವಲ್ಲದ, ವೃತ್ತಿಪರ ಅಥವಾ ವೈಯಕ್ತಿಕ ವೆಚ್ಚಗಳಿಗಾಗಿ ಬಳಸಬಹುದು. |
ಅಗತ್ಯವಿರುವ ಡಾಕ್ಯುಮೆಂಟ್‌ಗಳು |
ಕೆವೈಸಿ ಡಾಕ್ಯುಮೆಂಟ್‌ಗಳು, ಸ್ಯಾಲರಿ ಸ್ಲಿಪ್‌ಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್‌ಗಳ ಜೊತೆಗೆ, ನೀವು ಕಾರಿನ ಮಾಲೀಕತ್ವಕ್ಕೆ ಸಂಬಂಧಿಸಿದ ಪೇಪರ್‌ವರ್ಕ್ ಅನ್ನು ಸಲ್ಲಿಸಬೇಕು. |
ಕೆವೈಸಿ ಡಾಕ್ಯುಮೆಂಟ್‌ಗಳು, ಉದ್ಯೋಗಿ ಐಡಿ, ಸಂಬಳದ ಸ್ಲಿಪ್‌ಗಳು ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮಾತ್ರ ಬೇಕಾಗುತ್ತವೆ. |
ಬಡ್ಡಿ ದರ |
ಬಡ್ಡಿ ದರ ಮತ್ತು ಲೋನ್ ಶುಲ್ಕಗಳು ಸಾಲದಾತರು ಮತ್ತು ಇತರ ಅಂಶಗಳನ್ನು ಅವಲಂಬಿಸಿರುತ್ತವೆ. |
ಬಜಾಜ್ ಫಿನ್‌ಸರ್ವ್‌ನಂತಹ ಪ್ರಸಿದ್ಧ ಹಣಕಾಸು ಸಂಸ್ಥೆಗಳು ಕೈಗೆಟಕುವ ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಅತಿಕಡಿಮೆ ಲೋನ್ ಶುಲ್ಕಗಳನ್ನು ವಿಧಿಸುತ್ತವೆ. |
ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ನಿಮಗೆ ಸರಿಹೊಂದುವ ಬೇರೆ ಬೇರೆ ಲೋನ್ ಆಯ್ಕೆಗಳು ಇವೆಯಾದರೂ, ಪರ್ಸನಲ್ ಲೋನ್ ಅತ್ಯಂತ ಸುಲಭವಾದ ಬಳಕೆ ಮತ್ತು ಫ್ಲೆಕ್ಸಿಬಿಲಿಟಿ ಒದಗಿಸುತ್ತದೆ ಎಂಬುದನ್ನು ನೆನಪಿಡಿ.
ನೀವು ಮೂಲಭೂತ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಕಾರ್ ಖರೀದಿಸಲು ಪರ್ಸನಲ್ ಲೋನ್ ಹಣವನ್ನು ಬಳಸಬಹುದು. ಜೊತೆಗೆ, ಮಂಜೂರಾತಿ ಮೊತ್ತ ಹೆಚ್ಚಾಗಿರುವ ಕಾರಣ ಉಳಿಕೆ ಹಣವನ್ನು ನೀವು ಇತರ ಅಗತ್ಯಗಳಿಗೆ ಅಥವಾ ತುರ್ತು ವೆಚ್ಚಗಳಿಗೆ ಬಳಸಬಹುದು.