ಅಡಮಾನ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ಅಡಮಾನ ಲೋನ್‌‌ಗಳು ಸುರಕ್ಷಿತ ಲೋನ್ ಆಗಿದ್ದು ಅರ್ಹ ಅರ್ಜಿದಾರರು ತಮ್ಮ ಮಾಲೀಕತ್ವದ ಪ್ರಾಪರ್ಟಿಯನ್ನು ಹಣಕಾಸಿನ ಸಂಸ್ಥೆಗೆ ಅಡಮಾನವಾಗಿ ಇಡುವ ಮೂಲಕ ಪಡೆದುಕೊಳ್ಳಬಹುದು. ಸ್ವಯಂ ಉದ್ಯೋಗಿ ಮತ್ತು ಸಂಬಳ ಪಡೆಯುವ ಅರ್ಜಿದಾರರಿಗೆ ಸಾಲದಾತರು ಆಕರ್ಷಕ ಬಡ್ಡಿ ದರಗಳಲ್ಲಿ ಅಡಮಾನ ಲೋನ್‌ಗಳನ್ನು ಒದಗಿಸುತ್ತಾರೆ.

ಸಾಲಗಾರರು 15 ವರ್ಷಗಳವರೆಗೆ ವಿಸ್ತಾರವಾಗುವ ಮರುಪಾವತಿ ಅವಧಿಯೊಂದಿಗೆ ರೂ. 10.50 ಕೋಟಿ** ಅಡಮಾನ ಲೋನ್ ಪಡೆಯಬಹುದು*.

3 ದಿನಗಳಲ್ಲಿ ಬ್ಯಾಂಕಿನಲ್ಲಿ ಹಣದೊಂದಿಗೆ ಆಕರ್ಷಕ ಬಡ್ಡಿ ದರಗಳಲ್ಲಿ ಅಡಮಾನ ಲೋನನ್ನು ಪಡೆಯಿರಿ*. ಯಾವುದೇ ಗುಪ್ತ ಶುಲ್ಕಗಳು ಇಲ್ಲ.

ಅಡಮಾನ ಲೋನಿನ ದರ ಮತ್ತು ಶುಲ್ಕಗಳ ಲಿಸ್ಟ್ ಇಲ್ಲಿದೆ.

ಅಡಮಾನ ಲೋನ್ ಬಡ್ಡಿ ದರ (ಫ್ಲೋಟಿಂಗ್)

ಉದ್ಯೋಗ ಪ್ರಕಾರ

ಬಡ್ಡಿ ದರಗಳು (ವಾರ್ಷಿಕವಾಗಿ)

ವೇತನದಾರ

9% ರಿಂದ 14% (ಫ್ಲೋಟಿಂಗ್ ಬಡ್ಡಿ ದರ)

ಸ್ವಯಂ ಉದ್ಯೋಗಿ

9% ರಿಂದ 14% (ಫ್ಲೋಟಿಂಗ್ ಬಡ್ಡಿ ದರ)


ಆಸ್ತಿ ಲೋನ್ ಮೇಲೆ ಅನ್ವಯವಾಗುವ ಫೀಗಳು ಮತ್ತು ಶುಲ್ಕಗಳು

ಆಸ್ತಿಯ ಲೋನ್‌ ಮೇಲೆ ವಿವಿಧ ಶುಲ್ಕಗಳು

ಶುಲ್ಕಗಳು ಅನ್ವಯ

ಅಡಮಾನ ಲೋನ್ ಪ್ರಕ್ರಿಯಾ ಶುಲ್ಕಗಳು

7%

ಆಸ್ತಿಯ ಮೇಲಿನ ಲೋನ್‌ಗೆ ಸ್ಟೇಟ್ಮೆಂಟ್ ಶುಲ್ಕಗಳು

ರೂ. 50

ಅಡಮಾನ ಲೋನ್ ಬಡ್ಡಿ ಮತ್ತು ಅಸಲಿನ ಸ್ಟೇಟ್ಮೆಂಟ್ ಶುಲ್ಕಗಳು

ಇಲ್ಲ

ಅಡಮಾನ EMI ಬೌನ್ಸ್ ಶುಲ್ಕಗಳು

ಗರಿಷ್ಠ ರೂ. 3,000/-

ದಂಡದ ಬಡ್ಡಿ

ಪ್ರತಿ ತಿಂಗಳಿಗೆ 2% ವರೆಗೆ

ಅಡಮಾನ ಆರಂಭದ ಶುಲ್ಕ*

ರೂ. 4,999 ವರೆಗೆ + ಅನ್ವಯವಾಗುವ ಜಿಎಸ್‌ಟಿ


ಅಡಮಾನ ಲೋನಿನ ಫೋರ್‌ಕ್ಲೋಸರ್ ಶುಲ್ಕಗಳು

ಸಾಲಗಾರರ ಪ್ರಕಾರ: ಬಡ್ಡಿ ಪ್ರಕಾರ ಸಮಯ (ತಿಂಗಳು) ಫೋರ್‌ಕ್ಲೋಸರ್ ಶುಲ್ಕಗಳು
ವೈಯಕ್ತಿಕ: ಫ್ಲೋಟಿಂಗ್ ದರ >1 ಇಲ್ಲ
ವ್ಯಕ್ತಿಯೇತರ: ಫ್ಲೋಟಿಂಗ್ ದರ >1 4% + ಅನ್ವಯಿಸುವ ಶುಲ್ಕಗಳು
ಎಲ್ಲಾ ಸಾಲಗಾರರು: ಸ್ಥಿರ ದರ >1 4% + ಅನ್ವಯಿಸುವ ಶುಲ್ಕಗಳು


ಅಡಮಾನ ಲೋನ್ ಮುಂಚಿತ ಪಾವತಿ ಶುಲ್ಕಗಳು

ಸಾಲಗಾರರ ಪ್ರಕಾರ: ಬಡ್ಡಿ ಪ್ರಕಾರ

ಸಮಯ (ತಿಂಗಳು)

ಭಾಗಶಃ ಮುಂಪಾವತಿ ಶುಲ್ಕಗಳು

ವೈಯಕ್ತಿಕ: ಫ್ಲೋಟಿಂಗ್ ದರ

>1

ಇಲ್ಲ

ವ್ಯಕ್ತಿಯೇತರ: ಫ್ಲೋಟಿಂಗ್ ದರ

>1

2% + ಅನ್ವಯಿಸುವ ಶುಲ್ಕಗಳು

ಎಲ್ಲಾ ಸಾಲಗಾರರು: ಸ್ಥಿರ ದರ

>1

2% + ಅನ್ವಯಿಸುವ ಶುಲ್ಕಗಳು


3* ದಿನಗಳ ಒಳಗೆ ಲೋನ್ ಮೊತ್ತವನ್ನು ವಿತರಿಸುವುದರೊಂದಿಗೆ ಬಜಾಜ್ ಫಿನ್‌ಸರ್ವ್ ನಿಮಗೆ ಆಸ್ತಿ ಮೇಲಿನ ತ್ವರಿತ ಲೋನ್‌ಗಳನ್ನು ಒದಗಿಸುತ್ತದೆ.

ಅಡಮಾನ ಲೋನ್ ಬಡ್ಡಿ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಅಡಮಾನ ಲೋನ್ ಬಡ್ಡಿ ದರವು ಸಾಮಾನ್ಯವಾಗಿ ಅದರ ಸುರಕ್ಷಿತ ಸ್ವರೂಪದಿಂದಾಗಿ ಕಡಿಮೆಯಾಗಿರುತ್ತದೆ. ಫಲಿತಾಂಶವಾಗಿ, ಸಾಲಗಾರರು ಆರಾಮದಾಯಕ ಮರುಪಾವತಿ ಮತ್ತು ಸಾಲದ ಕಡಿಮೆ ವೆಚ್ಚವನ್ನು ಆನಂದಿಸುತ್ತಾರೆ. ಅನೇಕ ಅಂಶಗಳು ಅಡಮಾನ ಲೋನ್ ಬಡ್ಡಿ ದರಗಳನ್ನು ಪ್ರಭಾವಿಸುತ್ತವೆ, ಇವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದಿ.

1 ಆಸ್ತಿ ಪ್ರಕಾರ ಮತ್ತು ಸ್ಥಳ

ಯಾವುದೇ ಸ್ಥಿರ ಆಸ್ತಿಯು ಆಸ್ತಿ ಮೇಲಿನ ಲೋನಿಗೆ ಅರ್ಹವಾಗಿದ್ದರೂ, ಅದರ ಪ್ರಕಾರವು ಅಡಮಾನ ಲೋನ್ ಬಡ್ಡಿ ದರಗಳನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಸಾಲದಾತರು ವಸತಿ ಮತ್ತು ವಾಣಿಜ್ಯ ಆಸ್ತಿಗಳಿಗೆ ವಿವಿಧ ಬಡ್ಡಿ ದರಗಳನ್ನು ನೀಡುತ್ತಾರೆ. ಇದಲ್ಲದೆ, ಆಸ್ತಿಯ ಮರುಮಾರಾಟ ಮೌಲ್ಯ, ಅದರ ಸ್ಥಳ, ಈ ಬಡ್ಡಿ ದರವನ್ನು ಕೂಡ ಪ್ರಭಾವಿಸುತ್ತದೆ.

ಸಾಮಾನ್ಯವಾಗಿ, ಆಧುನಿಕ ಸೌಲಭ್ಯಗಳೊಂದಿಗೆ ನಗರದ ಹೃದಯ ಭಾಗದಲ್ಲಿರುವ ಆಸ್ತಿಯು ಹೆಚ್ಚಿನ ಮರುಮಾರಾಟದ ಮೌಲ್ಯವನ್ನು ಹೊಂದಿದೆ. ಆದ್ದರಿಂದ, ಆ ಆಸ್ತಿಯನ್ನು ಅಡಮಾನ ಮಾಡಿದ ನಂತರ, ಸಾಲದಾತರು ನಿಮ್ಮ ಡೀಫಾಲ್ಟ್ ಸಂದರ್ಭದಲ್ಲಿ ಲೋನ್ ಮೊತ್ತದ ಮರುಪಡೆಯುವಿಕೆಯನ್ನು ಕಂಡುಹಿಡಿಯಬಹುದು. ಪರಿಣಾಮವಾಗಿ, ಬಡ್ಡಿ ದರಗಳು ಕಡಿಮೆಯಾಗಿರುತ್ತವೆ. ಅದೇ ರೀತಿ, ಆಸ್ತಿಯ ವರ್ಷಗಳು ಕೂಡ ಅಡಮಾನ ಲೋನ್ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸದಾದ ಆಸ್ತಿ, ಬಡ್ಡಿ ದರಗಳನ್ನು ಕಡಿಮೆ ಮಾಡುತ್ತದೆ.

2 ಕ್ರೆಡಿಟ್ ಸ್ಕೋರ್

ಅಡಮಾನ ಬಡ್ಡಿ ದರಗಳನ್ನು ನಿರ್ಧರಿಸುವ ಮೊದಲು ಸಾಲಗಾರರ ಕ್ರೆಡಿಟ್ ಪ್ರೊಫೈಲನ್ನು ಸಾಲದಾತರು ಪರಿಗಣಿಸುತ್ತಾರೆ. ಈ ದರವನ್ನು ಪ್ರಭಾವಿಸುವ ಕೆಲವು ಅಂಶಗಳನ್ನು ಕೆಳಗೆ ನೀಡಲಾಗಿದೆ.

  • ಕ್ರೆಡಿಟ್ ಸ್ಕೋರ್
  • ಆದಾಯ
  • ಉದ್ಯೋಗ ಪ್ರಕಾರ
  • ವಯಸ್ಸು
  • ಕ್ರೆಡಿಟ್ ಬಳಕೆಯ ಅನುಪಾತ
  • FOIR
  • ಅಸ್ತಿತ್ವದಲ್ಲಿರುವ ಸಾಲಗಳು

ಆದ್ಯತೆಯಲ್ಲಿ, ಸಾಲದಾತರಿಂದ ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಪಡೆಯಲು 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, 55 ವರ್ಷದ ಸಂಬಳದ ಅರ್ಜಿದಾರರಿಗೆ ಬಡ್ಡಿ ದರವು ಹೆಚ್ಚಾಗಿರುತ್ತದೆ, ಏಕೆಂದರೆ ಅವರು ಶೀಘ್ರದಲ್ಲೇ ಉದ್ಯೋಗದಿಂದ ನಿವೃತ್ತರಾಗುತ್ತಾರೆ.

ಇದಲ್ಲದೆ, ಸಾಲದಾತರು ಹಿಂದಿನ ಸಾಲಗಳನ್ನು ಹೇಗೆ ನಿರ್ವಹಿಸಿದ್ದಾರೆ, ಸಮಯಕ್ಕೆ ಸರಿಯಾಗಿ ಮರುಪಾವತಿಸಲಾಗಿದೆ ಅಥವಾ ಇಲ್ಲವೇ ಎಂಬುದನ್ನು ಕೂಡ ಪರಿಶೀಲಿಸುತ್ತಾರೆ. ಈ ಎಲ್ಲಾ ಅಂಶಗಳು ನೇರವಾಗಿ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುವುದರಿಂದ, ಸ್ಕೋರನ್ನು ಉಳಿಸಿಕೊಳ್ಳಲು ಆರೋಗ್ಯಕರ ಹಣಕಾಸಿನ ನಿರ್ವಹಣೆಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಅಡಮಾನ ಲೋನ್ ಬಡ್ಡಿ ದರಗಳನ್ನು ಪಡೆಯಲು ಇದು ಸಹಾಯ ಮಾಡುತ್ತದೆ.

3 ಲೋನಿನ ಗಾತ್ರ

ಅಡಮಾನ ಲೋನ್ ಹೆಚ್ಚಿನ ಮೌಲ್ಯದ ಕ್ರೆಡಿಟ್ ಆಗಿದೆ, ಮತ್ತು ಆಸ್ತಿಯ ಮೇಲೆ 80% ಎಲ್‌ಟಿವಿವರೆಗೆ ಪಡೆಯುವುದು ಸಾಧ್ಯವಾಗುತ್ತದೆ. ಆದಾಗ್ಯೂ, ಹೆಚ್ಚಿನ ಮೌಲ್ಯದ ಲೋನ್‌ಗಳು ಸಾಲದಾತರ ಭಾಗದಲ್ಲಿ ಅಪಾಯಕಾರಿಯಾಗಿರುತ್ತವೆ, ಏಕೆಂದರೆ ಆ ಸಂದರ್ಭದಲ್ಲಿ ಮಾಸಿಕ ಕಂತುಗಳು ಹೆಚ್ಚಾಗಿರುತ್ತವೆ. ಆದ್ದರಿಂದ, ಸಾಲ ಪಡೆಯುವ ಅಪಾಯಕ್ಕೆ ಪರಿಹಾರ ನೀಡಲು, ಲೋನ್ ಮೊತ್ತವು ಗಣನೀಯವಾಗಿರುವಾಗ ಅವರು ಹೆಚ್ಚಿನ ಅಡಮಾನ ಲೋನ್ ಬಡ್ಡಿ ದರವನ್ನು ವಿಧಿಸಬಹುದು. ಆದ್ದರಿಂದ, ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಖಚಿತಪಡಿಸಿಕೊಳ್ಳಲು ಅಪ್ಲೈ ಮಾಡುವ ಮೊದಲು ನಿಖರವಾದ ಕ್ರೆಡಿಟ್ ಅವಶ್ಯಕತೆಯನ್ನು ಮೌಲ್ಯಮಾಪನ ಮಾಡುವುದು ಅಗತ್ಯವಿದೆ.

ಗಮನಿಸಿ: ಸಣ್ಣ ಅಡಮಾನ ಲೋನ್ ಪಡೆಯಲು ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ಅಡವಿಡುವುದನ್ನು ತಪ್ಪಿಸಿ.

4 ಲೋನ್ ಅವಧಿ

ಅಡಮಾನ ಲೋನ್ ಬಡ್ಡಿ ದರಗಳನ್ನು ನಿರ್ಧರಿಸುವಲ್ಲಿ ಲೋನ್ ಅವಧಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ, ಅಡಮಾನ ಲೋನ್ ದೀರ್ಘ ಅವಧಿಯೊಂದಿಗೆ ಇರುತ್ತದೆ, ಮತ್ತು ನಿಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ ನೀವು ಅವಧಿಯನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಹೆಚ್ಚಿನ ಲೋನ್ ಮೌಲ್ಯಕ್ಕೆ ಕಡಿಮೆ ಅವಧಿಯನ್ನು ಆಯ್ಕೆ ಮಾಡಿದ ಮೇಲೆ, ಸಾಲದಾತರು ನಿಮ್ಮನ್ನು ಅಪಾಯಕಾರಿ ಸಾಲಗಾರರನ್ನಾಗಿ ಪರಿಗಣಿಸಬಹುದು. ಅಂತಹ ಸಂದರ್ಭಗಳಲ್ಲಿ, ಬಡ್ಡಿ ದರವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.

ಆದಾಗ್ಯೂ, ದೀರ್ಘ ಅವಧಿಯನ್ನು ಆಯ್ಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಒಟ್ಟು ಬಡ್ಡಿಯ ಹೊರಹೋಗುವಿಕೆಯನ್ನು ಹೆಚ್ಚಿಸಬಹುದು. ಈ ಸಂದರ್ಭದಲ್ಲಿ, ನಿಮಗೆ ಪ್ರಸ್ತಾಪಿಸಲಾದ ಅವಧಿ ಮತ್ತು ಬಡ್ಡಿ ದರವನ್ನು ನಮೂದಿಸಿದ ನಂತರ ಇಎಂಐ ಹೊರಹೋಗುವಿಕೆಯನ್ನು ಪರಿಶೀಲಿಸಲು ಆನ್ಲೈನ್ ಅಡಮಾನ ಲೋನ್ ಕ್ಯಾಲ್ಕುಲೇಟರ್ ಬಳಸಿ.

ಈ ಕಾರಣಗಳ ಹೊರತಾಗಿ, ಆಯ್ಕೆ ಮಾಡಿದ ದರದ ಪ್ರಕಾರವು ಫ್ಲೋಟಿಂಗ್ ಆಗಿದ್ದರೆ ಅಡಮಾನ ಲೋನ್ ಬಡ್ಡಿ ದರಗಳು ಮಾರುಕಟ್ಟೆ ಪರಿಸ್ಥಿತಿಗಳಿಂದ ಕೂಡ ಪ್ರಭಾವಿತವಾಗಬಹುದು.

ಅಡಮಾನ ಲೋನ್‌ನ ವಿಧಗಳು

ಅಡಮಾನದ ಸ್ವರೂಪವನ್ನು ಅವಲಂಬಿಸಿ ವಿವಿಧ ರೀತಿಯ ಅಡಮಾನ ಲೋನ್‌ಗಳಿವೆ ಮತ್ತು ಅಡಮಾನ ಬಡ್ಡಿ ದರಗಳು ಒಂದು ಲೋನ್ ಪ್ರಕಾರದಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಒಂದಕ್ಕೆ ಅಪ್ಲೈ ಮಾಡುವ ಮೊದಲು ನೀವು ಅವುಗಳನ್ನು ತಿಳಿದುಕೊಳ್ಳಿ.

  • ಸರಳ ಅಡಮಾನ: ಇದು ಸ್ಥಿರ ಆಸ್ತಿಯ ವೈಯಕ್ತಿಕ ಅಡಮಾನವನ್ನು ಒಳಗೊಂಡಿರುತ್ತದೆ, ಸಾಲಗಾರರು ಮೊತ್ತವನ್ನು ಮರುಪಾವತಿಸಲು ವಿಫಲವಾದಲ್ಲಿ ಲೋನ್ ಮರುಪಡೆಯಲು ಅಂತಹ ಆಸ್ತಿಯನ್ನು ಮಾರಾಟ ಮಾಡುವ ಹಕ್ಕನ್ನು ಸಾಲದಾತರಿಗೆ ಒದಗಿಸುತ್ತದೆ
  • ಇಂಗ್ಲಿಷ್ ಅಡಮಾನ: ಇದು ಸಾಲಗಾರರಿಗೆ ವೈಯಕ್ತಿಕ ಹೊಣೆಗಾರಿಕೆಯನ್ನು ರಚಿಸುವುದನ್ನು ಒಳಗೊಂಡಿರುತ್ತದೆ, ಇದರ ಮೂಲಕ ಅಡಮಾನವು ಸಾಲದಾತರಿಗೆ ಆಸ್ತಿ ವರ್ಗಾವಣೆಯನ್ನು ಒಳಗೊಂಡಿರುತ್ತದೆ ಮತ್ತು ಯಶಸ್ವಿ ಮರುಪಾವತಿಯ ನಂತರ ಮರುಪಡೆಯುವಿಕೆಯನ್ನು ಒಳಗೊಂಡಿರುತ್ತದೆ
  • ಲಾಭದಾಯಕ ಅಡಮಾನ: ಈ ವ್ಯವಸ್ಥೆಯು ಆಸ್ತಿ ಸ್ವಾಧೀನದ ವರ್ಗಾವಣೆಯನ್ನು ಒಳಗೊಂಡಿದ್ದು, ಲೋನ್ ಮರುಪಾವತಿ ಪೂರ್ಣವಾಗುವವರೆಗೆ ಅಂತಹ ಆಸ್ತಿಯ ಬಾಡಿಗೆ ಅಥವಾ ಇತರ ಯಾವುದೇ ಪಾವತಿಯನ್ನು ಪಡೆಯಲು ಸಾಲದಾತರಿಗೆ ಅನುಮತಿ ನೀಡುತ್ತದೆ
  • ಟೈಟಲ್ ಡೀಡ್ ಡೆಪಾಸಿಟ್ ಮೂಲಕ ಅಡಮಾನ: ಮರುಪಾವತಿ ಪೂರ್ಣಗೊಳ್ಳುವವರೆಗೆ ಅಡಮಾನದ ಆಸ್ತಿಯ ಟೈಟಲ್ ಡೀಡ್ ಅನ್ನು ಸಾಲದಾತರೊಂದಿಗೆ ಡೆಪಾಸಿಟ್ ಮಾಡುವ ಸಾಲಗಾರರ ಪ್ರಕ್ರಿಯೆಯನ್ನು ಇದು ಒಳಗೊಂಡಿರುತ್ತದೆ
  • ಷರತ್ತಿನ ಮಾರಾಟದ ಅಡಮಾನ: ಇದು ಮರುಪಾವತಿ ಡೀಫಾಲ್ಟ್‌ಗಳ ಸಂದರ್ಭದಲ್ಲಿ ಮಾತ್ರ ಆಸ್ತಿಯನ್ನು ಸಾಲದಾತರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಸೂಚಿಸುತ್ತದೆ. ಆದಾಗ್ಯೂ, ಯಶಸ್ವಿ ಮರುಪಾವತಿಯು ಮಾರಾಟ ವ್ಯವಸ್ಥೆಯನ್ನು ರದ್ದುಗೊಳಿಸುತ್ತದೆ.

ಈ ವರ್ಗೀಕರಣಗಳಲ್ಲಿ ಒಂದು ನಿರ್ದಿಷ್ಟ ಅಡಮಾನ ಪ್ರಕಾರವನ್ನು ಗುರುತಿಸುವುದು ಸಾಧ್ಯವಾಗದಿದ್ದರೆ, ಅದನ್ನು ಅನಾಮಿಕ ಅಡಮಾನವೆಂದು ಕರೆಯಲಾಗುತ್ತದೆ.

ಸಾಲಗಾರರ ಬೇರೆ ಬೇರೆ ಫಂಡಿಂಗ್ ಅಗತ್ಯಗಳಿಗೆ ಸರಿಹೊಂದುವಂತೆ ಕಸ್ಟಮೈಜ್ ಮಾಡಿದ ಅಡಮಾನ ಲೋನ್‌ಗಳನ್ನು ಸಾಲದಾತರು ಒದಗಿಸುತ್ತಾರೆ. ಅಂತಹ ಮುಂಗಡಗಳ ಮೇಲಿನ ಫೀಚರ್‌ಗಳು, ಪ್ರಯೋಜನಗಳು ಮತ್ತು ಅಡಮಾನ ಲೋನ್ ಬಡ್ಡಿ ದರಗಳು ಕ್ರೆಡಿಟ್ ಆಯ್ಕೆ ಮತ್ತು ಆಯ್ಕೆ ಮಾಡಿದ ಸಾಲದಾತರ ಜೊತೆಗೆ ಬದಲಾಗುತ್ತವೆ. ಅವುಗಳು ಹೀಗಿವೆ:

  • ಆಸ್ತಿ ಮೇಲಿನ ಲೋನ್ – ಹೆಚ್ಚಿನ ಮೌಲ್ಯದ ಲೋನ್ ಅಂತಿಮ ಬಳಕೆಗೆ ಯಾವುದೇ ನಿರ್ಬಂಧವಿಲ್ಲದೆ ಬರುತ್ತದೆ, ಸಾಲಗಾರರಿಗೆ ಅದನ್ನು ವೈವಿಧ್ಯಮಯ, ದೊಡ್ಡ ಮೌಲ್ಯದ ಫಂಡಿಂಗ್ ಅಗತ್ಯಗಳಿಗೆ ಬಳಸಲು ಅನುಮತಿ ನೀಡುತ್ತದೆ. ಈ ಸಂದರ್ಭದಲ್ಲಿ ಲೋನ್ ಬಳಕೆಯು ವ್ಯಾಪಾರ ವಿಸ್ತರಣೆ, ಆಸ್ತಿ ಸ್ವಾಧೀನ, ವೈದ್ಯಕೀಯ ತುರ್ತುಸ್ಥಿತಿಗಳು, ಮದುವೆ ವೆಚ್ಚಗಳು ಇತ್ಯಾದಿಗಳಂತಹ ಹಣಕಾಸಿನ ಅಗತ್ಯಗಳನ್ನು ಪೂರೈಸುವುದನ್ನು ಒಳಗೊಂಡಿದೆ
  • ಫ್ಲೆಕ್ಸಿ ಹೈಬ್ರಿಡ್ ಫೀಚರ್‌ನೊಂದಿಗೆ ಅಡಮಾನ ಲೋನ್‌ಗಳು – ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಅದರ ಅಡಮಾನ ಲೋನನ್ನು ಫ್ಲೆಕ್ಸಿ ಹೈಬ್ರಿಡ್ ಫೀಚರ್‌ನೊಂದಿಗೆ ಒದಗಿಸುತ್ತದೆ, ಇದು ಸಾಲಗಾರರಿಗೆ ಮುಂಚಿತ-ಮಂಜೂರಾದ ಲೋನ್ ಮೊತ್ತದಿಂದ ಅನೇಕ ವಿತ್‌ಡ್ರಾವಲ್‌ಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿಯು ಇಎಂಐಗಳನ್ನು ಕೈಗೆಟಕುವಂತೆ ಮಾಡುತ್ತದೆ
  • ಅಡಮಾನ ಲೋನ್‌ಗಳ ಟಾಪ್-ಅಪ್‌ಗಳು – ಅಸ್ತಿತ್ವದಲ್ಲಿರುವ ಅಡಮಾನ ಲೋನಿಗೆ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯವನ್ನು ಪಡೆಯುವಾಗ ಸಾಲಗಾರರು ಟಾಪ್-ಅಪ್ ಮುಂಗಡವನ್ನು ಕೂಡ ಪಡೆಯಬಹುದು. ಇದು ಹೆಚ್ಚಿನ ಲೋನ್ ಪ್ರಮಾಣ ಮತ್ತು ಕಡಿಮೆ ಅಡಮಾನ ಲೋನ್ ಬಡ್ಡಿ ದರಗಳೊಂದಿಗೆ ಬರುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ಅಡಮಾನ ಲೋನ್ ಬಡ್ಡಿ ದರಗಳನ್ನು ಕಡಿಮೆ ಮಾಡುವುದು ಹೇಗೆ?

ನಿಮ್ಮ ಅಡಮಾನ ಲೋನ್ ದರಗಳನ್ನು ಕಡಿಮೆ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ:

  • ಅಸಲು ಮೊತ್ತವನ್ನು ಪಾವತಿಸಿ
    ನೀವು ಆಸ್ತಿ ಮೇಲಿನ ಲೋನ್ ತೆಗೆದುಕೊಳ್ಳುವಾಗ, ಪ್ರತಿ ತಿಂಗಳು ಹೆಚ್ಚುವರಿ ಪಾವತಿಗಳನ್ನು ಮಾಡಲು ಪ್ರಯತ್ನಿಸಿ, ಇದು ಅಡಮಾನ ಲೋನ್ ಬಡ್ಡಿ ದರಗಳನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ
  • ಉತ್ತಮ ಕ್ರೆಡಿಟ್ ಸ್ಕೋರ್
    ನಿಮ್ಮ ಕ್ರೆಡಿಟ್ ಸ್ಕೋರ್ ಸಾಕಷ್ಟು ಉತ್ತಮವಾಗಿದ್ದರೆ, ಅಡಮಾನ ಲೋನ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಉತ್ತಮ ಕ್ರೆಡಿಟ್ ಸ್ಕೋರ್ ನೀವು ಲೋನನ್ನು ಮರುಪಾವತಿಸುವ ಸಾಧ್ಯತೆಯನ್ನು ಸಾಬೀತುಪಡಿಸುತ್ತದೆ, ಇದರರ್ಥ ನಿಮಗಾಗಿ ಕಡಿಮೆ ಅಡಮಾನ ಲೋನ್ ದರಗಳು
  • ನಿಮ್ಮ ಲೋನನ್ನು ಕಡಿಮೆ ಮಾಡಿಕೊಳ್ಳಿ
    ನಿಮ್ಮ ಅಡಮಾನ ಲೋನ್ ಅವಧಿಯನ್ನು 10 ಅಥವಾ 15 ವರ್ಷಗಳನ್ನಾಗಿ ಮಾಡಲು ಪ್ರಯತ್ನಿಸಿ. ಅಲ್ಪಾವಧಿಯ ಲೋನ್ ಕಡಿಮೆ ಅಡಮಾನ ಲೋನ್ ದರಗಳನ್ನು ಹೊಂದಿರುತ್ತದೆ
  • ರಿಫೈನಾನ್ಸ್
    ಕಡಿಮೆ ಅಡಮಾನ ಲೋನ್ ಬಡ್ಡಿ ದರವನ್ನು ಹುಡುಕುತ್ತಿರುವವರು ತಮ್ಮ ಅಸ್ತಿತ್ವದಲ್ಲಿರುವ ಅಡಮಾನಗಳನ್ನು ರಿಫೈನಾನ್ಸ್ ಮಾಡುವುದನ್ನು ಪರಿಗಣಿಸಬೇಕು. ರಿಫೈನಾನ್ಸಿಂಗ್ ನಿಜವಾಗಿಯೂ ಯೋಗ್ಯವಾಗಿದೆಯೇ ಎಂದು ನಿರ್ಧರಿಸಲು ಅಡಮಾನ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ
ಅಡಮಾನ ಲೋನ್ ಬಡ್ಡಿ ದರವನ್ನು ಲೆಕ್ಕ ಹಾಕುವುದು ಹೇಗೆ?

ಅಡಮಾನ ಲೋನ್ ಬಡ್ಡಿ ದರವನ್ನು ಲೆಕ್ಕ ಹಾಕಲು, ಈ ಕೆಳಗಿನ ಫಾರ್ಮುಲಾವನ್ನು ಬಳಸಿ:

ಇಎಂಐ= [ಪಿ x ಆರ್ x (1+ಆರ್)/\ಎನ್]/ [(1+ಆರ್)/\ಎನ್-1]

ಈ ಫಾರ್ಮುಲಾದಲ್ಲಿ,
P- ಅಸಲು
N- ಮಾಸಿಕ ಕಂತುಗಳ ಸಂಖ್ಯೆ
R- ಬಡ್ಡಿ ದರ
ಅಡಮಾನ ಲೋನ್ ಕ್ಯಾಲ್ಕುಲೇಟರ್ ಮೂಲಕ ನೀವು ಅಡಮಾನ ಲೋನ್ ಬಡ್ಡಿ ದರವನ್ನು ಕೂಡ ಲೆಕ್ಕ ಹಾಕಬಹುದು.

ಪರ್ಸನಲ್ ಲೋನ್ ಮತ್ತು ಅಡಮಾನ ಲೋನ್‌‌ಗಳ ನಡುವಿನ ವ್ಯತ್ಯಾಸವೇನು?

ಪರ್ಸನಲ್ ಲೋನ್‌ಗಳು ಮತ್ತು ಅಡಮಾನ ಲೋನ್‌ಗಳು ಎರಡು ವಿಭಿನ್ನ ರೀತಿಯ ಮುಂಗಡಗಳಾಗಿವೆ, ಬಜಾಜ್ ಫಿನ್‌ಸರ್ವ್ ವಿವಿಧ ಬಡ್ಡಿ ದರಗಳನ್ನು ಹೊಂದಿರುವ ವಿವಿಧ ಉದ್ದೇಶಗಳು ಮತ್ತು ಫೀಚರ್‌ಗಳನ್ನು ಒದಗಿಸುತ್ತದೆ.
ಪರ್ಸನಲ್ ಲೋನ್ ವರ್ಸಸ್ ಅಡಮಾನ ಲೋನ್ ಒಳಗೊಂಡ ನಡುವಿನ ವ್ಯತ್ಯಾಸ:

  • ಪರ್ಸನಲ್ ಲೋನ್‌‌ಗಳು ವ್ಯಕ್ತಿಗಳಿಗೆ ಉನ್ನತ ಕ್ರೆಡಿಟ್ ಮೌಲ್ಯಗಳೊಂದಿಗೆ ಆಫರ್ ಮಾಡಿದ ಸುರಕ್ಷಿತವಲ್ಲದ ಕ್ರೆಡಿಟ್ ಆಗಿದೆ. ಅಡಮಾನ ಲೋನ್‌‌ಗಳು ಆಸ್ತಿ ಅಡಮಾನದ ಮೇಲೆ ಒದಗಿಸುವ ಸುರಕ್ಷಿತ ಮುಂಗಡವಾಗಿದೆ
  • ಕಡಿಮೆ ಮೌಲ್ಯ ಮತ್ತು ಅಧಿಕ ಬಡ್ಡಿ ದರದೊಂದಿಗೆ ಪರ್ಸನಲ್ ಕ್ರೆಡಿಟ್ ಮೇಲೆ ಕಡಿಮೆ ಬಡ್ಡಿ ದರದಲ್ಲಿ ನೀವು ಅಧಿಕ ಮೌಲ್ಯದ ಅಡಮಾನ ಕ್ರೆಡಿಟ್ ಅನ್ನು ಪಡೆದುಕೊಳ್ಳಬಹುದು
  • ಅಡಮಾನ ಲೋನ್‌‌ಗಳು ಪರ್ಸನಲ್ ಮುಂಗಡಗಳಿಗಿಂತ ದೀರ್ಘ ಮರುಪಾವತಿ ಕಾಲಾವಧಿಯೊಂದಿಗೆ ಬರುತ್ತದೆ.

ಪರ್ಸನಲ್ ಲೋನ್ ಮತ್ತು ಪ್ರಾಪರ್ಟಿ ಮೇಲಿನ ಲೋನ್ ನಡುವೆ, ನೀವು ಅಡಮಾನ ಇಡಲು ಆಸ್ತಿಯನ್ನು ಹೊಂದಿದ್ದರೆ ಎರಡನೆಯದು ಅನುಕೂಲಕರ ಮತ್ತು ಉತ್ತಮ ಹಣಕಾಸಿನ ಆಯ್ಕೆಯಾಗಿದೆ. ಶೀಘ್ರ ಅನುಮೋದನೆಯನ್ನು ಆನಂದಿಸಲು ಅಗತ್ಯ ಡಾಕ್ಯುಮೆಂಟ್‌‌ಗಳೊಂದಿಗೆ ಇದಕ್ಕೆ ಅಪ್ಲೈ ಮಾಡಿ.

ನನ್ನ ಅಡಮಾನ ಲೋನ್ ಬಡ್ಡಿ ದರ ಯಾವಾಗ ಬದಲಾಗುತ್ತದೆ?

ಅಡಮಾನ ಲೋನ್ ಬಡ್ಡಿ ದರಗಳಲ್ಲಿನ ಬದಲಾವಣೆಗಳು ಹಣಕಾಸು ಸಂಸ್ಥೆಗಳ ಆಂತರಿಕ ಮಾನದಂಡವನ್ನು ಅವಲಂಬಿಸಿರುತ್ತವೆ.

ಬಜಾಜ್ ಫಿನ್‌ಸರ್ವ್‌ ಅಡಮಾನ ಲೋನ್ ಹೇಗೆ ಉತ್ತಮವಾಗಿದೆ?

ಬಜಾಜ್ ಫಿನ್‌‌ಸರ್ವ್ ಪ್ರಾಪರ್ಟಿ ಮೇಲಿನ ಲೋನ್ ಲಭ್ಯವಿರುವ ಒಂದು ಉತ್ತಮ ಅಡಮಾನ ಲೋನ್ ಆಗಿದ್ದು ಇದು ವಿಶೇಷ ಸಾಲಗಾರರ ಸ್ನೇಹಿ ಫೀಚರ್‌‌ಗಳೊಂದಿಗೆ ಬರುತ್ತವೆ, ಅವುಗಳೆಂದರೆ:

  • ದೊಡ್ಡ ಮಟ್ಟದ ಖರ್ಚುಗಳಿಗಾಗಿ ರೂ. 5 ಕೋಟಿ* ವರೆಗಿನ ಹೆಚ್ಚಿನ-ಮೌಲ್ಯದ ಲೋನ್
  • ಮರುಪಾವತಿಯಲ್ಲಿನ ಅನುಕೂಲದೊಂದಿಗೆ 18 ವರ್ಷಗಳವರೆಗಿನ ಫ್ಲೆಕ್ಸಿಬಲ್ ಕಾಲಾವಧಿ
  • 72 ಗಂಟೆಗಳ* ಒಳಗೆ ಅನುಮೋದನೆಯಾಗುವ ಇದು ಅತ್ಯಂತ ವೇಗದ ಆಸ್ತಿ ಲೋನ್ ಆಗಿದೆ. ಅನುಮೋದನೆಯಾದ 3 ದಿನಗಳ* ಒಳಗೆ ವಿತರಣೆಯಾಗುತ್ತದೆ
  • ಕಡಿಮೆ ಬಡ್ಡಿ ದರದಲ್ಲಿ ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಸೌಲಭ್ಯದೊಂದಿಗೆ ಅಧಿಕ- ಮೌಲ್ಯದ ಟಾಪ್ ಅಪ್ ಲೋನ್‌‌ಗಳು
  • ಮೊದಲೇ ಮಂಜೂರಾದ ಕ್ರೆಡಿಟ್ ಮೊತ್ತದಿಂದ ಯಾವುದೇ ಸಮಯದಲ್ಲಿ ವಿತ್ ಡ್ರಾ ಮಾಡಬಹುದಾದ ಫ್ಲೆಕ್ಸಿ ಲೋನ್ ಸೌಲಭ್ಯ ಮತ್ತು ವಿತ್ ಡ್ರಾ ಮಾಡಲಾದ ಮೊತ್ತದ ಮೇಲೆ ಮಾತ್ರ ಮರುಪಾವತಿಸಬೇಕಾದ ಬಡ್ಡಿ

ಬಜಾಜ್ ಫಿನ್‌‌ಸರ್ವ್ ಅಡಮಾನ ಲೋನಿನ ಈ ಆಕರ್ಷಕ ಫೀಚರ್‌‌ಗಳನ್ನು ಪಡೆದುಕೊಳ್ಳಲು, ಆನ್ಲೈನ್ ಫಾರಂನಲ್ಲಿ ಅಪ್ಲೈ ಮಾಡಿ.

ಹೋಮ್ ಲೋನ್ ಮತ್ತು ಅಡಮಾನ ಲೋನ್ ನಡುವಿನ ವ್ಯತ್ಯಾಸವೇನು?

ಹೋಮ್ ಲೋನ್ ವರ್ಸಸ್ ಅಡಮಾನ ಲೋನ್ ವಿಷಯಕ್ಕೆ ಬಂದಾಗ, ಪರಿಗಣಿಸಬೇಕಾದ ಅತ್ಯಂತ ಪ್ರಮುಖ ವ್ಯತ್ಯಾಸಗಳು ಹೀಗಿವೆ:

  • ಹಿಂದಿನದು ಒಂದು ರೀತಿಯ ಅಡಮಾನ ಕ್ರೆಡಿಟ್ ಆಗಿದ್ದರೆ, ಎರಡನೆಯದು ಮೇಲಾಧಾರದ ಮೇಲೆ ನೀಡುವ ಮುಂಗಡ ಸಾಲವಾಗಿದೆ. ಹೋಮ್ ಲೋನ್ ಮತ್ತು ಆಸ್ತಿ ಮೇಲಿನ ಲೋನ್ ಎರಡು ಕೂಡ ಅಡಮಾನ ಇಡಲಾದ ಆಸ್ತಿ ಮೇಲೆ ನೀಡಲಾಗುವ ಲೋನ್‌‌ಗಳಾಗಿವೆ
  • ಅಡಮಾನ ಕ್ರೆಡಿಟ್ ನಿಶ್ಚಿತ ಬಳಕೆಯ ಉದ್ದೇಶವನ್ನು ಹೊಂದಿಲ್ಲ; ವಾಸದ ಮನೆಯನ್ನು ಪಡೆದುಕೊಳ್ಳಲು ಹೋಮ್ ಅಡ್ವಾನ್ಸ್ ಒದಗಿಸಲಾಗಿದೆ
  • ಮೊದಲನೆಯದರಲ್ಲಿ, ಸಾಲದಾತರು ನೇರವಾಗಿ ಮಾರಾಟಗಾರರಿಗೆ ಪಾವತಿಸುತ್ತಾರೆ, ಆದರೆ ಅಡಮಾನದ ಕ್ರೆಡಿಟ್‌‌ಗಳಾದ ಆಸ್ತಿ ಮೇಲಿನ ಮುಂಗಡ ನೇರವಾಗಿ ನಿಮ್ಮ ಅಕೌಂಟಿಗೆ ಟ್ರಾನ್ಸ್‌‌ಫರ್ ಮಾಡಬಹುದು

ಈ ವ್ಯತ್ಯಾಸವನ್ನು ವಿಂಗಡಿಸಿ, ಯಾವುದೇ ಕೊನೆಯ ಬಳಕೆಯ ನಿರ್ಬಂಧವಿಲ್ಲದೆ ಬರುವ ಬಜಾಜ್ ಫಿನ್‌‌ಸರ್ವ್‌‌ನೊಂದಿಗೆ ನೀವು ಆಸ್ತಿ ಮೇಲಿನ ಲೋನಿಗೆ ಅಪ್ಲೈ ಮಾಡಬಹುದು.

ಅಸ್ತಿತ್ವದಲ್ಲಿರುವ ಸಾಲಗಾರರು ಹೊಸ ಅಡಮಾನ ಲೋನ್ ಬಡ್ಡಿ ದರವನ್ನು ಪಡೆಯಬಹುದೇ?

ಹೌದು, ನೀವು ಫ್ಲೋಟಿಂಗ್ ಬಡ್ಡಿ ದರವನ್ನು ಆಯ್ಕೆ ಮಾಡಿದ್ದರೆ ಇದು ಸಾಧ್ಯವಾಗುತ್ತದೆ. ಇದು ಹಣಕಾಸು ಸಂಸ್ಥೆಗಳ ಆಂತರಿಕ ಮಾನದಂಡವನ್ನು ಕೂಡ ಅವಲಂಬಿಸಿರುತ್ತದೆ. ಆದ್ದರಿಂದ, ಅಡಮಾನ ಲೋನ್ ಬಡ್ಡಿ ದರದಲ್ಲಿನ ಬದಲಾವಣೆಗಳು ನೇರವಾಗಿ ನಿಮ್ಮ ಬಡ್ಡಿ ದರಗಳ ಮೇಲೆ ಕೂಡ ಪರಿಣಾಮ ಬೀರುತ್ತವೆ.

ಅಡಮಾನ ಲೋನ್ ಮೂಲಕ ನಾನು ಎಷ್ಟು ಮೊತ್ತವನ್ನು ಲೋನ್ ಪಡೆಯಬಹುದು?

ಸಾಲಗಾರರು ಪಡೆಯಲು ಅರ್ಹವಾಗಿರುವ ಗರಿಷ್ಠ ಅಡಮಾನ ಲೋನ್ ಮೊತ್ತವು ಇತರ ಅಂಶಗಳ ಜೊತೆಗೆ ಸಾಲದಾತರು ನೀಡುವ ಲೋನ್ ಟು ವ್ಯಾಲ್ಯೂ (ಎಲ್‌ಟಿವಿ) ರೇಶಿಯೋ ಅವಲಂಬಿಸಿರುತ್ತದೆ. ಅತ್ಯುತ್ತಮ ಸಾಲದಾತರ ಎಲ್‌ಟಿವಿಯು, ಆಸ್ತಿಯ ಮಾರುಕಟ್ಟೆ ಬೆಲೆಯ 70% ರಿಂದ 75% ನಡುವೆ ಇರುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ