ನಿಮ್ಮ ಎಲ್ಲ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ಮತ್ತು 4 ದಿನಗಳಲ್ಲಿ ಲೋನ್ ವಿತರಣೆಯನ್ನು ಆನಂದಿಸಲು ನೀವು ಬಜಾಜ್ ಫಿನ್‌ಸರ್ವ್ ಅವರಿಂದ ಆಸ್ತಿಯ ಮೇಲೇ ವೇಗವಾಗಿ ದೊರಕುವ ಲೋನನ್ನು ಬಳಸಬಹುದು.
ಸ್ವಯಂ ಉದ್ಯೋಗಿಗಳಿಗಾಗಿ, ನೀವು ಈ ಕೆಳಗಿನ ಉದ್ದೇಶಗಳಿಗಾಗಿ ನಿಮ್ಮ ಲೋನನ್ನು ಬಳಸಬಹುದು:
• ಬಿಸಿನೆಸ್ ವಿಸ್ತರಣೆ
• ಕಾರ್ಯಾಚರಣೆ ಬಳಕೆ
• ಡೆಟ್ ರಿಕನ್ಸಿಲೇಶನ್
• ಕಚ್ಚಾ ವಸ್ತುಗಳನ್ನು ಖರೀದಿಸುವುದು
• ಹೊಸ ಹೂಡಿಕೆಗಳಿಗಾಗಿ ಮತ್ತು ವೈಯಕ್ತಿಕ ಬಳಕೆಗಾಗಿ
ಸಂಬಳ ಪಡೆಯುವವರಿಗೆ, ನೀವು ಈ ಕೆಳಗಿನ ಉದ್ದೇಶಗಳಿಗಾಗಿ ನಿಮ್ಮ ಲೋನನ್ನು ಬಳಸಬಹುದು:
• ಭೋಗ್ಯದ ಖರೀದಿ/ ಅಸ್ತಿತ್ವದಲ್ಲಿರುವ ಲೋನ್‌ನ ಬ್ಯಾಲೆನ್ಸ್ ವರ್ಗಾವಣೆ
• ಡೆಟ್ ರಿಕನ್ಸಿಲೇಶನ್
• ಮದುವೆಯ ವೆಚ್ಚಗಳನ್ನು ನಿರ್ವಹಿಸುವುದು
• ಹೊಸ ಹೂಡಿಕೆಗಳು
• ಶಿಕ್ಷಣಕ್ಕೆ ಹಣಕಾಸು
ಆಸ್ತಿ ಮೇಲಿನ ಲೋನ್ ಅರ್ಹತೆಯನ್ನು ಅಕೌಂಟ್ನಲ್ಲಿನ ಈ ಮುಂದಿನ ಮಾನದಂಡಗಳನ್ನು ಪರಿಗಣಿಸಿ ಲೆಕ್ಕ ಮಾಡಲಾಗುತ್ತದೆ:
• ವಯಸ್ಸು
• ಆದಾಯ
• ಆಸ್ತಿಯ ಮೌಲ್ಯ
• ಅಸ್ತಿತ್ವದಲ್ಲಿರುವ ಹೊಣೆಗಾರಿಕೆಗಳು, ಯಾವುದಾದರೂ ಇದ್ದಲ್ಲಿ
• ಉದ್ಯೋಗ/ ಬಿಸಿನೆಸ್ನ ಸ್ಥಿರತೆ/ ಮುಂದುವರಿಕೆ
• ಹಿಂದಿನ ಲೋನ್ ಪಡೆದ ರೆಕಾರ್ಡ್‌ಗಳು
ಹೌದು, ನಿಮ್ಮ ಲೋನ್ ಅವಧಿಯಲ್ಲಿ ನಿಮ್ಮ ಆಸ್ತಿಯನ್ನು ಆಸ್ತಿ ಬೆಂಕಿ ಮತ್ತು ಇತರ ವಿಕೋಪಗಳಿಗೆ ಇನ್ಶೂರೆನ್ಸ್ ಮಾಡಬೇಕು. ನೀವು ಪ್ರತಿ ವರ್ಷ ಅಥವಾ ಅಗತ್ಯವಾದಾಗಲೆಲ್ಲ ಬಜಾಜ್ ಫಿನ್‌ಸರ್ವ್‌ಗೆ ಇನ್ಶೂರೆನ್ಸ್ ಪುರಾವೆಗಳನ್ನು ಒದಗಿಸಬೇಕು.
ಅಡವಿಡುವ ಆಸ್ತಿಯು ಯಾವುದೇ ತಕರಾರು ಇಲ್ಲದೆ ಸ್ಪಷ್ಟವಾಗಿರಬೇಕು, ಯಾವುದೇ ಮೊಕ್ಕದ್ದಮೆಯಿಂದ ಮುಕ್ತವಾಗಿರಬೇಕು ಮತ್ತು ಯಾವುದೇ ಅಡಮಾನ ಅಥವಾ ಲೋನನ್ನು ಹೊಂದಿರಬಾರದು ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
ಹೌದು. ಆಸ್ತಿಯ ಎಲ್ಲಾ ಸಹ-ಮಾಲೀಕರನ್ನು ಲೋನ್‌ನ ಸಹ-ಅರ್ಜಿದಾರರೆಂದು ಪರಿಗಣಿಸಲಾಗುತ್ತದೆ.
ಆಸ್ತಿಯ ಮೇಲಿನ ಲೋನ್ ವಿತರಣೆಯ ಪ್ರಕ್ರಿಯೆ ಹೀಗಿದೆ:
• ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದು
ನೀವು ಹಸ್ತಾಂತರಿಸಿದ ನಿಮ್ಮ ಲೋನ್‌ನ ಅಪ್ಲಿಕೇಶನ್ನಿನ ಡಾಕ್ಯುಮೆಂಟ್‌ಗಳನ್ನು ಅವಲಂಬಿಸಿ (ವಿವರಗಳಿಗಾಗಿ 'ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು' ಪುಟವನ್ನು ನೋಡಿ) ನೀವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.
• ಲೋನ್ ಮಂಜೂರು ಮಾಡುವುದು
ನಿಮ್ಮ ಆದಾಯ, ವಯಸ್ಸು, ನೀವು ಕೆಲಸ ಮಾಡುವ ಉದ್ಯೋಗದಾತರು ಅಥವಾ ಸಂಸ್ಥೆ, ಮತ್ತು CIBIL ವರದಿಯ ಆಧಾರದ ಮೇಲೆ ಬಜಾಜ್ ಫೈನಾನ್ಸ್ ನಿಮ್ಮ ಲೋನ್ ಅರ್ಹತೆಯನ್ನು ಲೆಕ್ಕಹಾಕುತ್ತದೆ. ನೀವು ಸ್ವಯಂ ಉದ್ಯೋಗಿಯಾಗಿದ್ದರೆ, ನಿಮ್ಮ ಕೆಲಸದ ಸ್ವರೂಪ, ಬ್ಯಾಂಕ್ ಸ್ಟೇಟ್ಮೆಂಟ್‌ಗಳು, ಮತ್ತು CIBIL ವರದಿಯನ್ನು ನೋಡಿ ಬಜಾಜ್ ಫೈನಾನ್ಸ್ ನಿಮಗೆ ನೀಡಬಹುದಾದ ಗರಿಷ್ಠ ಲೋನ್ ಮೊತ್ತವನ್ನು ನಿರ್ಧರಿಸುತ್ತದೆ. ನಂತರ ನಿಮಗೆ ಒಂದು ಲೋನ್ ಮಂಜೂರಾತಿಯ ಪತ್ರವನ್ನು ನೀಡಲಾಗುತ್ತದೆ.
• ಲೋನ್‌ನ ಸ್ವೀಕಾರ
ನೀವು ಲೋನ್‌ನ ಷರತ್ತುಗಳು ಮತ್ತು ನಿಯಮಗಳನ್ನು ಒಪ್ಪಿದರೆ, ನೀವು ಲೋನ್ ಮಂಜೂರಾತಿ ಪತ್ರದ ಸಹಿ ಮಾಡಿದ ನಕಲನ್ನು ಸಲ್ಲಿಸಬೇಕಾಗುತ್ತದೆ.
• ಲೋನ್ ವಿತರಣೆ
ಆಸ್ತಿಯ ಎಲ್ಲಾ ಸಂಬಂಧಿತ ಪೇಪರ್‌ಗಳ ಪರಿಶೀಲನೆ ಆದಬಳಿಕ, ಅನ್ವಯವಾಗುವ ಎಲ್ಲ ಡಾಕ್ಯುಮೆಂಟ್‌ಗಳ ಸಲ್ಲಿಕೆಯಾದ ಬಳಿಕ ಮತ್ತು ಲೋನ್ ಒಪ್ಪಂದವು ಜಾರಿಯಾದ ಬಳಿಕ ಲೋನನ್ನು ವಿತರಣೆ ಮಾಡಲಾಗುವುದು.
ಈ ಕೆಳಗಿನ ವಿಧಾನಗಳಲ್ಲಿ ನಿಮ್ಮ ಸಂಪರ್ಕ ಮಾಹಿತಿಯನ್ನು ನೀವು ಅಪ್ಡೇಟ್ ಮಾಡಬಹುದು
• ನಮಗೆ ಇಲ್ಲಿ ಕರೆ ಮಾಡುವ ಮೂಲಕ 020 3957 4151 (ಕರೆ ಶುಲ್ಕಗಳು ಅನ್ವಯವಾಗುತ್ತವೆ)
• ನಮ್ಮ ಟೋಲ್-ಫ್ರೀ ನಂಬರಿಗೆ ಕರೆ ಮಾಡುವ ಮೂಲಕ: 1800 209 4151
• ನಮ್ಮನ್ನು ಇಲ್ಲಿ ಭೇಟಿ ಮಾಡಲು ನಿಮ್ಮ ನೋಂದಾಯಿತ ಇಮೇಲ್ id ಬಳಸುವ ಮೂಲಕ: https://www.bajajfinserv.in/reach-us ನಿಮ್ಮ ವಿಳಾಸದ ಪುರಾವೆ ಮತ್ತು ಫೋಟೋ ಗುರುತಿನ ಸ್ಕ್ಯಾನ್ ಮಾಡಿದ ಪ್ರತಿಗಳ ಜೊತೆಗೆ
ನಿಮ್ಮ ಹೊಸ ವಿಳಾಸ ಪುರಾವೆಯ ಮೂಲ ಮತ್ತು ಸ್ವಯಂ-ದೃಢೀಕರಿಸಲಾದ ನಕಲುಗಳ ಜೊತೆಗೆ ನೀವು ನಮ್ಮ ಹತ್ತಿರದ ಶಾಖೆಗೂ ಭೇಟಿ ನೀಡಬಹುದು.
ನನ್ನ ಸಮಾನ ಮಾಸಿಕ ಕಂತು (EMI ) ಅನ್ನು ಹೇಗೆ ಲೆಕ್ಕಹಾಕಲಾಗುತ್ತದೆ? ನಿಮ್ಮ EMI ಎರಡು ಭಾಗಗಳನ್ನು ಒಳಗೊಂಡಿರುತ್ತದೆ - ನೀವು ಪಡೆದ ಅಸಲಿನ ಮೊತ್ತವನ್ನು ಹಿಂದಿರುಗಿಸುವುದು, ಮತ್ತು ’ಅದರ ಮೇಲೆ’ ವಿಧಿಸಲಾದ ಬಡ್ಡಿ ದರಗಳು. ಮೂರು ಅಂಶಗಳು ಇಲ್ಲಿ ಗಣನೆಗೆ ಬರುತ್ತವೆ-ನೀವು ಎಷ್ಟು ಲೋನ್ ಪಡೆಯುತ್ತೀರಿ, ಬಡ್ಡಿ ದರ, ಮತ್ತು ಲೋನ್‌ನ ಅವಧಿ. ನಿಮ್ಮ EMI ಅನ್ನು ಕೆಳಗೆ ತರಲು ಮಾರ್ಗಗಳಿವೆ: ಬಡ್ಡಿದರಗಳು ಕಡಿಮೆಯಾದರೆ ಅಥವಾ ನೀವು ಕೊಡಬೇಕಾಗಿದ್ದಕ್ಕಿಂತ ಹೆಚ್ಚನ್ನು ನೀವು ಪಾವತಿ ಮಾಡಿದಲ್ಲಿ ('ಭಾಗಶಃ ಮುಂಪಾವತಿ' ಎಂದು ಕರೆಯಲಾಗುತ್ತದೆ) ಅದು ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ.
ಈ ಮುಂದಿನ ದಾರಿಗಳ ಮೂಲಕ ನೀವು ಪಾವತಿಸುವ EMI ಮೊತ್ತವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದಾಗಿದೆ:
• ನಮ್ಮ ಗ್ರಾಹಕ ಪೋರ್ಟಲ್ ಆದ ಎಕ್ಸ್‌ಪೀರಿಯಗೆ ಲಾಗಿನ್ ಮಾಡಿ
• ನೀವು ನಮ್ಮನ್ನು ಇಲ್ಲಿ ಭೇಟಿ ಮಾಡಬಹುದು: https://www.bajajfinserv.in/reach-us
• ನೀವು ನಮಗೆ ಇಲ್ಲಿ ಕರೆ ಮಾಡಬಹುದು 020 3957 4151 (ಕರೆ ಶುಲ್ಕಗಳು ಅನ್ವಯವಾಗುತ್ತವೆ)
ಒಂದು ಭೋಗ್ಯದ ವೇಳಾಪಟ್ಟಿಯು ಮಾಸಿಕ ಕಂತುಗಳಲ್ಲಿ ನಿಮ್ಮ ಲೋನ್ ಮೊತ್ತವನ್ನು ಕಡಿಮೆ ಮಾಡುವ ಒಂದು ಟೇಬಲ್ ಆಗಿದೆ. ಭೋಗ್ಯದ ವೇಳಾಪಟ್ಟಿಯು ಬಡ್ಡಿಯ ಮರುಪಾವತಿ ಮತ್ತು ನಿಮ್ಮ ಲೋನ್‌ನ ಬಾಕಿಯಿರುವ ಮೊತ್ತಕ್ಕೆ ಪ್ರತಿ EMI ಯ ಪಟ್ಟಿಯನ್ನು ನೀಡುತ್ತದೆ.
ಬಡ್ಡಿ ದರಗಳು ಏರಿಕೆಯಾದಾಗ, EMI ನ ಬಡ್ಡಿಯ ಅಂಶವು ಸಹ ಹೆಚ್ಚಾಗುತ್ತದೆ. EMI ಅನ್ನು ಹಾಗೇ ಇಟ್ಟುಕೊಂಡಿದ್ದರೂ ಅದು ಕೆಳಮಟ್ಟದ ಅಸಲಿನ ಘಟಕವನ್ನು ಉಂಟುಮಾಡುತ್ತದೆ. ದರಗಳು ನಿರಂತರವಾಗಿ ಮೇಲಕ್ಕೇರಿದರೆ, ಬಡ್ಡಿಯ ಅಂಶವು EMI ಗಿಂತ ಹೆಚ್ಚಾಗುವ ಪರಿಸ್ಥಿತಿ ಬರಬಹುದು. ಇಂತಹ ಪರಿಸ್ಥಿತಿಯಲ್ಲಿ, ಅಸಲಿನ ಘಟಕವು (EMI ನಲ್ಲಿ ಬಡ್ಡಿಯ ಘಟಕವನ್ನು ಕಳೆಯುವುದು) ನಕಾರಾತ್ಮಾಕ ಅಂಕಿಯನ್ನು ನೀಡುತ್ತದೆ. ಇದರ ಪರಿಣಾಮವಾಗಿ, ಬಾಕಿಯಿರುವ ಬ್ಯಾಲೆನ್ಸ್ ಆರಂಭಿಕ ಘಟಕದ ಜೊತೆ ಕಡಿಮೆಯಾಗುವ ಬದಲು ನಕಾರಾತ್ಮಕ ಅಸಲಿನ ಅಂಶದೊಂದಿಗೆ ಹೆಚ್ಚಾಗುತ್ತದೆ. ಇದನ್ನು ಸಾಮಾನ್ಯವಾಗಿ ನೆಗಟಿವ್ ಅಮೊರ್ಟೈಸೇಶನ್ ಎಂದು ಕರೆಯಲಾಗುತ್ತದೆ.
ಅಮೊರ್ಟೈಸೇಶನ್ ನೆಗಟಿವ್ ಇದ್ದಾಗ ಲೋನ್ ಮರುಪಾವತಿಗೊಳ್ಳುವುದಿಲ್ಲ, ಏಕೆಂದರೆ ಸಾಮಾನ್ಯ ಪಾವತಿಗಳಲ್ಲಿ ಬಡ್ಡಿಯನ್ನು ನೀಡಲು ಸಾಧ್ಯವಾಗುವುದಿಲ್ಲ. ಪಾವತಿಸದ ಬಡ್ಡಿಯನ್ನು ಅಸಲಿಗೆ ಸೇರಿಸಲಾಗುತ್ತದೆ ಮತ್ತು ಅದು ಬೆಳೆಯುತ್ತದೆ. ಬಡ್ಡಿದರಗಳು ಬೀಳುವಾಗ ಮಾತ್ರ ಪರಿಸ್ಥಿತಿ ವ್ಯತಿರಿಕ್ತವಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಗ್ರಾಹಕರು ಲೋನ್ ಮೊತ್ತವನ್ನು ಭಾಗಶಃ ಮುಂಗಡ ಪಾವತಿ ಮಾಡಬೇಕಾಗುತ್ತದೆ, ಲೋನ್ EMI ಹೆಚ್ಚಿಸಬೇಕಾಗುತ್ತದೆ, ಅಥವಾ ಎರಡೂ ಮಾಡಬೇಕಾಗುತ್ತದೆ.
ಒಂದು ಫ್ಲೋಟಿಂಗ್ ಬಡ್ಡಿ ಹೊಂದಿರುವ ಲೋನ್‌ನಲ್ಲಿ, ಬಡ್ಡಿಯ ಅಂಶವು ಬದಲಾಗಬಹುದು. ದರಗಳು ಬದಲಾದಾಗ, ಲೋನ್‌ನಲ್ಲಿ ಕೆಳಗಿನ ಎರಡು ಬದಲಾವಣೆಗಳಲ್ಲಿ ಒಂದನ್ನು ಮಾಡಬಹುದು:
• ಲೋನಿನ ಅವಧಿಯನ್ನು ಹಿರಿದಾಗಿಸಲಾಗುತ್ತದೆ (ದರಗಳಲ್ಲಿ ಏರಿಕೆಯಾದಾಗ) ಅಥವಾ ಕಿರಿದಾಗಿಸಲಾಗುತ್ತದೆ (ದರಗಳಲ್ಲಿ ಇಳಿಕೆಯಾದಾಗ)
• EMI ಮೊತ್ತವನ್ನು ಮರುಹೊಂದಿಸಲಾಗುತ್ತದೆ (ದರಗಳು ಹೆಚ್ಚಾಗುತ್ತಿದ್ದರೆ ಏರಿಸಲಾಗುತ್ತದೆ ಮತ್ತು ದರಗಳು ಕಡಿಮೆಯಾದರೆ ಇಳಿಸಲಾಗುತ್ತದೆ)
ಒಂದು ಅಭ್ಯಾಸವಾಗಿ, ಗ್ರಾಹಕನು ಪೋಸ್ಟ್ ಡೇಟೆಡ್ ಚೆಕ್‌ಗಳನ್ನು ನೀಡಿರಬಹುದಾದ್ದರಿಂದ ಲೋನ್ ಅವಧಿಯನ್ನು ವಿಸ್ತರಿಸಬಹುದು ಮತ್ತು ಪ್ರತಿ ದರ ಬದಲಾವಣೆಯಲ್ಲೂ ಅವುಗಳನ್ನು ಬದಲಾಯಿಸಲು ಕಷ್ಟವಾಗಬಹುದು. ಆದಾಗ್ಯೂ, ನಿರ್ಮಾಣದಲ್ಲಿರುವ ಆಸ್ತಿಗಳಿದ್ದಲ್ಲಿ, ಮುಂಚಿತ-EMI ಮೊತ್ತವನ್ನು ಪೂರ್ವನಿಯೋಜಿತವಾಗಿ ಹೆಚ್ಚಿಸಲಾಗುತ್ತದೆ.
ನಿಮ್ಮ ಅನುಕೂಲಕ್ಕೆ ತಕ್ಕಂತೆ ಮೇಲಿನ ಯಾವುದೇ ಆಯ್ಕೆಗಳನ್ನು ನೀವು ಮಾಡಬಹುದು. ಲೋನ್‌ನ ಉಳಿದ ಅವಧಿಗೆ ಸಮನಾಗಿ EMI ಅನ್ನು ಬದಲಾಯಿಸುವುದು ಪೂರ್ವನಿಯೋಜಿತ ಆಯ್ಕೆಯಾಗಿದೆ.
ಫಂಡ್‍ಗಳ ವೆಚ್ಚಗಳಲ್ಲಿ ಹೆಚ್ಚಳವಾದಾಗ ಬೆಲೆಗಳಲ್ಲಿ ಹೆಚ್ಚಳ ಉಂಟಾಗುತ್ತದೆ. ಪ್ರೊ-ಆ್ಯಕ್ಟಿವ್ ರಿಪ್ರೈಸಿಂಗ್ ಪಾಲಿಸಿಯಿಂದಾಗಿ ಹೊಸ ಹೊಸ ಸ್ವಾಧೀನತೆಗಳಿಂದ ಉಂಟಾಗುವ ಲೋನ್ ಬೆಲೆಗಳ ವಿಪರೀತ ಹೆಚ್ಚಳವಾಗದಂತೆ ಸಕಾರಾತ್ಮಕವಾಗಿ ಸಹಕರಿಸುತ್ತದೆ ಮತ್ತು ನಿಮ್ಮ ಲೋನಿಗೆ ಯಾವಾಗಲೂ ಸಮರೂಪತೆಯನ್ನು ಕಾಯಲು ಸಹಾಯ ಮಾಡುತ್ತದೆ.
ಒಂದು ಉತ್ತಮ ನಡವಳಿಕೆಯಾಗಿ ನಮ್ಮ ಮೌಲ್ಯಯುತ ಗ್ರಾಹಕರೊಂದಿಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು, ಬಜಾಜ್ ಫಿನ್ಸರ್ವ್ನಮ್ಮ ಪ್ರೋ-ಆಕ್ಟಿವ್ ರಿಯಲ್ ಎಸ್ಟೇಟ್-ಪ್ರೈಸಿಂಗ್ ತಂತ್ರದ ಮೂಲಕ ನಮ್ಮ ಪ್ರಸ್ತುತ ಗ್ರಾಹಕರು ಯಾರೂ ಕಳೆದ 3 ತಿಂಗಳ ಸರಾಸರಿ ಸೋರ್ಸಿಂಗ್ ರೇಟ್ಗಿಂತ 100 BPS ಗಿಂತಲೂ ಹೆಚ್ಚಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತದೆ. ನಮ್ಮ ಕೊನೆಯ 3 ತಿಂಗಳ ಸರಾಸರಿ ಸೋರ್ಸಿಂಗ್ ದರದಿಂದ ಒಬ್ಬ ಗ್ರಾಹಕರು 100 BPS ಗಿಂತ ಹೆಚ್ಚಿದ್ದಲ್ಲಿ, ಅಂತಹ ಎಲ್ಲಾ ಗ್ರಾಹಕರಿಗಾಗಿ ಬಡ್ಡಿ ದರದ ಕೆಳಮುಖ ಮರುಬೆಲೆಯನ್ನು ನಾವು ಮಾಡುತ್ತೇವೆ ಹಾಗೂ ಇದು ಅವರನ್ನು ಕೊನೆಯದು 3 ತಿಂಗಳ ಸರಾಸರಿ ಸೋರ್ಸಿಂಗ್ ದರಕ್ಕಿಂತ ಗರಿಷ್ಠ 100 BPS ಮಟ್ಟಕ್ಕೆ ತರಲಾಗಿದೆ . ಇದು ದ್ವೈ-ವಾರ್ಷಿಕ ಪದ್ಧತಿಯಾಗಿದೆ. ಇದು NBFC ಗೆ ದೇಶದಲ್ಲಿ ಮತ್ತೊಂದು ಉದ್ಯಮ ಪ್ರಥಮವಾಗಿದೆ.
ಆಸ್ತಿ ವರದಿ ಪುಸ್ತಕವು ಬಜಾಜ್ ಫಿನ್ಸರ್ವ್ನ ಅಡಮಾನ ಗ್ರಾಹಕರಿಗೆ ಒದಗಿಸುವ ಮತ್ತೊಂದು ಉದ್ಯಮ-ಪ್ರಥಮ, ಮೌಲ್ಯ-ವರ್ಧಿತ ಸೇವೆಯಾಗಿದೆ. ಇದು ಗ್ರಾಹಕೀಕೃತ ವರದಿಯಾಗಿದ್ದು, ಇದು ಗ್ರಾಹಕರಿಗೆ ಸರಳ ಮತ್ತು ಅಚ್ಚುಕಟ್ಟಾದ ರೀತಿಯಲ್ಲಿ ಆಸ್ತಿಯನ್ನು ಹೊಂದುವ ಎಲ್ಲಾ ಕಾನೂನು ಮತ್ತು ತಾಂತ್ರಿಕ ಅಂಶಗಳಲ್ಲಿ ಮಾರ್ಗದರ್ಶನ ನೀಡುತ್ತದೆ. ಇದು ಸಾಮಾನ್ಯ ಆಸ್ತಿಯ ಬಗೆಗಿನ ಸಲಹೆಗಳನ್ನೂ ಅಲ್ಲದೆ ನಗರದ ಆಸ್ತಿ ಸೂಚ್ಯಂಕ, ಪ್ರಮುಖ ಆಸ್ತಿ ಸಲಹೆಗಳು ಮುಂತಾದ ಎಲ್ಲಾ ಚಿಕ್ಕ ಚಿಕ್ಕ ಅಂಶಗಳನ್ನೂ ಒಳಗೊಂಡಿದೆ.
ಈ ಕೆಳಗಿನವುಗಳಿಗೆ ನೀವು ಆಸ್ತಿ ಮೇಲಿನ ಲೋನನ್ನು ಪಡೆಯಬಹುದು:
• ನೀವೇ ವಾಸಿಸುತ್ತಿರುವ ವಸತಿ
• ಬಾಡಿಗೆ ತೆಗೆದುಕೊಂಡಿರುವ ವಸತಿ/ ವಾಣಿಜ್ಯ ಆಸ್ತಿ
• ಖಾಲಿಯಿರುವ ವಸತಿ/ ವಾಣಿಜ್ಯ ಆಸ್ತಿ
• ಹಂಚಿಕೊಂಡ ಆಸ್ತಿ
ಈ ಕೆಳಗಿನವುಗಳಿಗೆ ನೀವು ಆಸ್ತಿಯ ಮೆಲೆ ಲೋನನ್ನು ಪಡೆಯಲಾಗುವುದಿಲ್ಲ:
• ಜಾಗ
• ನಗರ/ ಪುರಸಭೆ ಮಿತಿಯ ಹೊರಗಿನ ಆಸ್ತಿ
• 5 ವರ್ಷಗಳಿಗಿಂತ ಹೆಚ್ಚು ಕಾಲ ಬಾಡಿಗೆಯಿರುವ (ನವೀಕರಿಸಿದ ಬಾಡಿಗೆಯ ಒಪ್ಪಂದವಿಲ್ಲದೆ) ಬಾಡಿಗೆದಾರರನ್ನು ಹೊಂದಿರುವ ಆಸ್ತಿ
• ಸಾಕಷ್ಟು ರಿಪೇರಿ ಬೇಕಿರುವ ನಿರ್ಮಾಣದ ದೋಷಗಳಿರುವ ಆಸ್ತಿ
• ಕೃಷಿ ಭೂಮಿ/ ಜಮೀನು ಭೂಮಿಯಲ್ಲಿ ನಿರ್ಮಿಸಲಾದ ಆಸ್ತಿ
• ಅಕ್ರಮ ಆಸ್ತಿಗಳು
• ಈಗಾಗಲೇ ಇತರ ಬ್ಯಾಂಕುಗಳೊಂದಿಗೆ ಅಡಮಾನವಿಟ್ಟಿರುವ ಆಸ್ತಿ
• ಸೂಕ್ತ ಪ್ರಾಧಿಕಾರದಿಂದ ಅನುಮೋದನೆಯಿಲ್ಲದೆ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತಿರುವ ವಸತಿಯ ಆಸ್ತಿ
• NRP ಟ್ರಾನ್ಸಾಕ್ಷನ್ ಹೊರತುಪಡಿಸಿ ನಿರ್ಮಾಣದಲ್ಲಿರುವ ಆಸ್ತಿ
• ಕೈಗಾರಿಕಾ ಆಸ್ತಿ
• ಶಾಲೆಗಳು ಅಥವಾ ವಸತಿ ನಿಲಯಗಳು
• ಹೋಟೆಲ್
ಫೋರ್‌ಕ್ಲೋಸರ್ ಸ್ಟೇಟ್ಮೆಂಟ್ ವಿತರಿಸಲು 12 ಕೆಲಸದ ದಿನಗಳ TAT ಬೇಕಾಗುತ್ತವೆ.
ಅಂತಹ ವಿಷಯಗಳಿಗೆ ನೀವು ಈ ಕೆಳಗೆ ಕೊಡಲಾದ ಸಂಬಂಧಿಸಿದ ವ್ಯಕ್ತಿಗಳನ್ನು ಸಂಪರ್ಕಿಸಬೇಕು:
ಉತ್ಪನ್ನ | ಕಾಂಟಾಕ್ಟ್ ಪರ್ಸನ್ | ಮೊಬೈಲ್ ನಂಬರ್ | ಇಮೇಲ್ ಐಡಿ |
---|---|---|---|
ಹೋಮ್ ಲೋನ್ (ವಾಯುವ್ಯ) | ಜಸ್ಪ್ರೀತ್ ಚಡ್ಡಾ | 9168360494 | jaspreet.chadha@bajajfinserv.in |
ಹೋಮ್ ಲೋನ್ (ಆಗ್ನೇಯ) | ಫ್ರಾನ್ಸಿಸ್ ಜೋಬಾಯ್ | 9962111775 | francis.jobai@bajajfinserv.in |
ಗ್ರಾಮೀಣ ಲೋನ್ | ಕುಲದೀಪ್ ಲೋರಿ | 7722006833 | kuldeep.lowry@bajajfinserv.in |
ಆಸ್ತಿ ಮೇಲಿನ ಲೋನ್ | ಪಂಕಜ್ ಗುಪ್ತಾ | 7757001144 | pankaj.gupta@bajajfinserv.in |
ಲೀಸ್ ಬಾಡಿಗೆ ರಿಯಾಯಿತಿ | ವಿಪಿನ್ ಆರೋರಾ | 9765494858 | vipin.arora@bajajfinserv.in |
ಡೆವಲಪರ್ ಫೈನಾನ್ಸ್ | ದುಶ್ಯಂತ್ ಪೋದ್ದಾರ್ | 9920090440 | dushyant.poddar@bajajfinserv.in |
ವೃತ್ತಿಪರ ಲೋನ್‌ಗಳು | ನೀರವ್ ಕಪಾಡಿಯಾ | 9642722000 | nirav.kapadia@bajajfinserv.in |