ಆಗಾಗ ಕೇಳುವ ಪ್ರಶ್ನೆಗಳು
ಮರುಪಾವತಿಯನ್ನು ಆರಾಮವಾಗಿ ಯೋಜಿಸಲು ಲೋನ್ ಪಡೆಯುವ ಮೊದಲು ನಿಮ್ಮ ಇಎಂಐ ಗಳನ್ನು ಲೆಕ್ಕ ಹಾಕುವುದು ಉತ್ತಮ ಆಲೋಚನೆಯಾಗಿದೆ. ನೀವು ಇದನ್ನು ಮಾನ್ಯುಯಲ್ ಆಗಿ ಮಾಡಬಹುದಾದರೆ, ಇನ್ಸ್ಟಾ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಮೊತ್ತವನ್ನು ನಿಖರವಾಗಿ ಅಂದಾಜು ಮಾಡಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಇಎಂಐ ತಿಳಿದುಕೊಳ್ಳಲು ಲೋನ್ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ಆಯ್ಕೆಮಾಡಿ.
ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಮಾಸಿಕ ಕಂತುಗಳನ್ನು ಲೆಕ್ಕ ಹಾಕಲು ಗಣಿತದ ಸರಳ ಸೂತ್ರವೊಂದನ್ನು ಬಳಸುತ್ತದೆ. ಆ ಸೂತ್ರವು ಹೀಗಿದೆ:
E = P*r*(1+r)^n/((1+r)^n-1) ಇಲ್ಲಿ,
E ಎಂದರೆ EMI
ಪಿ ಎಂದರೆ ಸಾಲದ ಅಸಲು ಮೊತ್ತ,
r ಎಂದರೆ ಮಾಸಿಕವಾಗಿ ಲೆಕ್ಕ ಹಾಕಲಾಗುವ ಬಡ್ಡಿ ದರ, ಮತ್ತು
n ಎಂದರೆ ಕಾಲಾವಧಿ/ಅವಧಿ ತಿಂಗಳುಗಳಲ್ಲಿ
ನಿಮ್ಮ ಬ್ಯಾಂಕಿನೊಂದಿಗೆ ನಾಚ್ ಮ್ಯಾಂಡೇಟ್ ಸೆಟಪ್ ಮಾಡುವ ಮೂಲಕ ನೀವು ಇಎಂಐ ಗಳ ಮೂಲಕ ನಿಮ್ಮ ಇನ್ಸ್ಟಾ ಪರ್ಸನಲ್ ಲೋನನ್ನು ಮರುಪಾವತಿ ಮಾಡಬಹುದು.
ನಿಮ್ಮ ಲೋನ್ ಇಎಂಐ ಗಳನ್ನು ಕಡಿಮೆ ಮಾಡಲು ಮತ್ತು ನಿಮ್ಮ ವೆಚ್ಚಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೀವು ತೆಗೆದುಕೊಳ್ಳಬಹುದಾದ ಕೆಲವು ಸರಳ ಹಂತಗಳು:
- ದೀರ್ಘಾವಧಿಯಲ್ಲಿ ಲೋನಿನ ವೆಚ್ಚವನ್ನು ವಿಸ್ತರಿಸಲು ಮತ್ತು ಸಣ್ಣ ಮಾಸಿಕ ಪಾವತಿಗಳನ್ನು ಮಾಡಲು ದೀರ್ಘ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ.
- ಕಡಿಮೆ ಬಡ್ಡಿ ದರವನ್ನು ಪಡೆಯುವ ಬಗ್ಗೆ ಲೋನ್ ಒದಗಿಸುವವರೊಂದಿಗೆ ಮಾತನಾಡಿ.
- ಕೈಗೆಟಕುವ ಬಡ್ಡಿ ದರಗಳಿಂದ ಪ್ರಯೋಜನ ಪಡೆಯಲು ಹೆಚ್ಚಿನ ಸಿಬಿಲ್ ಸ್ಕೋರ್ ನಿರ್ವಹಿಸಿ.
ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು ಹೀಗಿವೆ:
- ಇಎಂಐ ಲೆಕ್ಕಾಚಾರವನ್ನು ತಕ್ಷಣವೇ ಒದಗಿಸುತ್ತದೆ.
- ತಪ್ಪುಗಳ ಅವಕಾಶಗಳನ್ನು ಕಡಿಮೆ ಮಾಡುತ್ತದೆ.
- ಇಎಂಐ ಲೆಕ್ಕಾಚಾರವನ್ನು ಬಳಸಿಕೊಂಡು ಸೂಕ್ತ ಮರುಪಾವತಿ ಶೆಡ್ಯೂಲ್ ಸ್ಥಾಪಿಸಲು ಸಹಾಯ ಮಾಡುತ್ತದೆ.
- ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಋಣಾತ್ಮಕ ಪರಿಣಾಮ ಬೀರದೆ ಮರುಪಾವತಿಸಬಹುದಾದ ಲೋನ್ ಮೊತ್ತವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ.