ಪರ್ಸನಲ್ ಲೋನ್‌ಗಳ ಮೇಲೆ GST ಯ ಪರಿಣಾಮ ಏನು?
ಭಾರತ ಸರ್ಕಾರವು ಜುಲೈ 1, 2017 ರಂದು ಜಿಎಸ್‌ಟಿ ಯನ್ನು (ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್) ಜಾರಿಗೊಳಿಸಿತು. ಈ ನಿಯಮಾವಳಿಯು ಭಾರತದಲ್ಲಿ ಮಾರಾಟವಾದ ಅಥವಾ ಒದಗಿಸಲಾದ ಎಲ್ಲಾ ಸರಕು ಮತ್ತು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಪರ್ಸನಲ್ ಲೋನ್ ಕೂಡ ಅವುಗಳಲ್ಲೊಂದು. ಈ ಲೋನ್‌ಗಳು ತುಂಬಾ ಜನಪ್ರಿಯವಾಗಿರುವ ಕಾರಣ ಹಾಗೂ ನಿರೀಕ್ಷಿತ ಅಥವಾ ತುರ್ತು ಅವಶ್ಯಕತೆಗಳಿಗಾಗಿ ನೀವು ಇದಕ್ಕೆ ಅರ್ಜಿ ಸಲ್ಲಿಸಬಹುದಾದ್ದರಿಂದ, ನಿಮ್ಮ ಲೋನ್ ಪ್ರಕ್ರಿಯೆ ಮೇಲೆ ಜಿಎಸ್‌ಟಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಪರ್ಸನಲ್ ಲೋನ್: ಜಿಎಸ್‌ಟಿಗಿಂತ ಮೊದಲು ಮತ್ತು ನಂತರ
|
ಅನುಷ್ಠಾನಕ್ಕೆ ಮೊದಲು |
ಅನುಷ್ಠಾನದ ನಂತರ |
ಫೀಚರ್‌ಗಳು, ಬಡ್ಡಿ ದರಗಳು ಮತ್ತು ಇಎಂಐಗಳು |
ನೀವು ಆಯ್ಕೆ ಮಾಡಿದ ಸಾಲದಾತರ ಮೇಲೆ ಅವಲಂಬಿತ |
ಬದಲಾವಣೆ ಇಲ್ಲ |
ಪ್ರಕ್ರಿಯಾ ಶುಲ್ಕಗಳು |
ಪ್ರಕ್ರಿಯಾ ಶುಲ್ಕದ ಮೇಲೆ 15% ಸೇವಾ ತೆರಿಗೆ |
ಪ್ರಕ್ರಿಯಾ ಶುಲ್ಕದ ಮೇಲೆ 15% ಜಿಎಸ್‌ಟಿ |
ಅರ್ಹತಾ ಮಾನದಂಡ |
ನೀವು ಆಯ್ಕೆ ಮಾಡಿದ ಸಾಲದಾತರ ಮೇಲೆ ಅವಲಂಬಿತ |
ಬದಲಾವಣೆ ಇಲ್ಲ |
ಡಾಕ್ಯುಮೆಂಟೇಶನ್ ಅಗತ್ಯವಿದೆ |
ಜಿಎಸ್‌ಟಿ ಪ್ರಮಾಣಪತ್ರವಿಲ್ಲ |
ಜಿಎಸ್‌ಟಿ ಸರ್ಟಿಫಿಕೇಟ್ ಬೇಕಾಗುತ್ತದೆ (ಬಿಸಿನೆಸ್ ಲೋನ್ ಪಡೆಯುವ ಸ್ವಯಂ-ಉದ್ಯೋಗಿ ಸಾಲಗಾರರಿಗೆ, ಒಂದು ವಿಧದ ಪರ್ಸನಲ್ ಲೋನ್) |
ಪರ್ಸನಲ್ ಲೋನ್‌ಗಳ ಮೇಲಿನ GST - ಅನುಕೂಲ ಮತ್ತು ಅನಾನುಕೂಲಗಳು
ಅನುಕೂಲಗಳು
- ಬಜಾಜ್ ಫಿನ್‌ಸರ್ವ್ ನಾಮಮಾತ್ರದ ಪ್ರಕ್ರಿಯಾ ಶುಲ್ಕಗಳನ್ನು ವಿಧಿಸುತ್ತದೆ. ಆದ್ದರಿಂದ, ಜಿಎಸ್‌ಟಿಯೊಂದಿಗೆ ಕೂಡ, ನಿಮ್ಮ ಔಟ್‌ಗೋ ಕನಿಷ್ಠವಾಗಿರುತ್ತದೆ
- ಜಿಎಸ್‌ಟಿ ನಂತರ, ಸಾಲಗಾರರು ಅನೇಕ ತೆರಿಗೆಗಳ ಬದಲಾಗಿ ಒಂದು ತೆರಿಗೆಯನ್ನು ಮಾತ್ರ ಪಾವತಿಸಬೇಕಾಗುತ್ತದೆ
- ನೀವು ಒಂದು ಬಾರಿ ಮಾತ್ರ ಜಿಎಸ್‌ಟಿ ಪಾವತಿಸಬೇಕಾಗುತ್ತದೆ
ಅನಾನುಕೂಲಗಳು
- ಜಿಎಸ್‌ಟಿ ನಂತರ ಪಾವತಿಸಬೇಕಾದ ತೆರಿಗೆಯನ್ನು 3% ಹೆಚ್ಚಿಸಿದೆ, ಇದರಿಂದಾಗಿ ಸಾಲದ ವೆಚ್ಚವನ್ನು ಹೆಚ್ಚಿಸುತ್ತದೆ
ತೆರಿಗೆಯನ್ನು ಆಕರ್ಷಿಸುವ ಪರ್ಸನಲ್ ಲೋನ್ ಶುಲ್ಕಗಳು
ಬಜಾಜ್ ಫಿನ್‌ಸರ್ವ್‌ನಿಂದ ಲೋನ್ ತೆಗೆದುಕೊಂಡಾಗ ಈ ಕೆಳಗಿನ ಪರ್ಸನಲ್ ಲೋನ್ ಶುಲ್ಕಗಳ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ.
- ಬೌನ್ಸ್ ಶುಲ್ಕಗಳು
- ಪ್ರಕ್ರಿಯಾ ಶುಲ್ಕಗಳು
- ಫೋರ್‌ಕ್ಲೋಸರ್ ಶುಲ್ಕಗಳು
- ದಂಡದ ಬಡ್ಡಿ
- ಲೋನ್ ಅಕೌಂಟ್ ಸ್ಟೇಟ್ಮೆಂಟ್ ಶುಲ್ಕಗಳು
- ಔಟ್‌ಸ್ಟೇಷನ್ ಕಲೆಕ್ಷನ್ ಮೇಲಿನ ಶುಲ್ಕಗಳು
- ಭಾಗಶಃ ಮುಂಪಾವತಿ ಶುಲ್ಕಗಳು
ಉದಾಹರಣೆಗೆ, ನೀವು ಭಾಗಶಃ ಮುಂಪಾವತಿ ಮಾಡಲು ಬಯಸಿದರೆ, ಅದಕ್ಕೆ ಮುಂಚೆ ಬಜಾಜ್ ಫಿನ್‌ಸರ್ವ್ ಪಾರ್ಟ್-ಪ್ರೀಪೇಮೆಂಟ್ ಕ್ಯಾಲ್ಕುಲೇಟರ್ ಬಳಸಿ. ಏಕೆಂದರೆ ಅದು ಅನ್ವಯವಾಗುವ ಜಿಎಸ್‌ಟಿಯನ್ನೂ ಒಳಗೊಂಡಿರುತ್ತದೆ.
ಸಂಪೂರ್ಣ ಮರುಪಾವತಿಯನ್ನು ಪ್ಲಾನ್ ಮಾಡಲು, ಲೋನ್‌ಗೆ ಅಪ್ಲೈ ಮಾಡುವ ಮೊದಲು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ, ಹಾಗೂ ನಿಮ್ಮ ಮರುಪಾವತಿ ಪ್ರಯಾಣವು ಸುಗಮ ಮತ್ತು ಸುಲಭವಾಗಿರುವಂತೆ ನೋಡಿಕೊಳ್ಳಿ.