image
Personal Loan

ಕಡಿಮೆ ಕ್ರೆಡಿಟ್‌ ಉಳ್ಳವರಿಗೆ ಖಾತರಿದಾರ-ರಹಿತ ಪರ್ಸನಲ್ ಲೋನ್‌ಗಳು

ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಖಾತರಿದಾರರು ಇಲ್ಲದೆ ಕಡಿಮೆ ಕ್ರೆಡಿಟ್‌ಗಾಗಿ ಪರ್ಸನಲ್ ಲೋನ್ ಪಡೆಯುವುದು ಹೇಗೆ?

ಪರ್ಸನಲ್ ಲೋನ್ ಅನುಮೋದನೆಗೆ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಾಗುತ್ತದೆ. ಲೋನ್‌ ಅನ್ನು ಬೇಗನೇ ಮಂಜೂರು ಮಾಡಬೇಕಾದರೆ ಹಣಕಾಸು ಸಂಸ್ಥೆಗಳು 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ನಿರೀಕ್ಷಿಸುತ್ತವೆ.

ಕಳಪೆ ಕ್ರೆಡಿಟ್ ಸ್ಕೋರ್ ಹೊಂದಿರುವವರು ಖಾತರಿದಾರರ ಸಹಾಯ ಪಡೆಯಬಹುದು. ಒಂದು ವೇಳೆ ಖಾತರಿದಾರ ಲಭ್ಯವಿಲ್ಲದಿದ್ದರೆ, ಅವರು ಯಾವುದೇ ಖಾತರಿದಾರ ಇಲ್ಲದೆ ಪರ್ಸನಲ್ ಲೋನ್ ಪಡೆಯಲು ಇತರ ಪರ್ಯಾಯ ಕ್ರಮಗಳನ್ನು ಆಯ್ಕೆ ಮಾಡಬಹುದು.

ಖಾತರಿದಾರ-ರಹಿತ ಲೋನ್‌ಗಳನ್ನು ಪಡೆಯುವ ಕ್ರಮಗಳು

ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಮತ್ತು ಯಾವುದೇ ಖಾತರಿದಾರ ಇಲ್ಲದಿದ್ದರೆ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಿ –

  1. ಸಹ-ಅರ್ಜಿದಾರರೊಂದಿಗೆ ಅಪ್ಲಿಕೇಶನ್ ಸಲ್ಲಿಸಿ
    ನೀವು ಕಳಪೆ ಕ್ರೆಡಿಟ್ ಹೊಂದಿದ್ದರೆ ಸಹ-ಅರ್ಜಿದಾರರು ಲೋನ್ ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸಬಹುದು. ಇದು ನಿಮ್ಮ ಲೋನ್ ಅರ್ಹತೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮಿಬ್ಬರ ಒಟ್ಟಾರೆ ಆದಾಯ ಹೆಚ್ಚಾಗುವುದರಿಂದ ಮರುಪಾವತಿ ಡೀಫಾಲ್ಟ್ ಆಗುವ ಅಪಾಯ ಕಡಿಮೆಯಾಗುತ್ತದೆ.
  2. ಸಾಕಷ್ಟು ಆದಾಯವನ್ನು ತೋರಿಸಿ
    ನೇರ ಸಾಲದಾತರಿಂದ, ಖಾತರಿದಾರರು ಇಲ್ಲದೆ ಲೋನ್‌ ಅನ್ನು ಮರುಪಾವತಿಸಲು ಸಾಕಷ್ಟು ಆದಾಯವಿದೆ ಎಂದು ತೋರಿಸಲು ನಿಮ್ಮ ಆದ್ಯತೆಯ ಹಣಕಾಸು ಸಂಸ್ಥೆಗೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳನ್ನು ಒದಗಿಸಿ. ಹೆಚ್ಚಿನ ಆದಾಯವು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಬೆಂಬಲಿಸುತ್ತದೆ ಮತ್ತು ಅನುಮೋದನೆಯ ಅವಕಾಶಗಳನ್ನು ಸುಧಾರಿಸುತ್ತದೆ. ನೀವು ತ್ವರಿತ ಪರ್ಸನಲ್ ಲೋನ್ ಆಗಿ ಪಡೆಯಬಹುದಾದ ಕ್ರೆಡಿಟ್ ಮೊತ್ತವನ್ನು ನಿರ್ಧರಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.
  3. ಕಡಿಮೆ ಲೋನ್ ಮೊತ್ತವನ್ನು ಆಯ್ಕೆ ಮಾಡಿ
    ನೀವು ಕಳಪೆ ಕ್ರೆಡಿಟ್ ಸ್ಕೋರ್ ಹೊಂದಿರುವಾಗ ಅನುಮೋದನೆಯ ಅವಕಾಶ ಹೆಚ್ಚಿಸಿಕೊಳ್ಳಲು ಕಡಿಮೆ ಮೊತ್ತದ ಸಾಲಕ್ಕೆ ಅಪ್ಲಿಕೇಶನ್‌ ಸಲ್ಲಿಸಿ. ಕಡಿಮೆ CIBIL ಸ್ಕೋರ್ ಹೊಂದಿರುವಾಗ ದೊಡ್ಡ ಮೊತ್ತದ ಲೋನ್‌ ಕೇಳಿದರೆ ಹಣಕಾಸು ಸಂಸ್ಥೆಗೆ ಅದು ಅಪಾಯದ ಸೂಚನೆಯಂತೆ ಕಂಡು, ಅವರು ಲೋನ್‌ ಅಪ್ಲಿಕೇಶನ್‌ ಅನ್ನು ತಿರಸ್ಕರಿಸಬಹುದು.
  4. ಪರ್ಯಾಯ ಸಾಲದಾತರನ್ನು ಹುಡುಕಿ
    ಖಾತರಿದಾರ-ರಹಿತ ಲೋನಿನ ಅನುಮೋದನೆಗೆ ಹಲವಾರು ಹಣಕಾಸು ಸಂಸ್ಥೆಗಳು ಕ್ರೆಡಿಟ್ ಸ್ಕೋರ್ ಮೇಲೆ ಹೆಚ್ಚಿನ ಗಮನ ಹರಿಸುತ್ತವೆ. ಖಾತರಿದಾರ-ರಹಿತ ಪರ್ಸನಲ್ ಲೋನ್ ಅನುಮೋದನೆಗೆ ಮೂಲಭೂತ ಅರ್ಹತೆಗಳನ್ನು ಮಾತ್ರ ಕೇಳುವ ಸಾಲದಾತರನ್ನು ಹುಡುಕಿ.
  5. ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಿ
    ಹೆಚ್ಚಿನ ಕ್ರೆಡಿಟ್ ಸ್ಕೋರ್‌ನಿಂದ ಪರ್ಸನಲ್ ಲೋನ್‌ಗಳಂತಹ ಸುರಕ್ಷಿತವಲ್ಲದ ಲೋನ್‌ಗಳಿಗೆ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚುತ್ತದೆ. ನಿಮ್ಮ CIBIL ಸ್ಕೋರ್ ಸುಧಾರಿಸಿಕೊಳ್ಳುವ ಮೂಲಕ ನಿಮ್ಮ ಲೋನ್ ಅರ್ಹತೆ ಹೆಚ್ಚಿಸಲು ಕ್ರಮ ಕೈಗೊಳ್ಳಿ.

ಕ್ರೆಡಿಟ್ ಸ್ಕೋರ್ ಸುಧಾರಿಸುವ ಮಾರ್ಗಗಳು

ನಿಮ್ಮ ಕ್ರೆಡಿಟ್ ಸ್ಕೋರನ್ನು ಸುಧಾರಿಸಲು ಈ ಕೆಳಗಿನ ಕ್ರಮಗಳನ್ನು ಪಾಲಿಸಿ –

  • ಲೋನ್‌ಗಳಿಗೆ ದೀರ್ಘ ಅವಧಿಯನ್ನು ಆಯ್ಕೆ ಮಾಡಿ
    EMI ಮೊತ್ತವನ್ನು ಕಡಿಮೆ ಮಾಡಲು ಮತ್ತು ಮರುಪಾವತಿ ಮಾಡಲಾಗದ ಸಂದರ್ಭ ಬರದಂತೆ ನೋಡಿಕೊಳ್ಳಲು, ಲೋನ್ ಪಡೆಯುವಾಗ ದೀರ್ಘಾವಧಿಯನ್ನು ಆಯ್ಕೆ ಮಾಡಿ. ಇದು EMI ಮೊತ್ತವನ್ನು ಕಡಿಮೆ ಮಾಡುತ್ತದೆ ಮತ್ತು ಮರುಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ, ಇದರಿಂದ ಲೋನ್‌ಗಳ ಮರುಪಾವತಿ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಣೆ ಸುಲಭವಾಗುತ್ತದೆ.
  • ಒಂದೇ ಸಲ ಹಲವಾರು ಹಣಕಾಸು ಸಂಸ್ಥೆಗಳಲ್ಲಿ ಲೋನ್‌ಗೆ ಅಪ್ಲಿಕೇಶನ್‌ ಹಾಕಬೇಡಿ
    ಒಂದೇ ಸಮಯದಲ್ಲಿ ವಿವಿಧ ಹಣಕಾಸು ಸಂಸ್ಥೆಗಳ ಬಳಿ ಲೋನ್‌ಗೆ ಅಪ್ಲಿಕೇಶನ್‌ ಹಾಕುವುದನ್ನು ತಪ್ಪಿಸಿ. ನೀವು ಲೋನ್‌ಗೆ ಅಪ್ಲಿಕೇಶನ್‌ ಹಾಕಿದಾಗ, ಸಾಲದಾತರು ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ವಿಚಾರಿಸುತ್ತಾರೆ. ಅಂತಹ ಪ್ರತಿಯೊಂದು ವಿಚಾರಣೆಯೂ ನಿಮ್ಮ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ಹಲವಾರು ಹಣಕಾಸು ಸಂಸ್ಥೆಗಳು ನಿಮ್ಮ ಕ್ರೆಡಿಟ್ ಪರಿಶೀಲಿಸಿದಾಗ, ನಿಮ್ಮ ಕ್ರೆಡಿಟ್ ಸ್ಕೋರ್ ಗಮನಾರ್ಹವಾಗಿ ಕಡಿಮೆಯಾಗುತ್ತದೆ.
  • ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿ
    ಮರುಪಾವತಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇರದಂತೆ ನೋಡಿಕೊಳ್ಳಲು ಮತ್ತು ಕ್ರಮೇಣವಾಗಿ ನಿಮ್ಮ CIBIL ಸ್ಕೋರನ್ನು ಹೆಚ್ಚಿಸಲು, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಲೋನ್ EMI ಗಳಂತಹ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿ.
  • ಕ್ರೆಡಿಟ್ ಇತಿಹಾಸ ಹೆಚ್ಚಿಸಿ
    ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಹೆಚ್ಚಿಸಲು ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ವಹಿಸಿ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
  • ಕ್ರೆಡಿಟ್ ಬಳಕೆಯ ಅನುಪಾತ ಕಡಿಮೆ ಇರಲಿ
    ಕ್ರೆಡಿಟ್ ಬಳಕೆಯ ಅನುಪಾತವು ಕ್ರೆಡಿಟ್ ಸ್ಕೋರ್‌ ಮೇಲೆ ನೇರ ಪರಿಣಾಮ ಬೀರುತ್ತದೆ. ನೀವು ತೆಗೆದುಕೊಳ್ಳುವ ಲೋನ್‌ ನಿಮಗೆ ಲಭ್ಯವಿರುವ ಕ್ರೆಡಿಟ್ ಮಿತಿಯ 50% ಗಿಂತ ಕಡಿಮೆ ಇರಲಿ. ಹಾಗೆ ಮಾಡಿದಾಗ ನೀವು "ಸಾಲಬಾಕ" ಎನಿಸಿಕೊಳ್ಳುವುದಿಲ್ಲ ಮತ್ತು ನಿಮ್ಮ CIBIL ಸ್ಕೋರ್ ಸಹ ಸುಧಾರಿಸುತ್ತದೆ.
  • ನಿಮ್ಮ ಕ್ರೆಡಿಟ್ ವರದಿಯಲ್ಲಿ ತಪ್ಪುಗಳನ್ನು ಪರಿಷ್ಕರಿಸಿ
    Check if there are any discrepancies in your credit report and accordingly rectify them with the respective credit rating agency.
    ಖಾತರಿದಾರ-ರಹಿತ ಪರ್ಸನಲ್ ಲೋನ್‌ಗಳನ್ನು ಮಂಜೂರು ಮಾಡಲು 750ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅತ್ಯಗತ್ಯ. ನಿಮ್ಮ ಕ್ರೆಡಿಟ್‌ಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿ CIBIL ಸ್ಕೋರನ್ನು ಸುಧಾರಿಸುವ ಮೂಲಕ ಲೋನ್‌ ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸಿಕೊಳ್ಳಿ.