ಪರ್ಸನಲ್ ಲೋನ್ ನಿಮ್ಮ ಲೋನ್‌ಗಳನ್ನು ಒಟ್ಟುಗೂಡಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಿರಿ
ಕ್ರೆಡಿಟ್ ಕಾರ್ಡ್‌ಗಳು ಬಳಕೆದಾರರಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವೇದಿಕೆಗಳಲ್ಲಿ ಸುಲಭವಾದ ವಹಿವಾಟು ಒದಗಿಸುತ್ತವೆ. ಜೊತೆಗೆ ಅವು ಹೆಚ್ಚು ಖರ್ಚು ಮಾಡಲು ಪ್ರೇರೇಪಿಸಬಹುದು. ಇದು ಕ್ರೆಡಿಟ್ ಕಾರ್ಡ್ ಬಾಕಿ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಸಾಲಗಾರರು ಬಾಕಿ ಮರುಪಾವತಿಸಲು ಹೆಚ್ಚು ಖರ್ಚು ಮಾಡಬೇಕಾದ ಕಾರಣ, ಉಳಿತಾಯ ಹೆಚ್ಚಿಸುವುದು ಮತ್ತು ಬೇರೆ ಹಣಕಾಸು ಗುರಿಗಳನ್ನು ತಲುಪುವುದು ಕಷ್ಟವಾಗುತ್ತದೆ.
ಅಂತಹ ಹಣಕಾಸು ಬಿಕ್ಕಟ್ಟಿನಿಂದ ಪಾರಾಗಲು ಒಂದು ಅತ್ಯುತ್ತಮ ಉಪಾಯವೆಂದರೆ ಪರ್ಸನಲ್ ಲೋನ್ ಪಡೆಯುವುದು. ತನ್ನ ತಡೆರಹಿತ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ಈ ಲೋನ್ ಹಲವಾರು ಪ್ರಯೋಜನಗಳನ್ನು ಒದಗಿಸುವುದರಿಂದ, ನೀವು ಈ ಲೋನ್ ಮೊತ್ತವನ್ನು ಬಳಸಿ ನಿಮ್ಮ ಈಗಿನ ಸಾಲಗಳನ್ನೆಲ್ಲಾ ಒಟ್ಟುಗೂಡಿಸಬಹುದು.
ಕ್ರೆಡಿಟ್ ಕಾರ್ಡ್ ಡೆಟ್ ಒಟ್ಟುಗೂಡಿಸಲು ಪರ್ಸನಲ್ ಲೋನ್
- ಅಧಿಕ-ಮೌಲ್ಯದ ಲೋನ್ ಮೊತ್ತ:
ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳು ರೂ. 35 ಲಕ್ಷದವರೆಗಿನ ಅತ್ಯಧಿಕ ಕ್ರೆಡಿಟ್ ಮೊತ್ತವನ್ನು ಒದಗಿಸುತ್ತವೆ. ಈ ಹಣದ ಅಂತಿಮ ಬಳಕೆಗೆ ಯಾವುದೇ ನಿರ್ಬಂಧವಿಲ್ಲ. ಹಾಗಾಗಿ, ಇದರ ಮೂಲಕ ನಿಮ್ಮ ಬಾಕಿ ಉಳಿದ ಲೋನ್‌ಗಳನ್ನು ಅನುಕೂಲಕರವಾಗಿ ತೀರಿಸಬಹುದು.
- ತ್ವರಿತ ಅನುಮೋದನೆ ಮತ್ತು ತ್ವರಿತ ವಿತರಣೆ:
ನೀವು ಪರ್ಸನಲ್ ಲೋನ್ ಪಡೆಯಬಹುದು-
- ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡುವುದು,
- ಅಗತ್ಯವಿರುವ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಪೂರೈಸುವುದು, ಮತ್ತು
- ಅಪ್ಲಿಕೇಶನ್ ಮೇಲೆ ತ್ವರಿತ ಅನುಮೋದನೆ ಪಡೆಯಿರಿ.
ಇದರ ವಿತರಣೆ ಪ್ರಕ್ರಿಯೆಯೂ ಅಷ್ಟೇ ತ್ವರಿತವಾಗಿರುತ್ತದೆ. ಹಾಗಾಗಿ, ಬಾಕಿ ಉಳಿದ ಕ್ರೆಡಿಟ್ ಕಾರ್ಡ್ ಸಾಲದ ಪಾವತಿಯಂತಹ ತುರ್ತು ಫಂಡಿಂಗ್‌ಗಾಗಿ ಇದು ಸೂಕ್ತ ಆಯ್ಕೆಯಾಗಿದೆ.
- ಆಕರ್ಷಕ ಬಡ್ಡಿ ದರ:
ಬಜಾಜ್ ಫಿನ್‌ಸರ್ವ್ ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ಪರ್ಸನಲ್ ಲೋನ್ ನೀಡುತ್ತದೆ, ಈ ದರಗಳು ಮಾಸಿಕ ಕಂತುಗಳನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ಲೋನ್‌ನ ಒಟ್ಟು ವೆಚ್ಚವನ್ನೂ ಕಡಿಮೆ ಮಾಡುತ್ತವೆ. ಇದು ನಿಮ್ಮ ಹಣಕಾಸಿನ ಒತ್ತಡವನ್ನು ತಪ್ಪಿಸುವ ಅನುಕೂಲಕರ ಮರುಪಾವತಿ ಶೆಡ್ಯೂಲ್ ಅನ್ನು ಖಾತ್ರಿಗೊಳಿಸುತ್ತದೆ.
- ಹೊಂದಿಕೊಳ್ಳುವ ಲೋನ್ ಅವಧಿ:
ನೀವು ನಿಮ್ಮ ಹಣಕಾಸು ಸಾಮರ್ಥ್ಯಕ್ಕೆ ತಕ್ಕಂತೆ 84 ತಿಂಗಳವರೆಗಿನ ಪರ್ಸನಲ್ ಲೋನ್ ಅವಧಿಯನ್ನು ಆಯ್ಕೆ ಮಾಡಬಹುದು. ಒಂದು ವೇಳೆ ನೀವು ಆರ್ಥಿಕವಾಗಿ ಸ್ಥಿರವಾಗಿದ್ದರೆ, ಹೆಚ್ಚಿನ ಇಎಂಐ ಇರುವ ಕಡಿಮೆ ಅವಧಿಯನ್ನು ಆಯ್ಕೆ ಮಾಡಬಹುದು; ಇಲ್ಲದಿದ್ದರೆ, ನೀವು ಕಡಿಮೆ ಮಾಸಿಕ ಕಂತುಗಳನ್ನು ಹೊಂದಿರುವ ದೀರ್ಘ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಹಣಕಾಸಿನ ಹೊರೆಯ ಯಾವುದೇ ಅವಕಾಶಗಳನ್ನು ತಪ್ಪಿಸಲು EMI ಕ್ಯಾಲ್ಕುಲೇಟರ್ ಬಳಸಿಕೊಂಡು ಅಂದಾಜು EMI ಅನ್ನು ಲೆಕ್ಕ ಹಾಕುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಕ್ರೆಡಿಟ್ ಕಾರ್ಡ್ ಲೋನ್‌ಗಳನ್ನು ಸುಲಭವಾಗಿ ಪಾವತಿಸಲು ಇದು ನಿಮಗೆ ಸಹಾಯ ಮಾಡುತ್ತದೆ.