ನಿಮ್ಮ ಪರ್ಸನಲ್ ಲೋನ್ ಮೇಲಿನ ಬಡ್ಡಿಯನ್ನು ಹೇಗೆ ಲೆಕ್ಕ ಹಾಕುವುದು ಎಂಬುದನ್ನು ತಿಳಿಯಿರಿ
ಈ ಫಾರ್ಮುಲಾವನ್ನು ಬಳಸಿಕೊಂಡು, ಪರ್ಸನಲ್ ಲೋನ್‌ಗಳ ಮೇಲೆ ಬಡ್ಡಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ನೀವು ತಿಳಿಯಬಹುದು.
ಇಎಂಐ = P x r x (1+r) ^ n / {(1+r) ^ n-1}
ಮೇಲಿನ ಫಾರ್ಮುಲಾದಲ್ಲಿ,
ಪಿ = ಅಸಲು ಮೊತ್ತ
ಆರ್ = ಅನ್ವಯವಾಗುವ ಬಡ್ಡಿ ದರ
ಎನ್= ಕಾಲಾವಧಿ (ತಿಂಗಳುಗಳಲ್ಲಿ)
ನಿಮ್ಮ ಪರ್ಸನಲ್ ಲೋನ್ ಮೇಲೆ ಇಎಂಐ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕೆಳಗಿನ ಉದಾಹರಣೆಯನ್ನು ಬಳಸಿ.
48 ತಿಂಗಳ (4 ವರ್ಷಗಳು) ಅವಧಿಗೆ 13% ಬಡ್ಡಿ ದರದಲ್ಲಿ ನೀವು ರೂ. 10 ಲಕ್ಷವನ್ನು ಪರ್ಸನಲ್ ಲೋನ್ ಆಗಿ ಪಡೆದಿದ್ದೀರಿ ಎಂದು ಭಾವಿಸಿ. ನಿಮ್ಮ ಇಎಂಐ ಅನ್ನು ಈ ರೀತಿಯಾಗಿ ಲೆಕ್ಕ ಹಾಕಲಾಗುತ್ತದೆ:
P = ರೂ. 10,00,000
ಆರ್ = 13%
ಎನ್ = 48 ತಿಂಗಳು
ಇಎಂಐ = 10,00,000 x 13 x (1+13)^48 / {(1+13)^48-1}
EMI =
- ಈ ಪರ್ಸನಲ್ ಲೋನ್‌ನ ಒಟ್ಟು ಪಾವತಿಸಬೇಕಾದ ಮೊತ್ತ ರೂ. 10,00,000 + ರೂ. 26,827* 48 ತಿಂಗಳು = ರೂ. 12,87,696.
- ಅಸಲು ಲೋನ್ ಮೊತ್ತ ರೂ. 10 ಲಕ್ಷ
- ಪಾವತಿಸಬೇಕಾದ ಬಡ್ಡಿ ರೂ. 2,87,696.
ನಿಮ್ಮ ಪರ್ಸನಲ್ ಲೋನ್ ಮೇಲಿನ ಬಡ್ಡಿ ದರದ ಮೇಲೆ ಪರಿಣಾಮ ಬೀರುವ ಅಂಶಗಳು
ನಿಮ್ಮ ಪರ್ಸನಲ್ ಲೋನ್ ಬಡ್ಡಿ ದರ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ, ಅವುಗಳೆಂದರೆ:
ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್
ಸಿಬಿಲ್ ಸ್ಕೋರ್ ಸಾಲಗಾರರ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸುತ್ತದೆ. ಆದ್ದರಿಂದ, ಕೈಗೆಟಕುವ ಬಡ್ಡಿ ದರಗಳೊಂದಿಗೆ ದೊಡ್ಡ ಮೊತ್ತದ ಲೋನ್ ಪಡೆಯಲು ಉತ್ತಮ ಕ್ರೆಡಿಟ್ ಸ್ಕೋರ್ ನಿಮಗೆ ಸಹಾಯ ಮಾಡುತ್ತದೆ.
ತಿಂಗಳ ಆದಾಯ
ನಿಮ್ಮ ಪರ್ಸನಲ್ ಲೋನ್ ಮೇಲಿನ ಬಡ್ಡಿ ದರವನ್ನು ನಿರ್ಧರಿಸುವಾಗ ನಿಮ್ಮ ಮಾಸಿಕ ಆದಾಯವು ಇನ್ನೊಂದು ನಿರ್ಧಾರದ ಅಂಶವಾಗಿದೆ.
ಲೋನ್ ಮೊತ್ತ
ಉತ್ತಮ ಸಿಬಿಲ್ ಸ್ಕೋರ್ ಮತ್ತು ಮರುಪಾವತಿ ಇತಿಹಾಸವು ಸಮಂಜಸವಾದ ಬಡ್ಡಿ ದರದೊಂದಿಗೆ ಗಣನೀಯ ಮೊತ್ತವನ್ನು ಪಡೆಯುವ ಸಾಧ್ಯತೆಗಳನ್ನು ಸುಧಾರಿಸುತ್ತದೆ.
ನೀವು ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಅರ್ಜಿದಾರರಾಗಿದ್ದೂ, ನಿಮ್ಮ ಹಿಂದಿನ ಲೋನ್‌ಗಳನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ್ದರೇ, ಮತ್ತು ಉತ್ತಮ ಮಾಸಿಕ ಆದಾಯವನ್ನು ಹೊಂದಿದ್ದರೇ, ನೀವು ಸುಲಭವಾಗಿ ವೈಯಕ್ತಿಕ ಲೋನ್‌ಗೆ ಅರ್ಹರಾಗಬಹುದು.
ಬಜಾಜ್ ಫಿನ್‌ಸರ್ವ್ ಆಕರ್ಷಕ ಬಡ್ಡಿದರಗಳು ಮತ್ತು ಅನುಮೋದನೆಯ 24 ಗಂಟೆಗಳ* ಒಳಗೆ ತ್ವರಿತ ವಿತರಣೆ ಸೌಲಭ್ಯವಿರುವ ಪರ್ಸನಲ್ ಲೋನ್ ಒದಗಿಸುತ್ತದೆ. ನಮ್ಮ ಆನ್ಲೈನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ ಮತ್ತು ನಿಮ್ಮ ಲೋನ್ ಇಎಂಐ ಮತ್ತು ಬಡ್ಡಿದರವನ್ನು ಕೆಲವೇ ನಿಮಿಷಗಳಲ್ಲಿ ತಿಳಿಯಿರಿ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ