ಬಡ್ಡಿ ದರ ಮತ್ತು ಅನ್ವಯವಾಗುವ ಶುಲ್ಕಗಳು
ಶುಲ್ಕದ ವಿಧಗಳು | ಅನ್ವಯವಾಗುವ ಶುಲ್ಕಗಳು |
ಬಡ್ಡಿ ದರ |
ವರ್ಷಕ್ಕೆ 9.50% ರಿಂದ ವರ್ಷಕ್ಕೆ 28%. |
ಪ್ರಕ್ರಿಯಾ ಶುಲ್ಕಗಳು |
ಲೋನ್ ಮೊತ್ತದ 0.12% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು), ಕನಿಷ್ಠ ರೂ. 99 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಮತ್ತು ಗರಿಷ್ಠ ರೂ. 600 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಸ್ಟ್ಯಾಂಪ್ ಡ್ಯೂಟಿ (ಆಯಾ ರಾಜ್ಯದ ಪ್ರಕಾರ) |
ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ ಮತ್ತು ಲೋನ್ ಮೊತ್ತದಿಂದ ಮುಂಗಡವಾಗಿ ಕಡಿತಗೊಳಿಸಲಾಗುತ್ತದೆ |
ನಗದು ನಿರ್ವಹಣಾ ಶುಲ್ಕಗಳು |
ಇಲ್ಲ |
ದಂಡದ ಬಡ್ಡಿ |
ಬಾಕಿ ಉಳಿಕೆಯ ಮೇಲೆ ವರ್ಷಕ್ಕೆ 3% ದಂಡದ ಬಡ್ಡಿ ಮಾರ್ಜಿನ್/ ದರವು ಬಡ್ಡಿ ದರದ ಸ್ಲ್ಯಾಬ್‌ಗಿಂತ ಹೆಚ್ಚಾಗಿರುತ್ತದೆ. ಬಾಕಿ ಉಳಿಕೆಗಳ ಮರುಪಾವತಿಯಲ್ಲಿ ಡೀಫಾಲ್ಟ್ ಸಂದರ್ಭದಲ್ಲಿ ಇದು ಅನ್ವಯವಾಗುತ್ತದೆ/ ಶುಲ್ಕ ವಿಧಿಸಲಾಗುತ್ತದೆ. |
ಭಾಗಶಃ ಮುಂಪಾವತಿ ಶುಲ್ಕಗಳು |
ಇಲ್ಲ |
ಫೋರ್‌ಕ್ಲೋಸರ್ ಶುಲ್ಕಗಳು |
ಇಲ್ಲ |
ಹರಾಜು ಶುಲ್ಕಗಳು |
ಫಿಸಿಕಲ್ ನೋಟೀಸ್‌ಗೆ ಶುಲ್ಕ - ಪ್ರತಿ ನೋಟೀಸ್‌ಗೆ ರೂ. 40 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
*ಫೋರ್‌ಕ್ಲೋಸರ್ ಶುಲ್ಕಗಳು ಶೂನ್ಯ. ಆದಾಗ್ಯೂ, ಬುಕಿಂಗ್ ಮಾಡಿದ 7 ದಿನಗಳ ಒಳಗೆ ನೀವು ಲೋನನ್ನು ಮುಚ್ಚಿದರೆ, ನೀವು ಕನಿಷ್ಠ 7 ದಿನಗಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ರಾಜ್ಯ-ನಿರ್ದಿಷ್ಟ ಕಾನೂನುಗಳಿಗೆ ಅನುಗುಣವಾಗಿ ಎಲ್ಲಾ ಶುಲ್ಕಗಳ ಮೇಲೆ ಹೆಚ್ಚುವರಿ ಸೆಸ್ ಅನ್ವಯವಾಗುತ್ತದೆ ಎಂಬುದನ್ನು ಗಮನಿಸಿ.
ಗೋಲ್ಡ್ ಲೋನ್‌ಗಳ ಮೇಲೆ ಅನ್ವಯವಾಗುವ ಬಡ್ಡಿ ದರಗಳು ಕ್ರಿಯಾತ್ಮಕವಾಗಿವೆ ಮತ್ತು ಬಾಹ್ಯ ಅಂಶಗಳಿಂದಾಗಿ ಆಗಾಗ್ಗೆ ಬದಲಾಗುತ್ತವೆ.
ನೀವು ಹುಡುಕುತ್ತಿರುವುದು ಇನ್ನೂ ಸಿಕ್ಕಿಲ್ಲವೇ?? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.
ಆಗಾಗ ಕೇಳುವ ಪ್ರಶ್ನೆಗಳು
ಹೌದು, ನೀವು ಬಡ್ಡಿಯನ್ನು ಮಾತ್ರ ಪಾವತಿಸಲು ಆಯ್ಕೆ ಮಾಡಬಹುದು ಮತ್ತು ನಿಮ್ಮ ಮರುಪಾವತಿ ಅವಧಿಯ ಕೊನೆಯಲ್ಲಿ ಅಸಲು ಲೋನ್ ಮೊತ್ತವನ್ನು ಸೆಟಲ್ ಮಾಡಬಹುದು. ಬಜಾಜ್ ಫಿನ್‌ಸರ್ವ್ ಗೋಲ್ಡ್ ಲೋನ್‌ಗೆ ಮೂರು ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತದೆ:
- ಮಾಸಿಕ, ದ್ವಿ-ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಬಡ್ಡಿ ಮೊತ್ತವನ್ನು ಮಾತ್ರ ಪಾವತಿಸಿ ಮತ್ತು ಕಾಲಾವಧಿಯ ಕೊನೆಯಲ್ಲಿ ಅಸಲು ಮೊತ್ತವನ್ನು ಮರುಪಾವತಿಸಿ.
- ಗೋಲ್ಡ್ ಲೋನ್ ಮೇಲಿನ ಬಡ್ಡಿ ಮತ್ತು ಅಸಲು ಅಂಶಗಳನ್ನು ಕೈಗೆಟಕುವ ಇಎಂಐ ಆಗಿ ಮರುಪಾವತಿಸಿ.
- ಲೋನ್ ಅವಧಿಯ ಆರಂಭದಲ್ಲಿ ಬಡ್ಡಿಯನ್ನು ಪಾವತಿಸಿ ಮತ್ತು ಲೋನ್ ಅವಧಿಯುದ್ದಕ್ಕೂ ಅಸಲು ಮೊತ್ತವನ್ನು ಮರುಪಾವತಿಸಿ.
ಆದಾಗ್ಯೂ, ಲಭ್ಯವಿರುವ ಮರುಪಾವತಿ ಆಯ್ಕೆಗಳ ಬಗ್ಗೆ ಮೊದಲೇ ಚರ್ಚಿಸುವುದು ನಿಮ್ಮ ಹಿತಾಸಕ್ತಿಯ ದೃಷ್ಟಿಯಿಂದ ಒಳ್ಳೆಯದು, ಇದರಿಂದಾಗಿ ನೀವು ನಿಮ್ಮ ಇಎಂಐಗಳನ್ನು ಉತ್ತಮವಾಗಿ ಯೋಜಿಸಬಹುದು ಅಥವಾ ಕನಿಷ್ಠ ಬಡ್ಡಿ ದರದಲ್ಲಿ ಗೋಲ್ಡ್ ಲೋನ್ ಪಾವತಿಸಬಹುದು.
ಗೋಲ್ಡ್ ಲೋನಿಗೆ ಕನಿಷ್ಠ ಕ್ರೆಡಿಟ್ ಸ್ಕೋರ್ ಅಗತ್ಯವಿಲ್ಲ ಮತ್ತು ಇದು ನಿಮ್ಮ ಗೋಲ್ಡ್ ಲೋನ್ ಅರ್ಹತೆಯನ್ನು ಪ್ರಭಾವಿಸುವುದಿಲ್ಲ.
ಚಿನ್ನದ ಮಾರುಕಟ್ಟೆ ಬೆಲೆ, ಲಭ್ಯವಿರುವ ಚಿನ್ನ, ಮರುಪಾವತಿ ಆಯ್ಕೆ ಮತ್ತು ಮುಂತಾದ ಗೋಲ್ಡ್ ಲೋನ್ ಬಡ್ಡಿ ದರದ ಮೇಲೆ ಅನೇಕ ಅಂಶಗಳು ಪರಿಣಾಮ ಬೀರುತ್ತವೆ.
ಬಜಾಜ್ ಫಿನ್‌ಸರ್ವ್ ನಾಮಮಾತ್ರದ ಶುಲ್ಕಗಳಲ್ಲಿ ಗೋಲ್ಡ್ ಲೋನ್ ಒದಗಿಸುತ್ತದೆ. ನಮ್ಮ ಫೀಸು ಮತ್ತು ಶುಲ್ಕಗಳು ಪಾರದರ್ಶಕವಾಗಿವೆ ಮತ್ತು ಕನಿಷ್ಠವಾಗಿ ಇರಿಸಲಾಗುತ್ತದೆ, ಇದರಿಂದಾಗಿ ನೀವು ಕಡಿಮೆ ಮುಂಗಡ ಪಾವತಿಸಬೇಕಾಗುತ್ತದೆ. ನಮ್ಮ ಗೋಲ್ಡ್ ಲೋನ್ ಬಡ್ಡಿ ದರವು ವರ್ಷಕ್ಕೆ 9.50% ರಿಂದ ಆರಂಭವಾಗುತ್ತದೆ. ಹೆಚ್ಚುವರಿಯಾಗಿ, ನಾವು 0.12% ಪ್ರಕ್ರಿಯಾ ಶುಲ್ಕವನ್ನು ವಿಧಿಸುತ್ತೇವೆ. ನಮ್ಮ ಇತರ ಫೀಸು ಮತ್ತು ಶುಲ್ಕಗಳ ಬಗ್ಗೆ ಇನ್ನಷ್ಟು ಓದಿ.
ಎಲ್ಲಾ ಚಿನ್ನದ ಆಭರಣಗಳಿಗೆ ಗೋಲ್ಡ್ ಲೋನ್ ಬಡ್ಡಿ ದರವು ಒಂದೇ ಆಗಿರುತ್ತದೆ.
ಬಜಾಜ್ ಫೈನಾನ್ಸ್ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಗೋಲ್ಡ್ ಲೋನ್ ಬಡ್ಡಿ ದರಗಳನ್ನು ಒದಗಿಸುತ್ತದೆ. ನಮ್ಮ ಫೀಸ್‌ಗಳು ಮತ್ತು ಶುಲ್ಕಗಳು ಪಾರದರ್ಶಕವಾಗಿವೆ ಹಾಗೂ ಕನಿಷ್ಠವಾಗಿವೆ, ಇದರಿಂದಾಗಿ ನೀವು ಕಡಿಮೆ ಮುಂಗಡ ಪಾವತಿ ಮಾಡಬಹುದು. ರೂ. 5,000 ರಿಂದ ರೂ. 2 ಕೋಟಿಯವರೆಗಿನ ಗೋಲ್ಡ್ ಲೋನ್‌ಗಳಿಗೆ ಬಡ್ಡಿ ದರವು ವರ್ಷಕ್ಕೆ 9.50% ರಿಂದ 28%* ವರೆಗೆ ಇರುತ್ತದೆ.
ಹೌದು, ಬಜಾಜ್ ಫೈನಾನ್ಸ್ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಗೋಲ್ಡ್ ಲೋನಿನ ಸಂಪೂರ್ಣ ಮೊತ್ತ ಅಥವಾ ಭಾಗವನ್ನು ಮರುಪಾವತಿಸುವ ಆಯ್ಕೆಯನ್ನು ನಿಮಗೆ ಒದಗಿಸುತ್ತದೆ. ಅಲ್ಲದೆ, ನಮ್ಮ ಭಾಗಶಃ-ಬಿಡುಗಡೆ ಸೌಲಭ್ಯದೊಂದಿಗೆ, ನೀವು ನಿಮ್ಮ ಲೋನಿನ ಭಾಗವನ್ನು ಮರುಪಾವತಿ ಮಾಡಬಹುದು ಮತ್ತು ನಿಮ್ಮ ಗೋಲ್ಡ್ ಲೋನ್ ಅವಧಿ ಮುಗಿಯುವ ಮೊದಲು ನಿಮ್ಮ ಸ್ವಲ್ಪ ಆಭರಣಗಳನ್ನು ಮರಳಿ ತೆಗೆದುಕೊಳ್ಳಬಹುದು.
ಕೃಷಿ ಗೋಲ್ಡ್ ಲೋನ್ ಭೌತಿಕ ಚಿನ್ನದ ಆಭರಣಗಳ ಮೇಲೆ ಸುರಕ್ಷಿತವಾಗಿರುವುದರಿಂದ, ಅಂತಹ ಲೋನ್‌ಗಳ ಮೇಲೆ ವಿಧಿಸಲಾಗುವ ಬಡ್ಡಿಯು ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಬಜಾಜ್ ಫೈನಾನ್ಸ್ ರೈತರಿಗೆ ವರ್ಷಕ್ಕೆ 9.50% ರಿಂದ ಆರಂಭವಾಗುವ ಕೃಷಿ ಗೋಲ್ಡ್ ಲೋನ್ ಬಡ್ಡಿ ದರಗಳನ್ನು ಒದಗಿಸುತ್ತದೆ.
ಬಜಾಜ್ ಫೈನಾನ್ಸ್‌ನೊಂದಿಗೆ, ಲೋನ್ ಮೊತ್ತಗಳು ಹೆಚ್ಚಾಗಿದ್ದರೆ ಮತ್ತು ಮರುಪಾವತಿಗಳು ಆಗಾಗ್ಗೆ ಇದ್ದರೆ ನೀವು ಕಡಿಮೆ ಗೋಲ್ಡ್ ಲೋನ್ ಬಡ್ಡಿಯನ್ನು ಆನಂದಿಸಬಹುದು. ಆದ್ದರಿಂದ, ಲೋನ್ ಬಾಕಿ ಇದ್ದಾಗ, ನೀವು ಅಸಲು ಮೊತ್ತವನ್ನು ಒಂದೇ ಬಾರಿಗೆ ಪಾವತಿಸಬಹುದು ಮತ್ತು ನಿಮ್ಮ ಚಿನ್ನದ ಆಭರಣವನ್ನು ಮರಳಿ ಪಡೆಯಬಹುದು.
ಇಲ್ಲ, ಆದರೆ ನೀವು ಹೆಚ್ಚಿನ ಲೋನ್ ಮೊತ್ತ ಅಥವಾ ಮರುಪಾವತಿಯ ಹೆಚ್ಚಿನ ಆವರ್ತನವನ್ನು ಆಯ್ಕೆ ಮಾಡುವ ಮೂಲಕ ಸಣ್ಣ ಪ್ರಮಾಣದ ಗೋಲ್ಡ್ ಲೋನ್ ಬಡ್ಡಿ ದರದಲ್ಲಿ ಗೋಲ್ಡ್ ಲೋನನ್ನು ಪಡೆಯಬಹುದು. ನಾವು ಯಾವುದೇ ಫೋರ್‌ಕ್ಲೋಸರ್ ಅಥವಾ ಮುಂಗಡ ಮರುಪಾವತಿ ಶುಲ್ಕಗಳನ್ನು ಕೂಡ ವಿಧಿಸುವುದಿಲ್ಲ, ಇದು ಉಂಟಾದ ವೆಚ್ಚಗಳನ್ನು ಇನ್ನಷ್ಟು ಕಡಿಮೆ ಮಾಡುತ್ತದೆ.
ನೀವು ರೂ. 1,20,000 ಲೋನ್ ಆಯ್ಕೆ ಮಾಡಿ, ಅದನ್ನು ಪ್ರತಿ ತಿಂಗಳು ಮರುಪಾವತಿ ಮಾಡುತ್ತೀರಿ ಎಂದುಕೊಳ್ಳೋಣ. ಈ ಸಂದರ್ಭದಲ್ಲಿ, ನೀವು ವಾರ್ಷಿಕ 10% ಬಡ್ಡಿ ಪಾವತಿಸಬೇಕಾಗಬಹುದು. ನಂತರ, ನಿಮ್ಮ ಗೋಲ್ಡ್ ಲೋನ್ ಬಡ್ಡಿ ಪಾವತಿಗಳು ಹೀಗೆ ಕಾಣುತ್ತವೆ:
ರೂ. 1,20,000 * 10% = ರೂ. 12,000 ವಾರ್ಷಿಕ ಬಡ್ಡಿ
ಮಾಸಿಕ ಬಡ್ಡಿ ಪಾವತಿ = ರೂ. 12,000/12 = ರೂ. 1,000 ಪ್ರತಿ ತಿಂಗಳು
ನಿಮ್ಮ ಗೋಲ್ಡ್ ಲೋನ್ ಬಡ್ಡಿ ದರವನ್ನು ಲೋನ್ ಮೊತ್ತ ಮತ್ತು ನಿಮ್ಮ ಲೋನ್ ಕಂತುಗಳ ಮರುಪಾವತಿ ಆವರ್ತನದಿಂದ ನಿರ್ಧರಿಸಲಾಗುತ್ತದೆ. ಬಜಾಜ್ ಫೈನಾನ್ಸ್‌ನೊಂದಿಗೆ, ಲೋನ್ ಮೊತ್ತಗಳು ಹೆಚ್ಚಾಗಿದ್ದರೆ ಮತ್ತು ಮರುಪಾವತಿಗಳು ಆಗಾಗ್ಗೆ ಇದ್ದರೆ ನೀವು ಕಡಿಮೆ ಆಭರಣದ ಲೋನ್ ಬಡ್ಡಿ ದರವನ್ನು ಆನಂದಿಸಬಹುದು.