ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್
ಎಜುಕೇಶನ್ ಲೋನ್ ಕ್ಯಾಲ್ಕುಲೇಟರ್ ಎಂಬುದು ಬಳಕೆದಾರರಿಗೆ ಆಯ್ಕೆ ಮಾಡಿದ ಲೋನ್ ಮೊತ್ತ ಮತ್ತು ಅವಧಿಯ ಪ್ರಕಾರ ಇಎಂಐಗಳನ್ನು ಲೆಕ್ಕ ಹಾಕಲು ಅನುವು ಮಾಡಿಕೊಡುವ ಹಣಕಾಸಿನ ಸಾಧನವಾಗಿದೆ. ಕ್ಯಾಲ್ಕುಲೇಟರ್ ಒಟ್ಟು ಮೊತ್ತ ಮತ್ತು ಅವಧಿಯ ಕೊನೆಯಲ್ಲಿ ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ಕೂಡ ಲೆಕ್ಕ ಹಾಕುತ್ತದೆ.
ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಲೋನ್ ಮೊತ್ತ ಮತ್ತು ಅವಧಿಗೆ ಸಂಬಂಧಿಸಿದಂತೆ ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ಈ ಆನ್ಲೈನ್ ಎಜುಕೇಶನ್ ಲೋನ್ ಕ್ಯಾಲ್ಕುಲೇಟರ್ ಬಳಸಿ.
ಎಜುಕೇಶನ್ ಲೋನ್ ಕ್ಯಾಲ್ಕುಲೇಟರ್ ಬಳಸುವುದು ಹೇಗೆ?
ಆಸ್ತಿ ಮೇಲಿನ ಶೈಕ್ಷಣಿಕ ಲೋನ್ ಅಥವಾ ಶಿಕ್ಷಣಕ್ಕಾಗಿ ಆಸ್ತಿ ಮೇಲಿನ ಲೋನ್ ಬಜಾಜ್ ಫಿನ್‌ಸರ್ವ್ ಒದಗಿಸುವ ಸುರಕ್ಷಿತ ಲೋನ್ ಆಗಿದೆ. ಭಾರತ ಅಥವಾ ವಿದೇಶದಲ್ಲಿ ನಿಮ್ಮ ಮಗುವಿನ ಶೈಕ್ಷಣಿಕ ವೆಚ್ಚಗಳಿಗೆ ಹಣಕಾಸು ಒದಗಿಸಲು ನಿಮ್ಮ ಆಸ್ತಿಯನ್ನು ಅಡಮಾನ ಇಡುವ ಮೂಲಕ ನೀವು ಈ ಲೋನನ್ನು ಪಡೆಯಬಹುದು.
ಸಾಮಾನ್ಯವಾಗಿ, ವಸತಿ ಆಸ್ತಿಯನ್ನು ಅಡಮಾನ ಇಡುವುದರಿಂದ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯದ 80% ವರೆಗಿನ ಹೆಚ್ಚಿನ ಲೋನ್ ಮೌಲ್ಯವನ್ನು ನಿಮಗೆ ನೀಡಬಹುದು. ಬಜಾಜ್ ಫಿನ್‌ಸರ್ವ್ ಒದಗಿಸುವ ಎಜುಕೇಶನ್ ಲೋನ್ ಕ್ಯಾಲ್ಕುಲೇಟರ್ ನಿಮ್ಮ ಸಂಭಾವ್ಯ ಇಎಂಐ ಜೊತೆಗೆ ಅವಧಿಯ ಕೊನೆಯಲ್ಲಿ ಪಾವತಿಸಬೇಕಾದ ನಿಖರವಾದ ಲೋನ್ ಮೊತ್ತವನ್ನು ಮೌಲ್ಯಮಾಪನ ಮಾಡಲು ನಿಮಗೆ ಅನುಮತಿ ನೀಡುತ್ತದೆ.
ಎಜುಕೇಶನ್ ಲೋನ್ ಕ್ಯಾಲ್ಕುಲೇಟರ್ ಬಗ್ಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು
ಇದು ನಿಮ್ಮ ಲೋನ್ ಮೇಲೆ ನೀವು ಮರುಪಾವತಿಸಬೇಕಾದ ಮೊತ್ತವನ್ನು ಲೆಕ್ಕ ಹಾಕುವ ಆನ್ಲೈನ್ ಸಾಧನವಾಗಿದೆ. ಆಸ್ತಿ ಮೇಲಿನ ಲೋನ್ ಇಎಂಐ ಕ್ಯಾಲ್ಕುಲೇಟರ್ ಎಂದು ಹೆಚ್ಚು ಪ್ರಮುಖವಾಗಿ ಕರೆಯಲ್ಪಡುವ, ಇದು ಪ್ರತಿ ತಿಂಗಳು ನೀವು ಪಾವತಿಸಬೇಕಾದ ಕಂತುಗಳನ್ನು ಕೂಡ ಲೆಕ್ಕ ಹಾಕುತ್ತದೆ. ನೀವು ಆಯ್ಕೆ ಮಾಡಿದ ಅವಧಿಯ ಪ್ರಕಾರ ಇಎಂಐಗಳು ಬದಲಾಗುತ್ತವೆ.
ಅದರ ಜೊತೆಗೆ, ಇದು ಎಜುಕೇಶನ್ ಲೋನ್ ಬಡ್ಡಿ ಕ್ಯಾಲ್ಕುಲೇಟರ್ ಆಗಿ ಕೂಡ ಕಾರ್ಯನಿರ್ವಹಿಸುತ್ತದೆ, ಹೀಗಾಗಿ ಅದರ ಅವಧಿಯ ಮೇಲೆ ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ಲೆಕ್ಕ ಹಾಕುತ್ತದೆ. ಹೆಚ್ಚುವರಿಯಾಗಿ, ಅವಧಿಯ ಕೊನೆಯಲ್ಲಿ ಮಾಡಲು ಒಟ್ಟು ಪಾವತಿಯನ್ನು ಕೂಡ ಇದು ಲೆಕ್ಕ ಹಾಕುತ್ತದೆ. ಒಟ್ಟು ಪಾವತಿಯು ಅಸಲು ಮೊತ್ತ ಮತ್ತು ಬಡ್ಡಿಯ ಮೊತ್ತವಾಗಿದೆ.
ಸಮನಾದ ಮಾಸಿಕ ಕಂತು ಎಂದು ವಿಸ್ತರಿಸಲಾದ ಇಎಂಐ, ನೀವು ಸಂಪೂರ್ಣ ಲೋನನ್ನು ಮರುಪಾವತಿಸುವವರೆಗೆ ಪ್ರತಿ ತಿಂಗಳು ಪಾವತಿಸಬೇಕಾದ ಒಟ್ಟು ಮೊತ್ತವಾಗಿದೆ. ಇದು ಅಸಲು ಮೊತ್ತ ಮತ್ತು ಲೋನ್ ಮೇಲೆ ವಿಧಿಸುವ ಬಡ್ಡಿಯನ್ನು ಒಳಗೊಂಡಿರುತ್ತದೆ.
ಈ ಸ್ಟಡಿ ಲೋನ್ ಕ್ಯಾಲ್ಕುಲೇಟರ್ ವಿವಿಧ ಅವಧಿಗಳಿಗೆ ಇಎಂಐಗಳನ್ನು ಮೌಲ್ಯಮಾಪನ ಮಾಡಲು ನಿಮಗೆ ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಸೂಕ್ತ ಮರುಪಾವತಿ ಶೆಡ್ಯೂಲನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಇಎಂಐ ಪಾವತಿಗಾಗಿ ನಿಮ್ಮ ಹಣಕಾಸಿನ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಕಾಲಾವಧಿಯನ್ನು ಆಯ್ಕೆ ಮಾಡಿ.
ಲೋನ್ ಮರುಪಾವತಿಗೆ ಮಾಸಿಕ ಹಣದ ಹೊರಹರಿವನ್ನು ತಿಳಿದುಕೊಳ್ಳುವುದರಿಂದ ನಿಮ್ಮ ಹಣಕಾಸನ್ನು ಸಮಯಕ್ಕಿಂತ ಮುಂಚಿತವಾಗಿ ಯೋಜಿಸಲು ಸಹಾಯ ಮಾಡುತ್ತದೆ, ಇದು ದೀರ್ಘಾವಧಿಯಲ್ಲಿ ಹಣಕಾಸಿನ ಸ್ಥಿರತೆಯನ್ನು ಖಚಿತಪಡಿಸುತ್ತದೆ. ಆದ್ದರಿಂದ, ನಿಮ್ಮ ಎಜುಕೇಶನ್ ಲೋನ್ ಅವಧಿಯ ವರ್ಷಗಳಲ್ಲಿ, ನೀವು ಪ್ರತಿ ತಿಂಗಳು ವಿನಿಯೋಗ ಮಾಡುವ ಮೊತ್ತದ ಬಗ್ಗೆ ನೀವು ಸಮರ್ಪಕ ನೋಟವನ್ನು ಪಡೆಯಬಹುದು.
ಬಜಾಜ್ ಫಿನ್‌ಸರ್ವ್ ಎಜುಕೇಶನ್ ಲೋನ್ ಕ್ಯಾಲ್ಕುಲೇಟರ್ ಫಲಿತಾಂಶಗಳನ್ನು ಲೆಕ್ಕ ಹಾಕಲು ಮೂರು ಪ್ರಾಥಮಿಕ ವೇರಿಯೇಬಲ್‌ಗಳನ್ನು ಬಳಸುತ್ತದೆ. ಅವುಗಳು ಈ ರೀತಿಯಾಗಿವೆ:
- P ಎಂದರೆ ಲೋನಿನ ಅಸಲು ಮೊತ್ತ
- N ಎಂದರೆ ಲೋನಿನ ಅವಧಿ ಅಥವಾ ಕಾಲಾವಧಿ
- R ಎಂದರೆ ತಿಂಗಳಿಗೆ ಅನ್ವಯವಾಗುವ ಬಡ್ಡಿ ದರ
ಇವುಗಳ ಆಧಾರದ ಮೇಲೆ, ಇದು ಇಎಂಐಗಳನ್ನು ಲೆಕ್ಕ ಹಾಕುತ್ತದೆ, ಇದು 'E' ನಿಂದ ಸೂಚಕವಾಗಿದೆ’.
ಈ ಸ್ಟೂಡೆಂಟ್ ಲೋನ್ ಕ್ಯಾಲ್ಕುಲೇಟರ್ ಈ ಫಾರ್ಮುಲಾದ ಸಹಾಯದಿಂದ ಫಲಿತಾಂಶವನ್ನು ಲೆಕ್ಕ ಹಾಕುತ್ತದೆ – [P x R x (1+R)^N]/ [(1+R)^N-1].
ಆಸ್ತಿಯ ವಿರುದ್ಧದ ಎಜುಕೇಶನ್ ಲೋನ್ ಮೇಲಿನ ಇಎಂಐಗಳ ತಡವಾದ ಅಥವಾ ತಪ್ಪಿಹೋದ ಪಾವತಿ ಮೇಲೆ ತಿಂಗಳಿಗೆ 2% ವರೆಗೆ ದಂಡದ ಬಡ್ಡಿಯನ್ನು ಆಕರ್ಷಿಸುತ್ತದೆ.
ಸಾಲಗಾರರು ಬಜಾಜ್ ಫಿನ್‌ಸರ್ವ್‌ನೊಂದಿಗೆ ಆಸ್ತಿ ಮೇಲಿನ ಶೈಕ್ಷಣಿಕ ಲೋನಿಗೆ ಅಪ್ಲೈ ಮಾಡಲು ವಯಸ್ಸು, ಆದಾಯ, ಉದ್ಯೋಗ ಮತ್ತು ವಸತಿ ಅರ್ಹತೆಯನ್ನು ಪೂರೈಸಬೇಕು. ಸಂಬಳ ಪಡೆಯುವ ವ್ಯಕ್ತಿಗಳು 23 ಮತ್ತು 2 ವರ್ಷಗಳ* ನಡುವಿನವರಾಗಿರಬೇಕು ಮತ್ತು ಎಂಎನ್‌ಸಿ, ಸಾರ್ವಜನಿಕ ಅಥವಾ ಖಾಸಗಿ ವಲಯದ ಕಂಪನಿಯಲ್ಲಿ ಉದ್ಯೋಗಿಯಾಗಿರಬೇಕು.
ಸ್ವಯಂ ಉದ್ಯೋಗಿ ಅರ್ಜಿದಾರರು ನಿಯಮಿತ ಆದಾಯ ಮೂಲದೊಂದಿಗೆ 25 ಮತ್ತು 70 ವರ್ಷಗಳ* ನಡುವಿನ ವಯಸ್ಸಿನವರಾಗಿರಬೇಕು. ಎರಡೂ ವಿಧದ ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
*ಲೋನ್ ಮೆಚ್ಯೂರಿಟಿ ಸಮಯದಲ್ಲಿ ಅಧಿಕ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ
ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಹಿಂದಿನ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು, ಇತ್ತೀಚಿನ ಸಂಬಳದ ಸ್ಲಿಪ್‌ಗಳು, ವಿಳಾಸದ ಪುರಾವೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಐಟಿ ರಿಟರ್ನ್‌ಗಳೊಂದಿಗೆ ಆಸ್ತಿಯ ಮೇಲೆ ಶೈಕ್ಷಣಿಕ ಲೋನಿಗೆ ಅಪ್ಲೈ ಮಾಡಬೇಕು.
ಸ್ವಯಂ ಉದ್ಯೋಗಿ ಅರ್ಜಿದಾರರಿಗೆ, ಡಾಕ್ಯುಮೆಂಟ್‌ಗಳು ಹಿಂದಿನ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ವಿಳಾಸದ ಪುರಾವೆಗಳನ್ನು ಒಳಗೊಂಡಿವೆ. ಅರ್ಜಿದಾರರು ಅಡಮಾನ ಇಡಲು ಆಸ್ತಿಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.
ಹೌದು, ಆಸ್ತಿ ಮೇಲಿನ ಶಿಕ್ಷಣ ಲೋನ್ ಸೇರಿದಂತೆ ಉನ್ನತ ಶಿಕ್ಷಣಕ್ಕಾಗಿ ಪಡೆದ ಲೋನಿಗೆ ಪಾವತಿಸುವ ಬಡ್ಡಿಗಾಗಿ ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 80E ಅಡಿಯಲ್ಲಿ ವ್ಯಕ್ತಿಗಳು ರೂ. 1.5 ಲಕ್ಷದವರೆಗಿನ ವಾರ್ಷಿಕ ತೆರಿಗೆ ವಿನಾಯಿತಿಯನ್ನು ಕ್ಲೈಮ್ ಮಾಡಬಹುದು. ಮರುಪಾವತಿ ಆರಂಭವಾದಾಗ ಈ ಕಡಿತವು ವರ್ಷದಿಂದ ಗರಿಷ್ಠ 8 ವರ್ಷಗಳವರೆಗೆ ಲಭ್ಯವಿರುತ್ತದೆ. ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಅಧ್ಯಯನಗಳಿಗಾಗಿ ತೆಗೆದುಕೊಳ್ಳಲಾದ ಲೋನ್‌ಗಳು ಈ ತೆರಿಗೆ ಪ್ರಯೋಜನಕ್ಕೆ ಅರ್ಹವಾಗಿವೆ.
ಆಸ್ತಿ ಮೇಲಿನ ಶೈಕ್ಷಣಿಕ ಲೋನ್ ಭದ್ರತೆ ಸಹಿತ ನೀಡುವ ಮುಂಗಡವಾಗಿದೆ ಮತ್ತು ಸಾಲಗಾರರು ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ಅಡಮಾನವಾಗಿ ಇಡಬೇಕಾಗುತ್ತದೆ. ಅಪ್ಲೈ ಮಾಡಲು ವ್ಯಕ್ತಿಗಳು ವಯಸ್ಸು, ಆದಾಯ ಮತ್ತು ವಸತಿ ಅರ್ಹತಾ ಮಾನದಂಡಗಳನ್ನು ಕೂಡ ಪೂರೈಸಬೇಕು. ಹೀಗಾಗಿ ಇದು ಖಾತರಿದಾರ ಇಲ್ಲದೆ ಲಭ್ಯವಿದೆ. ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಅಪ್ಲೈ ಮಾಡಲು ಆನ್ಲೈನ್ ಎಜುಕೇಶನ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
ಎಜುಕೇಶನ್ ಲೋನ್ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಇಎಂಐಗಳನ್ನು ಲೆಕ್ಕ ಹಾಕಿ ಮತ್ತು ನಿಮಗೆ ಅಗತ್ಯವಿರುವ ಅವಧಿ, ಬಡ್ಡಿ ದರ ಮತ್ತು ಅಸಲು ಲೋನ್ ಮೊತ್ತವನ್ನು ಅಂತಿಮಗೊಳಿಸಿದ ನಂತರ, ಅದು ನಿಮ್ಮ ಲೋನಿಗೆ ಅಪ್ಲೈ ಮಾಡುವ ಸಮಯವಾಗುತ್ತದೆ.
ಆದಾಗ್ಯೂ, ಅದರ ಮೊದಲು, ನೀವು ಲೋನಿಗೆ ಅರ್ಹರಾಗಿದ್ದೀರಾ ಎಂದು ತಿಳಿದುಕೊಳ್ಳಲು ನೀವು ಅರ್ಹತಾ ಅವಶ್ಯಕತೆಗಳನ್ನು ಪರಿಶೀಲಿಸಬೇಕು. ಬಜಾಜ್ ಫಿನ್‌ಸರ್ವ್ ಆಸ್ತಿ ಮೇಲಿನ ಲೋನ್ ಅರ್ಹತಾ ಮಾನದಂಡಗಳನ್ನು ಮತ್ತು ಪೂರೈಸಲು ಸರಳವಾದ ಡಾಕ್ಯುಮೆಂಟೇಶನ್ ಅವಶ್ಯಕತೆಗಳನ್ನು ನಿರ್ವಹಿಸುತ್ತದೆ.
ಆದ್ದರಿಂದ, ನಿಮಗೆ ಸೂಕ್ತವಾದ ಇಎಂಐಗಳನ್ನು ಲೆಕ್ಕ ಹಾಕಿ ಮತ್ತು ಬಜಾಜ್ ಫಿನ್‌ಸರ್ವ್‌ನೊಂದಿಗೆ ಶಿಕ್ಷಣಕ್ಕಾಗಿ ಆಸ್ತಿ ಮೇಲಿನ ಲೋನಿಗೆ ಅಪ್ಲೈ ಮಾಡಿ.