ಕ್ರೆಡಿಟ್ ಸ್ಕೋರ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ

ಉಚಿತವಾಗಿ ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸುವ ಹಂತಗಳು

ನಿಮ್ಮ ಸಿಬಿಲ್ ಸ್ಕೋರ್ 3-ಅಂಕಿಯ ಸಂಖ್ಯೆಯಾಗಿದ್ದು, ಇದು ನಿಮ್ಮ ಕ್ರೆಡಿಟ್ ಹೆಲ್ತ್ ಅಯನ್ನು ಅಳೆಯುತ್ತದೆ. ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಈ ವಿಡಿಯೋವನ್ನು ನೋಡಿ.

  • Credit Score Features

    ವೈಯಕ್ತಿಕಗೊಳಿಸಿದ ಆಫರ್‌ಗಳು

    ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಲೋನ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಇನ್ನೂ ಹೆಚ್ಚಿನವುಗಳ ಮೇಲೆ ವಿಶೇಷ ಮುಂಚಿತ-ಅನುಮೋದಿತ ಆಫರ್‌ಗಳನ್ನು ಪಡೆಯಿರಿ.

  • Credit Score Features

    ಸಾಲದಾತರೊಂದಿಗೆ ಉತ್ತಮ ಸಮಾಲೋಚನಾ ಶಕ್ತಿ

    ಹೆಚ್ಚಿನ ಸಿಬಿಲ್ ಸ್ಕೋರ್‌ನೊಂದಿಗೆ ನೀವು ಇತರ ಸಾಲಗಾರರ ಮೇಲೆ ಅಂದವನ್ನು ಹೊಂದಿದ್ದೀರಿ ಮತ್ತು ಉತ್ತಮ ಬಡ್ಡಿ ದರ ಅಥವಾ ಕಡಿಮೆ ಪ್ರಕ್ರಿಯಾ ಶುಲ್ಕಕ್ಕಾಗಿ ಸಮಾಲೋಚನೆ ಮಾಡಬಹುದು.

  • Credit Score Features

    ಕಡಿಮೆ ಬಡ್ಡಿದರಗಳು

    ನೀವು ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ಸಾಲದಾತರು ಲೋನ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲು ತುಲನಾತ್ಮಕವಾಗಿ ಕಡಿಮೆ ಬಡ್ಡಿ ದರವನ್ನು ನಿಮಗೆ ಒದಗಿಸುತ್ತಾರೆ.

  • Credit Score Features

    ಸುಲಭವಾದ ಲೋನ್ ಅನುಮೋದನೆ

    ಹೆಚ್ಚಿನ ಕ್ರೆಡಿಟ್ ಸ್ಕೋರ್ ನೀವು ಸುರಕ್ಷಿತ ಸಾಲಗಾರರಾಗಿದ್ದೀರಿ ಎಂದು ಸೂಚಿಸುತ್ತದೆ. ಸಾಲದಾತರು ನಿಮ್ಮ ಲೋನನ್ನು ತ್ವರಿತವಾಗಿ ಅನುಮೋದಿಸುವ ಸಾಧ್ಯತೆ ಹೆಚ್ಚಾಗಿದೆ.

  • Credit Score Features

    ಹೆಚ್ಚಿನ ಲೋನ್ ಮೊತ್ತಗಳು

    ಹೆಚ್ಚಿನ ಲೋನ್ ಮೊತ್ತಗಳು ಸಾಲದಾತರಿಗೆ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತವೆ. ಆದ್ದರಿಂದ, ಅವರು ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವ ಸಾಲಗಾರರಿಗೆ ಸಾಲ ನೀಡಲು ಆದ್ಯತೆ ನೀಡುತ್ತಾರೆ.

  • Credit Score Features

    ದೀರ್ಘ ಲೋನ್ ಅವಧಿಗಳು

    ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವ ಸಾಲಗಾರರು ದೀರ್ಘಾವಧಿಗಳೊಂದಿಗೆ ಲೋನ್‌ಗಳಿಂದ ಪ್ರಯೋಜನ ಪಡೆಯಬಹುದು. ಇದು ಸಣ್ಣ ಇಎಂಐಗಳಿಗೆ ಬದಲಾಗುತ್ತದೆ ಮತ್ತು ಅವರ ಮಾಸಿಕ ವೆಚ್ಚದ ಹೊರೆಯನ್ನು ಕಡಿಮೆ ಮಾಡುತ್ತದೆ.

    *ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

    ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಭಾರತದಲ್ಲಿ ಕ್ರೆಡಿಟ್ ಬ್ಯೂರೋಗಳು

ಕ್ರೆಡಿಟ್ ಬ್ಯೂರೋಗಳು ಬ್ಯಾಂಕುಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಮತ್ತು ಇತರ ಸಾಲದಾತರ ಪರವಾಗಿ ಗ್ರಾಹಕರ ಕ್ರೆಡಿಟ್ ಇತಿಹಾಸದ ದಾಖಲೆಯನ್ನು ನಿರ್ವಹಿಸುವ ಡೇಟಾ ಸಂಗ್ರಹ ಕಂಪನಿಗಳಾಗಿವೆ. ಕ್ರೆಡಿಟ್ ಬ್ಯೂರೋಗಳು ವ್ಯಕ್ತಿಯ ಕ್ರೆಡಿಟ್ ಅರ್ಹತೆಯನ್ನು ತೋರಿಸುವ ಮೂರು ಅಂಕಿಯ ಸ್ಕೋರ್ ಅನ್ನು ಪ್ರಕಟಿಸುತ್ತವೆ. ಗ್ರಾಹಕರ ಡೇಟಾವನ್ನು ಸಂಗ್ರಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತಗೊಳಿಸಿದ ಹಲವಾರು ಕ್ರೆಡಿಟ್ ಬ್ಯೂರೋಗಳಿವೆ. ಭಾರತದಲ್ಲಿ ವಿವಿಧ ಕ್ರೆಡಿಟ್ ಬ್ಯೂರೋಗಳು ಇಲ್ಲಿವೆ.

  • TransUnion CIBIL Limited

    TransUnion CIBIL Limited

    ಭಾರತದ ಅತ್ಯಂತ ಹಳೆಯ ಕ್ರೆಡಿಟ್ ಬ್ಯೂರೋಗಳಲ್ಲಿ ಒಂದಾಗಿದೆ. ಅವರು ನಿಮ್ಮ ಕ್ರೆಡಿಟ್ ಹೆಲ್ತ್ ಅಳತೆಯಾಗಿ ನಿಮಗೆ ಸಿಬಿಲ್ ಸ್ಕೋರ್ ಒದಗಿಸುತ್ತಾರೆ.

  • Experian Inc.

    Experian Inc.

    ಇದು ಇನ್ನೊಂದು ಬ್ಯೂರೋ ಆಗಿದ್ದು, ಅಲ್ಲಿಂದ ನೀವು ನಿಮ್ಮ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಮತ್ತು ರಿಪೋರ್ಟ್ ಪಡೆಯಬಹುದು.

  • Equifax

    Equifax

    Equifax Inc. ಉತ್ತರ ಅಮೆರಿಕಾ, ಯುರೋಪ್, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾದಾದ್ಯಂತ 15 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕನ್ ಬಹುರಾಷ್ಟ್ರೀಯ ಗ್ರಾಹಕ ಕ್ರೆಡಿಟ್ ವರದಿ ಏಜೆನ್ಸಿಯಾಗಿದೆ.

  • CRIF

    ಸಿಆರ್‌ಐಎಫ್ ಹೈ ಮಾರ್ಕ್ ಕ್ರೆಡಿಟ್ ಮಾಹಿತಿ ಸೇವೆಗಳು

    2007 ರಲ್ಲಿ ಸ್ಥಾಪನೆಗೊಂಡ ಇದು, ಗ್ರಾಹಕ, ಸೂಕ್ಷ್ಮ ಹಣಕಾಸು ಮತ್ತು ವಾಣಿಜ್ಯ ವಿಭಾಗಗಳನ್ನು ಒಳಗೊಂಡಿರುವ ಭಾರತದ ಕ್ರೆಡಿಟ್ ಮಾಹಿತಿ ಸೇವಾ ಪೂರೈಕೆದಾರರಾಗಿದೆ.

ಆಗಾಗ ಕೇಳುವ ಪ್ರಶ್ನೆಗಳು

ಉತ್ತಮ ಸಿಬಿಲ್ ಸ್ಕೋರ್ ಎಂದರೇನು?

ಸಾಮಾನ್ಯವಾಗಿ, TransUnion CIBIL ಪ್ರಕಾರ 700-749 ಸಿಬಿಲ್ ಸ್ಕೋರನ್ನು ಉತ್ತಮ ಸಿಬಿಲ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಈ ಸ್ಕೋರ್‌ನೊಂದಿಗೆ, ನೀವು ವಿವಿಧ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿ ಗಳಿಂದ ಕ್ರೆಡಿಟ್ ಆಫರ್‌ಗಳಿಗೆ ಅರ್ಹರಾಗಬಹುದು. ಕ್ರೆಡಿಟ್ ಪಾಸ್‌ನೊಂದಿಗೆ ನೀವು ಬಯಸಿದಾಗ ಯಾವುದೇ ಸಮಯದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸಬಹುದು. ನಿಯಮಿತವಾಗಿ ನಿಮ್ಮ ಸ್ಕೋರ್ ಪರಿಶೀಲಿಸುವುದರಿಂದ ನಿಮ್ಮ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಕ್ರೆಡಿಟ್ ಪಾಸ್‌ಗಾಗಿ ಸೈನ್ ಅಪ್ ಮಾಡಿ
ಈಗಾಗಲೇ ಕ್ರೆಡಿಟ್ ಪಾಸ್ ಹೋಲ್ಡರ್ ಆಗಿದ್ದೀರಾ? ಇಲ್ಲಿ ಲಾಗಿನ್ ಮಾಡಿ

ಯಾವುದೇ ಲೋನ್ ಪಡೆಯಲು ಕನಿಷ್ಠ ಸಿಬಿಲ್ ಸ್ಕೋರ್ ಎಷ್ಟು?

ಲೋನ್ ಪಡೆಯಲು ಅಗತ್ಯವಿರುವ ಕನಿಷ್ಠ ಸಿಬಿಲ್ ಸ್ಕೋರನ್ನು ಯಾವುದೇ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿ ನಿರ್ದಿಷ್ಟಪಡಿಸುವುದಿಲ್ಲ. ಆದಾಗ್ಯೂ, ಹೆಚ್ಚಿನ ಸಾಲದಾತರು ನಿಮಗೆ ಕನಿಷ್ಠ 700 ಮತ್ತು ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಲು ಆದ್ಯತೆ ನೀಡುತ್ತಾರೆ. ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ಹೆಲ್ತ್ ಅಳತೆಯಾಗಿದೆ. ಹೆಚ್ಚಿನ ಸ್ಕೋರ್ ಉತ್ತಮ ಕ್ರೆಡಿಟ್ ಹೆಲ್ತ್ ಅನ್ನು ಪ್ರತಿಬಿಂಬಿಸುತ್ತದೆ ಮತ್ತು ನಿಮ್ಮ ಲೋನ್ ಮೊತ್ತವನ್ನು ತ್ವರಿತವಾಗಿ ಅನುಮೋದಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ನೀವು ಉತ್ತಮ CIBIL ಸ್ಕೋರ್ ಹೇಗೆ ನಿರ್ವಹಿಸಬಹುದು?

ಉತ್ತಮ CIBIL ಸ್ಕೋರ್ ನಿರ್ವಹಿಸಲು ನೀವು ಬಳಸಬಹುದಾದ ಕೆಲವು ಸರಳ ಸಲಹೆಗಳು ಇಲ್ಲಿವೆ:

  • ಉತ್ತಮ ಟ್ರ್ಯಾಕ್ ರೆಕಾರ್ಡ್ ನಿರ್ಮಿಸಲು ನಿಮ್ಮ ಮಾಸಿಕ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ
  • ನಿಮ್ಮ ಕ್ರೆಡಿಟ್ ಕಾರ್ಡನ್ನು ಸರಿಯಾಗಿ ನಿರ್ವಹಿಸಿ, ಪಾವತಿ ರಿಮೈಂಡರ್‌ಗಳನ್ನು ಸೆಟ್ ಮಾಡಿ ಮತ್ತು ನಿಮ್ಮ ಬಳಕೆಯನ್ನು ಸೀಮಿತಗೊಳಿಸಿ
  • ದೀರ್ಘ ಲೋನ್ ಅವಧಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ, ನಿಮಗೆ ಸಾಧ್ಯವಾದಾಗ ಭಾಗಶಃ ಮುಂಪಾವತಿ ಮಾಡಲು ಪ್ರಯತ್ನಿಸಿ
ನನ್ನ ಸಿಬಿಲ್ ಸ್ಕೋರನ್ನು ನಾನು ಹೇಗೆ ಸುಧಾರಿಸಬಹುದು?

ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ಇತಿಹಾಸವನ್ನು ಆಧರಿಸಿದೆ. ನೀವು ನಿಮ್ಮ ಸ್ಕೋರನ್ನು ತಕ್ಷಣವೇ ಸುಧಾರಿಸಲು ಸಾಧ್ಯವಿಲ್ಲ. ಆದಾಗ್ಯೂ, ಲೋನ್‌ಗಳ ಸಮಯಕ್ಕೆ ಸರಿಯಾಗಿ ಮರುಪಾವತಿ, ಸರಿಯಾದ ಕ್ರೆಡಿಟ್ ಬಳಕೆ, ಯಾವುದೇ ದೋಷಗಳಿಲ್ಲ ಎಂಬುದನ್ನು ತಿಳಿದುಕೊಳ್ಳಲು ನಿಯಮಿತವಾಗಿ ಸಿಬಿಲ್ ಹೆಲ್ತ್ ರಿಪೋರ್ಟ್ ಪರಿಶೀಲಿಸುವುದು, ಸಮಯಕ್ಕೆ ಸರಿಯಾಗಿ ನಿಮ್ಮ ಸಿಬಿಲ್ ಸ್ಕೋರ್ ಸುಧಾರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳಾಗಿವೆ.
ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಇತರ ಕೆಲವು ಮಾರ್ಗಗಳು ಇಲ್ಲಿವೆ

ನಿಮ್ಮ ಸಿಬಿಲ್ ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸುವುದು ಹೇಗೆ?

ನೀವು ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್‌ನಲ್ಲಿ ಉಚಿತವಾಗಿ ನಿಮ್ಮ CIBIL ಸ್ಕೋರ್ ಪರಿಶೀಲಿಸಬಹುದು (ಯಾವುದೇ ಗ್ರಾಹಕ ಲಾಗಿನ್ ಅಥವಾ ನೋಂದಣಿ ಅಗತ್ಯವಿಲ್ಲ).
ನೀವು ಈ ಮೂರು ಸರಳ ಹಂತಗಳನ್ನು ಅನುಸರಿಸಬೇಕಾಗುತ್ತದೆ:

  • ನಿಮ್ಮ ಬಗ್ಗೆ ಕೆಲವು ಮೂಲಭೂತ ಮಾಹಿತಿಯನ್ನು ಹಂಚಿಕೊಳ್ಳಿ
  • ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಗೆ ಕಳುಹಿಸಲಾದ ಒಟಿಪಿಯನ್ನು ಖಚಿತಪಡಿಸುವ ಮೂಲಕ ನಿಮ್ಮ ಗುರುತನ್ನು ಪರಿಶೀಲಿಸಿ
  • ನಿಮ್ಮ ಸಿಬಿಲ್ ಸ್ಕೋರ್ ಮತ್ತು ರಿಪೋರ್ಟ್ ಪರಿಶೀಲಿಸಿ.

ಇದು ಉಚಿತ ಇರುತ್ತದೆ ಮತ್ತು ಇದು ತುಂಬಾ ಸುಲಭವಾಗಿದೆ. ಮತ್ತು ಅತ್ಯುತ್ತಮವಾದುದು?? ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್‌ನಲ್ಲಿ ನಿಮ್ಮ CIBIL ಸ್ಕೋರ್ ಪರಿಶೀಲಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ!

ಕ್ರೆಡಿಟ್ ಪಾಸ್‌ನೊಂದಿಗೆ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಹೇಗೆ?

ಬಜಾಜ್ ಫಿನ್‌ಸರ್ವ್‌ ಕ್ರೆಡಿಟ್ ಪಾಸ್‌ನೊಂದಿಗೆ, ನಿಮ್ಮ ಕ್ರೆಡಿಟ್ ಪಾಸ್ ಅಕೌಂಟಿಗೆ ಲಾಗಿನ್ ಮಾಡುವ ಮೂಲಕ ನೀವು ಸಿಬಿಲ್ ಸ್ಕೋರ್ ಪರಿಶೀಲಿಸಬಹುದು. ನಿಮ್ಮ ವೈಯಕ್ತಿಕಗೊಳಿಸಿದ ಡ್ಯಾಶ್‌ಬೋರ್ಡಿನಲ್ಲಿ ನಿಮ್ಮ ಸ್ಕೋರನ್ನು ನೀವು ಪರಿಶೀಲಿಸಬಹುದು. ಹೆಚ್ಚುವರಿಯಾಗಿ, ನಿಮ್ಮ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳನ್ನು ನೀವು ಅಕ್ಸೆಸ್ ಮಾಡಬಹುದು ಮತ್ತು ನಿಮ್ಮ ವಿವರವಾದ ಕ್ರೆಡಿಟ್ ಹೆಲ್ತ್ ರಿಪೋರ್ಟ್ ಡೌನ್ಲೋಡ್ ಮಾಡಬಹುದು. ನೀವು ಉಚಿತವಾಗಿ ಕ್ರೆಡಿಟ್ ಪಾಸ್‌ಗಾಗಿ ಸೈನ್ ಅಪ್ ಮಾಡಬಹುದು. ಪಾಸ್ 12 ತಿಂಗಳವರೆಗೆ ಮಾನ್ಯವಾಗಿರುತ್ತದೆ.

ಕ್ರೆಡಿಟ್ ಪಾಸ್‌ಗಾಗಿ ಸೈನ್ ಅಪ್ ಮಾಡಿ
ಈಗಾಗಲೇ ಕ್ರೆಡಿಟ್ ಪಾಸ್ ಹೋಲ್ಡರ್ ಆಗಿದ್ದೀರಾ? ಇಲ್ಲಿ ಲಾಗಿನ್ ಮಾಡಿ

ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಏಕೆ ಮುಖ್ಯವಾಗಿದೆ?

ನಿಮ್ಮ ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಹೆಲ್ತ್ ಅಳತೆಯಾಗಿದೆ. ಯಾವುದೇ ಕ್ರೆಡಿಟ್‌ಗೆ ಅನುಮೋದನೆ ನೀಡುವ ಮೊದಲು ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿ ಗಳಂತಹ ಸಾಲದಾತರು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತಾರೆ. ನಿಯಮಿತವಾಗಿ ನಿಮ್ಮ ಸಿಬಿಲ್ ಸ್ಕೋರ್ ಮತ್ತು ವರದಿಯನ್ನು ಪರಿಶೀಲಿಸುವುದರಿಂದ ಯಾವುದೇ ದೋಷಗಳನ್ನು ಸರಿಪಡಿಸಲು ಮತ್ತು ಸುಲಭವಾದ ಕ್ರೆಡಿಟ್ ಅನುಮೋದನೆಗಾಗಿ ನಿಮ್ಮ ಕ್ರೆಡಿಟ್ ಸ್ಕೋರನ್ನು ಸುಧಾರಿಸಲು ಅಗತ್ಯ ಹಂತಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಬಜಾಜ್ ಫಿನ್‌ಸರ್ವ್‌ ಕ್ರೆಡಿಟ್ ಪಾಸ್‌ನೊಂದಿಗೆ ನೀವು ಬಯಸಿದಾಗ ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸಬಹುದು. ನೀವು ನಿಮ್ಮ ವಿವರವಾದ ಕ್ರೆಡಿಟ್ ರಿಪೋರ್ಟನ್ನು ಕೂಡ ಪರಿಶೀಲಿಸಬಹುದು.

ನಿಮ್ಮ CIBIL ರಿಪೋರ್ಟ್ ಅನ್ನು ಮತ್ತೆ ಮತ್ತೆ ಪರಿಶೀಲಿಸುವುದು ನಿಮ್ಮ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆಯೇ?

ನೀವು ನಿಮ್ಮ CIBIL ಸ್ಕೋರ್ ಪರಿಶೀಲಿಸಿದಾಗ, ಇದನ್ನು "ಮೆದು ವಿಚಾರಣೆ" ಎಂದು ಪರಿಗಣಿಸಲಾಗುತ್ತದೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್‌ ಮೇಲೆ ನೆಗಟಿವ್ ಪರಿಣಾಮವನ್ನು ಬೀರುವುದಿಲ್ಲ. ಆದರೆ, ಸಾಲದಾತರು ಅಥವಾ ಕ್ರೆಡಿಟ್ ಕಾರ್ಡ್ ವಿತರಕರು CIBIL ಗೆ ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸಲು ಕೋರಿದರೆ(ಸಾಮಾನ್ಯವಾಗಿ ಅವರು ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಕುರಿತು ನಿಮ್ಮನ್ನು ಪರಿಗನಿಸುತ್ತಿದ್ದಾಗ), ಅದನ್ನು 'ಕಠಿಣ ವಿಚಾರಣೆ' ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ರಿಪೋರ್ಟ್‌ನ ವಿಚಾರಣೆ ವಿಭಾಗದಲ್ಲಿ ಕಠಿಣ ವಿಚಾರಣೆಗಳನ್ನು ದಾಖಲಿಸಲಾಗುತ್ತದೆ.
ಅನೇಕ ಕಠಿಣ ವಿಚಾರಣೆಗಳು, ಕಡಿಮೆ ಅವಧಿಯಲ್ಲಿ ಪದೆಪದೆ ಮಾಡಿದರೆ ಅದನ್ನು, "ಕ್ರೆಡಿಟ್ ಹಂಗ್ರಿ ಬಿಹೇವಿಯರ್" ಎಂದು ಕರೆಯಲಾಗುತ್ತದೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರಿಗೆ ತೊಂದರೆ ಆಗಬಹುದು. ಆದರೆ ಕನಿಷ್ಠ ವರ್ಷಕ್ಕೊಮ್ಮೆ, ಸಾಫ್ಟ್ ವಿಚಾರಣೆಯನ್ನು, ಪ್ರಮುಖ ಹಣಕಾಸಿನ ಅಭ್ಯಾಸ ಎಂದು ಪರಿಗಣಿಸಲಾಗುತ್ತದೆ.

ನಿಮ್ಮ ಲೋನನ್ನು ಅನುಮೋದಿಸುವ ಮೊದಲು ಸಾಲದಾತರು ನಿಮ್ಮ CIBIL ಸ್ಕೋರ್ ಏಕೆ ಪರಿಶೀಲಿಸುತ್ತಾರೆ?

ನಿಮಗೆ ಗೊತ್ತಿರಬಹುದು, ನಿಮ್ಮ CIBIL ಸ್ಕೋರ್ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಅಳೆಯುತ್ತದೆ. ನಿಮ್ಮ ಸಾಲದಾತರು ಹಲವಾರು ಕಾರಣಗಳಿಗಾಗಿ ನಿಮ್ಮ ಸ್ಕೋರ್ ಪರಿಶೀಲಿಸಲು ಆಯ್ಕೆ ಮಾಡುತ್ತಾರೆ, ಅವುಗಳೆಂದರೆ:

  • ನಿಮ್ಮ ಕ್ರೆಡಿಟ್ ರೆಕಾರ್ಡ್ ಮತ್ತು ಇತಿಹಾಸವನ್ನು ಪರಿಶೀಲಿಸಲು
  • ಲೋನ್ ಮರುಪಾವತಿ ಮಾಡುವಲ್ಲಿ ನಿಮ್ಮ ಸಾಮರ್ಥ್ಯ
  • ನಿಮ್ಮ ಕ್ರೆಡಿಟ್ ಬ್ಯಾಲೆನ್ಸ್ ರಿವ್ಯೂ ಮಾಡಲು ಮತ್ತು ನಿಮ್ಮ ಪ್ರೊಫೈಲ್ ರಿಸ್ಕ್ ಲೆವೆಲ್ ಅನ್ನು ಅಂದಾಜಿಸಲು
  • ಸಾಲದಾತರ ಲೋನ್ ಅರ್ಹತಾ ಮಾನದಂಡಗಳನ್ನು ನೀವು ತಲುಪಿದ್ದೀರಾ ಎಂಬುದನ್ನು ಗುರುತಿಸಲು
  • ನಿಮಗೆ ಸೂಕ್ತವಾದ ಲೋನ್ ಮೊತ್ತ ಮತ್ತು ಬಡ್ಡಿ ದರವನ್ನು ತಲುಪಲು

ಆದ್ದರಿಂದ, ನಿಮ್ಮ ಹಣಕಾಸಿನ ಹೆಲ್ತ್ ಅನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡಲು ನಿಮ್ಮ ಸಿಬಿಲ್ ಸ್ಕೋರ್ ಒಂದು ಪ್ರಮುಖ ಸಾಧನವಾಗಿದೆ.

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವು ಏಕೆ ಪರಿಶೀಲಿಸಬೇಕು?

ಸಾಲಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಅಪೇಕ್ಷಿತ ಲೋನ್ ಮೊತ್ತಗಳನ್ನು ಪಡೆಯಲು ಕಡಿಮೆ ಕ್ರೆಡಿಟ್ ಸ್ಕೋರ್ ಅಡೆತಡೆಯಾಗುತ್ತದೆ. ಆದಾಗ್ಯೂ, ಬಳಕೆದಾರರು ತಮ್ಮ ಸಿಬಿಲ್ ವರದಿಯನ್ನು ಖರೀದಿಸಬಹುದು. ನಿಮ್ಮ ಸಿಬಿಲ್ ವರದಿಯಿಂದ, ನೀವು ಬಯಸಿದಾಗ ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸಬಹುದು. ಅದಕ್ಕಾಗಿ, ನೀವು ಕೆಲವು ಹಂತಗಳನ್ನು ಅನುಸರಿಸಬೇಕು.
ಸಿಬಿಲ್ ರಿಪೋರ್ಟ್ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ನೀಡಿದಂತೆ ನಿಮ್ಮ ಕ್ರೆಡಿಟ್ ಇತಿಹಾಸವನ್ನು ಹೊಂದಿದೆ. ಅಲ್ಲದೆ, ನೀವು ನಿಮ್ಮ ಸಿಬಿಲ್ ಸ್ಕೋರ್ ಮತ್ತು ಇತರ ಹಣಕಾಸಿನ ನಡತೆಯ ಕುರಿತು ಅಕ್ಸೆಸ್ ಪಡೆಯಬಹುದು. ನಿಮ್ಮ ಸಿಬಿಲ್ ವರದಿಯನ್ನು ಪಡೆಯಲು, ಬಳಕೆದಾರರು ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕು. ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಬಳಕೆದಾರರಿಗೆ ವಿವಿಧ ಚಂದಾದಾರಿಕೆ ಪ್ಯಾಕೇಜ್‌ಗಳನ್ನು ಒದಗಿಸುತ್ತವೆ. ಆಯಾ ಏಜೆನ್ಸಿಗೆ ಚಂದಾದಾರಿಕೆ ಕೋರಿಕೆಯನ್ನು ಮಾಡಿ ಮತ್ತು ಅವರು ನಿಮಗೆ ಮೇಲ್ ಕಳುಹಿಸುತ್ತಾರೆ.
ನಂತರ, ನೀವು ನಿಮ್ಮ ಸಿಬಿಲ್ ವರದಿಯನ್ನು ಖರೀದಿಸಲು ಬಯಸಿದರೆ, ನೀವು ಏಜೆನ್ಸಿಯಿಂದ ಮೇಲ್ ಡೌನ್ಲೋಡ್ ಮಾಡಬೇಕಾಗುತ್ತದೆ. ನಂತರ ಮೇಲ್‌ನಲ್ಲಿ ಲಗತ್ತಿಸಲಾದ ಫಾರ್ಮಿನಲ್ಲಿ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ನಿಮ್ಮ ಪಾರ್ಮ್‌‌ನೊಂದಿಗೆ ನಿಮ್ಮ ಪ್ರಮುಖ ಕೆವೈಸಿ ಡಾಕ್ಯುಮೆಂಟ್‌ಗಳು ಮತ್ತು ಕೋರಲಾದ ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ನೀವು ಒದಗಿಸಬೇಕು.
ಬಳಕೆದಾರರು ತಮ್ಮ ಸಿಬಿಲ್ ಸ್ಕೋರ್, ಹಣಕಾಸಿನ ಸ್ಥಿತಿ ಮುಂತಾದ ಯಾವುದೇ ಉದ್ದೇಶಕ್ಕಾಗಿ ತಮ್ಮ ಸಿಬಿಲ್ ವರದಿಗೆ ಭೇಟಿ ನೀಡಬಹುದು. ಆದಾಗ್ಯೂ, ಒಮ್ಮೆ ಚಂದಾದಾರಿಕೆ ಅವಧಿ ಮುಗಿದ ನಂತರ, ಬಳಕೆದಾರರು ಈ ವರದಿಗೆ ಅಕ್ಸೆಸ್ ಹೊಂದಿರುವುದಿಲ್ಲ ಮತ್ತು ಅವರ ಚಂದಾದಾರಿಕೆಯನ್ನು ನವೀಕರಿಸಬೇಕಾಗುತ್ತದೆ.

ಕ್ರೆಡಿಟ್ ಸ್ಕೋರ್, ಕ್ರೆಡಿಟ್ ರೇಟಿಂಗ್ ಮತ್ತು ಕ್ರೆಡಿಟ್ ರಿಪೋರ್ಟ್ ನಡುವಿನ ವ್ಯತ್ಯಾಸವನ್ನು ವಿವರಿಸಿ?

ಕ್ರೆಡಿಟ್ ಸ್ಕೋರ್, ಕ್ರೆಡಿಟ್ ರೇಟಿಂಗ್ ಮತ್ತು ಕ್ರೆಡಿಟ್ ರಿಪೋರ್ಟ್ ಅನ್ನು ಸಾಮಾನ್ಯವಾಗಿ ಪರ್ಯಾಯವಾಗಿ ಬಳಸಲಾಗುತ್ತದೆ. ಆದಾಗ್ಯೂ, ಅವುಗಳು ಬೇರೆ ಬೇರೆ ಅರ್ಥವನ್ನು ಹೊಂದಿದೆ.
ಕ್ರೆಡಿಟ್ ರಿಪೋರ್ಟ್ ಬಳಕೆದಾರರು ಮಾಡಿದ ಎಲ್ಲಾ ಕ್ರೆಡಿಟ್ ಲೈನ್‌ಗಳು ಮತ್ತು ಪಾವತಿಗಳ ವಿವರವಾದ ಪಟ್ಟಿಯನ್ನು ವಿವರಿಸುತ್ತದೆ. ಇದು ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿರುತ್ತದೆ:

  • ಬಳಕೆದಾರರ ವೈಯಕ್ತಿಕ ಡೇಟಾ
  • ಕ್ರೆಡಿಟ್ ಕಾರ್ಡಿನ ಸಾಲದ ಮೊತ್ತವನ್ನು ಒಳಗೊಂಡಿರುವ ಮುಚ್ಚಿದ ಮತ್ತು ತೆರೆದ ಲೋನ್ ಅಕೌಂಟ್‌ಗಳ ವಿವರವಾದ ಪಟ್ಟಿ
  • ಬಳಕೆದಾರರಿಂದ ಕ್ರೆಡಿಟ್ ವಿಚಾರಣೆ
  • ಫೋರ್‌ಕ್ಲೋಸರ್‌ಗಳು, ದಿವಾಳಿತನಗಳು, ನಾಗರಿಕ ದಾವೆಗಳ ಮೇಲೆ ತೀರ್ಪುಗಳು ಇತ್ಯಾದಿಗಳ ಸಾರ್ವಜನಿಕ ದಾಖಲೆ. ಪ್ರತಿ ಕ್ರೆಡಿಟ್ ರಿಪೋರ್ಟ್‌ನಲ್ಲಿ ಕ್ರೆಡಿಟ್ ಸ್ಕೋರ್ ಇರುತ್ತದೆ.

ಕ್ರೆಡಿಟ್ ಸ್ಕೋರ್ 300 ರಿಂದ 900 ವರೆಗೆ ಇರುವ ಮೂರು ಅಂಕಿಯ ಒಂದು ನಂಬರ್ ಆಗಿದೆ ಮತ್ತು ಇದನ್ನು ಕ್ರೆಡಿಟ್ ರಿಪೋರ್ಟಿನಲ್ಲಿ ಒಳಗೊಂಡಿದೆ. ಎಲ್ಲಾ ರೀತಿಯ ಸಾಲದಾತರಿಗೆ ಇದು ಸಾಲಗಾರರ ಕ್ರೆಡಿಟ್ ಅರ್ಹತೆಯನ್ನು ಸಾಬೀತುಪಡಿಸುವುದರಿಂದ ಕ್ರೆಡಿಟ್ ಸ್ಕೋರ್ ಮುಖ್ಯವಾಗಿದೆ. ಬಳಕೆದಾರರ ಹಣಕಾಸಿನ ಚಟುವಟಿಕೆಗಳ ಆಧಾರದ ಮೇಲೆ ಸ್ಕೋರ್ ಹೆಚ್ಚಾಗುತ್ತದೆ ಮತ್ತು ಕೆಳಗೆ ಹೋಗುತ್ತದೆ.
ಕ್ರೆಡಿಟ್ ರೇಟಿಂಗ್ ಎಂಬುದು ಅರ್ಜಿದಾರರ ಕ್ರೆಡಿಟ್ ಅರ್ಹತೆಯ ಪ್ರಮಾಣೀಕೃತ ತಪಾಸಣೆಯಾಗಿದೆ, ಅದನ್ನು ಕ್ರೆಡಿಟ್ ರೇಟಿಂಗ್ ಎಂದು ಕರೆಯಲಾಗುತ್ತದೆ. ಲೋನ್ ಪಡೆಯಲು ಬಯಸುವ ವ್ಯಕ್ತಿ, ಸಂಸ್ಥೆ, ಸಾರ್ವಭೌಮ ಸರ್ಕಾರ ಅಥವಾ ರಾಜ್ಯ ಪ್ರಾಂತೀಯ ಪ್ರಾಧಿಕಾರಗಳು, ಯಾವುದೇ ಘಟಕವು ಕ್ರೆಡಿಟ್ ರೇಟಿಂಗ್ ತಪಾಸಣೆಗಳಿಗೆ ಜವಾಬ್ದಾರರಾಗಿರುತ್ತದೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ