ಆಗಾಗ ಕೇಳುವ ಪ್ರಶ್ನೆಗಳು

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮತ್ತು ಟಾಪ್-ಅಪ್ ಸೌಲಭ್ಯ ಎಂದರೇನು?

ನಿಮ್ಮ ಈಗಿನ ಕಾರ್ ಲೋನ್ ಅನ್ನು ಬಜಾಜ್ ಫಿನ್‌ಸರ್ವ್‌ಗೆ ವರ್ಗಾಯಿಸುವ ಮೂಲಕ ಮತ್ತು ನಿಮ್ಮ ಕಾರಿನ ಮೌಲ್ಯಮಾಪನದ ಆಧಾರದ ಮೇಲೆ ಹೆಚ್ಚುವರಿ ಹಣವನ್ನು ಪಡೆಯುವ ಮೂಲಕ ನೀವು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮತ್ತು ಟಾಪ್-ಅಪ್ ಸೌಲಭ್ಯವನ್ನು ಪಡೆಯಬಹುದು. ಬಜಾಜ್ ಫಿನ್‌ಸರ್ವ್‌ನಲ್ಲಿ, ಮೌಲ್ಯಮಾಪನದ 160% ವರೆಗೆ ಹಣ ಪಡೆಯಬಹುದು, ಇದರ ಗರಿಷ್ಠ ಮಿತಿ ರೂ. 20 ಲಕ್ಷ.

ದಾಖಲೆಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಅರ್ಜಿ ಸಲ್ಲಿಕೆಯನ್ನು ಸುಲಭವಾಗಿಸಲು ಬಜಾಜ್ ಫಿನ್‌ಸರ್ವ್ ನಿಮ್ಮ ಮನೆಗೇ ಬಂದು ದಾಖಲೆಗಳನ್ನು ಸಂಗ್ರಹಿಸುವ ಸೌಲಭ್ಯ ಒದಗಿಸುತ್ತದೆ. ನೀವು ಅಪ್ಲಿಕೇಶನ್ ಫಾರ್ಮ್ ತುಂಬಿದ ನಂತರ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಪೇಪರ್ ವರ್ಕ್ ಪೂರ್ಣಗೊಳಿಸಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ.

ಈ ಕ್ರೆಡಿಟ್ ಸೌಲಭ್ಯಕ್ಕೆ ಯಾವುದಾದರೂ ಫೋರ್‌ಕ್ಲೋಸರ್ ಮತ್ತು ಭಾಗಶಃ ಮುಂಗಡ ಪಾವತಿ ಶುಲ್ಕಗಳು ಅನ್ವಯಿಸುತ್ತವೆಯೇ?

ನಿಮ್ಮ ಲೋನ್ ಅವಧಿಯ 6 ತಿಂಗಳನ್ನು ಪೂರ್ಣಗೊಳಿಸಿದ ನಂತರ, ನೀವು ನಿಮ್ಮ ಕಾರ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಯನ್ನು ಫೋರ್‌ಕ್ಲೋಸ್ ಮಾಡಬಹುದು ಅಥವಾ ಭಾಗಶಃ ಮುಂಗಡ ಪಾವತಿ ಮಾಡಬಹುದು. ಲೋನ್ ಭಾಗಶಃ ಮುಂಪಾವತಿ ಮಾಡಲು ಅಥವಾ ಫೋರ್‌ಕ್ಲೋಸ್ ಮಾಡಲು ಬಯಸಿದರೆ, ಬಾಕಿ ಇರುವ ಅಸಲು/ಮುಂಗಡ ಪಾವತಿ ಮೊತ್ತದ ಮೇಲೆ 4% ಜೊತೆಗೆ ಅನ್ವಯವಾಗುವ ತೆರಿಗೆಗಳನ್ನು ಫೋರ್‌ಕ್ಲೋಸರ್/ಭಾಗಶಃ ಮುಂಗಡ ಪಾವತಿ ಶುಲ್ಕವಾಗಿ ವಿಧಿಸಲಾಗುತ್ತದೆ.

ಟೆನರ್ (ಅವಧಿ) ಆಯ್ಕೆಗಳಲ್ಲಿ ಯಾವುವು ಲಭ್ಯವಿದೆ?

ಬಜಾಜ್ ಫಿನ್‍ಸರ್ವ್ 60 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯಲ್ಲಿ ಕಾರ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ ಒದಗಿಸುವುದರಿಂದ ನಿಮ್ಮ ಇಎಂಐಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿಸ್ತರಿಸಿಕೊಳ್ಳಬಹುದು. ನಿಮ್ಮ ಬಜೆಟ್‍ಗೆ ತಕ್ಕ ಮತ್ತು ಲೋನ್ ಮಂಜೂರಾತಿ ಷರತ್ತುಗಳನ್ನು ಪೂರೈಸುವ ಆದ್ಯ ಅವಧಿಯನ್ನು ಆಯ್ಕೆ ಮಾಡಬಹುದು.

ಪೂರ್ವ-ಮಾಲೀಕತ್ವದ ಕಾರ್ ಲೋನ್‌ಗಳಿಗೆ ಖಾತರಿದಾರ/ಸಹ-ಅರ್ಜಿದಾರರ ಅಗತ್ಯವಿದೆಯೇ?

ನಿಮ್ಮ ಆದಾಯವು ನಮ್ಮ ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸಲು ವಿಫಲವಾಗದ ಹೊರತು ಪೂರ್ವ-ಮಾಲೀಕತ್ವದ ಕಾರ್ ಲೋನ್‌ಗಳಿಗೆ ಖಾತರಿದಾರ/ಸಹ-ಅರ್ಜಿದಾರರ ಅಗತ್ಯವಿಲ್ಲ. ವಿಫಲವಾದಂತಹ ಸಂದರ್ಭಗಳಲ್ಲಿ, ನಿಮ್ಮ ಲೋ‍ನ್‍ಗೆ ಖಾತರಿಯಾಗಿ ಖಾತರಿದಾರರು ಅಥವಾ ಸಹ-ಅರ್ಜಿದಾರರು ಬೇಕಾಗಬಹುದು.

ನನ್ನ ಲೋನ್ ಸಾರಾಂಶ ಮತ್ತು ಭವಿಷ್ಯದ ಕಂತುಗಳನ್ನು ನಾನು ಆನ್ಲೈನಿನಲ್ಲಿ ನೋಡಬಹುದೇ?

ನಮ್ಮ ಬ್ರಾಂಚ್‌ಗಳಿಗೆ ಭೇಟಿ ನೀಡದೆ ನಿಮ್ಮ ಲೋನ್ ಸ್ಟೇಟ್‍ಮೆಂಟ್ ಮತ್ತು ಕಂತುಗಳನ್ನು ನೋಡಲು, ಡೌನ್‍ಲೋಡ್ ಮಾಡಲು ಮತ್ತು ಟ್ರ್ಯಾಕ್ ಮಾಡಲು ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯಗೆ ಲಾಗಿನ್ ಆಗಬಹುದು.

ಹೊಸ ಕಾರುಗಳಿಗೆ ನಾನು ಫಂಡಿಂಗ್ ಪಡೆಯಬಹುದೇ?

ಸಧ್ಯಕ್ಕೆ ಬಜಾಜ್ ಫಿನ್‌ಸರ್ವ್, ಬಳಸಿದ ಕಾರುಗಳಿಗೆ ಮಾತ್ರ ಲೋನ್‌ ನೀಡುತ್ತದೆ ಮತ್ತು ಹೊಸ ವಾಹನಗಳಿಗೆ ಯಾವುದೇ ಫಂಡಿಂಗ್ ಮಾಡುವುದಿಲ್ಲ.

ಇದಕ್ಕೆ ಕಾರಿನ ಪರಿಶೀಲನೆ ಅಥವಾ ಮೌಲ್ಯಮಾಪನದ ಅಗತ್ಯವಿದೆಯೇ?

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಟಾಪ್-ಅಪ್ ಲೋನ್‌ಗೆ ವಾಹನಗಳ ಪರಿಶೀಲನೆ/ಮೌಲ್ಯಮಾಪನದ ಅಗತ್ಯವಿದೆ. ಲೋನ್ ಅರ್ಜಿ ಪ್ರಕ್ರಿಯೆಯ ಭಾಗವಾಗಿ, ಬಜಾಜ್ ಫಿನ್‌ಸರ್ವ್‌ ನಿಮ್ಮ ಕಾರುಗಳ ಮೌಲ್ಯಮಾಪನ ಮತ್ತು ಪರಿಶೀಲನೆಯ ವ್ಯವಸ್ಥೆ ಮಾಡುತ್ತದೆ. ನಿಮ್ಮ ಕಾರಿನ ಮೌಲ್ಯಮಾಪನದ ಆಧಾರದ ಮೇಲೆ, ಲೋನ್ ಮೊತ್ತವನ್ನು ಮಂಜೂರು ಮಾಡಲಾಗುತ್ತದೆ.

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಟಾಪ್-ಅಪ್ ಲೋ‍ನ್‍ನಿಂದ ಯಾವ ಕಾರುಗಳಿಗೆ ಹಣ ಸಿಗುತ್ತದೆ?

ಹಳದಿ ಪ್ಲೇಟ್‌ ಕಾರುಗಳು ಅಥವಾ ಕಮರ್ಶಿಯಲ್ ವಾಹನಗಳನ್ನು ಬಿಟ್ಟು, ಉಳಿದೆಲ್ಲಾ ಖಾಸಗಿ ವಾಹನಗಳಿಗೆ - ಅದು ಹ್ಯಾಚ್‌ಬ್ಯಾಕ್‌ ಆಗಿರಲಿ ಅಥವಾ ಸೆಡಾನ್‌ ಆಗಿರಲಿ - ನಾವು ಹಣಕಾಸು ಒದಗಿಸುತ್ತೇವೆ.

ಇನ್ನಷ್ಟು ಓದಿರಿ ಕಡಿಮೆ ಓದಿ