ಆಗಾಗ ಕೇಳುವ ಪ್ರಶ್ನೆಗಳು

ಯಾಕೆ ನಾನು ಬಿಸಿನೆಸ್ ಲೋನ್ ತೆಗೆದುಕೊಳ್ಳಬೇಕು?

ವ್ಯಾಪಾರವು ಶುರುವಿನ ಅಥವಾ ಬೆಳವಣಿಗೆಯ ಹಂತದಲ್ಲಿದ್ದರೆ, ಒಂದಷ್ಟು ಹಣ ಹಾಕುವುದರಿಂದ ಅದರ ಗತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ನಿಮ್ಮ ಅಲ್ಪಾವಧಿ ಅಥವಾ ದೀರ್ಘಾವಧಿ ಹಣಕಾಸಿನ ಅಗತ್ಯಗಳಿಗೆ ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್ ಪಡೆಯಬಹುದು, ವರ್ಕಿಂಗ್ ಕ್ಯಾಪಿಟಲ್ ಕಡಿಮೆ ಬಿದ್ದರೆ, ಯಂತ್ರೋಪಕರಣ ಅಥವಾ ಸಲಕರಣೆಗಳನ್ನು ಖರೀದಿಸಲು, ಸರಕು ಅಥವಾ ಕಚ್ಚಾ ವಸ್ತುಗಳ ಖರೀದಿ, ಸಿಬ್ಬಂದಿ ಅಥವಾ ಮಾರಾಟಗಾರರಿಗೆ ಕೊಡಲು, ಪ್ರಚಾರವನ್ನು ಆರಂಭಿಸಲು, ಬಿಸಿನೆಸ್ ಪ್ರಯಾಣವನ್ನು ಬುಕ್ ಮಾಡಲು ಹೀಗೆ ಹಲವು ಕಾರಣಗಳಿಗೆ ಅದನ್ನು ಬಳಸಬಹುದು.

ಬಿಸಿನೆಸ್ ಲೋನಿಗಾಗಿ ಕ್ರೆಡಿಟ್ ಲಿಮಿಟ್ ಹೆಚ್ಚಿಸಬಹುದೇ?

ಹೌದು, ಬಿಸಿನೆಸ್ ಲೋನಿಗೆ ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವುದು ಸಾಧ್ಯವಾಗುತ್ತದೆ. ಇದು ನಿಮ್ಮ ಕೋರಿಕೆಯ ಸಮಯದಲ್ಲಿ ಅರ್ಹತಾ ಮಾನದಂಡಕ್ಕೆ ಒಳಪಟ್ಟಿರುತ್ತದೆ ಮತ್ತು ಬಜಾಜ್ ಫಿನ್‌ಸರ್ವ್‌ನ ಸ್ವಂತ ವಿವೇಚನೆಯಿಂದ ನಿರ್ವಹಿಸಲ್ಪಡುತ್ತದೆ. ನೀವು ನಮಗೆ ಮನವಿ ಪತ್ರ ಸಲ್ಲಿಸಬಹುದು ಮತ್ತು ಅಗತ್ಯವಿದ್ದರೆ ವರ್ಧಿತ ಮೊತ್ತದ ಅಪ್ಲಿಕೇಶನ್‌ಗಾಗಿ ನೀವು ನಮಗೆ ಮತ್ತು ಹೊಸ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬಹುದು.

ಫ್ಲೆಕ್ಸಿ ಸೌಲಭ್ಯವು ಹೇಗೆ ಕೆಲಸ ಮಾಡುತ್ತದೆ?

ಫ್ಲೆಕ್ಸಿ ಸೌಲಭ್ಯವು ನಮ್ಮ ಸಾಲಗಾರರಿಗೆ ನೀಡಲಾಗುವ ಒಂದು ವಿಶಿಷ್ಟ ಕ್ರೆಡಿಟ್ ಸೌಲಭ್ಯವಾಗಿದೆ, ಇಲ್ಲಿ ನಿಮಗೆ ನಿರ್ದಿಷ್ಟ ಅವಧಿಗೆ ಒಂದಷ್ಟು ಮೊತ್ತದ ಕ್ರೆಡಿಟ್‌ಗೆ ಅನುಮೋದನೆ ಸಿಗುತ್ತದೆ. ಫ್ಲೆಕ್ಸಿ ಸೌಲಭ್ಯದಲ್ಲಿ ಲೋನ್ ಆರಂಭದ ಅವಧಿಯಲ್ಲಿ ಮಾಸಿಕ ಕಂತುಗಳು ಕೇವಲ ಬಡ್ಡಿಯನ್ನು ಮಾತ್ರ ಒಳಗೊಂಡಿರುತ್ತವೆ, ಇದು ನಿಮ್ಮ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡುತ್ತದೆ.*

ನಿಮ್ಮ ಬಳಿ ಹೆಚ್ಚಿನ ಹಣವಿದ್ದಾಗ ಮುಂಗಡವಾಗಿ ಪಾವತಿಸಬಹುದು ಹಾಗೂ ಮಂಜೂರಾದ ಮೊತ್ತದಿಂದ ನಿಮಗೆ ಬೇಕಾದಾಗೆಲ್ಲ ವಿತ್‌‌ಡ್ರಾ ಮಾಡಿಕೊಳ್ಳಬಹುದು. ನೀವು ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ಈ ಮಿತಿಯು ಅವಧಿಯ ಉದ್ದಕ್ಕೆ ಕಡಿಮೆಯಾಗುತ್ತಾ ಹೋಗಬಹುದು ಅಥವಾ ಹಾಗೆಯೇ ಉಳಿಯಬಹುದು, ಈ ಮೂಲಕ ನೀವು ಹೆಚ್ಚಿನ ಫ್ಲೆಕ್ಸಿಬಿಲಿಟಿ ಪಡೆಯುತ್ತೀರಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಫ್ಲೆಕ್ಸಿ ಸೌಲಭ್ಯ ಮತ್ತು ಟರ್ಮ್ ಲೋನ್ ನಡುವಿನ ವ್ಯತ್ಯಾಸವೇನು?

ಟರ್ಮ್ ಲೋನ್: ಈ ಲೋನ್ ಅನ್ನು ಸಾಲಗಾರರು ಒಂದು ದೊಡ್ಡ ಮೊತ್ತದಲ್ಲಿ ಪಡೆಯುತ್ತಾರೆ ಮತ್ತು ಅಸಲು ಹಾಗೂ ಬಡ್ಡಿಗಳೆರಡೂ ಇರುವಂತೆ ಸಮನಾದ ಮಾಸಿಕ ಕಂತುಗಳಲ್ಲಿ ಮರುಪಾವತಿಸುತ್ತಾರೆ. ನಿಮ್ಮ ಬಳಿ ಹೆಚ್ಚಿನ ಹಣವಿದ್ದಾಗ ಮುಂಗಡವಾಗಿ ಪಾವತಿಸಬಹುದು, ಆದರೆ ಮಂಜೂರಾದ ಮೊತ್ತದಿಂದ ಅನೇಕ ಬಾರಿ ವಿತ್‌ಡ್ರಾ ಮಾಡುವ ಆಯ್ಕೆ ಇದರಲ್ಲಿಲ್ಲ.

ಫ್ಲೆಕ್ಸಿ ಸೌಲಭ್ಯ: ಈ ಕ್ರೆಡಿಟ್ ಸೌಲಭ್ಯವು ಸಾಲಗಾರರಿಗೆ ಪ್ರತಿ ವರ್ಷ ನವೀಕರಿಸುವ ಆಯ್ಕೆಯೊಂದಿಗೆ ಸ್ಥಿರ ಕ್ರೆಡಿಟ್ ಲೈನ್ ರೂಪದಲ್ಲಿ ಸಾಲವನ್ನು ನೀಡುತ್ತದೆ. ಲಭ್ಯವಿರುವ ಮಿತಿಯೊಳಗೆ ನಿಮಗೆ ಬೇಕಾದಾಗೆಲ್ಲ ವಿತ್‌‌ಡ್ರಾ ಮಾಡಬಹುದು ಹಾಗೂ ಹೆಚ್ಚಿನ ಹಣವಿದ್ದಾಗ ಮುಂಗಡವಾಗಿ ಪಾವತಿಸಬಹುದು. ಪ್ರತಿ ತಿಂಗಳು ನೀವು ಬರೀ ಬಡ್ಡಿಯನ್ನು ಮಾತ್ರ ಕಟ್ಟುತ್ತೀರಿ, ಈ ಬಡ್ಡಿಯನ್ನು ಬಳಸಿಕೊಂಡ ಹಣದ ಮೇಲೆ ಮಾತ್ರ ಲೆಕ್ಕ ಹಾಕಲಾಗಿರುತ್ತದೆ. ಅಸಲನ್ನು ಅವಧಿಯ ಕೊನೆಗೆ ಪಾವತಿಸಲಾಗುತ್ತದೆ. ‌‌

ಲೋನ್ ಪ್ರಕ್ರಿಯೆಯ ಸಮಯದಲ್ಲಿ ನನಗೆ ಒದಗುವ ಶುಲ್ಕಗಳೇನು?

ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್‌‌ಗೆ ಅನ್ವಯವಾಗುವ ಫೀ ಮತ್ತು ಶುಲ್ಕಗಳು ಹೀಗಿವೆ:

ಬಡ್ಡಿದರ: ಇದು ಲೋನ್ ತೆಗೆದುಕೊಳ್ಳುವುದರ ವೆಚ್ಚವಾಗಿದೆ ಹಾಗೂ ಇದು ನಿಮ್ಮ ಆದಾಯ, ಕ್ರೆಡಿಟ್ ಸ್ಕೋರ್, ವಯಸ್ಸು ಮತ್ತು ಇನ್ನೂ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗೆಯೇ ಪ್ರಸ್ತುತ ಮಾರುಕಟ್ಟೆ ದರಗಳು, ಆರ್‌ಬಿಐ ನೀತಿ ಮತ್ತು ಆಂತರಿಕ ನೀತಿಗಳನ್ನೂ ಅವಲಂಬಿಸಿರುತ್ತದೆ.

ಬಿಪಿಐ (ಬ್ರೋಕನ್ ಪೀರಿಯಡ್ ಇಂಟರೆಸ್ಟ್): ಇದು ಪ್ರತಿ ತಿಂಗಳ 15ನೇ ದಿನದ ನಂತರ ವಿತರಿಸಲಾದ ಲೋನ್‌ಗಳಿಗೆ ಅನ್ವಯವಾಗುವ ಬಡ್ಡಿಯಾಗಿದೆ. ವಿತರಣೆಯಾದ ದಿನಾಂಕದಿಂದ ತಿಂಗಳ ಉಳಿದ ದಿನಗಳಿಗೆ ಬಿಪಿಐ ಅನ್ನು ಪ್ರೊ-ರೇಟಾ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಏಕೆಂದರೆ ಇಲ್ಲಿ ಲೋನ್ ಬುಕ್ ಮಾಡಿದ ಎರಡನೇ ತಿಂಗಳಿಂದ ನಿಮ್ಮ ಇಎಂಐಗಳು ಶುರುವಾಗುತ್ತವೆ. 1ನೇ ತಿಂಗಳನ್ನು ಉಚಿತ ಅವಧಿ ಎಂದು ಪರಿಗಣಿಸಲಾಗುತ್ತದೆ, ಆ ಸಮಯಕ್ಕೆ ಯಾವುದೇ ಬಡ್ಡಿ ಅಥವಾ ಇಎಂಐ ಇರುವುದಿಲ್ಲ.

ಪ್ರಕ್ರಿಯಾ ಶುಲ್ಕ: ಇದು ನಿಮ್ಮ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಗೊಳಿಸುವ ಶುಲ್ಕವಾಗಿದೆ.

ಬೌನ್ಸ್ ಶುಲ್ಕಗಳು: ಇದು ಇಎಂಐ ತಪ್ಪಿಸಿದ್ದಕ್ಕಾಗಿ ವಿಧಿಸುವ ಶುಲ್ಕವಾಗಿದೆ.

ದಂಡದ ಬಡ್ಡಿ: ಇಎಂಐ ಕಟ್ಟುವುದು ತಡವಾದಾಗ ಅಥವಾ ಕಟ್ಟದೇ ಹೋದಾಗ ವಿಳಂಬ ಪಾವತಿಯ ಮೇಲೆ ವಿಧಿಸುವ ಬಡ್ಡಿಯಾಗಿದೆ.

ಡಾಕ್ಯುಮೆಂಟ್ ಪ್ರಕ್ರಿಯಾ ಶುಲ್ಕಗಳು: ಇದು ಲೋನ್‌‌‌ಗೆ ಅಪ್ಲೈ ಮಾಡುವಾಗ ನೀವು ಸಲ್ಲಿಸಿದ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸುವ ಶುಲ್ಕವಾಗಿದೆ.

ಫೋರ್‌ಕ್ಲೋಸರ್ ಶುಲ್ಕಗಳು: ಇದು ಲೋನ್ ಕಾಲಾವಧಿ ಮುಗಿಯುವ ಮೊದಲೇ ಸಂಪೂರ್ಣ ಮರುಪಾವತಿ ಮಾಡಿದರೆ ಒದಗುವ ಶುಲ್ಕವಾಗಿದೆ. ಇದನ್ನು ಬಾಕಿ ಉಳಿದಿರುವ ಮೊತ್ತದ ಮೇಲೆ ಶೇಕಡಾ ರೂಪದಲ್ಲಿ ವ್ಯಕ್ತಪಡಿಸಲಾಗುವುದು.

ಭಾಗಶಃ-ಮುಂಗಡ ಪಾವತಿ ಶುಲ್ಕಗಳು: ಲೋನ್ ಕಾಲಾವಧಿಯಲ್ಲಿ ನೀವು ಲೋನ್‌ನ ಒಂದು ಭಾಗವನ್ನು ಮುಂಗಡವಾಗಿ ಪಾವತಿಸಿದಾಗ ಈ ಶುಲ್ಕ ಒದಗುತ್ತದೆ. ಇದನ್ನು ಮುಂಗಡ ಪಾವತಿಸಿದ ಮೊತ್ತದ ಮೇಲೆ ಶೇಕಡಾವಾರು ರೂಪದಲ್ಲಿ ವ್ಯಕ್ತಪಡಿಸಲಾಗುವುದು. ಈ ಶುಲ್ಕವು ಬಜಾಜ್ ಫಿನ್‌ಸರ್ವ್ ವಯಕ್ತಿಕ ಗ್ರಾಹಕರಿಗೆ ನೀಡುವ ಫ್ಲೆಕ್ಸಿ ಸೌಲಭ್ಯಕ್ಕೆ ಅನ್ವಯವಾಗುವುದಿಲ್ಲ.

ನಮ್ಮ ಶುಲ್ಕಗಳು 100% ಪಾರದರ್ಶಕವಾಗಿವೆ, ಆದ್ದರಿಂದ ನಿಮ್ಮ ಮರುಪಾವತಿಯನ್ನು ಪರಿಣಾಮಕಾರಿಯಾಗಿ ಯೋಜಿಸಲು ಬಜಾಜ್ ಫಿನ್‌‌ಸರ್ವ್ ಲೋನ್ ಮೇಲೆ ಅನ್ವಯವಾಗುವ ಫೀ ಮತ್ತು ಶುಲ್ಕಗಳನ್ನು ನೋಡಿರಿ.

ಯಾಕೆ ನಾನು ಬಿಸಿನೆಸ್ ಲೋನ್ ತೆಗೆದುಕೊಳ್ಳಬೇಕು?

ನಿಮ್ಮ ವ್ಯಾಪಾರವು ಶುರುವಿನ ಹಂತದಲ್ಲಿ ಅಥವಾ ಬೆಳವಣಿಗೆಯ ಹಂತದಲ್ಲಿದ್ದರೆ, ಅದಕ್ಕೆ ಒಂದಷ್ಟು ಹೆಚ್ಚುವರಿ ಹಣಕಾಸು ಒದಗಿಸುವುದರಿಂದ ವ್ಯಾಪಾರದ ವೇಗ ಹೆಚ್ಚಿಸಬಹುದು. ನಿಮ್ಮ ಅಲ್ಪಾವಧಿ ಅಥವಾ ದೀರ್ಘಾವಧಿಯ ಹಣಕಾಸಿನ ಅಗತ್ಯಗಳಿಗಾಗಿ ನೀವು ಬಜಾಜ್ ಫಿನ್‌ಸರ್ವ್‌ನಿಂದ ಬಿಸಿನೆಸ್ ಲೋನ್ ಪಡೆಯಬಹುದು ಮತ್ತು ವರ್ಕಿಂಗ್ ಕ್ಯಾಪಿಟಲ್ ಕೊರತೆ ಇದ್ದರೆ ಅದನ್ನು ತಪ್ಪಿಸಬಹುದು.

ಬಿಸಿನೆಸ್ ಲೋನ್ ಮಂಜೂರಾತಿಯನ್ನು ಹೆಚ್ಚಿಸಿಕೊಳ್ಳಬಹುದೇ?

ಹೌದು, ನಿಮ್ಮ ಲೋನ್ ಮೊತ್ತವನ್ನು ಹೆಚ್ಚಿಸುವುದು ಸಾಧ್ಯವಾಗುತ್ತದೆ. ಇದು ನಿಮ್ಮ ಕೋರಿಕೆಯ ಸಮಯದಲ್ಲಿ ಅರ್ಹತಾ ಮಾನದಂಡಕ್ಕೆ ಒಳಪಟ್ಟಿರುತ್ತದೆ ಮತ್ತು ಬಜಾಜ್ ಫಿನ್‌ಸರ್ವ್‌ನ ಸ್ವಂತ ವಿವೇಚನೆಯಿಂದ ನಿರ್ವಹಿಸಲ್ಪಡುತ್ತದೆ. ನೀವು ನಮಗೆ ಮನವಿ ಪತ್ರ ಸಲ್ಲಿಸಬಹುದು ಮತ್ತು ಅಗತ್ಯವಿದ್ದರೆ ಹೆಚ್ಚಿನ ಮೊತ್ತಕ್ಕೆ ಅಪ್ಲೈ ಮಾಡಲು ಕೆಲವು ಹೊಸ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬಹುದು.

ಫ್ಲೆಕ್ಸಿ ಸೌಲಭ್ಯವು ಹೇಗೆ ಕೆಲಸ ಮಾಡುತ್ತದೆ?

ಫ್ಲೆಕ್ಸಿ ಬಿಸಿನೆಸ್ ಲೋನ್ ನಾವು ನೀಡುವ ವಿಶಿಷ್ಟ ಕ್ರೆಡಿಟ್ ಸೌಲಭ್ಯವಾಗಿದೆ. ಇಲ್ಲಿ, ಹೊಸ ಅಪ್ಲಿಕೇಶನ್‌ ಸಲ್ಲಿಸದೆ ಲೋನ್ ಮಿತಿಯೊಳಗಿನಿಂದ ಬೇಕಾದಷ್ಟು ಬಾರಿ ಹಣ ಪಡೆಯಬಹುದು. ನೀವು ನಿಜವಾಗಲೂ ಪಡೆದ ಮೊತ್ತದ ಮೇಲೆ ಮಾತ್ರ ಬಡ್ಡಿ ಕಟ್ಟುತ್ತೀರಿ. ನೀವು ಲೋನ್ ಆರಂಭದ ಅವಧಿಯಲ್ಲಿ ಬಡ್ಡಿಯನ್ನು-ಮಾತ್ರ ಇಎಂಐ ಆಗಿ ಪಾವತಿಸುವ ಆಯ್ಕೆ ಮಾಡಬಹುದು, ಇದು ನಿಮ್ಮ ಮಾಸಿಕ ಕಂತುಗಳನ್ನು 45% ವರೆಗೆ ಕಡಿಮೆ ಮಾಡುತ್ತದೆ.* ಇದು ನಿಮ್ಮ ವ್ಯಾಪಾರದ ನಗದು ಹರಿವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಜೊತೆಗೆ, ಯಾವುದೇ ಶುಲ್ಕಗಳಿಲ್ಲದೆ ನೀವು ಹಣವನ್ನು ಮುಂಗಡವಾಗಿ ಪಾವತಿಸಬಹುದು.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ