FOIR ಎಂದರೇನು? ಇದು ಪರ್ಸನಲ್ ಲೋನ್ ಅನುಮೋದನೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

2 ನಿಮಿಷದ ಓದು

ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು, ವಿಶೇಷವಾಗಿ ಪರ್ಸನಲ್ ಲೋನ್ ನಂತಹ ಭದ್ರತೆ ರಹಿತ ಲೋನ್‌ಗಳ ಲೋನ್ ಅಪ್ಲಿಕೇಶನ್‌ಗಳಿಗೆ ಅನುಮೋದನೆ ನೀಡುವುದಕ್ಕೆ ಮುಂಚೆ ಅರ್ಜಿದಾರರ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸುತ್ತವೆ. ಎಫ್‌ಒಐಆರ್ ಎಂಬುದು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ಈ ನಿಟ್ಟಿನಲ್ಲಿ ಸಹಾಯ ಮಾಡುವ ಅಳತೆಗೋಲು. ಆದಾಯ ಮತ್ತು ಸ್ಥಿರ ಹೊಣೆಗಾರಿಕೆ ನಡುವಿನ ಅನುಪಾತ ಎಂದು ಕೂಡ ಕರೆಯಲ್ಪಡುವ ಎಫ್ಒಐಆರ್, ನೀವು ಅಗತ್ಯ ಮರುಪಾವತಿ ಸಾಮರ್ಥ್ಯವನ್ನು ಹೊಂದಿದ್ದೀರಾ ಎಂಬುದನ್ನು ನಿರ್ಧರಿಸಲು ಸಾಲದಾತರಿಗೆ ಸಹಾಯ ಮಾಡುತ್ತದೆ.

ಒಟ್ಟಾರೆಯಾಗಿ, ಎಫ್‌ಓಐಆರ್ ನಿಮ್ಮ ನಿವ್ವಳ ಮಾಸಿಕ ಖರ್ಚನ್ನು ನಿಮ್ಮ ನಿವ್ವಳ ಮಾಸಿಕ ಆದಾಯದ ಶೇಕಡಾವಾರಿನ ರೂಪದಲ್ಲಿ ಅಳೆಯುತ್ತದೆ. ಈ ಫಲಿತಾಂಶವು ನಿಮ್ಮ ಉಳಿಕೆ ಆದಾಯವು ಲೋನ್ ಮರುಪಾವತಿಗೆ ಸಾಕಾಗುತ್ತದೆಯೇ, ಇಲ್ಲವೇ ಎಂಬುದನ್ನು ಸೂಚಿಸುತ್ತದೆ. ಭದ್ರತೆ ರಹಿತ ಲೋನ್‌ಗಳಲ್ಲಿ ಸಾಲದಾತರಿಗೆ ಹೆಚ್ಚಿನ ಅಪಾಯ ಎದುರಾಗುವುದರಿಂದ, ಸಾಲದಾತರು ನಿಮ್ಮ ಪರ್ಸನಲ್ ಲೋನ್ ಅರ್ಹತೆ ಮೌಲ್ಯಮಾಪನ ಮಾಡುವಾಗ ಎಫ್‌ಓಐಆರ್‌ಗೆ ಬಹಳಷ್ಟು ಮಹತ್ವ ಹೊಂದಿರುತ್ತದೆ. ಎಫ್‌ಓಐಆರ್ ಲೆಕ್ಕಾಚಾರವು ಸಾಲದಾತರಲ್ಲಿ ಅರ್ಜಿದಾರರು ಕೋರಿದ ನಿರೀಕ್ಷಿತ ಲೋನಿಗೆ ಪಾವತಿಸಬೇಕಾದ ಇಎಂಐ ಗಳನ್ನು ಕೂಡ ಒಳಗೊಂಡಿದೆ. ಇದನ್ನು ಸಾಲದಿಂದ-ಆದಾಯದ ಅನುಪಾತ ಎಂದು ಕೂಡ ಕರೆಯಲಾಗುತ್ತದೆ.

ಸಾಮಾನ್ಯವಾಗಿ, ನಿಮ್ಮ ಎಫ್‌ಓಐಆರ್ 40% ಮತ್ತು 50% ನಡುವೆ ಇರಬೇಕು. ಇದರರ್ಥ, ನಿಮ್ಮ ಒಟ್ಟು ಮಾಸಿಕ ಖರ್ಚುಗಳು ನಿಮ್ಮ ಆದಾಯದ 50% ಗಿಂತ ಹೆಚ್ಚಾಗಬಾರದು. ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವವರಿಗೆ, ಕೆಲವು ಸಾಲದಾತರು 65% ಅಥವಾ 70% ವರೆಗಿನ ಎಫ್‌ಓಐಆರ್‌ ಅನ್ನೂ ಪರಿಗಣಿಸುತ್ತಾರೆ.

FOIR ಅನ್ನು ಹೇಗೆ ಲೆಕ್ಕ ಹಾಕುತ್ತಾರೆ?

ಫಾಯಿರ್ ಲೆಕ್ಕಾಚಾರ ಮಾಡಲು ನೀವು ಈ ಕೆಳಗಿನ ಫಾರ್ಮುಲಾವನ್ನು ಬಳಸಬಹುದು.

ಸ್ಥಿರ ಜವಾಬ್ದಾರಿಗಳು ಮತ್ತು ಆದಾಯದ ಅನುಪಾತ = ಒಟ್ಟಾರೆ ಸ್ಥಿರ ಮಾಸಿಕ ಜವಾಬ್ದಾರಿಗಳು/ ನಿವ್ವಳ ಮಾಸಿಕ ವೇತನ x 100

ಈ ಕೆಳಗಿನ ಉದಾಹರಣೆಯ ಸಹಾಯದಿಂದ ಅದನ್ನು ಅರ್ಥಮಾಡಿಕೊಳ್ಳಿ:

ಒಬ್ಬ ವ್ಯಕ್ತಿಯು ಐದು ವರ್ಷಗಳ ಅವಧಿಗೆ ರೂ. 5 ಲಕ್ಷದ ಪರ್ಸನಲ್ ಲೋನಿಗೆ ಅಪ್ಲೈ ಮಾಡಿದ್ದಾರೆ. ಅವರ ನಿವ್ವಳ ಮಾಸಿಕ ಆದಾಯ ರೂ. 80,000 ಆಗಿರುತ್ತದೆ ಮತ್ತು ಅವರ ನಿಗದಿತ ವೆಚ್ಚಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

  • ರೂ. 5,000 ಕಾರ್ ಲೋನ್ ಇಎಂಐ
  • ರೂ. 7,000 ಹೋಮ್ ಲೋನ್ ಇಎಂಐ
  • ಮಾಸಿಕ ಬಾಡಿಗೆ ರೂ. 8,000 ಕ್ಕೆ ಸಮನಾಗಿರುತ್ತದೆ
  • ರೂ. 8,000 ಇತರ ಫಿಕ್ಸೆಡ್ ಪಾವತಿಗಳು

ಅಲ್ಲದೆ, ಅವರ ನಿರೀಕ್ಷಿತ ಲೋನಿಗೆ ಲೆಕ್ಕ ಹಾಕಲಾದ ಇಎಂಐ ರೂ. 11,377.

ಅವರ ಎಫ್ಒಐಆರ್ = (5,000 + 7,000 + 8,000 + 8,000 + 11,377)/80,000 x100 = 49.2%.

ಇಲ್ಲಿ, ನಿಗದಿತ ಮಾಸಿಕ ಜವಾಬ್ದಾರಿಗಳು ಇವುಗಳನ್ನು ಒಳಗೊಂಡಿವೆ:

  • ಕ್ರೆಡಿಟ್ ಕಾರ್ಡ್ ಪಾವತಿಗಳು
  • ಅಸ್ತಿತ್ವದಲ್ಲಿರುವ ಇಎಂಐಗಳು
  • ಬಾಡಿಗೆ ಪಾವತಿಗಳು
  • ಮಾಸಿಕ ಜೀವನ ವೆಚ್ಚಗಳು
  • ನೀವು ಅಪ್ಲೈ ಮಾಡುತ್ತಿರುವ ಲೋನಿನ ಇಎಂಐ
  • ಬೇರೆ ಯಾವುದಾದರೂ ಲೋನ್‌ಗಳಿದ್ದರೆ

ಆದಾಗ್ಯೂ, ಫಿಕ್ಸೆಡ್ ಅಥವಾ ರಿಕರಿಂಗ್ ಡೆಪಾಸಿಟ್‌ಗಳು ಹಾಗೂ ಮಾಸಿಕ ತೆರಿಗೆ ಪಾವತಿಗಳನ್ನು ಸ್ಥಿರ ಮಾಸಿಕ ಜವಾಬ್ದಾರಿ ಎಂದು ಪರಿಗಣಿಸಲಾಗುವುದಿಲ್ಲ.

ಪರ್ಸನಲ್ ಲೋನ್ ಅನುಮೋದನೆ ಮೇಲೆ FOIR ಹೇಗೆ ಪರಿಣಾಮ ಬೀರುತ್ತದೆ?

FOIR ಕಡಿಮೆ ಇದ್ದಾಗ ನಿಮ್ಮ ಹಣಕಾಸಿನ ಮೇಲೆ ಈ ಕೆಳಗಿನ ಪರಿಣಾಮ ಉಂಟಾಗುತ್ತದೆ:

  • ಒಟ್ಟು ಹೊಣೆಗಾರಿಕೆಗಳನ್ನು ಕಡಿಮೆ ಮಾಡುತ್ತದೆ
  • ವಿಲೇವಾರಿ ಆದಾಯ ಹೆಚ್ಚಾಗುತ್ತದೆ
  • ಮರುಪಾವತಿ ಸಾಮರ್ಥ್ಯ ಸುಧಾರಿಸುತ್ತದೆ

ಅಂತಹ ಅಂಶಗಳು ಅರ್ಜಿದಾರರ ಕ್ರೆಡಿಟ್ ಅರ್ಹತೆಯನ್ನು ಮೆಚ್ಚಿಸುತ್ತವೆ, ಹೀಗಾಗಿ ಆತ/ಆಕೆಯ ಲೋನ್ ಅನುಮೋದನೆಯ ಅವಕಾಶಗಳನ್ನು ಸುಧಾರಿಸುತ್ತವೆ.

ಹೆಚ್ಚಿನ ಎಫ್ಒಐಆರ್ ಹೊಂದಿರುವ ವ್ಯಕ್ತಿಗಳು ಈ ಕೆಳಗಿನ ತಂತ್ರಗಳನ್ನು ಬಳಸುವ ಮೂಲಕ ತಮ್ಮ ಅನುಮೋದನೆಯ ಅವಕಾಶಗಳನ್ನು ಸುಧಾರಿಸಬಹುದು:

  • ಬಾಕಿ ಉಳಿದ ಲೋನ್ ಹೊಣೆಗಾರಿಕೆಯನ್ನು ಪಾವತಿಸಿ
  • ಕಡಿಮೆ FOIR ಹೊಂದಿರುವ ಸಹ-ಸಹಿದಾರರೊಂದಿಗೆ ಅಪ್ಲೈ ಮಾಡಿ
  • ಆಯ್ದ ಸಾಲದಾತರು ನಿರ್ಧರಿಸಿದ ಇತರ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿ
  • ಸಾಲದಾತರಿಗೆ ಯಾವುದೇ ಇತರ ನಿಯಮಿತ ಆದಾಯದ ಮೂಲವನ್ನು ಬಹಿರಂಗಪಡಿಸಿ

ನಿಮ್ಮ ಎಫ್‌ಓಐಆರ್ ಹೆಚ್ಚಾಗಿದ್ದರೆ, ಲೋನ್‌ಗೆ ಅಪ್ಲೈ ಮಾಡುವ ಮೊದಲು ಅದನ್ನು ಕಡಿಮೆ ಮಾಡಿಕೊಳ್ಳಿ. ಸಾಮಾನ್ಯವಾಗಿ, ಹೆಚ್ಚಿನ ಕ್ರೆಡಿಟ್ ಸ್ಕೋರ್ ಮತ್ತು ಕಡಿಮೆ ಎಫ್‌ಓಐಆರ್ ಇದ್ದಾಗ, ನೀವು ಪರ್ಸನಲ್ ಲೋನ್ ಮೂಲಕ ಸಾಕಷ್ಟು ಹಣವನ್ನು ಬಹಳ ಸುಲಭವಾಗಿ ಪಡೆಯಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ