ಎನ್ಆರ್‌ಐ ಫಿಕ್ಸೆಡ್ ಡೆಪಾಸಿಟ್ ಕ್ಯಾಲ್ಕುಲೇಟರ್

ಎನ್‌ಆರ್‌ಐ ಆಗಿ, ನೀವು ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಬಹುದು, ಇದರಲ್ಲಿ ನೀವು ಡೆಪಾಸಿಟ್ ಮಾಡಿದ ಮೊತ್ತದ ಮೇಲೆ ಸ್ಥಿರವಾದ ಬಡ್ಡಿಯನ್ನು ಗಳಿಸುವಿರಿ, ಇದು ಮುಂದೆ ಚಕ್ರಬಡ್ಡಿಯನ್ನು ಗಳಿಸುತ್ತದೆ. ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಕ್ಯಾಲ್ಕುಲೇಟರ್ ಒಂದು ಸರಳ ಸಾಧನವಾಗಿದ್ದು, ಇದು ನಿಮ್ಮ ಮೆಚುರಿಟಿ ಮೊತ್ತವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ, ಇದರಿಂದ ನಿಮ್ಮ ಹೂಡಿಕೆಗಳನ್ನು ಸರಿಯಾಗಿ ಪ್ಲಾನ್ ಮಾಡಿಕೊಳ್ಳಬಹುದು. ನೀವು ಮಾಡಬೇಕಿರುವುದು ಇಷ್ಟೇ, ನೀವು ಬಯಸುವ ಡೆಪಾಸಿಟ್ ಮೊತ್ತವನ್ನು ನಮೂದಿಸಿ, ಸೂಕ್ತ ಅವಧಿಯನ್ನು ಆಯ್ಕೆ ಮಾಡಿ, ಆಗ ನಿಮಗೆ ಮೆಚುರಿಟಿ ಸಮಯದಲ್ಲಿ ಸಿಗುವ ಆದಾಯವೆಷ್ಟು ಎಂಬುದು ಹೂಡಿಕೆಯನ್ನು ಆರಂಭಿಸುವ ಮೊದಲೇ ಗೊತ್ತಾಗುತ್ತದೆ.

ಹಕ್ಕುತ್ಯಾಗ

ಮೇಲಿನ ಕ್ಯಾಲ್ಕುಲೇಟರ್‌ನಲ್ಲಿನ ಆದಾಯವು ನಿಜವಾದ ಡೆಬಿಟ್ ದಿನದಂದು ಚಾಲ್ತಿಯಲ್ಲಿರುವ ದರಗಳ ಆಧಾರದ ಮೇಲೆ ಬದಲಾಗಬಹುದು.

ಫಿಕ್ಸೆಡ್ ಡೆಪಾಸಿಟ್ ಬಡ್ಡಿಯನ್ನು ಲೆಕ್ಕ ಹಾಕುವುದು ಹೇಗೆ

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವ ಎನ್‌ಆರ್‌ಐಗಳಿಗೆ, ಆದಾಯವು ಬಡ್ಡಿದರ, ಅವಧಿ ಹಾಗೂ ಆಯ್ಕೆಮಾಡಿದ ಪಾವತಿಗಳ ಫ್ರಿಕ್ವೆನ್ಸಿಗಳಿಂದ ಪ್ರಭಾವಿತವಾಗುತ್ತದೆ. ಎಫ್‌ಡಿ ಬಡ್ಡಿದರಗಳನ್ನು ಲೆಕ್ಕ ಮಾಡುವ ಸೂತ್ರವು ಈ ಕೆಳಗಿನಂತಿದೆ:

A = P (1 + r/4/100) ^ (4*n) ಮತ್ತು A = P (1 + r/25)4n

ಎಲ್ಲಿ,
A = ಮೆಚ್ಯೂರಿಟಿ ಮೊತ್ತ
P = ಡೆಪಾಸಿಟ್ ಮೊತ್ತ
n = ಮಾರ್ಪಾಡು ಮಾಡಲಾದ ಬಡ್ಡಿ ಫ್ರೀಕ್ವೆನ್ಸಿ

ಆಗಾಗ ಕೇಳುವ ಪ್ರಶ್ನೆಗಳು

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ ಕ್ಯಾಲ್ಕುಲೇಟರ್ ಎಂದರೇನು?

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ಕ್ಯಾಲ್ಕುಲೇಟರ್ ಎಂಬುದು ಎನ್ಆರ್‌‌ಐಗಳಿಗೆ ತಮ್ಮ ಫಿಕ್ಸೆಡ್ ಡೆಪಾಸಿಟ್ ಮೆಚ್ಯೂರಿಟಿ ಸಮಯದಲ್ಲಿ ಪಡೆಯಬಹುದಾದ ಮೊತ್ತವನ್ನು ನಿರ್ಧರಿಸಲು ಸಹಾಯ ಮಾಡುವ ಸರಳ ಸಾಧನವಾಗಿದೆ. ಈ ಮೊತ್ತವು ಹೂಡಿಕೆ ಮಾಡಿದ ಅಸಲಿನೊಂದಿಗೆ ಗಳಿಸಿದ ಬಡ್ಡಿಯನ್ನು ಒಳಗೊಂಡಿದೆ. ವಿವಿಧ ಡೆಪಾಸಿಟ್ ಮೊತ್ತಗಳಿಗೆ ಪಡೆಯಬಹುದಾದ ಬಡ್ಡಿ, ಕಾಲಾವಧಿಗಳು ಮತ್ತು ಬಡ್ಡಿ ಪಾವತಿ ಫ್ರೀಕ್ವೆನ್ಸಿಗಳನ್ನು ನೀವು ಲೆಕ್ಕ ಹಾಕಬಹುದು ಮತ್ತು ಹೋಲಿಕೆ ಮಾಡಬಹುದು.

ಬಜಾಜ್ ಫೈನಾನ್ಸ್ ಎಫ್‌ಡಿ ಕ್ಯಾಲ್ಕುಲೇಟರ್ ಬಳಸುವುದು ಹೇಗೆ?

ಎನ್ಆರ್‌‌ಐಗಳಿಗೆ ಆನ್ಲೈನ್ ಬಜಾಜ್ ಫೈನಾನ್ಸ್ ಎಫ್‌‌ಡಿ ಕ್ಯಾಲ್ಕುಲೇಟರ್ ಬಳಸುವುದು ತುಂಬಾ ಸುಲಭ. ಎಫ್‌‌ಡಿ ಬಡ್ಡಿ ದರಗಳು ಕ್ಯಾಲ್ಕುಲೇಟರ್ ಬಳಸುವ ಹಂತಗಳು ಇಲ್ಲಿವೆ.

  1. ನಿಮ್ಮ ಗ್ರಾಹಕ ವಿಧವನ್ನು ಆರಿಸಿ, ಅಂದರೆ ಹೊಸ ಗ್ರಾಹಕರು/ಹಳೆಯ ಲೋನ್ ಗ್ರಾಹಕರು/ಹಿರಿಯ ನಾಗರೀಕರು
  2. ನೀವು ಬಯಸುವ ಫಿಕ್ಸೆಡ್ ಡೆಪಾಸಿಟ್‌ ಪ್ರಕಾರವನ್ನು ಆಯ್ಕೆಮಾಡಿ, ಅಂದರೆ ಒಗ್ಗೂಡಿಸಿದ ಅಥವಾ ಒಗ್ಗೂಡಿಸದ
  3. ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೊತ್ತವನ್ನು ನಮೂದಿಸಿ
  4. ನಿಮ್ಮ ಆಯ್ಕೆಯ ಪ್ರಕಾರ ಫಿಕ್ಸೆಡ್ ಡೆಪಾಸಿಟ್‌ನ ಅವಧಿಯನ್ನು ಆಯ್ಕೆಮಾಡಿ

ನೀವು ಈಗ ಮೆಚ್ಯೂರಿಟಿಯಲ್ಲಿ ಗಳಿಸಿದ ಬಡ್ಡಿ ಮತ್ತು ಒಟ್ಟು ಮೊತ್ತವನ್ನು ನೋಡಬಹುದು. ಎನ್ಆರ್‌‌ಐಗಳಿಗೆ ಬಜಾಜ್ ಫೈನಾನ್ಸ್ ಎಫ್‌‌ಡಿ ಕ್ಯಾಲ್ಕುಲೇಟರ್ ಬಳಸುವುದರೊಂದಿಗೆ, ನಿಮ್ಮ ಹಣವನ್ನು ಗರಿಷ್ಠಗೊಳಿಸಲು ಮತ್ತು ಹಣಕಾಸುಗಳನ್ನು ಸುಗಮಗೊಳಿಸಲು ಹೂಡಿಕೆ ಮಾಡುವ ಮೊದಲು ನೀವು ಆದಾಯವನ್ನು ನಿರ್ಧರಿಸಬಹುದು.

ನಿಮ್ಮ ಮೆಚ್ಯೂರಿಟಿ ಮೊತ್ತವನ್ನು ಲೆಕ್ಕ ಹಾಕುವುದು ಹೇಗೆ?

ಎನ್ಆರ್‌‌ಐಗಳಿಗೆ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಕ್ಯಾಲ್ಕುಲೇಟರ್ ಬಳಸಿ, ನೀವು ನಿಮ್ಮ ಎಫ್‌‌ಡಿ ಮೆಚ್ಯೂರಿಟಿ ಮೊತ್ತವನ್ನು ಸುಲಭವಾಗಿ ನಿರ್ಧರಿಸಬಹುದು. ನೀವು ಕೇವಲ ಎಫ್‌‌ಡಿ ಕ್ಯಾಲ್ಕುಲೇಟರ್ ಪುಟಕ್ಕೆ ಭೇಟಿ ನೀಡಬೇಕು, ನಿಮ್ಮ ಗ್ರಾಹಕರ ಪ್ರಕಾರವನ್ನು (ಒಟ್ಟುಗೂಡಿಸಿದ ಅಥವಾ ಒಟ್ಟುಗೂಡಿಸದ) ಆಯ್ಕೆ ಮಾಡಿ ಮತ್ತು ಹೂಡಿಕೆ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡಬೇಕು.

ಒಮ್ಮೆ ನೀವು ಈ ಮೌಲ್ಯಗಳನ್ನು ನಮೂದಿಸಿದ ನಂತರ, ನೀವು ಒಟ್ಟು ಮೆಚ್ಯೂರಿಟಿ ಮೊತ್ತವನ್ನು ನೋಡಲು ಸಾಧ್ಯವಾಗುತ್ತದೆ. ನೀವು ಹೂಡಿಕೆ ಮಾಡಲು ಪ್ರಾರಂಭಿಸುವ ಮೊದಲು ಇದು ನಿಮ್ಮ ಹೂಡಿಕೆಗಳನ್ನು ಯೋಜಿಸಲು ಸಹಾಯ ಮಾಡುತ್ತದೆ.