ಆನ್ಲೈನಿನಲ್ಲಿ ಎಫ್ಡಿ ಬುಕ್ ಮಾಡಲು ಹಂತವಾರು ಪ್ರಕ್ರಿಯೆ
ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ನಲ್ಲಿ ಆನ್ಲೈನ್ನಲ್ಲಿ ಹೂಡಿಕೆ ಮಾಡಿ:
- 1 ನಮ್ಮ ಆನ್ಲೈನ್ ಹೂಡಿಕೆ ಫಾರಂಗೆ ಭೇಟಿ ನೀಡಲು 'ಆನ್ಲೈನಿನಲ್ಲಿ ಹೂಡಿಕೆ ಮಾಡಿ' ಮೇಲೆ ಕ್ಲಿಕ್ ಮಾಡಿ
- 2 ನಿಮ್ಮ ಬೇಸಿಕ್ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಒಟಿಪಿ ಯನ್ನು ಪರಿಶೀಲಿಸಿ
- 3 ಈಗಾಗಲೇ ಗ್ರಾಹಕರಾಗಿದ್ದರೆ ತಮ್ಮ ವಿವರಗಳನ್ನು ಮಾತ್ರ ಪರಿಶೀಲಿಸಬೇಕು. ಹೊಸ ಗ್ರಾಹಕರಾಗಿ, ನೀವು ನಿಮ್ಮ ಬೇಸಿಕ್ ವಿವರಗಳನ್ನು ಕೆವೈಸಿ ಅಥವಾ ಒಕೆವೈಸಿ ಮೂಲಕ ಪರಿಶೀಲಿಸಬೇಕು ಅಥವಾ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಬೇಕು.
- 4 ನಿಮ್ಮ ಡೆಪಾಸಿಟ್ ಮೊತ್ತ, ಕಾಲಾವಧಿ ಮತ್ತು ಇತರ ವಿವರಗಳನ್ನು ಆಯ್ಕೆಮಾಡಿ
- 5 ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಬಳಸಿ ನಿಮ್ಮ ಹೂಡಿಕೆಯನ್ನು ಪೂರ್ಣಗೊಳಿಸಿ
ಒಮ್ಮೆ ನಿಮ್ಮ ಪಾವತಿ ಯಶಸ್ವಿಯಾದ ನಂತರ, ನಿಮ್ಮ ಡೆಪಾಸಿಟ್ ಅನ್ನು ಬುಕ್ ಮಾಡಲಾಗುತ್ತದೆ ಮತ್ತು 15 ನಿಮಿಷಗಳ ಒಳಗೆ ನಿಮ್ಮ ನೋಂದಾಯಿತ ಇಮೇಲ್ ವಿಳಾಸ ಮತ್ತು ಮೊಬೈಲ್ ನಂಬರಿನಲ್ಲಿ ನೀವು ಸ್ವೀಕೃತಿಯನ್ನು ಪಡೆಯುತ್ತೀರಿ.
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೂಡಿಕೆ ಮಾಡುವುದು ಸುಲಭ. ಎರಡು ಆನ್ಲೈನ್ ವಿಧಾನಗಳಲ್ಲಿ ಒಂದರ ಮೂಲಕ ನಿಮ್ಮ ಹೂಡಿಕೆಯನ್ನು ಪೂರ್ಣಗೊಳಿಸಿ ಮತ್ತು ಕೆಲವೇ ನಿಮಿಷಗಳಲ್ಲಿ ಸ್ವೀಕೃತಿಯನ್ನು ಪಡೆಯಿರಿ. ನಿಮ್ಮ ಎಫ್ಡಿ ರಸೀತಿಯನ್ನು ನಂತರ ನಿಮ್ಮ ನೋಂದಾಯಿತ ವಿಳಾಸಕ್ಕೆ ಇಮೇಲ್ ಮಾಡಲಾಗುತ್ತದೆ.
ನಿಮ್ಮ ಉಳಿತಾಯವನ್ನು ಹೆಚ್ಚಿಸಲು ಮತ್ತು ನಿಮ್ಮ ಹೂಡಿಕೆಯಿಂದ ಹೆಚ್ಚು ಲಾಭ ಪಡೆಯಲು ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೂಡಿಕೆ ಮಾಡಲು ಆರಂಭಿಸಿ.
ಆಗಾಗ ಕೇಳುವ ಪ್ರಶ್ನೆಗಳು
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೂಡಿಕೆ ಮಾಡುವುದು ಸುಲಭ ಮತ್ತು ತೊಂದರೆ ರಹಿತವಾಗಿದೆ. 18 ವರ್ಷಗಳಿಗಿಂತ ಹೆಚ್ಚು ವಯಸ್ಸಿನ ಎಲ್ಲಾ ನಿವಾಸಿಗಳು ಆನ್ಲೈನ್ ಅಥವಾ ಆಫ್ಲೈನ್ ವಿಧಾನದ ಮೂಲಕ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೂಡಿಕೆ ಮಾಡಬಹುದು. ಬಜಾಜ್ ಫೈನಾನ್ಸ್ ಎಫ್ಡಿ ಯಲ್ಲಿ ಹೂಡಿಕೆ ಮಾಡಲು ಬಯಸುವ ಮೈನರ್ಗಳು, ಎನ್ಆರ್ಐ ಗಳು ಮತ್ತು ವ್ಯಕ್ತಿಗಳು ದಯವಿಟ್ಟು ನಮ್ಮ ಪ್ರತಿನಿಧಿಯನ್ನು ಸಂಪರ್ಕಿಸಿ ಅಥವಾ wecare@bajajfinserv.in ಗೆ ಇಮೇಲ್ ಕಳುಹಿಸಿ.
ಬಜಾಜ್ ಫೈನಾನ್ಸ್ ಆನ್ಲೈನ್ ಎಫ್ಡಿಯಲ್ಲಿ ಹೂಡಿಕೆ ಮಾಡುವುದು 10 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ, ಏಕೆಂದರೆ ಇದು ಸಂಪೂರ್ಣ ಆನ್ಲೈನ್ ಕಾಗದರಹಿತ ಪ್ರಕ್ರಿಯೆಯಾಗಿದೆ.
18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕರು ತಮ್ಮ ಪ್ರಮುಖ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಬಜಾಜ್ ಫೈನಾನ್ಸ್ ಎಫ್ಡಿಯಲ್ಲಿ ಹೂಡಿಕೆ ಮಾಡಬಹುದು.