ಬಿಸಿನೆಸ್ ಲೋನಿಗಾಗಿ ಅಪ್ಲಿಕೇಶನ್‌ ಸಲ್ಲಿಸುವುದು ಹೇಗೆ

ನಮ್ಮ ಬಿಸಿನೆಸ್ ಲೋನ್ ಪಡೆಯಲು ಈ ಸರಳ ಹಂತಗಳನ್ನು ಅನುಸರಿಸಿ.

ಬಿಸಿನೆಸ್‌ ಲೋನಿಗೆ ಅಪ್ಲೈ ಮಾಡುವುದು ಹೇಗೆ?

Video Image 01:15
 
 

ಬಿಸಿನೆಸ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1. ಈ ಪುಟದಲ್ಲಿನ 'ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ.
  3. ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್‌ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
  4. ಒಮ್ಮೆ ನೀವು ನಿಮ್ಮ ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಲೋನ್ ಆಯ್ಕೆ ಪುಟಕ್ಕೆ ಭೇಟಿ ನೀಡಲು ದಯವಿಟ್ಟು 'ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ.
  5. ನಿಮಗೆ ಬೇಕಾದ ಲೋನ್ ಮೊತ್ತವನ್ನು ನಮೂದಿಸಿ. ನಮ್ಮ ಮೂರು ಬಿಸಿನೆಸ್ ಲೋನ್ ವೇರಿಯಂಟ್‌ಗಳಿಂದ ಆಯ್ಕೆಮಾಡಿ - ಟರ್ಮ್, ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್. 
  6. ಮರುಪಾವತಿ ಅವಧಿಯನ್ನು ಆಯ್ಕೆಮಾಡಿ - ನೀವು 12 ತಿಂಗಳಿಂದ 96 ತಿಂಗಳವರೆಗಿನ ಅವಧಿಯ ಆಯ್ಕೆಗಳನ್ನು ಆರಿಸಿಕೊಂಡು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ’. 
  7. ನಿಮ್ಮ ಕೆವೈಸಿಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಬಿಸಿನೆಸ್ ಲೋನ್ ಅಪ್ಲಿಕೇಶನ್ ಸಲ್ಲಿಸಿ.

ಮುಂದಿನ ಹಂತಗಳ ಬಗ್ಗೆ ನಮ್ಮ ಪ್ರತಿನಿಧಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಡಾಕ್ಯುಮೆಂಟ್‌ಗಳ ಪರಿಶೀಲನೆಯ ನಂತರ ಲೋನ್ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ನೀವು ಪಡೆಯಬಹುದಾದ ಗರಿಷ್ಠ ಬಿಸಿನೆಸ್ ಲೋನ್ ಮೊತ್ತ ಎಷ್ಟು?

ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ನೀವು ರೂ. 50 ಲಕ್ಷದವರೆಗಿನ ಬಿಸಿನೆಸ್ ಲೋನನ್ನು ಪಡೆಯಬಹುದು.

ಬಿಸಿನೆಸ್ ಲೋನ್ ಪಡೆಯಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?

ನಿಮಗೆ ಈ ಎಲ್ಲಾ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ:

  • ಪ್ಯಾನ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್‌ನಂತಹ ಕೆವೈಸಿ ಡಾಕ್ಯುಮೆಂಟ್‌ಗಳು
  • ಬಿಸಿನೆಸ್ ಮಾಲೀಕತ್ವದ ಪುರಾವೆ
  • ಬ್ಯಾಂಕ್ ಖಾತೆ ವಿವರಗಳು
ನಾನು ಈಗಾಗಲೇ ಅಸ್ತಿತ್ವದಲ್ಲಿರುವ ಲೋನ್ ಹೊಂದಿದ್ದರೆ ನಾನು ಬಿಸಿನೆಸ್ ಲೋನಿಗೆ ಅಪ್ಲೈ ಮಾಡಬಹುದೇ?

ನೀವು ಅಸ್ತಿತ್ವದಲ್ಲಿರುವ ಲೋನ್ ಹೊಂದಿದ್ದರೂ ನೀವು ಬಿಸಿನೆಸ್ ಲೋನಿಗೆ ಅಪ್ಲೈ ಮಾಡಬಹುದು. ಅನುಮೋದನೆ ಪಡೆಯುವ ಮೊದಲು ನಿಮ್ಮ ಲೋನ್ ಮರುಪಾವತಿ ಸಾಮರ್ಥ್ಯವನ್ನು ವಿಶ್ಲೇಷಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

ಫ್ಲೆಕ್ಸಿ ಟರ್ಮ್ ಲೋನ್ ಎಂದರೇನು?

ಫ್ಲೆಕ್ಸಿ ಟರ್ಮ್ ಲೋನ್ ನಮ್ಮ ಬಿಸಿನೆಸ್ ಲೋನಿನ ವಿಶಿಷ್ಟ ರೂಪಾಂತರವಾಗಿದ್ದು, ಇದು ನಿಮಗೆ ನಿಯೋಜಿತ ಲೋನ್ ಮಿತಿಯನ್ನು ಒದಗಿಸುತ್ತದೆ. ನಿಮಗೆ ಅಗತ್ಯವಿದ್ದಾಗ ನೀವು ನಿಮ್ಮ ಲೋನಿನ ಒಂದು ಭಾಗವನ್ನು ವಿತ್‌ಡ್ರಾ ಮಾಡಬಹುದು ಅಥವಾ ಪಾವತಿಸಬಹುದು.

ಈ ರೂಪಾಂತರದ ಪ್ರಮುಖ ಪ್ರಯೋಜನವೆಂದರೆ ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ನಿಮಗೆ ಬಡ್ಡಿಯನ್ನು ವಿಧಿಸಲಾಗುತ್ತದೆ. ಮತ್ತು ಯಾವುದೇ ಭಾಗಶಃ-ಮುಂಗಡ ಪಾವತಿ ಶುಲ್ಕ ಅನ್ವಯವಾಗುವುದಿಲ್ಲ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ