ಪರ್ಸನಲ್ ಲೋನ್

ಪರ್ಸನಲ್ ಲೋನಿನ ಭಾಗಶಃ ಪಾವತಿ: ಇದು ಹೇಗೆ ಕೆಲಸ ಮಾಡುತ್ತದೆ?

ಪರ್ಸನಲ್ ಲೋನ್ ಭಾಗಶಃ ಪಾವತಿ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?

ನೀವು ಪರ್ಸನಲ್ ಲೋನಿನ ಕನಿಷ್ಠ 3 EMI ಗಳನ್ನು ಒಂದೇ ಬಾರಿಗೆ ಪಾವತಿಸಿದಾಗ ಅದನ್ನು ಭಾಗಶಃ ಪಾವತಿ ಎನ್ನಲಾಗುತ್ತದೆ. ಇದನ್ನು ಮಾಡುವುದರ ಅನುಕೂಲತೆ ಏನೆಂದರೆ:

  • ನಿಮ್ಮ ಪರ್ಸನಲ್ ಲೋನ್ EMI ಗಳನ್ನು ಕಡಿಮೆ ಮಾಡುವುದು
  • ನಿಮ್ಮ ಪರ್ಸನಲ್ ಲೋನ್‌ ಅವಧಿಯನ್ನು ಕಡಿಮೆ ಮಾಡುವುದು

ನಿಮ್ಮ ಪರ್ಸನಲ್ ಲೋನ್‌ ಭಾಗಶಃ ಪಾವತಿಯನ್ನು ನೀವು ಯಾವಾಗ ಮಾಡಬೇಕು?

  • ನೀವು ದೊಡ್ಡ ಮೊತ್ತದ ಹಣವನ್ನು ಪಡೆದಾಗ, ನಿಮ್ಮ ಪರ್ಸನಲ್ ಲೋನನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮುಕ್ತಾಯಗೊಳಿಸಲು ನೀವು ಆ ಹಣವನ್ನು ಬಳಸಬಹುದು.
  • ಇದು ಸಂಬಳದ ಬೋನಸ್ ಅಥವಾ ಪಿತ್ರಾರ್ಜಿತ ಹಣ, ಉಡುಗೊರೆ ಅಥವಾ ಆಸ್ತಿಯನ್ನು ಮಾರಾಟ ಮಾಡಿದ ಮೂಲಕ ಬಂದಿರಬಹುದು.

ನೀವು ಮುಂದುವರಿಯುವ ಮುನ್ನ ಭಾಗಶಃ ಪಾವತಿಯ ಪರಿಣಾಮವನ್ನು ಲೆಕ್ಕ ಹಾಕಿ:

ಭಾಗಶಃ ಪಾವತಿಯು ಹೇಗೆ ಮರುಪಾವತಿಯ ಹೊರೆಯನ್ನು ಕಡಿಮೆಗೊಳಿಸುತ್ತದೆ ಎಂಬುದಕ್ಕೆ ಉದಾಹರಣೆ:

  • ಉದಾಹರಣೆಗೆ, ನೀವು 2 ಲಕ್ಷವನ್ನು 24 ತಿಂಗಳುಗಳ ಅವಧಿಗೆ ಲೋನ್ ಪಡೆದಿದ್ದೀರಿ. ಪ್ರತಿ ತಿಂಗಳು ನಿಮ್ಮ EMI ರೂ.9, 603 ಆಗಿದೆ.
  • ನೀವು ರೂ. 40, 000 ಭಾಗಶಃ ಮುಂಗಡ ಪಾವತಿ ಮಾಡುವುದಾದರೆ, ನೀವು ಅದೇ 24 ತಿಂಗಳ ಅವಧಿಗೆ ರೂ. 7, 682 ಪಾವತಿಸುತ್ತೀರಿ.
  • ಅಥವಾ ನೀವು ಅದೇ ರೂ. 9603 EMI ನೊಂದಿಗೆ ಮುಂದುವರಿಯಬಹುದು ಮತ್ತು ಕಡಿಮೆ ಅವಧಿಯೊಂದಿಗೆ ಲೋನನ್ನು ಪಾವತಿಸಬಹುದು, ಅಂದರೆ, 24 ತಿಂಗಳ ಬದಲಿಗೆ 19 ತಿಂಗಳುಗಳು.

ನಿಮ್ಮ ಪರ್ಸನಲ್ ಲೋನ್‌ ನ ಭಾಗಶಃ ಮುಂಗಡ ಪಾವತಿಗೆ ವಿಧಿಸಲಾಗುವ ಶುಲ್ಕಗಳು

  • ಮೊದಲ EMI ಕಟ್ಟುವ ಮುನ್ನ ನೀವು ಮಾಡಿದ ಭಾಗಶಃ ಮುಂಗಡ ಪಾವತಿಗೆ, 2% ಭಾಗಶಃ ಮುಂಗಡ ಪಾವತಿ ಶುಲ್ಕ ಅನ್ವಯಿಸುತ್ತದೆ.
  • ಪ್ಯೂರ್ ಫ್ಲೆಕ್ಸಿ ಮತ್ತು ಫ್ಲೆಕ್ಸಿ ಲೋನ್ ಗಳಿಗೆ ಭಾಗಶಃ ಮುಂಗಡ ಪಾವತಿ ಶುಲ್ಕಗಳು ಇರುವುದಿಲ್ಲ.
  • ಪ್ಯೂರ್ ಫ್ಲೆಕ್ಸಿ ಮತ್ತು ಫ್ಲೆಕ್ಸಿ ಲೋನ್ ಗಳಿಗೆ ಯಾವುದೇ ಸಮಯದಲ್ಲಿ ಭಾಗಶಃ ಮುಂಗಡ ಪಾವತಿಯನ್ನು ಮಾಡಬಹುದು.

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳ ಬಗ್ಗೆ ತಿಳಿದುಕೊಳ್ಳಲು ಇನ್ನಷ್ಟು ಓದಿ