ಆಗಾಗ ಕೇಳುವ ಪ್ರಶ್ನೆಗಳು

ನೀವು ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಬದಲು ಗ್ರೂಪ್ ಇನ್ಶೂರೆನ್ಸ್ ಯಾಕೆ ತೆಗೆದುಕೊಳ್ಳಬೇಕು?

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಹಲವಾರು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಯಾವುದೇ ವೈದ್ಯಕೀಯ ಖರ್ಚುಗಳಿಗಾಗಿ ನೌಕರರ ಗುಂಪನ್ನು ಸುರಕ್ಷಿತವಾಗಿರಿಸಲು ನೀವು ಒಂದೇ ಒಂದು ಪ್ರೀಮಿಯಂ ಮೊತ್ತವನ್ನು ಇಲ್ಲಿ ಪಾವತಿಸಬೇಕು. ನೀವು ಅದೇ ಪಾಲಿಸಿಯಲ್ಲಿ ತಮ್ಮ ಸಂಗಾತಿಗಳು ಮತ್ತು ಮಕ್ಕಳನ್ನೂ ಸಹ ಒಳಗೊಳ್ಳಬಹುದು. ಇಲ್ಲಿ ಹಲವು ಪಾಲಿಸಿಗಳಿಗಿಂತ ಕಡಿಮೆ ಡಾಕ್ಯುಮೆಂಟೇಶನ್ ಅವಶ್ಯಕತೆ ಮತ್ತು ಕಡಿಮೆ ತೊಂದರೆ ಇದೆ.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಯಾರು ತೆಗೆದುಕೊಳ್ಳಬಹುದು?

ಒಂದು ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಉದ್ಯೋಗಿಗಳು ಅಥವಾ ಏಕರೂಪ ನೌಕರ ಸಮೂಹವು ತೆಗೆದುಕೊಳ್ಳಬಹುದು.

ಅವಲಂಬಿತರು ಗ್ರೂಪ್ ಮೆಡಿಕಲ್ ಇನ್ಶೂರೆನ್ಸ್‌‌ನಲ್ಲಿ ಕವರ್ ಆಗುತ್ತಾರೆಯೇ?

ಹೌದು, ಗ್ರೂಪ್ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಇನ್ಶೂರ್ ಮಾಡಿದ ವ್ಯಕ್ತಿಯ ಸಂಗಾತಿಗಳು ಮತ್ತು ಮಕ್ಕಳು ಕವರ್ ಆಗುತ್ತಾರೆ.