ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಬಜಾಜ್ ಫೈನಾನ್ಸ್ ಉತ್ತಮ ಹೂಡಿಕೆ ಯೋಜನೆಗಳು

ನಿಮ್ಮ ಮಗುವಿನ ಭವಿಷ್ಯ ಸುರಕ್ಷಿತವಾಗಿರಿಸಲು ಫಿಕ್ಸೆಡ್ ಡೆಪಾಸಿಟ್

ನಿಮ್ಮ ಮಗುವಿನ ಭವಿಷ್ಯ ಸುರಕ್ಷಿತವಾಗಿರಿಸಲು ಫಿಕ್ಸೆಡ್ ಡೆಪಾಸಿಟ್

ಹಿಂದೆ ಮಕ್ಕಳಿಗೆ ಶಿಕ್ಷಣಾ ವೆಚ್ಚ ನಿರ್ವಹಣೆ ಮಾಡುವ ರೀತಿಯಲ್ಲಿತ್ತು, ನಾಮಿನಲ್ ಶಾಲಾ ಫೀಸ್ ಮತ್ತು ಡಿಗ್ರಿ ನಿಮಗೆ ಸುಲಭವಾಗಿ ಉದ್ಯೋಗವನ್ನು ಒದಗಿಸುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ ಮತ್ತು ಶಿಕ್ಷಣಾ ವೆಚ್ಚ ಪ್ರತಿ ವರ್ಷ ಅಗಾಧ ರೀತಿಯಲ್ಲಿ ಹೆಚ್ಚುತ್ತಲಿದೆ. ಇಂದು ನಿಮ್ಮ ಮಕ್ಕಳಿಗೆ ಸುರಕ್ಷಿತ ಭವಿಷ್ಯವನ್ನು ರೂಪಿಸಲು, ಕಾಲೇಜು ಡಿಗ್ರಿಗಿಂತಲೂ ಅಧಿಕ ವೆಚ್ಚ ಬೇಕಾಗುತ್ತದೆ, ಅದು ವೃತ್ತೀಯ ಶಿಕ್ಷಣ, ಖಾಸಗಿ ಶಾಲೆ, ಸ್ಕೂಲ್ ನಂತರದ ಕೋಚಿಂಗ್ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಇಂದು ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಕಡಿಮೆ ರಿಸ್ಕನ್ನು ಹೊಂದಿರುವ ಅಧಿಕ ಆದಾಯ ತಂದು ಕೊಡುವ ಜಾಣ ಹೂಡಿಕೆ ಯೋಜನೆಯಾದ ಜೀವಮಾನದ ಹೂಡಿಕೆಯ ಅಗತ್ಯವಿದೆ, ಇದರಿಂದ ನೀವು ನಿಮ್ಮ ಉಳಿತಾಯವನ್ನು ಸುಲಭವಾಗಿ ಬೆಳೆಸಬಹುದು. ಹಾಗಾಗಿ ಫಿಕ್ಸೆಡ್ ಡೆಪಾಸಿಟ್‌‌ಗಳು ನಿಮ್ಮ ಸಣ್ಣ ಮಗುವಿಗೆ ಸುರಕ್ಷತೆಯ ಭವಿಷ್ಯದ ಭರವಸೆ ನೀಡುವ ಆಯ್ದ ಹೂಡಿಕೆಯ ಮಾರ್ಗವಾಗಿದೆ. ನೀವು ಫಿಕ್ಸೆಡ್ ಡೆಪಾಸಿಟ್‌‌ನಲ್ಲಿ ಹೂಡಿಕೆ ಮಾಡಿದಾಗ, ಖಚಿತವಾದ ಆದಾಯವನ್ನು ಗಳಿಸಬಹುದು ಮತ್ತು ನಿಮ್ಮ ಉಳಿತಾಯವನ್ನು ನಿಗಧಿತ ಅವಧಿಯವರೆಗೆ ಬೆಳೆಸಬಹುದು.

ಫಿಕ್ಸೆಡ್ ಡೆಪಾಸಿಟ್‌ ಹೇಗೆ ಕೆಲಸ ಮಾಡುತ್ತದೆ?
ನೀವು ಫಿಕ್ಸೆಡ್ ಡೆಪಾಸಿಟ್‌‌ನಲ್ಲಿ ಹೂಡಿಕೆ ಮಾಡಿದಾಗ, ಮೊದಲೇ ನಿರ್ಧರಿಸಿದ ಬಡ್ಡಿ ದರಗಳಲ್ಲಿ ಬೆಳೆಯುವ ನಿಮ್ಮ ಉಳಿತಾಯದಲ್ಲಿ ಒಂದು ಭಾಗವನ್ನು ನೀವು ಮೀಸಲಿಡಬಹುದು. ಕೆಲವು ಸಮಯದವರೆಗೆ ಬೆಳೆಯಲು ಮೀಸಲಿಟ್ಟಿರುವ ಮೊತ್ತವನ್ನು, ಮೆಚ್ಯೂರಿಟಿಯಲ್ಲಿ ಸುಲಭವಾಗಿ ವಿತ್ ಡ್ರಾ ಮಾಡಬಹುದು. ಫಿಕ್ಸೆಡ್ ಡೆಪಾಸಿಟ್ ಕಡಿಮೆ ರಿಸ್ಕ್ ಮತ್ತು ನಿಮ್ಮ ಉಳಿತಾಯವನ್ನು ಸುಲಭವಾಗಿ ಬೆಳೆಸಲು ಸಹಾಯವಾಗುವ ಲಾಭದಾಯಕ ಬಡ್ಡಿ ದರಗಳನ್ನು ಆಫರ್ ಮಾಡುತ್ತದೆ.
ಒಂದು ವೇಳೆ ನೀವು 60 ತಿಂಗಳಿಗೆ 7.6% ರಲ್ಲಿ ₹ 2 ಲಕ್ಷ ಮೊತ್ತವನ್ನು ಡೆಪಾಸಿಟ್ ಮಾಡಿದರೆ. ಮೆಚ್ಯೂರಿಟಿ ಸಂದರ್ಭದಲ್ಲಿ ನೀವು ರೂ. 2, 91, 831 ಮೊತ್ತವನ್ನು ಪಡೆಯುತ್ತೀರಿ. ಹಣವನ್ನು ನೀವು ಪಡೆದುಕೊಳ್ಳಬಹುದು ಅಥವಾ ಒಂದು ವಿಸ್ತರಿತ ಅವಧಿಗೆ ಸ್ಕೀಮನ್ನು ರಿನೀವ್ ಮಾಡಬಹುದು. ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ನವೀಕರಿಸಲು ಹಲವಾರು ಫೈನಾನ್ಷಿಯರ್‌ಗಳು ಹೆಚ್ಚಿನ ಬಡ್ಡಿದರವನ್ನು ಆಫರ್ ಮಾಡುತ್ತಾರೆ. ಫಿಕ್ಸೆಡ್ ಡೆಪಾಸಿಟ್ ಅನ್ನು ಬ್ಯಾಂಕುಗಳು ಮತ್ತು NBFC ಗಳು ಎರಡೂ ಸಂಸ್ಥೆಗಳು ಆಫರ್ ಮಾಡುತ್ತವೆ, ಆದರೆ NBFC ನೀಡುವ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು.. ಹೂಡಿಕೆದಾರರು ತಮ್ಮ ಉಳಿತಾಯದ ಹೆಚ್ಚಿನ ಬೆಳವಣಿಗೆಯನ್ನು ಬಯಸುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದು ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್, ಅಲ್ಲಿ ನೀವು ಹೆಚ್ಚಿನ ಬಡ್ಡಿದರಗಳನ್ನು ನೋಡಬಹುದು 8.35%. ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ನವೀಕರಣ ಮಾಡುವ ಮೂಲಕ ಹೆಚ್ಚುವರಿ 0.10% ಬಡ್ಡಿಯಿಂದಲೂ ನೀವು ಲಾಭ ಪಡೆಯಬಹುದು.

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌‌ನಲ್ಲಿ ಯಾಕೆ ಹೂಡಿಕೆ ಮಾಡಬೇಕು?
ನಿಮ್ಮ ಉಳಿತಾಯ ಅಕೌಂಟಿನ ಮೇಲೆ ನೀವು ಕೇವಲ 4% ಬಡ್ಡಿ ದರವನ್ನು ಪಡೆಯುತ್ತೀರಿ, ಆದರೆ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಅಧಿಕ ಬಡ್ಡಿಯನ್ನು ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಫಿಕ್ಸೆಡ್ ಡೆಪಾಸಿಟ್‌‌ನಲ್ಲಿ ಹೂಡಿಕೆ ಮಾಡುವುದು ಅಧಿಕ ಲಾಭದಾಯಕ ಮತ್ತು ನಿಮ್ಮ ಮಗುವಿಗೆ ಉತ್ತಮ ಭವಿಷ್ಯವನ್ನು ನೀಡಲು ಸಹಾಯ ಮಾಡುತ್ತದೆ.
ನೀವು 5 ವರ್ಷಗಳವರೆಗೆ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿದಾಗ, ನೀವು ಲಾಭ ಗಳಿಸಬಹುದು, ಅದು ನೀವು ಹೂಡಿಕೆ ಮಾಡಿದ ಮೊತ್ತದ 50% ಗಿಂತ ಹೆಚ್ಚು.
ಉದಾಹರಣೆಗೆ, ನೀವು 5 ವರ್ಷಗಳವರೆಗೆ ಬಜಾಜ್ ಫೈನಾನ್ಸ್ FD ಯೊಂದಿಗೆ ರೂ. 5,00,000 ಹೂಡಿಕೆ ಮಾಡಿದರೆ, ನೀವು ರೂ. 2,58,783 ವರೆಗಿನ ಬಡ್ಡಿ ದರವನ್ನು ಹೊಂದಿಸಬಹುದು 8.35%. ಅದೇ ರೀತಿ, ನೀವು ರೂ. 25, 000 ಗಳನ್ನು ಬಜಾಜ್ ಫೈನಾನ್ಸ್FD ಯಲ್ಲಿ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ , ನೀವು ರೂ. 12, 939 ಗಳವರೆಗೆ ಲಾಭ ಗಳಿಸಬಹುದು.
ಪ್ರಮುಖ ವಿವರಗಳನ್ನು ನಮೂದಿಸುವ ಮೂಲಕ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಕ್ಯಾಲ್ಕುಲೇಟರ್ ಬಳಸಿ, ನೀವು ಗಳಿಸಿದ ಆದಾಯವನ್ನು ಲೆಕ್ಕ ಹಾಕಬಹುದು. ಇದು ನಿಮ್ಮ ಹಣಕಾಸನ್ನು ಪ್ಲಾನ್ ಮಾಡಲು ಉತ್ತಮ ರೀತಿಯಲ್ಲಿ ಸಹಾಯವಾಗುತ್ತದೆ, ಹೀಗಾಗಿ ನಿಮ್ಮ ಉಳಿತಾಯವನ್ನು ನೀವು ಸುಲಭವಾಗಿ ಬೆಳೆಸಬಹುದು.

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌‌ನ ಫೀಚರ್‌‌ಗಳು:

 • ಹೆಚ್ಚಿನ ಬಡ್ಡಿದರ: ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್, ಹೊಸ ಗ್ರಾಹಕರಿಗೆ 8.10%, ಈಗಾಗಲೇ ಇರುವ ಗ್ರಾಹಕರಿಗೆ 8.20% ಮತ್ತು ಹಿರಿಯ ನಾಗರಿಕರಿಗೆ 8.35%ವರೆಗೆ ಲಾಭದಾಯಕ ಬಡ್ಡಿದರವನ್ನು ನೀಡುತ್ತದೆ
 • ಖಚಿತವಾದ ಆದಾಯ: ನೀವು ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌‌ನಲ್ಲಿ ಹೂಡಿಕೆ ಮಾಡಿದಾಗ, ಮಾರುಕಟ್ಟೆಯ ಏರಿಳಿತಗಳು ಯಾವುದೇ ರೀತಿಯಲ್ಲಿ ಪರಿಣಾಮ ಬೀರದಂತೆ ಖಚಿತ ಆದಾಯವನ್ನು ಬಯಸುತ್ತೀರಿ, ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ CRISIL ನ ಅತ್ಯಧಿಕ ವಿಶ್ವಾಸಾರ್ಹ ರೇಟಿಂಗ್ ಆದ FAAA ವನ್ನು ಹೊಂದಿದೆ ಮತ್ತು ICRA ಯಿಂದ MAAA, ಇದು ನಿಮ್ಮ ಹೂಡಿಕೆಯ ಮೊತ್ತಕ್ಕೆ ಉನ್ನತ ಮಟ್ಟದ ಸುರಕ್ಷತೆಯ ಭರವಸೆ ನೀಡುತ್ತದೆ.
 • ಫ್ಲೆಕ್ಸಿಬಲ್ ಕಾಲಾವಧಿ: ನೀವು ನಿಮ್ಮ ಕಾಲಾವಧಿಯನ್ನು ಮತ್ತು ಕಾಲಾವಧಿಯ ಪಾವತಿಯ ನಡುವಿನ ಅಂತರವನ್ನು ಆಯ್ಕೆ ಮಾಡಬಹುದು, ಇದು ನಿಮ್ಮ ಹೂಡಿಕೆಯನ್ನು ಪ್ಲಾನ್ ಮಾಡಲು ಮತ್ತು ಪೂರ್ವದಲ್ಲೇ ಹಣಕಾಸು ಒದಗಿಸುವುದನ್ನು ಸುಲಭವನ್ನಾಗಿಸುತ್ತದೆ.
 • ತೊಂದರೆ-ರಹಿತ ಹೂಡಿಕೆ ಪ್ರಕ್ರಿಯೆ: ಬಜಾಜ್ ಫೈನಾನ್ಸ್ FD ಯಲ್ಲಿ ಹೂಡಿಕೆ ಮಾಡುವುದು ಸುಲಭ, ಮತ್ತು ನೀವು ಕೆಲವು ವಿವರಗಳನ್ನು ಭರ್ತಿ ಮಾಡಬೇಕಷ್ಟೆ, ಮತ್ತು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಮನೆಬಾಗಿಲಿನ ಸೇವೆಗಳ ಆಯ್ಕೆಗಳು ಕೂಡ ಇದೆ, ಇದು ನಿಮ್ಮನ್ನು ಸರತಿಯಲ್ಲಿ ನಿಲ್ಲುವುದನ್ನು ಮತ್ತು ದೀರ್ಘಾವಧಿಯ ಕಾಯುವಿಕೆಯಿಂದ ದೂರವಿಡುತ್ತದೆ.
 • ತುರ್ತು ಹಣವನ್ನಾಗಿ ಬಳಸಿ: ತುರ್ತು ಸಂದರ್ಭದಲ್ಲಿನ ಹಣಕಾಸಿನ ಅಗತ್ಯತೆಗಳ ಸಂದರ್ಭದಲ್ಲಿ, ನಿಮ್ಮ ಉಳಿತಾಯವನ್ನು ನೀವು ಮುರಿಯಬೇಕಾಗಿಲ್ಲ, ನೀವು ಯಾವಾಗಲು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೇಲೆ ಲೋನ್ ಅನ್ನು ಪಡೆಯಲು ಸಾಧ್ಯವಿರುವುದರಿಂದ ನಿಮ್ಮ ಹೂಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ನಿಮ್ಮ ತುರ್ತು ಅಗತ್ಯಗಳಿಗೆ ಸುಲಭವಾಗಿ ಪರಿಹಾರ ದೊರಕುತ್ತದೆ.
 • ಕಡಿಮೆ ಕನಿಷ್ಠ ಮೊತ್ತ: ಕೇವಲ ರೂ. 25,000 ಜತೆಗೆ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌‌ನಲ್ಲಿ ಹೂಡಿಕೆ ಮಾಡಲು ಆರಂಭಿಸಿ ಹೀಗಾಗಿ ನೀವು ನಿಮ್ಮ ಉಳಿತಾಯವನ್ನು ಸುಲಭವಾಗಿ ಬೆಳೆಸಲು ಆರಂಭಿಸಬಹುದು.

ಬಜಾಜ್ ಫಿನ್‌ಸರ್ವ್‌ ನೀಡುವ ವಿವಿಧ ಬಡ್ಡಿದರಗಳನ್ನು ಇಲ್ಲಿ ನೋಡೋಣ

ರೂ. 5 ಕೋಟಿಯವರೆಗಿನ ಡೆಪಾಸಿಟ್‌ಗಳಿಗೆ ಮಾನ್ಯವಾದ ವಾರ್ಷಿಕ ಬಡ್ಡಿ ದರ (05 ಮಾರ್ಚ್ 2020 ರಿಂದ ಅನ್ವಯವಾಗುವಂತೆ)

ತಿಂಗಳುಗಳಲ್ಲಿ ಕಾಲಾವಧಿ ಕನಿಷ್ಠ ಡೆಪಾಸಿಟ್ (ರೂ. ಗಳಲ್ಲಿ) ಒಟ್ಟುಗೂಡಿಸಿದ ಒಟ್ಟುಗೂಡಿಸದ
ಮಾಸಿಕ ತ್ರೈಮಾಸಿಕ ಅರ್ಧ ವಾರ್ಷಿಕ ವಾರ್ಷಿಕ
12 – 23 25,000 7.60% 7.35% 7.39% 7.46% 7.60%
24 – 35 7.65% 7.39% 7.44% 7.51% 7.65%
36 - 47 7.70% 7.44% 7.49% 7.56% 7.70%
48 - 60 7.80% 7.53% 7.58% 7.65% 7.80%

ಗ್ರಾಹಕರ ಕೆಟಗರಿ ಆಧಾರದ ಮೇಲೆ ದರದ ಪ್ರಯೋಜನಗಳು (05 ಮಾರ್ಚ್ 2020 ರಿಂದ ಅನ್ವಯವಾಗುವಂತೆ):

+ 0.25% ಹಿರಿಯ ನಾಗರಿಕರಿಗೆ

+ 0.10% ಬಜಾಜ್ ಗ್ರೂಪ್ ನೌಕರರಿಗೆ, ಬಜಾಜ್ ಫೈನಾನ್ಸ್ ಲಿಮಿಟೆಡ್ ಗ್ರಾಹಕರು ಮತ್ತು ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಈಗಾಗಲೇ ಅಸ್ತಿತ್ವದಲ್ಲಿರುವ ಪಾಲಿಸಿದಾರರಿಗೆ

ನವೀಕರಣ:

+0.10% ಮತ್ತು ಅದಕ್ಕೂ ಹೆಚ್ಚಿಗೆ, ಬಡ್ಡಿಯ ದರ ಡೆಪಾಸಿಟ್‌ ಡೆಪಾಸಿಟ್‌ ಇಡುವಾಗ ನೀಡುವ ಬಡ್ಡಿ

ವಿಶೇಷ ಕಾಲಾವಧಿ ಸ್ಕೀಮ್‌‌ಗಳಿಗೆ ಸೇರ್ಪಡೆಯಾಗಿ, ಅಸ್ತಿತ್ವದಲ್ಲಿರುವ ಗ್ರಾಹಕರು ಅಥವಾ ಬಜಾಜ್ ಫಿನ್‌‌ಸರ್ವ್ ಉದ್ಯೋಗಿಗಳು 0.10% ಅಧಿಕ ಬಡ್ಡಿ ದರಗಳಿಂದ ಪ್ರಯೋಜನ ಪಡೆದುಕೊಳ್ಳಬಹುದು, ಮತ್ತು ಹಿರಿಯ ನಾಗರಿಕರು ಅವರ ಫಿಕ್ಸೆಡ್ ಡೆಪಾಸಿಟ್ ಮೇಲೆ 0.25% ಅಧಿಕ ಬಡ್ಡಿ ದರಗಳನ್ನು ಪಡೆದುಕೊಳ್ಳಬಹುದು.

ನಿಮ್ಮ ಫಿಕ್ಸೆಡ್ ಡೆಪಾಸಿಟ್‌ ಮೇಲೆ ನೀವು ಪಡೆಯುವ ಒಟ್ಟು ಲಾಭವನ್ನು ಲೆಕ್ಕಾಚಾರ ಮಾಡಲು ನೀವು FD ಕ್ಯಾಲ್ಕುಲೇಟರ್ ಅನ್ನು ಬಳಸಿಕೊಳ್ಳಬಹುದು. FD ಕ್ಯಾಲ್ಕುಲೇಟರ್ ಸುಲಭವಾಗಿ ಬಳಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

 • ನಿಮ್ಮ ಗ್ರಾಹಕ ವಿಧವನ್ನು ಆರಿಸಿ, ಅಂದರೆ ಹೊಸ ಗ್ರಾಹಕರು/ಹಳೆಯ ಲೋನ್ ಗ್ರಾಹಕರು/ಹಿರಿಯ ನಾಗರೀಕರು
 • ನೀವು ಬಯಸುವ ಫಿಕ್ಸೆಡ್ ಡೆಪಾಸಿಟ್‌ ಪ್ರಕಾರವನ್ನು ಆಯ್ಕೆಮಾಡಿ, ಅಂದರೆ ಒಗ್ಗೂಡಿಸಿದ ಅಥವಾ ಒಗ್ಗೂಡಿಸದ
 • ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೊತ್ತವನ್ನು ಆರಿಸಿ
 • ಫಿಕ್ಸೆಡ್‌ ಡೆಪಾಸಿಟ್‌ ಅವಧಿಯನ್ನು ಆಯ್ಕೆ ಮಾಡಿ
 • ನೀವು ಸ್ವಯಂಚಾಲಿತವಾಗಿ ಬಡ್ಡಿಯ ಮೊತ್ತವನ್ನು ಮತ್ತು ಮೆಚ್ಯೂರಿಟಿಯಲ್ಲಿ ಗಳಿಸಿದ ಒಟ್ಟು ಮೊತ್ತವನ್ನು ನೋಡುತ್ತೀರಿ

ಬಜಾಜ್ ಫ಼ೈನಾನ್ಸ್ FD ಗಳು ನಿಮ್ಮ ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಮಾರುಕಟ್ಟೆಯಲ್ಲಿ ನೀವು ಹೊಂದಿರುವ ಅತ್ಯುತ್ತಮ ಮತ್ತು ಸುರಕ್ಷಿತವಾದ ಹೂಡಿಕೆ ಮಾರ್ಗಗಳಲ್ಲಿ ಒಂದಾಗಿದೆ. ಒಂದು FD ಆಯ್ಕೆ ಮಾಡುವಾಗ, ನೀವು ಹೆಚ್ಚಿನ ಬಡ್ಡಿದರವನ್ನು ಪಡೆಯುವುದು ಮುಖ್ಯವಾಗಿರುತ್ತದೆ, ಇಲ್ಲವಾದರೆ, ಹೂಡಿಕೆಯ ಉದ್ದೇಶವು ವಿಫಲಗೊಳ್ಳುತ್ತದೆ.

ಕಂಪನಿ FD ಯಾಗಿ, ಬಜಾಜ್ ಫೈನಾನ್ಸ್ FD ಗಳು ಅಧಿಕ ಆದಾಯದ ಭರವಸೆಯನ್ನು ನೀಡುತ್ತದೆ. ನಿಮ್ಮ ಮಗುವಿನ ಭವಿಷ್ಯಕ್ಕೆ ಇಂದಿನಿಂದ ಹೂಡಿಕೆ ಮಾಡಲು ಆರಂಭಿಸಿ, ಹೀಗಾಗಿ ನಿಮ್ಮ ಉಳಿತಾಯವನ್ನು ನೀವು ಸುಲಭವಾಗಿ ಬೆಳೆಸಬಹುದು ಮತ್ತು ನಿಮ್ಮ ಮಗುವಿಗೆ ಸುರಕ್ಷತೆಯ ಭವಿಷ್ಯದ ಭರವಸೆ ನೀಡಬಹುದು.