ಆಗಾಗ ಕೇಳುವ ಪ್ರಶ್ನೆಗಳು

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ನಗದು ರಹಿತ ಸೌಲಭ್ಯ ಇದೆಯೇ?

ಹೌದು. ನೀವು ಭಾರತದಾದ್ಯಂತ ಯಾವುದೇ ನಮ್ಮ 5700 ನೆಟವರ್ಕ್ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದರೆ ನಿಮ್ಮ ವೈದ್ಯಕೀಯ ವೆಚ್ಚಗಳಿಗೆ ನೀವು ಪಾವತಿಸಬೇಕಾಗಿಲ್ಲ (ಹೊರಗಿಡುವಿಕೆ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ).

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅವಧಿಯ ಆಯ್ಕೆಗಳು ಯಾವುವು?

ಜೀವನಪೂರ್ತಿ ನವೀಕರಣ ಆಯ್ಕೆ ಇರುವ 1, 2, ಅಥವಾ 3 ವರ್ಷದ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಪಡೆಯಬಹುದು.

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಎಷ್ಟು ಜನರನ್ನು ಕವರ್ ಮಾಡಬಹುದು?

ಒಂದು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅಡಿ 6 ರಷ್ಟು ಜನರು ಕವರ್ ಆಗುತ್ತಾರೆ. ನೀವು ನಿಮ್ಮನ್ನು, ನಿಮ್ಮ ಸಂಗಾತಿಯನ್ನು ಮತ್ತು 4 ಅವಲಂಬಿತ ಮಕ್ಕಳನ್ನು ಕವರ್ ಮಾಡಬಹುದು.

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ಒಳಪಡುವ ವೆಚ್ಚಗಳು ಯಾವುವು?

ಕೇವಲ ಒಂದು ಇನ್ಶೂರೆನ್ಸ್ ಪ್ಲಾನ್ ನಿಂದ ನೀವು ಆಸ್ಪತ್ರೆ ದಾಖಲಾತಿಯ ಮುಂಚಿನ ಮತ್ತು ನಂತರದ ವೆಚ್ಚಗಳು, ಔಷಧಿಗಳು, ಆಂಬುಲೆನ್ಸ್ ಶುಲ್ಕಗಳು ಮತ್ತು ಡೇ ಕೇರ್ ಆರೈಕೆ ಖರ್ಚುಗಳನ್ನು ಇಡೀ ಕುಟುಂಬಕ್ಕೆ ಕವರ್ ಮಾಡಬಹುದು.