ಬಿಸಿನೆಸ್ ಲೋನ್‌ ಬಡ್ಡಿ ದರ ಮತ್ತು ಶುಲ್ಕಗಳು

ನಮ್ಮ ಬಿಸಿನೆಸ್ ಲೋನಿಗೆ ಅಪ್ಲೈ ಮಾಡುವ ಮೊದಲು ಫೀಸ್ ಮತ್ತು ಶುಲ್ಕಗಳನ್ನು ವಿವರವಾಗಿ ಓದಿ.

ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು

ಶುಲ್ಕದ ವಿಧ

ಅನ್ವಯವಾಗುವ ಶುಲ್ಕಗಳು

ಬಡ್ಡಿದರ

ವರ್ಷಕ್ಕೆ 9.75% - 30%

ಪ್ರಕ್ರಿಯಾ ಶುಲ್ಕಗಳು

ಲೋನ್ ಮೊತ್ತದ 3.54% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಬೌನ್ಸ್ ಶುಲ್ಕಗಳು

ಪ್ರತಿ ಬೌನ್ಸ್‌ಗೆ ರೂ. 1,500/

ಡಾಕ್ಯುಮೆಂಟೇಶನ್ ಶುಲ್ಕಗಳು

ರೂ. 2,360/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಫ್ಲೆಕ್ಸಿ ಫೀಸ್

ಟರ್ಮ್ ಲೋನ್‌ - ಅನ್ವಯಿಸುವುದಿಲ್ಲ

ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್) - ರೂ. 999/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಫ್ಲೆಕ್ಸಿ ವೇರಿಯಂಟ್ (ಕೆಳಗೆ ಅನ್ವಯವಾಗುವಂತೆ) -

ರೂ. 10,00,000 ಕ್ಕಿಂತ ಕಡಿಮೆ ಲೋನ್ ಮೊತ್ತಕ್ಕೆ ರೂ. 5,999/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)/-

ರೂ. 10,00,000/- ರಿಂದ ರೂ. 14,99,999 ವರೆಗಿನ ಲೋನ್ ಮೊತ್ತಕ್ಕೆ ರೂ. 7,999/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)-

ರೂ. 15,00,000/- ರಿಂದ ರೂ. 24,99,999 ವರೆಗಿನ ಲೋನ್ ಮೊತ್ತಕ್ಕೆ ರೂ. 12,999/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)-

ರೂ. 25,00,000/- ಮತ್ತು ಅದಕ್ಕಿಂತ ಹೆಚ್ಚಿನ ಲೋನ್ ಮೊತ್ತಕ್ಕೆ ರೂ. 15,999/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

*ಲೋನ್ ಮೊತ್ತದಿಂದ ಮುಂಗಡವಾಗಿ ಶುಲ್ಕಗಳನ್ನು ಕಡಿತಗೊಳಿಸಲಾಗುತ್ತದೆ

ದಂಡದ ಬಡ್ಡಿ

ಮಾಸಿಕ ಕಂತು ಪಾವತಿಯಲ್ಲಿ ಯಾವುದೇ ವಿಳಂಬವು ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು ಸ್ವೀಕರಿಸುವವರೆಗೆ ಮಾಸಿಕ ಕಂತುಗಳ ಮೇಲೆ ಪ್ರತಿ ತಿಂಗಳಿಗೆ 3.50% ದರದಲ್ಲಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ.

ಮುಂಗಡ ಪಾವತಿ ಶುಲ್ಕಗಳು

ಪೂರ್ತಿ ಮುಂಗಡ- ಪಾವತಿ
•ಟರ್ಮ್ ಲೋನ್‌:
ಪೂರ್ಣ ಮುಂಪಾವತಿಯ ದಿನಾಂಕದಂದು ಬಾಕಿ ಉಳಿದ ಲೋನ್ ಮೊತ್ತದ ಮೇಲೆ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

•ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್): ಪೂರ್ಣ ಮುಂಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

•ಫ್ಲೆಕ್ಸಿ ಹೈಬ್ರಿಡ್ ಲೋನ್: ಪೂರ್ಣ ಮುಂಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

ಭಾಗಶಃ ಮುಂಪಾವತಿ
ಅಂತಹ ಭಾಗಶಃ ಮುಂಗಡ ಪಾವತಿಯ ದಿನಾಂಕದಂದು ಪೂರ್ವಪಾವತಿ ಮಾಡಿದ ಲೋನ್‌ನ ಅಸಲು ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).
•ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್) ಮತ್ತು ಹೈಬ್ರಿಡ್ ಫ್ಲೆಕ್ಸಿಗೆ ಅನ್ವಯವಾಗುವುದಿಲ್ಲ

ಸ್ಟಾಂಪ್ ಡ್ಯೂಟಿ

ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ ಮತ್ತು ಲೋನ್ ಮೊತ್ತದಿಂದ ಮುಂಗಡವಾಗಿ ಕಡಿತಗೊಳಿಸಲಾಗುತ್ತದೆ

ಮ್ಯಾಂಡೇಟ್ ತಿರಸ್ಕೃತ ಶುಲ್ಕಗಳು

ಹೊಸ ಮ್ಯಾಂಡೇಟ್ ನೋಂದಣಿಯಾಗುವವರೆಗೆ ಗ್ರಾಹಕರ ಬ್ಯಾಂಕ್ ಮ್ಯಾಂಡೇಟ್ ತಿರಸ್ಕರಿಸಿದ ಗಡುವು ದಿನಾಂಕದ ಮೊದಲ ತಿಂಗಳಿನಿಂದ ತಿಂಗಳಿಗೆ ರೂ. 450/

ಬ್ರೋಕನ್ ಪೀರಿಯಡ್ ಬಡ್ಡಿ / ಪ್ರಿ-ಇಎಂಐ ಬಡ್ಡಿ

""ಬ್ರೋಕನ್ ಪೀರಿಯಡ್ ಬಡ್ಡಿ/ಪ್ರಿ-ಇಎಂಐ ಬಡ್ಡಿ"" ಎಂದರೆ ಲೋನ್‌ನ ಒಟ್ಟು ದಿನ(ಗಳ) ಮೇಲಿನ ಬಡ್ಡಿ ಮೊತ್ತ ಎಂದರ್ಥ:

ಸನ್ನಿವೇಶ 1:: ಲೋನ್ ವಿತರಣೆಯ ದಿನಾಂಕದಿಂದ 30 (ಮೂವತ್ತು) ದಿನಗಳ ಅವಧಿಗಿಂತ ಮೇಲ್ಪಟ್ಟು

ಬ್ರೋಕನ್ ಪೀರಿಯಡ್ ಬಡ್ಡಿ/ ಇಎಂಐ ಮುಂಚಿತ ಬಡ್ಡಿಯನ್ನು ಮರುಪಡೆಯುವ ವಿಧಾನ:
ಟರ್ಮ್ ಲೋನಿಗಾಗಿ: ವಿತರಣೆಯಿಂದ ಕಡಿತ
ಫ್ಲೆಕ್ಸಿ ಟರ್ಮ್ ಲೋನಿಗೆ: ಮೊದಲ ಕಂತು ಮೊತ್ತಕ್ಕೆ ಸೇರಿಸಲಾಗುತ್ತದೆ
ಹೈಬ್ರಿಡ್ ಫ್ಲೆಕ್ಸಿ ಲೋನಿಗೆ: ಮೊದಲ ಕಂತು ಮೊತ್ತಕ್ಕೆ ಸೇರಿಸಲಾಗುತ್ತದೆ

ಸನ್ನಿವೇಶ 2: ಲೋನ್ ವಿತರಣೆಯ ದಿನಾಂಕದಿಂದ 30 (ಮೂವತ್ತು) ದಿನಗಳಿಗಿಂತ ಕಡಿಮೆಗೆ, ಮೊದಲ ಕಂತಿನ ಮೇಲಿನ ಬಡ್ಡಿಯನ್ನು ನೈಜ ದಿನಗಳಿಗೆ ವಿಧಿಸಲಾಗುತ್ತದೆ

ವಾರ್ಷಿಕ ನಿರ್ವಹಣಾ ಶುಲ್ಕಗಳು

ಟರ್ಮ್ ಲೋನ್‌: ಅನ್ವಯಿಸುವುದಿಲ್ಲ

ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್): ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ (ಮರುಪಾವತಿ ಶೆಡ್ಯೂಲಿನಂತೆ) 0.295% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

ಫ್ಲೆಕ್ಸಿ ಹೈಬ್ರಿಡ್ ಲೋನ್: ಆರಂಭಿಕ ಅವಧಿಯಲ್ಲಿ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 1.18% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು). ನಂತರದ ಅವಧಿಯಲ್ಲಿ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 0.295% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

ಶುಲ್ಕ ಬದಲಾಯಿಸಿ* ಲೋನ್ ಮೊತ್ತದ 1.18% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

*ಲೋನ್ ಪರಿವರ್ತನೆಯ ಸಂದರ್ಭದಲ್ಲಿ ಮಾತ್ರ ಸ್ವಿಚ್ ಫೀಸ್ ಅನ್ವಯವಾಗುತ್ತದೆ. ಪರಿವರ್ತನೆಯ ಸಂದರ್ಭಗಳಲ್ಲಿ, ಪ್ರಕ್ರಿಯಾ ಶುಲ್ಕಗಳು ಮತ್ತು ಡಾಕ್ಯುಮೆಂಟೇಶನ್ ಶುಲ್ಕಗಳು ಅನ್ವಯವಾಗುವುದಿಲ್ಲ.

ಬಿಸಿನೆಸ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ

ಬಿಸಿನೆಸ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1. ಈ ಪುಟದಲ್ಲಿನ 'ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ.
  3. ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್‌ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
  4. ಒಮ್ಮೆ ನೀವು ನಿಮ್ಮ ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಲೋನ್ ಆಯ್ಕೆ ಪುಟಕ್ಕೆ ಭೇಟಿ ನೀಡಲು ದಯವಿಟ್ಟು 'ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ.
  5. ನಿಮಗೆ ಬೇಕಾದ ಲೋನ್ ಮೊತ್ತವನ್ನು ನಮೂದಿಸಿ. ನಮ್ಮ ಮೂರು ಬಿಸಿನೆಸ್ ಲೋನ್ ವೇರಿಯಂಟ್‌ಗಳಿಂದ ಆಯ್ಕೆಮಾಡಿ - ಟರ್ಮ್, ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್. 
  6. ಮರುಪಾವತಿ ಅವಧಿಯನ್ನು ಆಯ್ಕೆಮಾಡಿ - ನೀವು 12 ತಿಂಗಳಿಂದ 96 ತಿಂಗಳವರೆಗಿನ ಅವಧಿಯ ಆಯ್ಕೆಗಳನ್ನು ಆರಿಸಿಕೊಂಡು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ’. 
  7. ನಿಮ್ಮ ಕೆವೈಸಿಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಬಿಸಿನೆಸ್ ಲೋನ್ ಅಪ್ಲಿಕೇಶನ್ ಸಲ್ಲಿಸಿ.

ಮುಂದಿನ ಹಂತಗಳ ಬಗ್ಗೆ ನಮ್ಮ ಪ್ರತಿನಿಧಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಡಾಕ್ಯುಮೆಂಟ್‌ಗಳ ಪರಿಶೀಲನೆಯ ನಂತರ ಲೋನ್ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ಬಿಸಿನೆಸ್ ಲೋನಿಗೆ ಪ್ರಕ್ರಿಯಾ ಶುಲ್ಕ ಏನು?

ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನಿನ ಪ್ರಕ್ರಿಯಾ ಶುಲ್ಕವು ಲೋನ್ ಮೊತ್ತದ 3.54% ವರೆಗೆ ಹೋಗಬಹುದು (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

ಭಾಗಶಃ-ಮುಂಗಡ ಪಾವತಿಗಳ ಮೇಲೆ ಶುಲ್ಕ ಅನ್ವಯವಾಗುತ್ತದೆಯೇ?

ಮಾಡಲಾದ ಭಾಗಶಃ-ಮುಂಗಡ ಪಾವತಿ ಮೊತ್ತದ ಮೇಲೆ ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ 4.72% ಶುಲ್ಕವಿದೆ. ನೀವು ಫ್ಲೆಕ್ಸಿ ಟರ್ಮ್ ಲೋನ್ ಅಥವಾ ಫ್ಲೆಕ್ಸಿ ಹೈಬ್ರಿಡ್ ಲೋನನ್ನು ಆಯ್ಕೆ ಮಾಡಿದರೆ ಯಾವುದೇ ಭಾಗಶಃ-ಮುಂಪಾವತಿ ಶುಲ್ಕವಿಲ್ಲ.

ಬೌನ್ಸ್ ಶುಲ್ಕ ಎಂದರೇನು?

ತಪ್ಪಿದ ಇಎಂಐ ಪಾವತಿಯ ಸಂದರ್ಭದಲ್ಲಿ ಬೌನ್ಸ್ ಶುಲ್ಕವು ವಿಧಿಸಲಾಗುವ ಶುಲ್ಕವಾಗಿದೆ.

ತಪ್ಪಿದ ಪ್ರತಿ ಇಎಂಐಗೆ ಬಜಾಜ್ ಫಿನ್‌ಸರ್ವ್ ಪ್ರತಿ ಬೌನ್ಸ್‌ಗೆ ರೂ. 1,500 ಶುಲ್ಕ ವಿಧಿಸುತ್ತದೆ. ತಡವಾದ ಪಾವತಿ ಅಥವಾ ಇಎಂಐ ಡೀಫಾಲ್ಟ್ ಸಂದರ್ಭದಲ್ಲಿ, ದಂಡದ ಬಡ್ಡಿಯನ್ನು 3.50% ದರದಲ್ಲಿ ವಿಧಿಸಲಾಗುತ್ತದೆ

ಬಿಸಿನೆಸ್‌ ಲೋನ್ ಬಡ್ಡಿ ದರ ಎಷ್ಟು?

ನೀವು ವರ್ಷಕ್ಕೆ 9.75% ರಿಂದ ಆರಂಭವಾಗುವ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನನ್ನು ಪಡೆಯಬಹುದು.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ