ಬಜಾಜ್ ಫೈನಾನ್ಸ್ ಉತ್ತಮ ಹೂಡಿಕೆ ಯೋಜನೆಗಳು

ಒಗ್ಗೂಡಿಸದ ಫಿಕ್ಸೆಡ್‌ ಡೆಪಾಸಿಟ್‌ ಎಂದರೆ ಏನು

ಒಟ್ಟುಗೂಡಿಸದ ಫಿಕ್ಸೆಡ್ ಡೆಪಾಸಿಟ್ ಎಂದರೆ ಏನು?

ಒಗ್ಗೂಡಿಸದ‌ ಫಿಕ್ಸೆಡ್‌ ಡೆಪಾಸಿಟ್‌ಗಳು ಕೂಡ ಒಂದು ರೀತಿಯ FD ಆಗಿದೆ. ಈ ರೀತಿಯ ಡೆಪಾಸಿಟ್‌ಗಳಲ್ಲಿ ಬಡ್ಡಿಯನ್ನು ತಿಂಗಳಿಗೊಮ್ಮೆ, ತ್ರೈಮಾಸಿಕಕ್ಕೊಮ್ಮೆ, ಮತ್ತು ಅರ್ಧ ವಾರ್ಷಿಕಕ್ಕೊಮ್ಮೆ ಅಥವಾ ವರ್ಷಕ್ಕೊಮ್ಮೆ ನೀಡಲಾಗುವುದು. ಬಡ್ಡಿಯ ಪಾವತಿಯ ಆವರ್ತನವನ್ನು ಹೂಡಿಕೆದಾರರು ಬಯಸಿದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಬಹುದು. FD ಗಾಗಿ ಅಪ್ಲಿಕೇಶನ್ ಸಲ್ಲಿಸುವ ವೇಳೆಯಲ್ಲಿ ತಿಂಗಳಿಗೊಮ್ಮೆ, ತ್ರೈಮಾಸಿಕವಾಗಿ ಮತ್ತು ಅರ್ಧ ವಾರ್ಷಿಕವಾಗಿ ಅಥವಾ ವರ್ಷಕ್ಕೊಮ್ಮೆ ಪಾವತಿಸುವಂತೆ ವಿನಂತಿಸಿಕೊಳ್ಳಬಹುದು.

ಒಗ್ಗೂಡಿಸದ‌ ಫಿಕ್ಸೆಡ್‌ ಡೆಪಾಸಿಟ್‌ಗಳ ಅವಧಿಯ ವ್ಯಾಪ್ತಿಯು 12 ರಿಂದ 60 ತಿಂಗಳುಗಳ ನಡುವೆ ಇರುತ್ತದೆ. ನೆನೆಪಿಡಿ, ನೀವು ನಿಮ್ಮ ಬಡ್ಡಿಯನ್ನು ಪಡೆಯುವ ಆವರ್ತನವು ಹೆಚ್ಚಿದಂತೆಲ್ಲಾ ನೀವು ಗಳಿಸುವ ಬಡ್ಡಿಯು ಕಡಿಮೆಯಾಗುತ್ತದೆ.

ನಿಮ್ಮ ತಿಂಗಳ ವೆಚ್ಚ ಸರಿದೂಗಿಸಲು, ಒಗ್ಗೂಡಿಸದ FD ಯಿಂದ ನೀವು ನಿಯಮಿತವಾಗಿ ಬಡ್ಡಿಯ ಪಾವತಿಗಳನ್ನು ಪಡೆಯಬಹುದು. ಈ FDಗಳು ನಿಯಮಿತವಾಗಿ ಬಡ್ಡಿಯಿಂದ ಆದಾಯವನ್ನು ಪಡೆಯಲು ಇಚ್ಛಿಸುವಂತಹವರಿಗೆ, ಪಿಂಚಣಿ ಪಡೆಯುವುವವರಿಗೆ ಸೂಕ್ತವಾಗಿರುವುದು.

ಇದನ್ನು ಓದಿ: ಒಗ್ಗೂಡಿಸಿದ ಹಾಗೂ ಒಗ್ಗೂಡಿಸದ‌ ಫಿಕ್ಸೆಡ್‌ ಡೆಪಾಸಿಟ್‌ ನಡುವೆ ವ್ಯತ್ಯಾಸ