ಪರ್ಸನಲ್ ಲೋನ್

ಒಂದು ಲೋನಿನ ಭಾಗಶಃ ಮುಂಗಡ ಪಾವತಿ ಎಂದರೇನು

ಲೋನಿಗೆ ಭಾಗಶಃ ಪಾವತಿ ಮಾಡುವುದೆಂದರೇನು?

ನಿಮ್ಮಲ್ಲಿ ದೊಡ್ಡ ಪ್ರಮಾಣದ ಹಣ ಇದ್ದರೆ ಮತ್ತು ನಿಮ್ಮ ಲೋನನ್ನು ಮುಂಚಿತವಾಗಿ ಮರುಪಾವತಿಸಲು ನೀವು ಅದನ್ನು ಬಳಸಿದರೆ, ಅದು ನಿಮ್ಮ EMI ಮೊತ್ತವನ್ನು ಕಡಿಮೆಗೊಳಿಸುತ್ತದೆ ಅಥವಾ ಅವಧಿಯನ್ನು ಕಡಿಮೆಗೊಳಿಸುತ್ತದೆ.

ನಿಮ್ಮ ಲೋನನ್ನು ಮುಂಚಿತವಾಗಿ ಮರುಪಾವತಿಸುವುದನ್ನು, ಪರ್ಸನಲ್ ಲೋನ್‌ ಮುಂಗಡ-ಪಾವತಿ ಅಥವಾ ಪರ್ಸನಲ್ ಲೋನ್‌ ಭಾಗಶಃ ಮುಂಗಡ-ಪಾವತಿ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ, ಮುಂಗಡ-ಪಾವತಿ ಮೊತ್ತವು ನಿಮ್ಮ EMI ಮೊತ್ತಕ್ಕಿಂತ ಕನಿಷ್ಠ ಮೂರು ಪಟ್ಟು ಹೆಚ್ಚಾಗಿರಬೇಕು.

ನಿಮ್ಮ ಮೊದಲ EMI ಪಾವತಿಯಾಗಿದ್ದರೆ, ಮರುಪಾವತಿಯ ಮೊತ್ತದ ಮೇಲೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ.
ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಭಾಗಶಃ ಮುಂಗಡ-ಪಾವತಿ ಕ್ಯಾಲ್ಕುಲೇಟರ್ ಬಳಸಿ, ನಿಮ್ಮ ಲೋನ್ ಅವಧಿ ಅಥವಾ EMI ಮೇಲೆ ನಿಮ್ಮ ಭಾಗಶಃ ಮುಂಗಡ-ಪಾವತಿಯ ಪರಿಣಾಮವನ್ನು ಲೆಕ್ಕಹಾಕಿ.