ಲೋನ್ ಟು ವ್ಯಾಲ್ಯೂ ಕ್ಯಾಲ್ಕುಲೇಟರ್ ಎಫ್ಎಕ್ಯೂ ಗಳು

ಲೋನ್ ಟು ವ್ಯಾಲ್ಯೂ ಎಂದರೇನು?

ಲೋನ್-ಟು-ವ್ಯಾಲ್ಯೂ ರೇಶಿಯೋ ಅಥವಾ ಎಲ್‌ಟಿವಿ ಎಂಬುದು ನಿಮ್ಮ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನೀವು ಪಡೆಯಬಹುದಾದ ಲೋನ್ ಮೊತ್ತದ ಅನುಪಾತವಾಗಿದೆ. ಸಾಮಾನ್ಯವಾಗಿ, ಆಸ್ತಿ ಮೇಲಿನ ಲೋನಿಗೆ ಎಲ್‌ಟಿವಿಯು ನಿಮ್ಮ ಆಸ್ತಿಯ ಮೌಲ್ಯಮಾಪನ ಮೌಲ್ಯದ 60%* ಮತ್ತು 75%* ನಡುವೆ ಇರುತ್ತದೆ. ಆಸ್ತಿ ಮೇಲಿನ ಲೋನಿಗೆ ಎಲ್‌ಟಿವಿ ನೀವು ಅಡವಿಡುತ್ತಿರುವ ಆಸ್ತಿಯ ಆಧಾರದ ಮೇಲೆ ನೀವು ಪಡೆಯಬಹುದಾದ ಗರಿಷ್ಠ ಹಣಕಾಸಿನ ಮೊತ್ತವನ್ನು ನಿಮಗೆ ಹೇಳುತ್ತದೆ. ಇಲ್ಲಿ, ಆಸ್ತಿಯನ್ನು ಅದರ ಪ್ರಕಾರ: ವಾಣಿಜ್ಯ ಅಥವಾ ವಸತಿ ಮತ್ತು ವಾಸಸ್ಥಳದಂತಹ ಅಂಶಗಳ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತದೆ.

ನೀವು ಅರ್ಹರಾಗಿರುವ ಗರಿಷ್ಠ ಲೋನ್ ಮೌಲ್ಯವನ್ನು ತಿಳಿದುಕೊಂಡ ನಂತರ, ನಿಮ್ಮ ಮಾಸಿಕ ಹೊರಹೋಗುವಿಕೆಯನ್ನು ನಿರ್ಧರಿಸಲು ನೀವು ಆಸ್ತಿ ಮೇಲಿನ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು, ನೀವು ಲೋನಿಗೆ ಅಪ್ಲೈ ಮಾಡಬೇಕೇ. ಎಲ್‌ಟಿವಿ ಲೆಕ್ಕ ಹಾಕಲು ಆರಂಭಿಸಿ, ಎಲ್‌ಟಿವಿ ಕ್ಯಾಲ್ಕುಲೇಟರ್‌ನಲ್ಲಿ ನಿಮ್ಮ ಅಪೇಕ್ಷಿತ ಲೋನ್ ಮೊತ್ತ ಮತ್ತು ನಿಮ್ಮ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನಮೂದಿಸಿ.

ಎಲ್‌ಟಿವಿ ಫಾರ್ಮುಲಾ ಎಂದರೇನು?

ನಿಮ್ಮ ಲೋನಿನ ಎಲ್‌ಟಿವಿ ಅನುಪಾತವನ್ನು ಲೆಕ್ಕ ಹಾಕಲು ಲೋನಿನ ಮೌಲ್ಯದ ಅನುಪಾತ ಕ್ಯಾಲ್ಕುಲೇಟರ್ ಬಳಸುವ ಫಾರ್ಮುಲಾ:
ಎಲ್‌ಟಿವಿ = ನಿಮ್ಮ ಆಸ್ತಿಯ ಅಸಲು ಮೊತ್ತ/ ಮಾರುಕಟ್ಟೆ ಮೌಲ್ಯ.

ಆದ್ದರಿಂದ ಲೋನ್ ಮೊತ್ತ ರೂ. 50 ಲಕ್ಷ ಮತ್ತು ಮೌಲ್ಯಮಾಪನದ ನಂತರದ ಆಸ್ತಿಯ ಮೌಲ್ಯ ರೂ. 1 ಕೋಟಿಯಾಗಿದ್ದರೆ, ಗರಿಷ್ಠ ಎಲ್‌ಟಿವಿ = ರೂ. 50 ಲಕ್ಷ/ ರೂ. 1 ಕೋಟಿ= 50%.

ಲೋನ್ ಟು ವ್ಯಾಲ್ಯೂ ಕ್ಯಾಲ್ಕುಲೇಟರ್ ಹೇಗೆ ಬಳಸುವುದು?

ಅಸಲು ಮೊತ್ತ, ಆಸ್ತಿ ಮೌಲ್ಯ ಮತ್ತು ಅಡಮಾನ ಲೋನ್ ಬಡ್ಡಿ ದರ ಜಾಗಗಳನ್ನು ಭರ್ತಿ ಮಾಡಿ ಮತ್ತು ಎಲ್‌ಟಿವಿ ಕ್ಯಾಲ್ಕುಲೇಟರ್‌ನಲ್ಲಿ 'ಕ್ಯಾಲ್ಕುಲೇಟ್' ಮೇಲೆ ಕ್ಲಿಕ್ ಮಾಡಿ. ಉದಾಹರಣೆಗೆ, ಲೋನ್ ಮೊತ್ತ ರೂ.1 ಕೋಟಿ ಮತ್ತು ಆಸ್ತಿ ಮೌಲ್ಯ ರೂ. 2.5 ಕೋಟಿ ಆಗಿದ್ದರೆ, ಈ ಅಂಕಿ ಅಂಶಗಳನ್ನು ಸೂಕ್ತ ಜಾಗಗಳಲ್ಲಿ ನಮೂದಿಸಿ. ಲೋನ್‌ನ ಗರಿಷ್ಠ ಎಲ್‌ಟಿವಿ ಅನುಪಾತವನ್ನು ತಿಳಿದುಕೊಳ್ಳಲು 'ಕ್ಯಾಲ್ಕುಲೇಟ್' ಮೇಲೆ ಕ್ಲಿಕ್ ಮಾಡಿ, ಈ ಸಂದರ್ಭದಲ್ಲಿ 40% ಬರುತ್ತದೆ.

ಆಸ್ತಿಯ ವಿಧದ ಪ್ರಕಾರ ಎಲ್‌ಟಿವಿ ಬದಲಾಗುತ್ತದೆಯೇ?

ಲೋನ್ ಮೌಲ್ಯದ ಅನುಪಾತವು ಸಾಮಾನ್ಯವಾಗಿ ವಾಣಿಜ್ಯ ಆಸ್ತಿಗಿಂತ ವಸತಿ ಆಸ್ತಿಗೆ ಹೆಚ್ಚಾಗಿರುತ್ತದೆ. ಸರಾಸರಿಯಾಗಿ, ವಸತಿ ಸ್ಥಳಗಳಿಗೆ ಎಲ್‌ಟಿವಿ ಅನುಪಾತವು ಸುಮಾರು 10% ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಬಹುದು. ಆದಾಗ್ಯೂ, ಕೆಲವು ಕೈಗಾರಿಕಾ ಆಸ್ತಿಗಳು ಹೆಚ್ಚಿನ ಎಲ್‌ಟಿವಿ ಯನ್ನು ಕೂಡ ಪಡೆಯಬಹುದು. ಇದಲ್ಲದೆ, ಎಲ್‌ಟಿವಿ ಅನುಪಾತವು ಆಕ್ಯುಪೆನ್ಸಿ ಸ್ಥಿತಿಯನ್ನು ಕೂಡ ಅವಲಂಬಿಸಿರುತ್ತದೆ. ಇದು ವಸತಿ ಅಥವಾ ವಾಣಿಜ್ಯ ಆಸ್ತಿಯಾಗಿದೆಯೇ ಎಂದು ಪರಿಗಣಿಸದೆ ಸ್ವಾಧೀನಪಡಿಸಿಕೊಂಡ ಜಾಗಗಳು ಬಾಡಿಗೆ ಅಥವಾ ಖಾಲಿ ಜಾಗಕ್ಕಿಂತ ಹೆಚ್ಚಿನ ಲೋನ್ ಮೊತ್ತವನ್ನು ನೀಡುತ್ತವೆ.

ನೀವು ಅರ್ಹರಾಗಿರುವ ಎಲ್‌ಟಿವಿ ಅನುಪಾತದ ಮೇಲೆ ಯಾವ ಇತರ ಅಂಶಗಳು ಪರಿಣಾಮ ಬೀರುತ್ತವೆ?

ಎಲ್‍ಟಿವಿ ಯಲ್ಲಿ ಸೆಟಲ್ ಮಾಡುವ ಮೊದಲು, ಅಡಮಾನ ಲೋನ್‌ನ ಸಾಲದಾತರು ನಿಮ್ಮ ವಯಸ್ಸು, ಪ್ರಸ್ತುತ ಹಣಕಾಸಿನ ಜವಾಬ್ದಾರಿಗಳು ಮತ್ತು ಕ್ರೆಡಿಟ್ ಸ್ಕೋರ್‌ನಂತಹ ಮಾನದಂಡಗಳನ್ನು ಪರಿಶೀಲಿಸುತ್ತಾರೆ. ನೀವು ಹೊಂದಿರುವ ಕೆಲಸದ ವರ್ಷಗಳ ಸಂಖ್ಯೆ ಹೆಚ್ಚಾಗಿದ್ದರೆ, ದೊಡ್ಡ ಲೋನ್ ಮೊತ್ತ ಮತ್ತು ದೀರ್ಘ ಅವಧಿಯನ್ನು ಪಡೆಯುವ ಸಾಧ್ಯತೆಗಳು ಉತ್ತಮವಾಗಿರುತ್ತವೆ. ಅದೇ ರೀತಿ, ಆಸ್ತಿ ಮೇಲಿನ ಹೆಚ್ಚಿನ ಲೋನನ್ನು ಆರಾಮದಾಯಕವಾಗಿ ಪಡೆಯಲು ನೀವು 50% ರ ಒಳಗೆ ಕಡಿಮೆ ಸಾಲದಿಂದ-ಆದಾಯದ ಅನುಪಾತವನ್ನು ಹೊಂದಿರಬೇಕು. ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ಮ್ಯಾನೇಜ್ಮೆಂಟ್ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುವುದರಿಂದ ಇದು ಕೂಡ ಪ್ರಮುಖವಾಗಿದೆ. ಸಾಮಾನ್ಯವಾಗಿ, 750 ಕ್ಕಿಂತ ಹೆಚ್ಚಿನ ಸ್ಕೋರ್‌ಗಳು ಹೆಚ್ಚಿನ ಎಲ್‍ಟಿವಿ ಅನುಪಾತಗಳನ್ನು ಪಡೆಯುತ್ತವೆ ಮತ್ತು ಕಡಿಮೆ ಆಸ್ತಿ ಮೇಲಿನ ಲೋನ್ ಬಡ್ಡಿ ದರಗಳನ್ನು ಕೂಡ ಪಡೆಯುತ್ತವೆ.

ನೀವು ಎರಡನೇ ಅಡಮಾನವನ್ನು ತೆಗೆದುಕೊಳ್ಳಬಹುದೇ?

ಎರಡನೇ ಅಡಮಾನವು ಒಂದು ಆಸ್ತಿಯನ್ನು ಅಡವಿಡುವುದನ್ನು ಒಳಗೊಂಡಿರುತ್ತದೆ, ಅದು ಈಗಾಗಲೇ ಒಂದು ಲೋನಿಗೆ ಭದ್ರತೆಯಾಗಿರುತ್ತದೆ ಹಾಗೂ ಎರಡನೇ ಲೋನಿಗೆ ಅಡಮಾನವಾಗಿ ಕಾರ್ಯನಿರ್ವಹಿಸುತ್ತದೆ. ಒಂದೇ ಆಸ್ತಿಯನ್ನು ಭದ್ರತೆಯಾಗಿ ಬಳಸಿಕೊಂಡು ನೀವು ಹೊಸ ಲೋನನ್ನು ಪಡೆಯಲು ಕೆಲವು ವಿಧಾನಗಳಿವೆ. ಉದಾಹರಣೆಗೆ, ನಿಮ್ಮ ಅಸ್ತಿತ್ವದಲ್ಲಿರುವ ಸಾಲದಾತರಿಂದ ನೀವು ಟಾಪ್-ಅಪ್ ಲೋನನ್ನು ಆಯ್ಕೆ ಮಾಡಬಹುದು. ವಿಶೇಷವಾಗಿ ನಿಮ್ಮ ಮೂಲ ಲೋನ್ ನೀವು ಅರ್ಹರಾಗಿರುವ ಎಲ್‌ಟಿವಿ ಅನುಪಾತಕ್ಕೆ ಸಮನಾಗಿಲ್ಲವಾದಾಗ ಇದು ಸುಲಭವಾದ ಆಯ್ಕೆಯಾಗಿದೆ. ನೀವು ಇನ್ನೊಂದು ಸಾಲದಾತರಿಂದ ಆಸ್ತಿ ಮೇಲಿನ ಹೊಸ ಲೋನನ್ನು ತೆಗೆದುಕೊಳ್ಳಲು ಆಯ್ಕೆ ಮಾಡಬಹುದು.

ಇಲ್ಲಿ, ಆಸ್ತಿಯನ್ನು ಪರಿ ಪಾಸು ಆಧಾರದ ಮೇಲೆ ಪರಿಗಣಿಸಲಾಗುತ್ತದೆ, ಅಂದರೆ ನಿಮಗೆ ಸಾಲ ನೀಡುವ ಮೊತ್ತದ ಆಧಾರದ ಮೇಲೆ ಎರಡೂ ಸಾಲದಾತರು ಕಾನೂನು ಹಕ್ಕುಗಳನ್ನು ಬಳಸಬಹುದು. ಆಸ್ತಿ ಮೇಲಿನ ಲೋನ್ ಅರ್ಹತೆ ನಿಯಮಗಳು ಇಲ್ಲಿ ಹೆಚ್ಚು ಕಟ್ಟುನಿಟ್ಟಾಗಿವೆ.

ಎರಡನೇ ಅಡಮಾನವು ಲೋನ್ ಟು ವ್ಯಾಲ್ಯೂ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಎರಡನೇ ಅಡಮಾನದ ಸಂದರ್ಭದಲ್ಲಿ, ನೀವು ಒಟ್ಟಾರೆ ಲೋನ್ ಟು ವ್ಯಾಲ್ಯೂ ಅನುಪಾತವನ್ನು ಹೊಂದಿರುತ್ತೀರಿ. ಇಲ್ಲಿ ಎರಡೂ ಲೋನ್‌ಗಳ ಅಸಲನ್ನು ಸೇರಿಸಲಾಗುತ್ತದೆ ಮತ್ತು ನಂತರ ಆಸ್ತಿಯ ಮಾರುಕಟ್ಟೆ ಮೌಲ್ಯದಿಂದ ವಿಂಗಡಿಸಲಾಗುತ್ತದೆ. ಆದ್ದರಿಂದ, ನಿಮ್ಮ ಆರಂಭಿಕ ಲೋನ್ ರೂ. 50 ಲಕ್ಷ ಮೌಲ್ಯದ್ದಾಗಿದ್ದರೆ, ನಿಮ್ಮ ಹೊಸ ಲೋನ್ ರೂ. 10 ಲಕ್ಷ ಆಗಿರುತ್ತದೆ ಮತ್ತು ನಿಮ್ಮ ಆಸ್ತಿಯ ಮೌಲ್ಯಮಾಪನ ಮೌಲ್ಯ ರೂ. 1 ಕೋಟಿ ಆಗಿದ್ದರೆ, ಒಟ್ಟಾರೆ ಎಲ್‌ಟಿವಿ ಅನುಪಾತ 60% ಆಗಿರುತ್ತದೆ.

ಆಸ್ತಿ ಮೇಲಿನ ಲೋನ್ ಪಡೆಯುವ ನಿರ್ಧಾರವನ್ನು ಕೈಗೊಳ್ಳಲು ಎಲ್‍ಟಿವಿ ಅನುಪಾತಗಳ ಕುರಿತಾದ ಈ ಮಾಹಿತಿಯನ್ನು ಸುಲಭವಾಗಿ ಇರಿಸಿಕೊಳ್ಳಿ.

ಇನ್ನಷ್ಟು ಓದಿರಿ ಕಡಿಮೆ ಓದಿ