ಆಗಾಗ ಕೇಳುವ ಪ್ರಶ್ನೆಗಳು
ನೀವು ಪ್ರಾಕ್ಟೀಸ್ ಮಾಡುತ್ತಿರುವ ಸಿಎ ಆಗಿದ್ದರೆ, ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ನೀವು ರೂ. 55 ಲಕ್ಷದವರೆಗಿನ ಲೋನನ್ನು ಪಡೆಯಬಹುದು.
ನಿಮಗೆ ಈ ಎಲ್ಲಾ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ:
- ಪ್ಯಾನ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್‌ನಂತಹ ಕೆವೈಸಿ ಡಾಕ್ಯುಮೆಂಟ್‌ಗಳು
- ಅನುಭವದ ಪ್ರಮಾಣಪತ್ರ
- ಬ್ಯಾಂಕ್ ಖಾತೆ ವಿವರಗಳು
ನೀವು ಅಸ್ತಿತ್ವದಲ್ಲಿರುವ ಲೋನ್ ಹೊಂದಿದ್ದರೂ ನೀವು ಸಿಎ ಲೋನಿಗೆ ಅಪ್ಲೈ ಮಾಡಬಹುದು. ಆದಾಗ್ಯೂ, ಅನುಮೋದನೆ ಪಡೆಯುವ ಮೊದಲು ನಾವು ನಿಮ್ಮ ಲೋನ್ ಮರುಪಾವತಿ ಸಾಮರ್ಥ್ಯವನ್ನು ವಿಶ್ಲೇಷಿಸುತ್ತೇವೆ. ನೆನಪಿಡಿ, ಅನೇಕ ಲೋನ್‌ಗಳಿಗೆ ಅಪ್ಲೈ ಮಾಡುವುದರಿಂದ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು ಮತ್ತು ಇನ್ನೊಂದು ಲೋನ್ ಪಡೆಯುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರಬಹುದು.
ಫ್ಲೆಕ್ಸಿ ಟರ್ಮ್ ಲೋನ್ ನಮ್ಮ ಸಿಎ ಲೋನಿನ ವಿಶಿಷ್ಟ ರೂಪಾಂತರವಾಗಿದೆ. ಇದು ನಿಮಗೆ ನಿಯೋಜಿಸಲಾದ ಲೋನ್ ಮೊತ್ತದಿಂದ ವಿತ್‌ಡ್ರಾ ಮಾಡಲು ಅಥವಾ ನಿಮಗೆ ಅಗತ್ಯವಿದ್ದಾಗ ನಿಮ್ಮ ಲೋನಿನ ಒಂದು ಭಾಗವನ್ನು ಪಾವತಿಸಲು ಅನುಮತಿ ನೀಡುತ್ತದೆ.
ನೀವು ವಿತ್‌ಡ್ರಾ ಮಾಡುವ ಮೊತ್ತದ ಮೇಲೆ ಮಾತ್ರ ನಿಮಗೆ ಬಡ್ಡಿ ವಿಧಿಸಲಾಗುತ್ತದೆ. ಮತ್ತು ಯಾವುದೇ ಭಾಗಶಃ-ಮುಂಪಾವತಿ ಶುಲ್ಕ ಅನ್ವಯವಾಗುವುದಿಲ್ಲ.