ಆಗಾಗ ಕೇಳುವ ಪ್ರಶ್ನೆಗಳು
ಇಎಂಐ ಎಂದರೆ ಸಮನಾದ ಮಾಸಿಕ ಕಂತುಗಳು. ಇದು ಯಾವುದೇ ರೀತಿಯ ಲೋನ್ ಆಯ್ಕೆ ಮಾಡುವಾಗ ನೀವು ಪಾವತಿಸಬೇಕಾದ ಮಾಸಿಕ ಮೊತ್ತವಾಗಿದೆ. ಬಡ್ಡಿ ಹೊಣೆಗಾರಿಕೆಗಳೊಂದಿಗೆ ಸಂಪೂರ್ಣ ಲೋನ್ ಮೊತ್ತವನ್ನು ಸಣ್ಣ ಮಾಸಿಕ ಮೊತ್ತಗಳಾಗಿ ವಿಭಜಿಸಲಾಗಿದೆ. ಅವಧಿ, ಅಸಲು ಮತ್ತು ವಿಧಿಸಲಾಗುವ ಬಡ್ಡಿ ದರಗಳು ಇಎಂಐ ಲೆಕ್ಕಾಚಾರಕ್ಕೆ ಪ್ರಮುಖ ಮಾನದಂಡಗಳಾಗಿವೆ.
ಇಎಂಐ ಲೆಕ್ಕಾಚಾರದ ಫಾರ್ಮುಲಾ ಈ ರೀತಿಯಾಗಿದೆ:
ಇಎಂಐ = ಪಿ x ಆರ್ x (1+ಆರ್)^ಎನ್ / [(1+ಆರ್)^ಎನ್-1], ಪಿ ಎಂದರೆ ಅಸಲು, ಆರ್ ಬಡ್ಡಿ ದರ, ಮತ್ತು ಎನ್ ಎಂದರೆ ಕಾಲಾವಧಿ.
ಪಾವತಿಸಬೇಕಾದ ಇಎಂಐಗಳನ್ನು ಮತ್ತು ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ಲೆಕ್ಕ ಹಾಕಲು ಮತ್ತು ವಿವರವಾದ ಅಮೊರ್ಟೈಸೇಶನ್ ಶೆಡ್ಯೂಲ್ ಪಡೆಯಲು ಅಸಲು, ಕಾಲಾವಧಿ ಮತ್ತು ಬಡ್ಡಿ ದರವನ್ನು ನಮೂದಿಸಿ.
ಇಎಂಐ ಕ್ಯಾಲ್ಕುಲೇಟರ್ ಬಳಸುವುದು ಸರಳವಾಗಿದೆ. ನೀವು ಲೋನ್ ಪಡೆಯಲು ಬಯಸುವ ಲೋನ್ ಮೊತ್ತ, ಮರುಪಾವತಿ ಅವಧಿ ಮತ್ತು ಲೋನ್ ಬಡ್ಡಿ ದರ ಆಯ್ಕೆ ಮಾಡಲು ಸ್ಲೈಡರ್ ಬಳಸಿ. ನೀವು ಈ ಮೂರು ಇನ್ಪುಟ್‌ಗಳನ್ನು ಆಯ್ಕೆ ಮಾಡಿದ ನಂತರ, ನಿಮ್ಮ ಇಎಂಐ ಅನ್ನು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ. ಈ ಟೂಲ್‌ಗಳು ಉಚಿತವಾಗಿ ಲಭ್ಯವಿವೆ ಮತ್ತು ಯಾವುದೇ ಸಮಯದಲ್ಲಿ ಬಳಸಬಹುದು.