ನಮ್ಮ ಗ್ರಾಹಕ ಪೋರ್ಟಲ್ ಬಗ್ಗೆ ಇನ್ನಷ್ಟು ತಿಳಿಯಿರಿ

ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್, ಫೀಚರ್-ಶ್ರೀಮಂತ ಗ್ರಾಹಕ ಸೇವಾ ವೇದಿಕೆಯಾಗಿದೆ. ನಿಮ್ಮ ಚಾಲ್ತಿಯಲ್ಲಿರುವ ಲೋನ್‌ಗಳು, ಫಿಕ್ಸೆಡ್ ಡೆಪಾಸಿಟ್‌ಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ನಿರ್ವಹಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
ಇದು ನಿಮಗೆ ಅನೇಕ ಸ್ವಯಂ-ಸೇವಾ ಆಯ್ಕೆಗಳನ್ನು ಒದಗಿಸುತ್ತದೆ:

  • ನಿಮ್ಮ ಲೋನ್, ಕಾರ್ಡ್ ಅಥವಾ ಫಿಕ್ಸೆಡ್ ಡೆಪಾಸಿಟ್ ವಿವರಗಳನ್ನು ಪರಿಶೀಲಿಸಿ
  • ನಿಮ್ಮ ಲೋನ್ ಮರುಪಾವತಿಗಳನ್ನು ನಿರ್ವಹಿಸಿ
  • ಇನ್ಶೂರೆನ್ಸ್ ಪಾಲಿಸಿಗಳು ಮತ್ತು ಪ್ರೀಮಿಯಂಗಳನ್ನು ಟ್ರ್ಯಾಕ್ ಮಾಡಬಹುದು
  •  ಪ್ರಮುಖ ಡಾಕ್ಯುಮೆಂಟ್‌ಗಳು ಮತ್ತು ಸ್ಟೇಟ್‌ಮೆಂಟ್‌ಗಳನ್ನು ಡೌನ್‌ಲೋಡ್‌ ಮಾಡಬಹುದು
  • ಕೇವಲ ನಿಮಗಾಗಿ ರಚಿಸಲಾದ ಮುಂಚಿತ-ಅನುಮೋದಿತ ಆಫರ್‌ಗಳನ್ನು ಪರಿಶೀಲಿಸಿ

ಇವುಗಳ ಹೊರತಾಗಿ, ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನೀವು ಕೆಲವೇ ಕ್ಲಿಕ್‌ಗಳಲ್ಲಿ ನಿಮ್ಮ ಕಾಂಟಾಕ್ಟ್ ಅಥವಾ ವೈಯಕ್ತಿಕ ವಿವರಗಳನ್ನು ಅಪ್ಡೇಟ್ ಮಾಡಬಹುದು. ಯಾವುದೇ ಬ್ರಾಂಚ್ ಭೇಟಿಗಳಿಲ್ಲದೆ ನೀವು ನಿಮ್ಮ ಪ್ರಾಡಕ್ಟ್ ಅಥವಾ ಸೇವೆ ಸಂಬಂಧಿತ ಪ್ರಶ್ನೆಗಳನ್ನು ಆನ್ಲೈನಿನಲ್ಲಿ ಸಲ್ಲಿಸಬಹುದು.

ಫೀಚರ್‌ಗಳು ಮತ್ತು ಪ್ರಯೋಜನಗಳು

ಮೈ ಅಕೌಂಟ್‌ನ ಕೆಲವು ಪ್ರಮುಖ ಫೀಚರ್‌ಗಳು ಇಲ್ಲಿವೆ:

  • ಅಸ್ತಿತ್ವದಲ್ಲಿರುವ ಲೋನ್ ವಿವರಗಳನ್ನು ಟ್ರ್ಯಾಕ್ ಮಾಡಿ

ನೀವು ನಿಮ್ಮ ಸಕ್ರಿಯ ಲೋನ್ ಅಕೌಂಟ್‌ಗಳನ್ನು ಪರಿಶೀಲಿಸಬಹುದು ಮತ್ತು ಇಎಂಐ ಗಡುವು ದಿನಾಂಕ, ಬಾಕಿ ಉಳಿಕೆ ಮತ್ತು ಇಎಂಐ ಮೊತ್ತದಂತಹ ವಿವರಗಳನ್ನು ಮೇಲ್ವಿಚಾರಣೆ ಮಾಡಬಹುದು.

  • ಪ್ರಮುಖ ಡಾಕ್ಯುಮೆಂಟ್‌ಗಳನ್ನು ಡೌನ್ಲೋಡ್ ಮಾಡಿ

ನಿಮ್ಮ ಲೋನ್ ಅಥವಾ ಫಿಕ್ಸೆಡ್ ಡೆಪಾಸಿಟ್ ಸಂಬಂಧಿತ ಡಾಕ್ಯುಮೆಂಟ್‌ಗಳಾದ ಅಕೌಂಟ್ ಸ್ಟೇಟ್ಮೆಂಟ್, ಬಡ್ಡಿ ಪ್ರಮಾಣಪತ್ರ ಮತ್ತು ನೋ ಡ್ಯೂಸ್ ಸರ್ಟಿಫಿಕೇಟ್ ನೋಡಿ ಮತ್ತು ಡೌನ್ಲೋಡ್ ಮಾಡಿ.

  • ನಿಮ್ಮ ಲೋನ್ ಮರುಪಾವತಿಯನ್ನು ನಿರ್ವಹಿಸಿ

ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಕೆಲವೇ ಕ್ಲಿಕ್‌ಗಳಲ್ಲಿ ಮುಂಚಿತವಾಗಿ ಇಎಂಐ ಪಾವತಿಸಿ, ನಿಮ್ಮ ಲೋನನ್ನು ಭಾಗಶಃ-ಮುಂಪಾವತಿ ಮಾಡಿ ಅಥವಾ ಫೋರ್‌ಕ್ಲೋಸ್ ಮಾಡಿ. ನೀವು ಗಡುವು ಮೀರಿದ ಪಾವತಿಯ ಆಯ್ಕೆಯನ್ನು ಕೂಡ ಬಳಸಬಹುದು ಮತ್ತು ನಿಮ್ಮ ಬಾಕಿಗಳನ್ನು ಸುಲಭವಾಗಿ ಕ್ಲಿಯರ್ ಮಾಡಬಹುದು.

  • ನಿಮ್ಮ ಪ್ರೊಫೈಲ್ ವಿವರಗಳನ್ನು ಅಪ್ಡೇಟ್ ಮಾಡಿ

ಯಾವುದೇ ಶಾಖೆಗೆ ಭೇಟಿ ನೀಡದೆ ಪ್ಯಾನ್, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್, ಇಮೇಲ್ ಐಡಿ ಮತ್ತು ವಸತಿ ವಿಳಾಸದಂತಹ ನಿಮ್ಮ ವೈಯಕ್ತಿಕ ಮತ್ತು ಕಾಂಟಾಕ್ಟ್ ವಿವರಗಳನ್ನು ನೀವು ಬದಲಾಯಿಸಬಹುದು.

  • ಮುಂಚಿತ-ಅನುಮೋದಿತ ಆಫರ್‌ಗಳನ್ನು ಪರಿಶೀಲಿಸಿ

ನಿಮ್ಮ ಬೇಸಿಕ್ ವಿವರಗಳನ್ನು ಹಂಚಿಕೊಳ್ಳಿ ಮತ್ತು ಕೇವಲ ನಿಮಗಾಗಿ ರಚಿಸಲಾದ ಲೋನ್‌ಗಳು ಮತ್ತು ಕಾರ್ಡ್‌ಗಳ ಮೇಲೆ ವಿಶೇಷ ಆಫರ್‌ಗಳಿಗೆ ಅಕ್ಸೆಸ್ ಪಡೆಯಿರಿ.

ನಿಮ್ಮ ಪ್ರೊಫೈಲ್ ವಿವರಗಳನ್ನು ಆನ್ಲೈನಿನಲ್ಲಿ ನಿರ್ವಹಿಸಲು ಹಂತವಾರು ಮಾರ್ಗದರ್ಶಿ

ನಿಮ್ಮ ವೈಯಕ್ತಿಕ ಮತ್ತು ಕಾಂಟಾಕ್ಟ್ ವಿವರಗಳನ್ನು ನೋಡಲು ಅಥವಾ ಅಪ್ಡೇಟ್ ಮಾಡಲು ನೀವು ಈ ಹಂತಗಳನ್ನು ಅನುಸರಿಸಬಹುದು:

ಹಂತ 1: ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 2: ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಒಟಿಪಿ ಸಲ್ಲಿಸಿ.

ಹಂತ 3: 'ಪ್ರೊಫೈಲ್' ವಿಭಾಗಕ್ಕೆ ಹೋಗಿ ಮತ್ತು 'ಪ್ರೊಫೈಲ್ ನೋಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: 'ಎಡಿಟ್ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಹೊಸ ವಿವರಗಳನ್ನು ನಮೂದಿಸಲು ಮುಂದುವರಿಯಿರಿ.

ಹಂತ 5: ನಿಮ್ಮ ಪ್ರೊಫೈಲ್ ಅಪ್ಡೇಟ್ ಮಾಡಲು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯೊಂದಿಗೆ ನಿಮ್ಮ ವಿವರಗಳನ್ನು ಪರಿಶೀಲಿಸಿ.

ನಮ್ಮ ದಾಖಲೆಗಳಲ್ಲಿ ನಿಮ್ಮ ಪ್ರೊಫೈಲ್ ವಿವರಗಳನ್ನು ಅಪ್ಡೇಟ್ ಮಾಡಲು ನಮಗೆ ಎರಡು ಕೆಲಸದ ದಿನಗಳು ಬೇಕಾಗುತ್ತವೆ. ಒಮ್ಮೆ ಅದನ್ನು ಅಪ್ಡೇಟ್ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ಕೂಡ ನೀವು ಎಸ್‌ಎಂಎಸ್ ಸ್ವೀಕರಿಸುತ್ತೀರಿ.

ಆಗಾಗ ಕೇಳುವ ಪ್ರಶ್ನೆಗಳು

ಬಜಾಜ್ ಫೈನಾನ್ಸ್ ಗ್ರಾಹಕ ಪೋರ್ಟಲ್ - ಅಕೌಂಟ್ ಸೈನ್-ಇನ್ ಮಾಡುವುದು ಹೇಗೆ?

ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ:

ಹಂತ 1: ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಕೆಳಗೆ ನೀಡಲಾದ 'ಮೈ ಅಕೌಂಟ್‌ಗೆ ಸೈನ್-ಇನ್ ಮಾಡಿ' ಮೇಲೆ ಕ್ಲಿಕ್ ಮಾಡಿ.
ಹಂತ 2: ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು 'ಒಟಿಪಿ ಪಡೆಯಿರಿ' ಮೇಲೆ ಕ್ಲಿಕ್ ಮಾಡಿ.
ಹಂತ 3: ಸೈನ್-ಇನ್ ಮಾಡಲು ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ಪಡೆದ ಒಟಿಪಿಯನ್ನು ಸಲ್ಲಿಸಿ.

ಒಂದು ವೇಳೆ ನೀವು ಕಾರ್ಪೊರೇಟ್ ಗ್ರಾಹಕರಾಗಿದ್ದರೆ, ಲಾಗಿನ್ ಮಾಡಲು ನೀವು ನಿಮ್ಮ ಮೊಬೈಲ್ ನಂಬರ್/ ಇಮೇಲ್ ಐಡಿ ಮತ್ತು ಸಂಯೋಜನೆಯ ದಿನಾಂಕವನ್ನು ನಮೂದಿಸಬೇಕು.

ನೀವು ನಮ್ಮ ಎನ್ಆಐ ಗ್ರಾಹಕರಾಗಿದ್ದರೆ, ನಿಮ್ಮ ಮೊಬೈಲ್ ನಂಬರ್/ಇಮೇಲ್ ಐಡಿ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ನೀವು ಸೈನ್-ಇನ್ ಮಾಡಬಹುದು.

ಮೈ ಅಕೌಂಟ್‌ಗೆ ಸೈನ್-ಇನ್ ಮಾಡಿ

ನನ್ನ ಚಾಲ್ತಿಯಲ್ಲಿರುವ ಲೋನ್ ವಿವರಗಳನ್ನು ನಾನು ಹೇಗೆ ನೋಡಬಹುದು?

ಈ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಎಲ್ಲಾ ಸಕ್ರಿಯ ಲೋನ್ ವಿವರಗಳನ್ನು ನೀವು ನೋಡಬಹುದು ಮತ್ತು ನಿರ್ವಹಿಸಬಹುದು:

ಹಂತ 1: ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಕೆಳಗೆ ನೀಡಲಾದ 'ನಿಮ್ಮ ಲೋನ್ ವಿವರಗಳನ್ನು ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ.
ಹಂತ 2: ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸೈನ್-ಇನ್ ಮಾಡಲು ಒಟಿಪಿ ಸಲ್ಲಿಸಿ.
ಹಂತ 3: 'ನನ್ನ ಸಂಬಂಧಗಳು' ವಿಭಾಗದಿಂದ ಲೋನ್ ಅಕೌಂಟ್ ನಂಬರನ್ನು ಆಯ್ಕೆಮಾಡಿ.
ಹಂತ 4: ಇಎಂಐ ಮೊತ್ತ, ಗಡುವು ದಿನಾಂಕ ಮತ್ತು ಬಾಕಿ ಅಸಲು ಮುಂತಾದ ಲೋನ್ ವಿವರಗಳನ್ನು ಕಂಡುಕೊಳ್ಳಿ.

ಪರ್ಯಾಯವಾಗಿ, ಬಜಾಜ್ ಫಿನ್‌ಸರ್ವ್‌ ಆ್ಯಪ್‌ ಬಳಸಿಕೊಂಡು ಕೂಡ ನೀವು ನಿಮ್ಮ ಲೋನ್ ವಿವರಗಳನ್ನು ಪರಿಶೀಲಿಸಬಹುದು. ನಿಮ್ಮ ಲೋನ್ ಅಕೌಂಟ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನೀವು ನಮ್ಮ ಗ್ರಾಹಕ ಸಹಾಯವಾಣಿ ನಂಬರ್ +91 8698010101 ಅನ್ನು ಕೂಡ ಸಂಪರ್ಕಿಸಬಹುದು.

ನಿಮ್ಮ ಲೋನ್‌ ವಿವರಗಳನ್ನು ಪರೀಕ್ಷಿಸಿ

ಇನ್ನಷ್ಟು ಓದಿರಿ ಕಡಿಮೆ ಓದಿ