ಟ್ರೆಕ್ ಕವರ್

play

ನಿಮ್ಮ ಮುಂದಿನ ಟ್ರೆಕ್ಕಿಂಗ್ ಸಾಹಸವನ್ನು ಕೈಗೊಳ್ಳುವುದರ ಕುರಿತು ನೀವು ಯೋಚಿಸುತ್ತಿದ್ದರೆ, ಮುಂಚಿತವಾಗಿ ಯೋಜಿಸುವುದು ಮತ್ತು ನೀವು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸುವ ಸಂದರ್ಭಕ್ಕೆ ಸಿದ್ಧರಾಗಿರುವುದು ಮುಖ್ಯ. ಟ್ರೆಕ್ ಸಮಯದಲ್ಲಿ ನಿಮ್ಮ ವಾಲೆಟ್ ಕಳೆದುಕೊಳ್ಳುವ ಕಾರಣದಿಂದ, ಒಂದು ಕಡೆ ಸಿಕ್ಕಿಹಾಕಿಕೊಳ್ಳುವುದು ಅಥವಾ ಅಪಘಾತಕ್ಕೆ ಒಳಗಾಗುವುದರಿಂದ ಉಂಟಾಗುವ ಹಣಕಾಸಿನ ಹಿನ್ನಡೆಗಳನ್ನು ಒಳಗೊಂಡಿರುತ್ತದೆ.

ಬಜಾಜ್ ಫಿನ್‌ಸರ್ವ್‌ ಟ್ರೆಕ್ ಕವರ್‌ನೊಂದಿಗೆ, ನೀವು ಒಂದೇ ಕರೆಯೊಂದಿಗೆ ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಬಹುದು, ಪ್ರಯಾಣ ಮತ್ತು ಹೋಟೆಲ್ ಸಹಾಯ ಪಡೆಯಬಹುದು, ತುರ್ತುಪರಿಸ್ಥಿತಿಯಲ್ಲಿ ನಿಮ್ಮ ಕುಟುಂಬವನ್ನು ಸಂಪರ್ಕಿಸಲು ತಾತ್ಕಾಲಿಕವಾಗಿ ಸ್ಮಾರ್ಟ್‌ಫೋನ್ ಪಡೆಯುವುದು, ಉಚಿತ ವೈಯಕ್ತಿಕ ಅಪಘಾತ ಕವರ್ ಮತ್ತು ಇನ್ನಷ್ಟು ಮಾಡಬಹುದು.

ಫೀಚರ್‌ಗಳು ಮತ್ತು ಪ್ರಯೋಜನಗಳು

 • ತುರ್ತು ಪ್ರಯಾಣ ಸಹಾಯ

  ನಿಮ್ಮ ಟ್ರೆಕ್‌ನಲ್ಲಿ ನೀವು ಒಂದು ಕಡೆ ಸಿಕ್ಕಿಹಾಕಿಕೊಂಡರೆ, ನೀವು ತುರ್ತು ಪ್ರಯಾಣ ಮತ್ತು ಹೋಟೆಲ್ ಸಹಾಯಕ್ಕಾಗಿ ಭಾರತದಲ್ಲಿ ರೂ. 1,00,000 ವರೆಗೆ ಮತ್ತು ವಿದೇಶದಲ್ಲಿ ರೂ. 1,80,000 ವರೆಗೆ ಪಡೆಯಬಹುದು.

 • ಒಂದೇ ಕರೆಯೊಂದಿಗೆ ಕಾರ್ಡ್‌ಗಳನ್ನು ಬ್ಲಾಕ್ ಮಾಡಿ

  ಟ್ರೆಕ್ಕಿಂಗ್ ಮಾಡುವಾಗ ನಿಮ್ಮ ವಾಲೆಟ್ ಕಳೆದುಕೊಂಡಿರಾ? ಕೇವಲ ಒಂದು ಫೋನ್ ಕರೆಯೊಂದಿಗೆ ನಿಮ್ಮ ಕಳೆದುಹೋದ ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳನ್ನು ಶೀಘ್ರವಾಗಿ ಬ್ಲಾಕ್ ಮಾಡುವ ಮೂಲಕ ನಿಮ್ಮ ಹಣವನ್ನು ಕಾಪಾಡಿಕೊಳ್ಳಿ. ಈ ಸೇವೆಯ ಟೋಲ್ ಫ್ರೀ ನಂಬರ್: 1800-419-4000

 • ಸರಿಹೊಂದುವ ಇನ್ಶೂರೆನ್ಸ್

  ವೈಯಕ್ತಿಕ ಅಪಘಾತಗಳಿಗೆ ರೂ. 1,50,000 ವರೆಗೆ ಉಚಿತ ಇನ್ಶೂರೆನ್ಸ್ ಕವರ್‌ನೊಂದಿಗೆ ಟ್ರೆಕ್ಕಿಂಗ್‌ಗೆ ಹೋಗುವಾಗ ಸಂರಕ್ಷಣೆ ಪಡೆಯಿರಿ. ಇದು ಸಾಹಸ ಕ್ರೀಡೆಗಳಲ್ಲಿ ಉಂಟಾಗುವ ಅಪಘಾತಗಳನ್ನು ಸಹ ಒಳಗೊಂಡಿದೆ.

 • ಬದಲಿ ಪ್ಯಾನ್ ಕಾರ್ಡ್

  ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಕಳೆದುಕೊಂಡರೂ ಸಹ ನೀವು ಉಚಿತವಾಗಿ ಬದಲಿ ಕಾರ್ಡ್ ಪಡೆಯಬಹುದು.

ಟ್ರಾವೆಲ್ ಸೇಫ್ ಸದಸ್ಯತ್ವ

ಬಜಾಜ್ ಫಿನ್‌ಸರ್ವ್‌ನ ಟ್ರೆಕ್ ಕವರ್, ಒಂದು ವರ್ಷ ಅವಧಿಯ ಟ್ರಾವೆಲ್ ಸೇಫ್ ಸದಸ್ಯತ್ವವನ್ನು ಒಳಗೊಂಡಿದ್ದು, ಅದು ಈ ಮುಂದಿನ ಪ್ರಯೋಜನಗಳನ್ನು ಹೊಂದಿದೆ:

• ನಿಮ್ಮ ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಕಳುವಾಗಿದ್ದರೆ ಅಥವಾ ನೀವು ಕಳೆದುಕೊಂಡಿದ್ದರೆ, ಅದರ ದುರ್ಬಳಕೆಯನ್ನು ತಡೆಗಟ್ಟಲು ನೀವು ಅವುಗಳನ್ನು ಬ್ಲಾಕ್ ಮಾಡಬಹುದು.

ನೀವು ಅದನ್ನು ಕಳೆದುಕೊಂಡ ಸಮಯದಲ್ಲಿ ಭಾರತದಲ್ಲಿದ್ದರೆ, ನೀವು ನಿಮ್ಮ ಹೋಟೆಲ್ ಬಿಲ್‌ಗಳನ್ನು ಮತ್ತು ಮನೆಗೆ ಹಿಂದಿರುಗಲು ವಿಮಾನ ಪ್ರಯಾಣದ ವೆಚ್ಚಗಳನ್ನು ಸರಿದೂಗಿಸಲು ರೂ. 1,00,000 ದವರೆಗೆ ಹಣಕಾಸಿನ ಸಹಾಯವನ್ನು ಪಡೆಯುತ್ತೀರಿ. ಇದು 28 ದಿನಗಳವರೆಗಿನ ಗರಿಷ್ಠ ಅವಧಿಯ ಬಡ್ಡಿ-ರಹಿತ ಅಡ್ವಾನ್ಸ್ ಆಗಿದೆ. ನೀವು 28 ದಿನಗಳ ಒಳಗೆ ಈ ಮೊತ್ತವನ್ನು ಮರುಪಾವತಿ ಮಾಡಬೇಕು.

ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿರಲು ಬದಲಿ ಸ್ಮಾರ್ಟ್‌ಫೋನ್ ಅನ್ನು ಪಡೆಯಬಹುದು. ನಿಮ್ಮ ಪ್ರವಾಸದ ನಂತರ ಅಥವಾ 7 ದಿನಗಳ ಒಳಗೆ ಸ್ಮಾರ್ಟ್‌ಫೋನ್ ಅನ್ನು ಹಿಂತಿರುಗಿಸಬೇಕು. ಈ ಫೀಚರ್ ನಿರ್ದಿಷ್ಟ ನಗರಗಳಲ್ಲಿ ಮಾತ್ರ ಮಾನ್ಯವಾಗಿದೆ.

ನಿಮ್ಮ ಮೂಲಭೂತ ಜೀವನದ ವೆಚ್ಚಗಳಿಗೆ ಮತ್ತು ಮನೆಗೆ ಮರಳಿ ಹೋಗಲು ನೆರವಾಗಲು, ನೀವು ತಕ್ಷಣದ ರೂ. 5000 ಕ್ಯಾಶ್ ಅಡ್ವಾನ್ಸ್ ಸಹ ಪಡೆಯುತ್ತೀರಿ.

• ನೀವು ಇತರ ಕಾರ್ಡುಗಳು ಮತ್ತು ದಾಖಲೆಗಳೊಂದಿಗೆ ನಿಮ್ಮ ಪ್ಯಾನ್ ಕಾರ್ಡನ್ನು ಸಹ ಕಳೆದುಕೊಂಡರೆ, ಟ್ರಾವೆಲ್ ಸೇಫ್ ಸದಸ್ಯತ್ವವು ಅದನ್ನು ಬದಲಿಸುವ ವೆಚ್ಚವನ್ನು ಕೂಡ ಒಳಗೊಂಡಿರುತ್ತದೆ.

• ನೀವು ಟ್ರೆಕ್ ಮಾಡುವಾಗ, ಗರಿಷ್ಠ 10 ದಿನಗಳ ಅವಧಿಯವರೆಗೆ, ರೂ. 1,50,000 ದವರೆಗೆ, ಸಾಹಸ ಕ್ರೀಡೆಗಳನ್ನೂ ಒಳಗೊಂಡಂತೆ, ಒಂದು ಉಚಿತ ಇನ್ಶೂರೆನ್ಸ್ ಕವರ್‌ನೊಂದಿಗೆ ವೈಯಕ್ತಿಕ ಅಪಘಾತಗಳ ವಿರುದ್ಧ ನೀವು ಸಂರಕ್ಷಣೆ ಪಡೆಯಬಹುದು.
 

ಯಾವುದು ಕವರ್ ಆಗಿಲ್ಲ

•    ಕುಡಿದು ಅಮಲೇರಿದ ಸಂದರ್ಭದಲ್ಲಿ ನಿಮ್ಮ ಬೆಲೆಬಾಳುವ ವಸ್ತುಗಳನ್ನು ನೀವು ಕಳೆದುಕೊಂಡರೆ, ಕವರೇಜ್ ಅನ್ನು ಒದಗಿಸಲಾಗುವುದಿಲ್ಲ.

ಅಗತ್ಯವಿರುವ ಡಾಕ್ಯುಮೆಂಟ್‌ಗಳು

•    KYC ಡಾಕ್ಯುಮೆಂಟ್‌ಗಳು
•    ಟ್ರಾವೆಲ್ ಸೇಫ್ ಸದಸ್ಯತ್ವದ ಪತ್ರ

ಅಪ್ಲೈ ಮಾಡುವುದು ಹೇಗೆ

•    ಟ್ರೆಕ್ ಕವರ್‌ಗಾಗಿ ಅಪ್ಲಿಕೇಶನ್ ಸಲ್ಲಿಸುವುದು ಸುಲಭ. ನೀವು ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟಿಗೆ ಲಾಗ್ ಇನ್ ಮಾಡಿ, ಟ್ರೆಕ್ ಕವರ್ ಅಪ್ಲಿಕೇಶನ್ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಆನ್ಲೈನಿನಲ್ಲಿ ಪ್ರೀಮಿಯಂ ಮೊತ್ತವನ್ನು ಪಾವತಿಸಬಹುದು.

ಕ್ಲೈಮ್ ಪ್ರಕ್ರಿಯೆ

•    ಕಾರ್ಡ್‌ಗಳು ಕಳೆದುಹೋದಲ್ಲಿ, 24 ಗಂಟೆಗಳ ಒಳಗೆ ನಮ್ಮ ಟೋಲ್-ಫ್ರೀ ನಂಬರ್ 1800-419-4000 ಗೆ ಕರೆ ಮಾಡಿ
• ತುರ್ತು ಸಹಾಯಕ್ಕಾಗಿ ನಿಮ್ಮ ಅವಶ್ಯಕತೆಗೆ ನೀವು ಪುರಾವೆಯನ್ನು ಸಹ ಒದಗಿಸಬೇಕು.