image

ಟಾಪ್ ಅಪ್ ಹೆಲ್ತ್ ಇನ್ಶೂರೆನ್ಸ್

ಹೆಲ್ತ್ ಇನ್ಶೂರೆನ್ಸ್ ಟಾಪ್-ಅಪ್

ನಿಮ್ಮ ಅಸ್ತಿತ್ವದಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ವೈದ್ಯಕೀಯ ಬಿಲ್‌ಗಳನ್ನು ಸರಿದೂಗಿಸಲು ಸಾಕಾಗುವುದಿಲ್ಲವೇ? ಬಜಾಜ್ ಫಿನ್‌ಸರ್ವ್‌ನಿಂದ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಹೆಚ್ಚುವರಿ ಆರೋಗ್ಯ ರಕ್ಷಣೆಯನ್ನು ಪಡೆಯಿರಿ. ಯಾವುದೇ ರೀತಿಯ ಅನಾರೋಗ್ಯ ಅಥವಾ ಅಪಘಾತಗಳ ವಿರುದ್ಧ ನಿಮ್ಮಮತ್ತು ನಿಮ್ಮ ಕುಟುಂಬಕ್ಕೆ ಹೆಚ್ಚಿನ ಆರೋಗ್ಯ ರಕ್ಷಣೆ ಪಡೆಯಿರಿ. ಕೈಗೆಟುಕುವ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳ ವಿರುದ್ಧ ಹೆಚ್ಚುವರಿ ಕವರೇಜ್ ಪಡೆಯಿರಿ.

ಫೀಚರ್‌ಗಳು ಮತ್ತು ಪ್ರಯೋಜನಗಳು

  • ಹೆಚ್ಚುವರಿ ಕವರೇಜ್

    ನಿಮ್ಮ ಅಸ್ತಿತ್ವದಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಹೆಚ್ಚುವರಿ ಕವರೇಜ್ ಪಡೆಯುವ ಮೂಲಕ ಹೆಚ್ಚುತ್ತಿರುವ ಆಸ್ಪತ್ರೆ ಬಿಲ್‌ಗಳನ್ನು ನೋಡಿಕೊಳ್ಳಿ.

  • ರೂ. 50 ಲಕ್ಷದವರೆಗೆ ಇನ್ಶೂರೆನ್ಸ್ ಮೊತ್ತ

    3 ಲಕ್ಷದಿಂದ ರೂ .50 ಲಕ್ಷವರೆಗಿನ ಇನ್ಶೂರೆನ್ಸ್ ಮೊತ್ತವನ್ನು ಪಡೆಯಿರಿ. ಆಸ್ಪತ್ರೆ ದಾಖಲಾತಿಯ ಪೂರ್ವ ಮತ್ತು ನಂತರದ ಪಾವತಿಗಳನ್ನು, ಕ್ರಮವಾಗಿ 60 ಮತ್ತು 90 ದಿನಗಳವರೆಗೆ ಮಾಡಿ.

  • ಫ್ಲೋಟರ್ ಕವರೇಜ್

    ಒಂದೇ ಮೊತ್ತದ ಇನ್ಶೂರೆನ್ಸ್ ಮೊತ್ತ ಮತ್ತು ಒಂದೇ ಪ್ರೀಮಿಯಂ ಮೂಲಕ 6 ವರೆಗೆ ಮಕ್ಕಳು ಮತ್ತು ಪಾಲಕರನ್ನು ಒಳಗೊಂಡು ನಿಮ್ಮ ಕುಟುಂಬ ಸದಸ್ಯರಿಗೆ ಕವರೇಜ್ ಪಡೆಯಿರಿ.

  • Insurance

    ಕಸ್ಟಮೈಜ್ ಮಾಡಿದ ಫೀಚರ್‌ಗಳು

    ವಯಸ್ಸಾಗುತ್ತಿರುವ ಅಥವಾ ನಿಯಮಿತ ಮತ್ತು ಆನುವಂಶಿಕ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಸೂಕ್ತವಾದ ಒಂದು ಟಾಪ್ ಅಪ್ ಹೆಲ್ತ್ ಇನ್ಶೂರೆನ್ಸ್.

  • ಕನಿಷ್ಠ ಡಾಕ್ಯುಮೆಂಟೇಶನ್‌

    ಇದು ಕನಿಷ್ಠವಾದ ಡಾಕ್ಯುಮೆಂಟೇಶನ್‌ಗಳೊಂದಿಗೆ ನೀವು ಆನ್ಲೈನ್ನಲ್ಲಿ ಅನ್ವಯಿಸಬಹುದಾದ ಅಡೆತಡೆಗಳ್ಳಿಲ್ಲದ ಪಾಲಿಸಿಯಾಗಿದೆ.

  • ಕೈಗೆಟಕುವ ಪ್ರೀಮಿಯಂಗಳು

    ಬೃಹತ್ ಮೊತ್ತದ ಕವರೇಜನ್ನು ಪಡೆಯಲು ಕೈಗೆಟಕುವ ಪ್ರೀಮಿಯಂ ಮೊತ್ತವನ್ನು ಪಾವತಿಸಿ. ಪ್ರೀಮಿಯಂ ವರ್ಷಕ್ಕೆ ರೂ. 2500 ನಿಂದ ಪ್ರಾರಂಭವಾಗುತ್ತದೆ.

  • ಚಿಕ್ಕ ಕಾಯುವ ಅವಧಿ

    ಒಂದು ಟಾಪ್ ಅಪ್ ಇನ್ಶೂರೆನ್ಸ್ ಪಾಲಿಸಿ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ ಕಾಯುವ ಅವಧಿಯನ್ನು 12 ತಿಂಗಳಿಗೆ ತಗ್ಗಿಸುತ್ತದೆ.

  • ಹಲವಾರು ಫೀಚರ್‌ಗಳು

    ಈ ಪಾಲಿಸಿಯಡಿ, ಮೆಟರ್ನಿಟಿ, ಆ್ಯಂಬ್ಯುಲನ್ಸ್, ಮತ್ತು ಅಂಗಾಂಗ ದಾನಿ ವೆಚ್ಚಗಳನ್ನೂ ಸಹ ಕವರ್ ಮಾಡಿ.

  • ಉಚಿತ ವೈದ್ಯಕೀಯ ತಪಾಸಣೆ

    ನೀವು ಯಾವುದೇ ಮೊತ್ತವನ್ನು ಕ್ಲೈಮ್ ಮಾಡಿದ್ದರೂ ಅಥವಾ ಮಾಡದಿದ್ದರೂ, ನಿರಂತರವಾದ 3 ವರ್ಷಗಳ ನಿಯಮಿತ ಅವಧಿಯ ಕೊನೆಯಲ್ಲಿ ಒಂದು ನಿರ್ದಿಷ್ಟ ಮಿತಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ಪಡೆಯಿರಿ.

  • ನಗದು ರಹಿತ ಸೌಲಭ್ಯ

    5700 ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಹಣವಿಲ್ಲದ ಸೌಲಭ್ಯವನ್ನು ಪಡೆಯಿರಿ.

  • ತೆರಿಗೆ ವಿನಾಯಿತಿ

    ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 D ಅಡಿಯಲ್ಲಿ ತೆರಿಗೆ ವಿನಾಯಿತಿಯಾಗಿ ರೂ.60,000 ಗಳವರೆಗೆ ಉಳಿಸಿರಿ.

  • ವೈದ್ಯಕೀಯ ರಹಿತ

    ಕ್ಲೀನ್ ಪ್ರಪೋಸಲ್ ಫಾರಂಗೆ ಒಳಪಟ್ಟು 55 ವರ್ಷ ವಯಸ್ಸಿನವರೆಗೆ ಯಾವುದೇ ಪಾಲಿಸಿ ಮುಂಚಿನ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ.

  • ಲುಕ್ ಅಪ್ ಅವಧಿ

    ನಿಮ್ಮ ಪಾಲಿಸಿಯ ಮೇಲೆ 15 ದಿನಗಳ ಲುಕಪ್ ಅಥವಾ ಟ್ರಯಲ್ ಅವಧಿಯನ್ನು ಪಡೆಯಿರಿ. ತೃಪ್ತಿಯಾಗದಿದ್ದಲ್ಲಿ, ಯಾವ ಶುಲ್ಕವಿಲ್ಲದೇ ರದ್ದುಗೊಳಿಸಿ, ಇದು ಲುಕ್-ಅಪ್ ಅವಧಿಯಲ್ಲಿ ಯಾವ ಕ್ಲೈಮ್ ಮಾಡದಿರುವ ಷರತ್ತಿಗೆ ಒಳಪಟ್ಟಿರುತ್ತದೆ.

ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ಗಾಗಿ ಅರ್ಹತೆ

ಓರ್ವ ಬಜಾಜ್ ಫಿನ್‌ಸರ್ವ್‌ ಲೋನ್‌ ಗ್ರಾಹಕರಾಗಿ, ಟಾಪ್ ಅಪ್ ಹೆಲ್ತ್ ಇನ್ಶೂರೆನ್ಸ್ ಪಡೆಯುವುದು ಸುಲಭ ಮತ್ತು ಶೀಘ್ರವಾಗಿರುತ್ತದೆ. ನಿಮ್ಮ ಅರ್ಹತೆ ಮಾನದಂಡವನ್ನು ಚೆಕ್ ಮಾಡಿ:


• ಪಾಲಿಸಿದಾರ ಮತ್ತು ಸಂಗಾತಿಯು 18 ಇಂದ 70 ವರ್ಷಗಳ ನಡುವೆ ಇರಬೇಕು.
• ಇಬ್ಬರೂ ಪಾಲಕರು ನಮ್ಮ ಬಳಿ ಇನ್ಶೂರೆನ್ಸ್ ಮಾಡಿಸಿದ್ದಲ್ಲಿ, 3 ತಿಂಗಳಿನಿಂದ 18 ವರ್ಷಗಳ ನಡುವಿನ ವಯಸ್ಸಿನ ಅವಲಂಬಿತ ಮಕ್ಕಳಿಗೆ ಇನ್ಶೂರೆನ್ಸ್ ಕವರ್ ನೀಡಬಹುದಾಗಿದೆ.
• ಇಬ್ಬರೂ ಪೋಷಕರು ನಮ್ಮಲ್ಲಿ ಇನ್ಶೂರೆನ್ಸ್ ಮಾಡಿಸಿದ್ದರೆ, 18 ವರ್ಷದಿಂದ 25 ವರ್ಷ ವಯಸ್ಸಿನ ವ್ಯಕ್ತಿಗಳು ಸ್ವಯಂ ಪ್ರಪೋಸರ್ ಆಗಿ ಅಥವಾ ಅವಲಂಬಿತರಾಗಿ ಕವರ್ ಪಡೆಯಬಹುದು.
• ಅವಲಂಬಿತ ಪಾಲಕರನ್ನೂ ಸಹ ಇದೇ ಪ್ಲಾನ್ ಅಡಿ ಕವರ್ ಮಾಡಬಹುದು, ಆದರೆ ಪಾಲಕರಿಗೆ ಪ್ರತ್ಯೇಕ ಪಾಲಿಸಿಯನ್ನು ನೀಡಲಾಗುತ್ತದೆ. ಕುಟುಂಬ ಸದಸ್ಯರ ಅತಿ ಹೆಚ್ಚಿನ ವಯಸ್ಸು ಪ್ರೀಮಿಯಂ ಮೊತ್ತವನ್ನು ನಿಗದಿಸುತ್ತದೆ.

ಪ್ರಮುಖ ಹೊರಪಡಿಕೆಗಳು

ಪಾಲಿಸಿ ಅಡಿಯಲ್ಲಿನ ಪ್ರಮುಖ ಹೊರಪಡಿಕೆಗಳು ಹೀಗಿವೆ:

• ಪಾಲಿಸಿ ಪ್ರೊಪೋಸ್ ಮಾಡುವುದಕ್ಕೂ ಮುಂಚೆ ಅಥವಾ ಆ ಸಮಯದಲ್ಲಿನ ಪ್ರಸ್ತುತ ಇರುವ ಕಾಯಿಲೆಗಳು/ ಅಸ್ವಸ್ಥತೆಗಳು, ಮೊದಲ 12 ತಿಂಗಳಿಗೆ ಪ್ರಯೋಜನಗಳು ಅನ್ವಯವಾಗುವುದಿಲ್ಲ.
• ಪಾಲಿಸಿಯ ಮೊದಲನೇ ತಿಂಗಳಿನಲ್ಲಿ ಉಂಟಾದ ಕಾಯಿಲೆಗಳು.
• ಪಾಲಿಸಿಯ ಮೊದಲ 12 ತಿಂಗಳವರೆಗೆ ಹೆರಿಗೆ ವೆಚ್ಚಗಳು ಅಥವಾ ನವಜಾತ ಶಿಶುವಿನ ವೆಚ್ಚಗಳು.
• ಗಾಯ ಅಥವಾ ಸ್ವಾಭಾವಿಕ ಕಾರಣಗಳಿಂದ ಉಂಟಾಗುವ ಹಲ್ಲಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾತಿ.
• ಯಾವುದೇ ಹೆರಿಗೆ/ ನವಜಾತ ಮಗುವಿನ ವೆಚ್ಚಗಳು 6 ವರ್ಷಗಳ ಕಾಯುವ ಅವಧಿಯನ್ನು ಹೊಂದಿರುತ್ತವೆ.
• ಆಲ್ಕೊಹಾಲ್, ಮಾದಕ ವಸ್ತುಗಳು ಮುಂತಾದ ವಿಷಕಾರಿ ಮತ್ತು/ ಅಥವಾ ವ್ಯಸನಕಾರಿ ವಸ್ತುಗಳನ್ನು ಸೇವಿಸುವುದರಿಂದ ಉಂಟಾಗುವ ಯಾವುದೇ ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡಲಾಗುವುದಿಲ್ಲ.
• ಜನ್ಮಜಾತ ಕಾಯಿಲೆಗಳು ಮತ್ತು ದೋಷಗಳು, ಅಲೋಪಥಿಯಲ್ಲದ ಔಷಧ, ಏಡ್ಸ್ ಮತ್ತು ಸಂಬಂಧಿತ ಕಾಯಿಲೆ.
• ಯುದ್ಧದ ಸಮಯದಲ್ಲಿ ಯಾವುದೇ ಸರ್ಕಾರ ಅಥವಾ ಸಾರ್ವಜನಿಕ ಸ್ಥಳೀಯ ಅಧಿಕಾರಿಗಳಿಗೆ ಗಾಯ, ವಿದೇಶಿ ಶತ್ರುಗಳು, ಯುದ್ಧಗಳು, ಅಶಾಂತಿ, ಕ್ರಾಂತಿ, ಮಿಲಿಟರಿ ಅಥವಾ ಆಕ್ರಮಣಶೀಲ ಶಕ್ತಿ ಅಥವಾ ಅಂತಹುದೇ ಅನಿರೀಕ್ಷಿತ ಚಟುವಟಿಕೆಗಳು.