ಬಾಡಿಗೆ ಡೆಪಾಸಿಟ್ ಲೋನ್‍ನ ವೈಶಿಷ್ಟ್ಯಗಳು

 • High-value loan

  ಹೆಚ್ಚು - ಮೌಲ್ಯದ ಲೋನ್

  ಮನೆ ಬಾಡಿಗೆಗೆ ಪಡೆಯಲು ಮಾಡುವ ಖರ್ಚುಗಳಿಗಾಗಿ 5 ಲಕ್ಷದವರೆಗೆ ಹಣ ಪಡೆಯಿರಿ.

 • Minimal paperwork

  ಕನಿಷ್ಠ ಕಾಗದ ಪತ್ರಗಳ ಕೆಲಸ

  ಬಾಡಿಗೆ ಮನೆಯ ಡೆಪಾಸಿಟ್‍ಗಾಗಿ ತಕ್ಷಣವೇ ಹಣ ಪಡೆಯಲು ಕೆಲವೇ ದಾಖಲೆಗಳನ್ನು ಸಲ್ಲಿಸಿ.

 • Doorstep service

  ಮನೆಬಾಗಿಲಿನ ಸೇವೆ

  ನಮ್ಮ ಡೋರ್‌ಸ್ಟೆಪ್ ಸರ್ವಿಸ್ ಬಳಸಿ ಮತ್ತು ಹೊರಹೋಗುವ ಗೋಜಿಲ್ಲದೇ ಮನೆಯಲ್ಲೇ ನಿಮ್ಮ ಬಾಡಿಗೆ ಒಪ್ಪಂದವನ್ನು ರಚಿಸಿ ಮತ್ತು ನೋಂದಾಯಿಸಿ.

 • Flexi Hybrid facility

  ಫ್ಲೆಕ್ಸಿ ಹೈಬ್ರಿಡ್ ಫೆಸಿಲಿಟಿ

  ನಿಮಗೆ ಮಂಜೂರಾಗಿರುವ ಮಿತಿಯ ಒಳಗೆ ವಿತ್‍ಡ್ರಾ ಮಾಡಿರಿ ಮತ್ತು ನೀವು ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿ ಪಾವತಿಸಿ.

 • Flexible tenors

  ಹೊಂದಿಕೊಳ್ಳುವ ಅವಧಿಗಳು

  36 ತಿಂಗಳವರೆಗಿನ ಅನುಕೂಲಕರ ಅವಧಿಗಳಲ್ಲಿ ಸುಲಭವಾಗಿ ಮರುಪಾವತಿ ಮಾಡಿ.

 • Quick processing

  ತ್ವರಿತ ಪ್ರಕ್ರಿಯೆ

  ಕೇವಲ 24 ಗಂಟೆಗಳಲ್ಲಿ ತ್ವರಿತವಾಗಿ ಸೆಕ್ಯುರಿಟಿ ಡೆಪಾಸಿಟ್ ಫಂಡಿಂಗ್ ಪಡೆದುಕೊಳ್ಳಿ.

 • Part-prepayment facility

  ಭಾಗಶಃ-ಮುಂಪಾವತಿ ಸೌಲಭ್ಯ

  ಫ್ಲೆಕ್ಸಿ ಹೈಬ್ರಿಡ್ ಬಾಡಿಗೆ ಲೋನ್‍‍ನಿಂದ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನಿಮ್ಮ ಲೋನ್ ಅನ್ನು ಭಾಗಶಃ ಮುಂಗಡ ಪಾವತಿ ಮಾಡಿ.

 • Value-added services

  ಮೌಲ್ಯವರ್ಧಿತ ಸೇವೆಗಳು

  ಕಾರ್ಡ್ ಪ್ರೊಟೆಕ್ಷನ್ ಪ್ಲಾನ್, ಕಸ್ಟಮೈಸ್ಡ್ ಇನ್ಶೂರೆನ್ಸ್ ಸ್ಕೀಮ್, ಮುಂತಾದ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಿರಿ.

ಬಾಡಿಗೆದಾರರು ಮತ್ತು ಮನೆ ಮಾಲೀಕರಿಗೆ ಬಾಡಿಗೆ ಡೆಪಾಸಿಟ್ ಲೋನ್‌ಗಳು

ಬಜಾಜ್ ಫಿನ್‌ಸರ್ವ್ ತ್ವರಿತ ಅನುಮೋದನೆ ಮತ್ತು ಕನಿಷ್ಠ ದಾಖಲೆಗಳೊಂದಿಗೆ ರೂ. 5 ಲಕ್ಷದವರೆಗಿನ ಬಾಡಿಗೆ ಡೆಪಾಸಿಟ್ ಲೋನ್‌ ಒದಗಿಸುತ್ತದೆ. ಮನೆ ಬಾಡಿಗೆಗೆ ಪಡೆಯುವಾಗ ಕೊಡಬೇಕಾದ ಸೆಕ್ಯೂರಿಟಿ ಡೆಪಾಸಿಟ್, ಮುಂಗಡ ಬಾಡಿಗೆ, ಬ್ರೋಕರೇಜ್, ಸಾಗಾಟದ ಖರ್ಚು ಮತ್ತು ಫರ್ನಿಶಿಂಗ್ ಖರ್ಚು ಇತ್ಯಾದಿಗಳಿಗೆ ಈ ಹಣವನ್ನು ಬಳಸಬಹುದು. ಹೊರಗೆ ಹೋಗುವ ಗೋಜಿಲ್ಲದೇ ಮನೆಯಲ್ಲೇ ಕುಳಿತು ನಿಮ್ಮ ಬಾಡಿಗೆ ಒಪ್ಪಂದ ತಯಾರಿಸುವ ಹಾಗೂ ನೋಂದಾಯಿಸುವ ಆಯ್ಕೆಯನ್ನು ಬಜಾಜ್ ಫಿನ್‍ಸರ್ವ್ ನೀಡುತ್ತದೆ. *ಮುಂಬೈ, ಪುಣೆ, ಬೆಂಗಳೂರು ಮುಂತಾದ ನಗರಗಳಲ್ಲಿ ಈ ಸೌಲಭ್ಯ ದೊರೆಯುತ್ತದೆ.

ನಮ್ಮ ವಿಶಿಷ್ಟ ಫ್ಲೆಕ್ಸಿ ಹೈಬ್ರಿಡ್ ಫೆಸಿಲಿಟಿ ಬಳಸಿ ಮಂಜೂರಾದ ಲೋನ್ ಮಿತಿಯಲ್ಲಿ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಹಲವು ಬಾರಿ ವಿತ್‍ಡ್ರಾ ಮಾಡಬಹುದು. ಈ ಸೌಲಭ್ಯದಲ್ಲಿ, ನೀವು ಬಳಸುವ ಹಣದ ಮೇಲೆ ಮಾತ್ರ ಬಡ್ಡಿ ಪಾವತಿಸಬಹುದು, ಪೂರ್ಣ ಮೊತ್ತದ ಮೇಲೆ ಅಲ್ಲ. ಬಜಾಜ್ ಫಿನ್‌ಸರ್ವ್‌ನಲ್ಲಿ ನೀವು ಕಾರ್ಡ್ ಪ್ರೊಟೆಕ್ಷನ್ ಪ್ಲಾನ್, ಫೈನಾನ್ಸ್ ಫಿಟ್ನೆಸ್ ರಿಪೋರ್ಟ್ ಅಲ್ಲದೇ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಲು, ಅದರಲ್ಲೂ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ಬಳಸಲು ಕಸ್ಟಮೈಸ್ ಮಾಡಿದ ಇನ್ಶೂರೆನ್ಸ್ ಯೋಜನೆಗಳ ಪ್ರಯೋಜನಗಳನ್ನೂ ಪಡೆಯಬಹುದು.

ಬಜಾಜ್ ಫಿನ್‌ಸರ್ವ್‌, ಬಾಡಿಗೆದಾರರಿಗೆ ಮತ್ತು ಮನೆ ಮಾಲೀಕರಿಗೆ ಬಾಡಿಗೆ ಡೆಪಾಸಿಟ್ ಲೋನ್‌ ಒದಗಿಸುತ್ತದೆ. ನೀವು ಮನೆ ಬದಲಾಯಿಸುತ್ತಿದ್ದರೆ, ರೆಂಟಲ್ ಡೆಪಾಸಿಟ್ ಲೋನ್ ಪಡೆಯಬಹುದು. ತ್ವರಿತ ಅನುಮೋದನೆಯೊಂದಿಗೆ ಬೇಗನೆ ಹಣ ಸಿಗುವುದರಿಂದ ಸೆಕ್ಯೂರಿಟಿ ಡೆಪಾಸಿಟ್, ಬ್ರೋಕರೇಜ್ ಅಥವಾ ಬಾಡಿಗೆಯ ಅಡ್ವಾನ್ಸ್‌ ಪಾವತಿಸಲು ಅನುಕೂಲವಾಗುವುದು.

ನೀವು ಮನೆಯ ಮಾಲೀಕರಾಗಿದ್ದು ಮನೆ ಬಾಡಿಗೆಗೆ ಕೊಡಲು ನೋಡುತ್ತಿದ್ದರೆ, ಈ ರೆಂಟಲ್ ಡೆಪಾಸಿಟ್ ಲೋನ್ ಮೂಲಕ ಮನೆಯನ್ನು ನವೀಕರಿಸಬಹುದು, ಇದರಿಂದ ನಿಮಗೆ ಹೆಚ್ಚಿನ ಬಾಡಿಗೆ ಮತ್ತು ಸೆಕ್ಯೂರಿಟಿ ಡೆಪಾಸಿಟ್ ಕೇಳುವ ಅವಕಾಶ ಸಿಗುತ್ತದೆ. ಉದಾಹರಣೆಗೆ, ಒಂದು ಫರ್ನಿಶ್ ಆಗದ ಮನೆಗೆ ಹೋಲಿಸಿದರೆ, ಹೊಸದಾಗಿ ಪೇಂಟ್ ಮಾಡಿದ ಮತ್ತು ನವೀಕರಿಸಿದ ಮನೆಗೆ ಹೆಚ್ಚಿನ ಬಾಡಿಗೆ ದೊರೆಯುತ್ತದೆ. ಬಾಡಿಗೆಗೆ ಕೊಡುವ ಮೊದಲು ಮನೆಯನ್ನು ನವೀಕರಿಸುವುದರಿಂದ ನಿಮಗೆ ದೊರೆಯುವ ಲಾಭವನ್ನು ಈ ಕೆಳಗಿನ ಪಟ್ಟಿ*ಯಲ್ಲಿ ಕೊಡಲಾಗಿದೆ:

ಮಾನದಂಡಗಳು

ಆಸ್ತಿಯ ಮೌಲ್ಯ

ಪ್ರತಿ ತಿಂಗಳ ಬಾಡಿಗೆ

ವಾರ್ಷಿಕ ಬಾಡಿಗೆ

ಬಾಡಿಗೆ ಆದಾಯ

5 ವರ್ಷಗಳಿಗೆ ಒಟ್ಟು ಬಾಡಿಗೆ

ಫರ್ನಿಶ್ ಆಗಿರದ ಮನೆಗಳಿಂದ ಬಾಡಿಗೆ ಆದಾಯ

ರೂ. 90 ಲಕ್ಷ

ರೂ. 27,000

ರೂ. 3,24,000

3.6%

ರೂ. 16,20,000

ಫರ್ನಿಶ್ ಮಾಡಿದ ಮನೆಗಳಿಂದ ಬಾಡಿಗೆ ಆದಾಯ

ರೂ. 90 ಲಕ್ಷ

ರೂ. 32,000

ರೂ. 3,84,000

4.3%

ರೂ. 19,20,000

ಫರ್ನಿಶ್ ಆದ ಮನೆಯ ಬಾಡಿಗೆಯಿಂದ ಬರುವ ಲಾಭ

 

 

ರೂ. 3,00,000

 

*ಇಲ್ಲಿ ನೀಡಲಾದ ಎಲ್ಲಾ ಶುಲ್ಕಗಳು ಸೂಚನಾತ್ಮಕವಾಗಿವೆ. ಅದು ನೀವು ವಾಸವಿರುವ ನಗರಕ್ಕೆ ತಕ್ಕಂತೆ ಬದಲಾಗಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಾಡಿಗೆ ಡೆಪಾಸಿಟ್ ಲೋ‍ನ್‍ಗೆ ಅರ್ಜಿ ಸಲ್ಲಿಸುವುದು ಹೇಗೆ

 1. 1 ಇಲ್ಲಿ ಕ್ಲಿಕ್ ಮಾಡಿ & ಅಪ್ಲಿಕೇಶನ್ ಫಾರ್ಮ್ ತೆರೆಯಲು
 2. 2 ಓಟಿಪಿ ಪಡೆಯಲು ನಿಮ್ಮ ಹೆಸರು ಮತ್ತು ಸಂಪರ್ಕ ವಿವರಗಳನ್ನು ಭರ್ತಿ ಮಾಡಿ
 3. 3 ಒಟಿಪಿ ಸಲ್ಲಿಸಿ ಮತ್ತು ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ವಿವರಗಳನ್ನು ಭರ್ತಿ ಮಾಡಿ
 4. 4 ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಲೋನ್ ಆಫರ್ ನೋಡಿ ಮತ್ತು ಖಚಿತಪಡಿಸಿ
 5. 5 ನಿಮ್ಮ ಬಾಡಿಗೆ ಒಪ್ಪಂದವನ್ನು ಅಪ್‍ಲೋಡ್ ಮಾಡಿ

ನಿಮ್ಮ ಬಾಡಿಗೆ ಒಪ್ಪಂದವನ್ನು ಪರಿಶೀಲಿಸಿದ ನಂತರ, 24 ಗಂಟೆಗಳಲ್ಲಿ ಬಾಡಿಗೆ ಅಪಾರ್ಟ್‍ಮೆಂಟ್‍ಗೆ ಬೇಕಾದ ಸೆಕ್ಯೂರಿಟಿ ಡೆಪಾಸಿಟ್ ನಿಮ್ಮ ಬ್ಯಾಂಕ್ ಅಕೌಂಟ್‍‍ಗೆ ಬಿಡುಗಡೆಯಾಗುತ್ತದೆ*.

*ಷರತ್ತು ಅನ್ವಯ