ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್

ಅಪಘಾತಗಳು ಅನಿಶ್ಚಿತ ಮತ್ತು ದುರದೃಷ್ಟಕರವಾಗಿರುತ್ತವೆ. ಬಜಾಜ್ ಫೈನಾನ್ಸ್ ಲಿಮಿಟೆಡ್ ಮೂಲಕ ನೀಡಲಾಗುವ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಜೊತೆಗೆ ಅಪಘಾತಗಳಿಂದಾಗಿ ಉಂಟಾದ ದೈಹಿಕ ಗಾಯ, ಅಂಗವಿಕಲತೆ ಅಥವಾ ಮರಣದ ವಿರುದ್ಧ ಹಣಕಾಸಿನ ಕವರೇಜನ್ನು ಪಡೆಯಿರಿ. ನಿಮ್ಮ ಹಾಸ್ಪಿಟಲ್ ಬಿಲ್‌ಗಳನ್ನು ಕವರ್ ಮಾಡಿ ಹಾಗೂ ನಿಮ್ಮ ರನ್ನಿಂಗ್ ಇನ್‌ಕಮ್ ನಷ್ಟವಾಗಿದುದಕ್ಕೆ ಪರಿಹಾರದ ರೂಪದಲ್ಲಿ ಹಾಸ್ಪಿಟಲ್ ಕನ್‌ಫೈನ್‌ಮೆಂಟ್ ಅಲೋವನ್ಸ್ ಪಡೆಯಿರಿ.
 

ಫೀಚರ್‌ಗಳು ಮತ್ತು ಪ್ರಯೋಜನಗಳು

 • ಆರ್ಥಿಕವಾಗಿ ಸುರಕ್ಷಿತವಾಗಿರಿ

  ವೈಯಕ್ತಿಕ ಅಪಘಾತ ಅಥವಾ ಗಾಯಗೊಳ್ಳುವಿಕೆಯಿಂದ ಉದ್ಭವವಾಗುವ ಹಣಕಾಸು ಹೊಣೆಗಾರಿಕೆಯನ್ನು ಕವರ್ ಮಾಡಿ. ವೈಯಕ್ತಿಕ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಹಕ್ಕು ಬಳಸಿಕೊಂಡು ವೈದ್ಯಕೀಯ ಖರ್ಚುಗಳನ್ನು ಪಾವತಿಸುವ ಮೂಲಕ ನಿಮ್ಮ ಉಳಿತಾಯವನ್ನು ಹಾಗೇ ಉಳಿಸಿಕೊಳ್ಳಿ.

 • ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿದೆ

  ಮಾನ್ಯವಾದ ಕ್ಲೈಮ್ ಮೊತ್ತದ ಅಥವಾ ನೈಜ ವೈದ್ಯಕೀಯ ರಸೀದಿ, ಯಾವುದು ಕಡಿಮೆಯಾಗಿದೆಯೊ ಅದರ ಮೇಲೆ 40% ವರೆಗಿನ ಮರುಪಾವತಿಯನ್ನು ಪಡೆಯಿರಿ.

 • ಹಾಸ್ಪಿಟಲ್ ಕನ್ಫೈನ್‍ಮೆಂಟ್ ಭತ್ಯೆ

  ಅಪಘಾತದ ಕಾರಣದಿಂದಾಗಿ ನಿಮ್ಮ ಸಾಮಾನ್ಯ ಆದಾಯವು ತೊಂದರೆಗೊಳಗಾಗುತ್ತದೆಯೇ ? ಸುಮಾರು 30 ದಿನಗಳವರೆಗೆ ಆಸ್ಪತ್ರೆಗೆ ರೂ .1000 / ದಿನ ಭತ್ಯೆ ಸ್ವೀಕರಿಸಿ.

 • ಮಕ್ಕಳ ಶಿಕ್ಷಣ ಬೋನಸ್

  ನಿಮ್ಮ ವೈದ್ಯಕೀಯ ಖರ್ಚುಗಳು ಮಾತ್ರವಲ್ಲ, ಆದರೆ ನಿಮ್ಮ ಮಕ್ಕಳ ಶಿಕ್ಷಣ ಶುಲ್ಕವೂ ಈ ಇನ್ಶೂರೆನ್ಸ್ ಯೋಜನೆ ಅಡಿಯಲ್ಲಿ ಕವರ್ ಆಗುತ್ತದೆ. ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ, ಅಸಲು ಇನ್ಸೂರೆನ್ಸ್ ಮೊತ್ತದ 10% ಅನ್ನು ಪಡೆದುಕೊಳ್ಳಿ ಅಥವಾ 19 ವರ್ಷಕ್ಕಿಂತ ಕಡಿಮೆ ಇರುವ ಪ್ರತಿ ಮಗುವಿಗೆ ರೂ.5000 ವರ್ಷಗಳು, ಯಾವುದೋ ಕಡಿಮೆಯೋ ಅದು.

 • ಹೆಚ್ಚು ಅಂಗವೈಕಲ್ಯ ಪರಿಹಾರ

  ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ, ಇನ್ಶೂರೆನ್ಸ್ ಮಾಡಿದ ಮೊತ್ತದಲ್ಲಿ 125% ನಷ್ಟು ಪರಿಹಾರವನ್ನು ಪಡೆಯಿರಿ.

 • ಕ್ಲೈಮ್-ಫ್ರೀ ಬೋನಸ್

  ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ 10 ರಿಂದ 50% ರಷ್ಟು ಒಟ್ಟುಗೂಡಿಸಿದ ಬೋನಸನ್ನು ಪಡೆಯಿರಿ.

 • education loan online

  ತ್ವರಿತ ವಿತರಣೆ

  ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ದಿನಾಂಕದಿಂದ ಏಳು ಕೆಲಸದ ದಿನಗಳೊಳಗೆ ಅತಿ ವೇಗವಾಗಿ ಹಕ್ಕು ವಿತರಣೆಗಳನ್ನು ಪಡೆಯಿರಿ.

ಅರ್ಹತೆ

ನೀವು ಬಜಾಜ್ ಫಿನ್‌ಸರ್ವ್‌ ಲೋನಿನ ಗ್ರಾಹಕರಾಗಿದ್ದರೆ ನೀವು ಸುಲಭವಾಗಿ ವೈಯಕ್ತಿಕ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಡೆಯಬಹುದು. ಈ ಪ್ಲಾನ್‌ಗೆ ಅಪ್ಲೈ ಮಾಡಲು, ನೀವು ಮಾಡಬೇಕಾದುದು:


• ವಯಸ್ಸು 18 ದಿಂದ 65 ವರ್ಷಗಳ ನಡುವೆ ಇರಬೇಕು.
• ಅವಲಂಬಿತರು 5 ರಿಂದ 21 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು.
 

ನಿರಾಕರಣೆಗಳು

ವೈಯಕ್ತಿಕ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಯೋಜನೆಯ ಪ್ರಮುಖ ಹೊರಗಿಡುವಿಕೆಗಳು ಇಲ್ಲಿವೆ:

• ಯುದ್ಧ ಅಥವಾ ಭಯೋತ್ಪಾದನೆ ಸಂಬಂಧಿ ಗಾಯಗಳು.
• ಸ್ವಯಂ-ಗಾಯ ಅಥವಾ ಆತ್ಮಹತ್ಯೆ.
• ಪೂರ್ವ ಅಸ್ತಿತ್ವದಲ್ಲಿರುವ ಗಾಯ ಅಥವಾ ಅಂಗವೈಕಲ್ಯ.
• ಸಾಹಸ ಚಟುವಟಿಕೆಗಳಿಂದಾಗಿ ಸಂಭವಿಸುವ ಗಾಯಗಳು.
• ಅನಾರೋಗ್ಯ ಅಥವಾ ಗಾಯದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸುವುದು.

ಹಕ್ಕುತ್ಯಾಗ - *ಷರತ್ತುಗಳು ಅನ್ವಯ. ಬಜಾಜ್ ಫೈನಾನ್ಸ್ ಲಿಮಿಟೆಡ್ ಮಾಸ್ಟರ್ ಪಾಲಿಸಿದಾರರಾಗಿರುವ ಗ್ರೂಪ್ ಇನ್ಶೂರೆನ್ಸ್ ಯೋಜನೆಯಡಿ ಈ ಪ್ರಾಡಕ್ಟ್ ಆಫರ್ ಮಾಡಲಾಗುತ್ತದೆ. ನಮ್ಮ ಪಾಲುದಾರ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಕವರೇಜನ್ನು ಒದಗಿಸಲಾಗುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್ ಅಪಾಯದ ಹೊಣೆ ಹೊರುವುದಿಲ್ಲ. IRDAI ಕಾರ್ಪೊರೇಟ್ ಏಜೆನ್ಸಿ ನೋಂದಣಿ ನಂಬರ್ CA0101. ಮೇಲೆ ತಿಳಿಸಲಾದ ಪ್ರಯೋಜನಗಳು ಮತ್ತು ಪ್ರೀಮಿಯಂ ಮೊತ್ತವು ವಿಮಾದಾರರ ವಯಸ್ಸು, ಜೀವನಶೈಲಿ ಹವ್ಯಾಸಗಳು, ಆರೋಗ್ಯ ಇತ್ಯಾದಿಗಳಂತಹ ವಿವಿಧ ಅಂಶಗಳಿಗೆ ಒಳಪಟ್ಟಿರುತ್ತದೆ (ಅನ್ವಯವಾದರೆ). ವಿತರಣೆ, ಗುಣಮಟ್ಟ, ಸೇವೆಯ ಸಾಮರ್ಥ್ಯ, ನಿರ್ವಹಣೆ ಮತ್ತು ಮಾರಾಟದ ನಂತರದ ಯಾವುದೇ ಕ್ಲೈಮ್‌ಗಳಿಗೆ BFL ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಈ ಪ್ರಾಡಕ್ಟ್ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಈ ಪ್ರಾಡಕ್ಟ್ ಖರೀದಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಯಾವುದೇ ಥರ್ಡ್ ಪಾರ್ಟಿ ಪ್ರಾಡಕ್ಟ್‌ಗಳನ್ನು ಕಡ್ಡಾಯವಾಗಿ ಖರೀದಿಸಲು BFL ತನ್ನ ಯಾವುದೇ ಗ್ರಾಹಕರನ್ನು ಒತ್ತಾಯಿಸುವುದಿಲ್ಲ.”