ಬಜಾಜ್ ಫೈನಾನ್ಸ್ ಉತ್ತಮ ಹೂಡಿಕೆ ಯೋಜನೆಗಳು

ಫಿಕ್ಸೆಡ್‌ ಡೆಪಾಸಿಟ್‌ಗಳು ವೆರ್ಸಸ್ ರಿಕರಿಂಗ್‌ ಡೆಪಾಸಿಟ್‌ಗಳು

ಫಿಕ್ಸೆಡ್ ಡೆಪಾಸಿಟ್ ಹಾಗೂ ರಿಕರಿಂಗ್ ಡೆಪಾಸಿಟ್‌ ನಡುವೆ ವ್ಯತ್ಯಾಸ ಏನು?

ಫಿಕ್ಸೆಡ್‌ ಡೆಪಾಸಿಟ್‌ (FD) ಮತ್ತು ರಿಕರಿಂಗ್ ಡೆಪಾಸಿಟ್‌ಗಳು (RD)ಹೂಡಿಕೆದಾರರು ಬಹಳವಾಗಿ ಬಳಸುವ ಎರಡು ಹೂಡಿಕೆಯ ಸಾಧನಗಳಾಗಿದ್ದು ಅವು ಹೆಚ್ಚಿನ ಪ್ರತಿಫಲವನ್ನು ಬಡ್ಡಿಯ ದರವನ್ನು ನೀಡುತ್ತದೆ.

ಫಿಕ್ಸೆಡ್‌ ಡೆಪಾಸಿಟ್‌ಗಳಲ್ಲಿ ನಿಮ್ಮ ಹೂಡಿಕೆಯು ನಿಗದಿತ ಅವಧಿಯವರೆಗೂ ಲಾಕ್‌ ಮಾಡಲ್ಪಟ್ಟಿರುತ್ತದೆ. ರಿಕರಿಂಗ್ ಡೆಪಾಸಿಟ್‌ಗಳಲ್ಲಿ ನೀವು ಪ್ರತಿ ತಿಂಗಳು ನಿಗದಿತವಾದ ಡೆಪಾಸಿಟ್ ಅನ್ನು ಇರಿಸಬಹುದಾದ ಸಾಧನಗಳಾಗಿವೆ.

FD ಮತ್ತು RD ಗಳ ಫೀಚರ್‌ಗಳು ಮತ್ತು ಪ್ರಯೋಜನಗಳು

ಫಿಕ್ಸೆಡ್‌ ಡೆಪಾಸಿಟ್‌ಗಳು ಹಾಗೂ ರಿಕರಿಂಗ್‌ ಡೆಪಾಸಿಟ್‌ಗಳ ಫೀಚರ್‌ಗಳು ಹಾಗೂ ಅವುಗಳ ಪ್ರಯೋಜನಗಳ ಕುರಿತಾದ ಒಂದು ಸಂಕ್ಷಿಪ್ತ ನೋಟವು ಇಲ್ಲಿದೆ, ಅವುಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

1. ಹೂಡಿಕೆಯ ಮೇಲೆ ಲಾಭ

FD ಗಳಲ್ಲಿ, ತಿಂಗಳಿಗೊಮ್ಮೆ ತ್ರೈಮಾಸಿಕಕ್ಕೊಮ್ಮೆ ಅಥವಾ ಅರ್ಧ-ವಾರ್ಷಿಕವಾಗಿ ನಿಮ್ಮ ಪೂರ್ತಿ ಮೊತ್ತವನ್ನು ಡೆಪಾಸಿಟ್‌ ಮಾಡಿದ ಹಣದ ಮೇಲೆ ಬಡ್ಡಿಯನ್ನು ಪಡೆಯಿರಿ.

ಮತ್ತೊಂದೆಡೆಯಲ್ಲಿ, RD ಗಳ ಮೇಲೆ ಬಡ್ಡಿಯು ಕೂಡ ರಿಕರಿಂಗ್‌ ಆಧಾರದ ಮೇಲೆ ನೀಡಲಾಗುತ್ತದೆ, ಉದಾಹರಣೆಗೆ, RD ಯ ಮೇಲೆ 1 ವರ್ಷಕ್ಕೆ, ಮೊದಲ ಡೆಪಾಸಿಟ್‌ 12 ತಿಂಗಳ ಬಡ್ಡಿಯನ್ನು ಗಳಿಸಿಕೊಡುವುದು, ಎರಡನೆಯ ಡೆಪಾಸಿಟ್ 11 ತಿಂಗಳ ಬಡ್ಡಿಯನ್ನು ಗಳಿಸಿಕೊಡುವುದು ಇದು ಹೀಗೆಯೇ ಮುಂದುವರೆಯುತ್ತದೆ.

ಆದುದರಿಂದ ನೀವು RD ಯಲ್ಲಿ ಹೂಡುವಷ್ಟೇ ಹಣವನ್ನು FD ಯಲ್ಲಿ ಹೂಡಿದರೆ ಚಕ್ರ ಬಡ್ಡಿಯ ಪ್ರಯೋಜನವನ್ನು ಪಡೆಯಬಹುದು ಹಾಗಾಗಿ ನೀವು ಚಕ್ರಬಡ್ಡಿಯ ಅನುಕೂಲವನ್ನು ಹೊಂದುವುದರಿಂದ ನೀವು ಹೆಚ್ಚು ಹಣವನ್ನು ಗಳಿಸಬಹುದು.

2. ಹೂಡಿಕೆಯ ಅವಧಿಗಳು

ಬಜಾಜ್ ಫೈನಾನ್ಸ್ ಫಿಕ್ಸೆಡ್‌ ಡೆಪಾಸಿಟ್‌ಗಳಲ್ಲಿ, ನೀವು 12 ರಿಂದ 60 ತಿಂಗಳ ನಿಮ್ಮ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ರಿಕರಿಂಗ್ ಡೆಪಾಸಿಟ್‌ ಅವಧಿಗಳು ವ್ಯಾಪ್ತಿಯು ಸುಮಾರು 6 ತಿಂಗಳಿಂದ 10 ವರ್ಷದವರೆಗೆ ಇರುತ್ತದೆ.

3. ತೆರಿಗೆಯ ಪ್ರಯೋಜನಗಳು

ಒಟ್ಟು ಬಡ್ಡಿ ಆದಾಯ ವಾರ್ಷಿಕವಾಗಿ ರೂ. 10,000. ದಾಟಿದರೆ ತೆರಿಗೆಗಳನ್ನು ವಿಧಿಸಲಾಗುವುದು. ಒಟ್ಟು ಬಡ್ಡಿ ಆದಾಯವನ್ನು ಉಳಿತಾಯ ಅಕೌಂಟ್‌‌ಗಳು, FD ಗಳು ಮತ್ತು RD ಗಳಲ್ಲಿ ವಾರ್ಷಿಕವಾಗಿ ಗಳಿಸುವ ಬಡ್ಡಿ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.

4. ಬಡ್ಡಿ ದರಗಳು

RD ಮತ್ತು FD ಬಡ್ಡಿ ದರಗಳು ಬಹುತೇಕ ಒಂದೇ ರೀತಿಯಾಗಿದೆ. ಆದರೆ, ಒಂದು RDಗೆ ಹೋಲಿಸಿದರೆ ಅದೇ ಬಡ್ಡಿ ದರ ಮತ್ತು ಅವಧಿಯ ಮೇಲೆ FDಯ ಮೇಲೆ ಹೆಚ್ಚು ಗಳಿಸುವಿರಿ.

With Bajaj Finance, get higher interest rate up to 8.35% on Fixed Deposits. On Senior citizens FD, you will get 0.25% more interest.

CRISIL ನಿಂದ FAAA (ಸ್ಥಿರ) ಹಾಗೂ ICRA ನಿಂದ MAAA (ಸ್ಥಿರ) ಎಂಬ ರೇಟಿಂಗ್ ಪಡೆದಿರುವ ಫಿಕ್ಸೆಡ್‌ ಡೆಪಾಸಿಟ್‌ಗಳಲ್ಲಿ ನೀವು ಹೂಡಿಕೆಯನ್ನು ಮಾಡಬಹುದು. ನಮ್ಮ FD ಕ್ಯಾಲ್ಕುಲೇಟರ್ ನಿಮ್ಮ ಆದಾಯವನ್ನು ತ್ವರಿತವಾಗಿ ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ, ಮತ್ತು ರೂ. 25,000 ಗಳಷ್ಟು ಕನಿಷ್ಠ ಮೊತ್ತದ ಹೂಡಿಕೆಯೊಂದಿಗೆ ನೀವು ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಈಗ FD ಅಕೌಂಟನ್ನು ತೆರೆಯಲು ಬಯಸುವಿರಾ? ಫಿಕ್ಸೆಡ್‌ ಡೆಪಾಸಿಟ್ ಅಕೌಂಟನ್ನು ತೆರೆಯುವುದು ಹೇಗೆ ಎಂಬುದನ್ನು ಓದಿ