ಬಜಾಜ್ ಫೈನಾನ್ಸ್ ಉತ್ತಮ ಹೂಡಿಕೆ ಯೋಜನೆಗಳು

ಫಿಕ್ಸೆಡ್ ಡೆಪಾಸಿಟ್ ವೆರ್ಸಸ್ ರಿಯಲ್ ಎಸ್ಟೇಟ್

ಫಿಕ್ಸೆಡ್ ಡೆಪಾಸಿಟ್ ವೆರ್ಸಸ್ ರಿಯಲ್ ಎಸ್ಟೇಟ್

ನಿಮ್ಮ ಹೂಡಿಕೆ ಪೋರ್ಟ್‍‍‌ಫೋಲಿಯೋ ಕಡಿಮೆ ಅಪಾಯ ಮತ್ತು ಮಧ್ಯಮ ಅಪಾಯದ ಹೂಡಿಕೆಯ ಉತ್ತಮ ಮಿಶ್ರಣವಾಗಿರಬೇಕು. ಸಾಮಾನ್ಯವಾಗಿ, ನೀವು ಕಡಿಮೆ ಅಪಾಯದ ಹೂಡಿಕೆಯೊಂದಿಗೆ ಕಡಿಮೆ ಆದಾಯವನ್ನು ಪಡೆಯುತ್ತೀರಿ ಮತ್ತು ಅಪಾಯ ಹೆಚ್ಚಾಗಿ ಇದ್ದಾಗ ಲಾಭಾಂಶವು ಕೂಡ ಹೆಚ್ಚಾಗಿರುತ್ತದೆ. ಆದಾಗ್ಯೂ, ಕಡಿಮೆ ಅಪಾಯವಿರುವ ಹೂಡಿಕೆಯು ಸಾಮಾನ್ಯವಾಗಿ ಹೂಡಿಕೆಗೆ ಸ್ಥಿರತೆಯನ್ನು ಹಾಗೂ ಖಚಿತವಾದ ಪ್ರತಿಫಲವನ್ನು ನೀಡುತ್ತದೆ, ಹೂಡಿಕೆದಾರರು ಸಾಮಾನ್ಯವಾಗಿ ಅವರು ಎದುರಿಸುವ ಅಪಾಯದ ಮಟ್ಟಕ್ಕೆ ತಕ್ಕಂತೆ, ಅವರ ಅಗತ್ಯಗಳಿಗೆ ಅನುಸಾರವಾಗಿ ಹೂಡಿಕೆಯ ಸಾಧನಗಳಿಗಾಗಿ ಹುಡುಕುತ್ತಾರೆ.

ಬಹಳ ಹಿಂದಿನಿಂದಲೂ, ಫಿಕ್ಸೆಡ್‌ ಡೆಪಾಸಿಟ್‌ಗಳು ಹಾಗೂ ಆಸ್ತಿ ಹೂಡಿಕೆಗಳು ಎರಡೂ ಬಹಳ ಜನಪ್ರಿಯ ಹೂಡಿಕೆಯ ಸಾಧನಗಳಾಗಿವೆ. ಆದಾಗ್ಯೂ, ಅದು ಎರಡು ವಿಭಿನ್ನ ಹೂಡಿಕೆದಾರರ ವಿಭಿನ್ನ ಅಗತ್ಯಗಳನ್ನು ಪೂರೈಸುತ್ತದೆ.
ಅಲ್ಪಾವಧಿಯ ಹೂಡಿಕೆಯಾಗಿರಲಿ ಅಥವಾ ದೀರ್ಘಾವಧಿಯ ಹೂಡಿಕೆಯಾಗಿರಲಿ, ನೀವು ಯಾವುದನ್ನು ಮಾಡಲು ಯೋಜನೆ ಮಾಡುತ್ತಿದ್ದರೂ ಸಹ ಇವುಗಳನ್ನು ಪರಿಗಣಿಸುವುದರಿಂದ ಅದು ನಿಮಗೆ ಫಿಕ್ಸೆಡ್‌ ಡೆಪಾಸಿಟ್‌ ಹಾಗೂ ರಿಯಲ್ ಎಸ್ಟೇಟ್‌ ಮಧ್ಯೆ ಆರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಖಾತರಿ ಆದಾಯ:

ಜನರು ಸಾಮಾನ್ಯವಾಗಿ ತಪ್ಪುಗ್ರಹಿಕೆಯ ಬಲಿಪಶುಗಳಾಗಿಬಿಡುತ್ತಾರೆ, ಇವುಗಳನ್ನು ತೊಡೆದು ಹಾಕುವುದು ಬಹಳ ಕಷ್ಟ. ಅಂತಹ ಒಂದು ತಪ್ಪುಗ್ರಹಿಕೆ ಎಂದರೆ ಆಸ್ತಿಯ ಬೆಲೆಯು ಯಾವಾಗಲೂ ಹೆಚ್ಚಾಗುತ್ತದೆ ಎಂಬುದು. ಭಾರತದಲ್ಲಿ ಆಸ್ತಿಯ ಬೆಲೆಗಳು ಒಮ್ಮೆ ಹಠಾತ್ ಎತ್ತರವನ್ನು ತಲುಪಿದ್ದರೂ ಸಹ, ಮಾರುಕಟ್ಟೆಯು ಸ್ಥಗಿತಗೊಳ್ಳುವ ಅಥವಾ ಬೆಲೆಗಳು ಕುಸಿಯುವ ಸಂಭವವು ಹೆಚ್ಚಾಗಿ ಇರುತ್ತದೆ. ವಾಸ್ತವವಾಗಿ ಹೇಳಬೇಕೆಂದರೆ ಇದು ಹಲವಾರು ಸಂದರ್ಭಗಳಲ್ಲಿ ಸಂಭವಿಸಿದೆ. ನೀವು ದೊಡ್ಡ ಮೊತ್ತದ ಲಾಭಕ್ಕಾಗಿ ಎದುರು ನೋಡುತ್ತಿದ್ದರೆ ನಿಮಗೆ ರಿಯಲ್ ಎಸ್ಟೇಟ್‌ ಹೆಚ್ಚಿನದನ್ನು ನೀಡುತ್ತದೆ. ಆದಾಗ್ಯೂ, ನೀವು ಖಚಿತವಾದ ಆದಾಯಕ್ಕಾಗಿ ಹುಡುಕುತ್ತಿದ್ದರೆ ನೀವು FDಯಲ್ಲಿ ಹೂಡಿಕೆ ಮಾಡುವುದನ್ನು ಆರಿಸಿಕೊಳ್ಳಿ. ಏಕೆಂದರೆ ಫಿಕ್ಸೆಡ್‌ ಡೆಪಾಸಿಟ್‌ಗಳು ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುವುದಿಲ್ಲ. ಮತ್ತು ಅದು ಅವಧಿಪೂರ್ತಿಗೆ ಸ್ಥಿರವಾದ ಬಡ್ಡಿದರವನ್ನು ನೀಡುತ್ತದೆ. FD ಕ್ಯಾಲ್ಕುಲೇಟರ್ ಸಹಾಯದಿಂದ ಕೂಡ ನೀವು ನಿಮ್ಮ ಅಂತಿಮ ಮೊತ್ತವನ್ನು ಲೆಕ್ಕ ಹಾಕಬಹುದು.

ಲಭ್ಯತೆ ಮತ್ತು ಲಾಭ:

ಜನರು ಸಾಮಾನ್ಯವಾಗಿ ಆಸ್ತಿಯನ್ನು ಕೊಳ್ಳಲು ತಮ್ಮ ಎಲ್ಲಾ ಉಳಿತಾಯವನ್ನು ಬಳಸುತ್ತಾರೆ ಅಥವಾ ಲೋನನ್ನು ಮಾಡುತ್ತಾರೆ. ಇದು ತಪ್ಪೇನು ಅಲ್ಲ, ಆದರೆ ನೀವು ಆ ಆಸ್ತಿಯನ್ನು ಮಾರಿದರೆ ಲಾಭವನ್ನು ಗಳಿಸುವಿರಿ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತಾದ್ಯಂತ ಗಗನಕ್ಕೆ ಏರುತ್ತಿರುವ ರಿಯಲ್ ಎಸ್ಟೇಟ್‌ ಬೆಲೆಗಳ ಹಾಗೂ ಕೊಳ್ಳುವ ಶಕ್ತಿಯ ಅಸಮತೋಲನದಲ್ಲಿ ಇದು ಬಹಳ ಮುಖ್ಯವಾಗುತ್ತದೆ. ಉದಾಹರಣೆಗೆ 1 BHK ಫ್ಲಾಟ್‌ ಬೆಲೆಯು ಮುಂಬೈನಲ್ಲಿ ರೂ. 1.8 ಕೋಟಿಗಳಿಂದ ಹಿಡಿದು ರೂ. 2 ಕೋಟಿಗಳಷ್ಟು ಬೆಲೆಯಿದೆ. ಇಂತಹ ಒಂದು ಫ್ಲಾಟ್ ಕೊಳ್ಳಲು ನೀವು 20 ವರ್ಷಗಳ ಅವಧಿಗೆ ಲೋನ್ ಪಡೆದುಕೊಂಡರು ಕೂಡ ನೀವು ಪಾವತಿಸಬೇಕಾದ EMI ಗಳು ಒಂದು ಲಕ್ಷಕ್ಕಿಂತಲೂ ಹೆಚ್ಚಾಗಿ ಇರುತ್ತದೆ. ಇದರರ್ಥ ಈ EMI ಗಳನ್ನು ಪಾವತಿಸಲು ನೀವು 3.3 ಗಳಿಂದ ಹಿಡಿದು 4 ಲಕ್ಷಗಳಷ್ಟು ವೇತನವನ್ನು ಪ್ರತಿ ತಿಂಗಳು ಪಡೆಯುವಂತೆ ಇರಬೇಕು. ಆದ್ದರಿಂದ, ನಿಮ್ಮ ರಿಯಲ್ ಎಸ್ಟೇಟ್‌ ಹೂಡಿಕೆಯ ವಿಷಯಕ್ಕೆ ಬಂದರೆ ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ಅದು ನಿಮಗೆ ಸಾಧ್ಯವೇ ಎಂದು? ಆದರೆ ಫಿಕ್ಸೆಡ್‌ ಡೆಪಾಸಿಟ್‌ಗಳ ವಿಷಯದಲ್ಲಿ ಹಾಗಲ್ಲ, ನೀವು ಇಲ್ಲಿ ಈ ಲೆಕ್ಕಾಚಾರಗಳನ್ನು ಹಾಕಿಕೊಂಡು ಚಿಂತಿಸಬೇಕಾಗಿಲ್ಲ. ನೀವು ಸ್ಥಿರವಾದ ಆದಾಯವನ್ನು ಪಡೆಯಲು ಫಿಕ್ಸೆಡ್‌ ಡೆಪಾಸಿಟ್‌ಗಳ ಅಕೌಂಟ್‌ನಲ್ಲಿ ಕೇವಲ 25,000 ರೂಪಾಯಿಗಳಷ್ಟು ಹೂಡಿಕೆಯನ್ನು ಮಾಡಿ ಫಿಕ್ಸೆಡ್‌ ಡೆಪಾಸಿಟ್‌ ಅಕೌಂಟನ್ನು ತೆರೆಯಬಹುದು.ಮತ್ತು ಸ್ಥಿರವಾದ ಆದಾಯವನ್ನು ಗಳಿಸಬಹುದು.

ಹೆಚ್ಚುವರಿ ಹೂಡಿಕೆ ವೆಚ್ಚಗಳು:

ನೀವು ಅಪಾರ್ಟ್ಮೆಂಟ್‌ಗಳಿಗಾಗಲಿ ಅಥವಾ ಆಸ್ತಿಗಾಗಿ ಪಾವತಿ ಮಾಡುವಾಗ ನೀವು ಇನ್ನಿತರ ವೆಚ್ಚಗಳನ್ನು ಕೂಡ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವಾಗ ಭರಿಸಬೇಕಾಗುತ್ತದೆ. ಟೈಟಲ್‌ ಡೀಡ್‌ನಿಂದ ಹಿಡಿದು ಸ್ಟಾಂಪ್‌ ಡ್ಯೂಟಿಯವರೆಗೆ ಹಾಗೂ ನೋಂದಣಿ ಮಾಡಿಕೊಳ್ಳುವ ಶುಲ್ಕದವರೆಗೆ ಬಹಳಷ್ಟು ವೆಚ್ಚಗಳು ಇದರಲ್ಲಿ ಅಡಕವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಆದಾಯದ ಗಳಿಕೆ ವಾರ್ಷಿಕವಾಗಿ ಕೇವಲ 2.5% ರಷ್ಟು ಮಾತ್ರವೇ ಆಗಿರುವುದು ಕಂಡುಬಂದಿದೆ.

ಫಿಕ್ಸೆಡ್‌ ಡೆಪಾಸಿಟ್‌ಗಳು ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ ಅದರಲ್ಲಿ ನೀವು ಉತ್ತಮ ಬಡ್ಡಿಯನ್ನು ಪಡೆಯಬಹುದು. ಸುಲಭವಾದ FD ಕ್ಯಾಲ್ಕುಲೇಟರ್‌ ಬಳಸಿ ನೀವು ಎಷ್ಟು ಮೊತ್ತವನ್ನು ದೀರ್ಘಾವಧಿಯಲ್ಲಿ ಪಡೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

ಇದರ ಪ್ರಕ್ರಿಯೆಯ ಬಗ್ಗೆ ಯೋಚಿಸಿ:

ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ವಿಷಯಕ್ಕೆ ಬಂದರೆ, ನೀವು ಸ್ವಲ್ಪ ಸಮಯವನ್ನು ನೀವು ಖರೀದಿ ಮಾಡುವ ಆಸ್ತಿಯ ಕುರಿತು ತಿಳಿದುಕೊಳ್ಳಲು, ಸುತ್ತಮುತ್ತಲಿನ ಬಗ್ಗೆ, ಮೂಲಭೂತ ಸೌಕರ್ಯಗಳ ಬಗ್ಗೆ ತಿಳಿದುಕೊಳ್ಳಲು ಸಮಯ ವಿನಿಯೋಗಿಸುವುದು ಅಗತ್ಯವಾಗಿರುತ್ತದೆ. ನೀವು ನೀಡುತ್ತಿರುವ ಬೆಲೆಯು ನ್ಯಾಯೋಚಿತವಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಯಾರಾದರೂ ದಕ್ಷ ವೃತ್ತಿಪರರ ಬಳಿ ಆಸ್ತಿಯ ಮೌಲ್ಯಮಾಪನ ಮಾಡಿಸಲು ಸಲಹೆ ಮಾಡಲಾಗಿದೆ. ಆಸ್ತಿಯನ್ನು ಹುಡುಕುವುದು ಕೂಡ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಆದುದರಿಂದ ನಿಮ್ಮ ಸಮಯವನ್ನು ಹಾಗೂ ಸಂಪನ್ಮೂಲಗಳನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಲು ಪ್ರಯತ್ನಪಡಬೇಕು ಹಾಗೂ ನೀವು ರಿಯಲ್ ಎಸ್ಟೇಟ್‌ನಲ್ಲಿ ಸರಿಯಾದ ಸ್ಥಳ ಕೊಳ್ಳಲು ಹೂಡಿಕೆ ಮಾಡುತ್ತಿರುವುದನ್ನು ಪರಿಗಣಿಸಲು ಸಮಯವನ್ನು ವಿನಿಯೋಗಿಸುವುದನ್ನು ಪರಿಗಣಿಸಬೇಕು.

ಮತ್ತೊಂದೆಡೆ, ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ನೀವು ಹೂಡಿಕೆ ಮಾಡಲು ಯೋಜಿಸಿದಾಗ ಪ್ರಕ್ರಿಯೆಯು ಸರಳವಾಗಿದೆ. ನೀವು ಸುಲಭವಾಗಿ ಆನ್ಲೈನ್ನಲ್ಲಿ ಅಪ್ಲಿಕೇಶನ್ ಸಲ್ಲಿಸಬಹುದು ಮತ್ತು ಪ್ರಾರಂಭಿಸಬಹುದು.

ಪಾರದರ್ಶಕತೆ:

ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಯಾವಾಗಲೂ ಮಾಹಿತಿಯು ಅಸಮರ್ಪಕವಾಗಿರುತ್ತದೆ. ಇಲ್ಲಿ ಮಾರಾಟಗಾರರು ಎಲ್ಲಾ ಮಾಹಿತಿಯನ್ನು ಹೊಂದಿರುತ್ತಾರೆ ಮತ್ತು ಕೊಳ್ಳುಗರು ಸಾಮಾನ್ಯವಾಗಿ ಅದನ್ನು ಪರಿಶೀಲನೆ ಮಾಡಿಕೊಳ್ಳಲು ಆಗುವುದಿಲ್ಲ. ಪ್ರತಿಯೊಂದು ಹಕ್ಕು ಪ್ರಸ್ತಾವನೆಯನ್ನು ಪರಿಶೀಲಿಸುವುದು ಬೇಡದ ಕೆಲಸ ಎಂದು ನೀವು ಭಾವಿಸಿದರೆ ಪರ್ಯಾಯವಾಗಿ ತೊಂದರೆ-ಮುಕ್ತ ಹೂಡಿಕೆಯನ್ನು ಆರಿಸಿಕೊಳ್ಳಿ.

ಆದರೆ FD ಗಳು ಪಾರದರ್ಶಕವಾಗಿರುತ್ತದೆ. ಇದರ ಮೇಲೆ ಮಾಡಲಾದ ಹಕ್ಕುಗಳನ್ನು ಸುಲಭವಾಗಿ ಪರಿಶೀಲಿಸಬಹುದು. ನೀವು ಹೆಚ್ಚು ಬಡ್ಡಿಯನ್ನು ನೀಡುವ ಕಂಪನಿಯ FD ಗಳ ಕುರಿತಾಗಿ ಅನುಮೋದನೆ ದರವನ್ನು ಕುರಿತು ಅಧ್ಯಯನ ಮಾಡಬಹುದು ಮತ್ತು ನಿಮ್ಮ ಹೂಡಿಕೆಯು ಸುರಕ್ಷಿತವಾದ ಕೈಗಳಲ್ಲಿದೆಯೇ ಎಂದು ತಿಳಿದುಕೊಂಡು ಹೂಡಿಕೆ ಮಾಡಬಹುದು.

ಈಗ ನಿಮಗೆ ಅತ್ಯುತ್ತಮವಾದುದು ಯಾವುದೆಂದು ತಿಳಿದಿದೆ. ಸಮಯ ಬಂದಿದೆ ನಿಮ್ಮ ಪ್ರಸ್ತುತ ಹಾಗೂ ಭವಿಷ್ಯದ ಜೀವನ ವಿವರಗಳನ್ನು ಯೋಜಿಸಿಕೊಳ್ಳಲು. ಅದರಲ್ಲಿ FD ಗಳು ಒಂದು ಭಾಗವಾಗಿರುವ ಹಾಗೆ ನೋಡಿಕೊಳ್ಳಿ, ಹಾಗೂ ಬಜಾಜ್ ಫೈನಾನ್ಸ್ ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಲು ಅಪ್ಲಿಕೇಶನ್ ಸಲ್ಲಿಸಿ. ಅದು ನಿಮಗೆ ಶ್ರೇಷ್ಠವಾದ FD ಬಡ್ಡಿ ದರ ಗಳನ್ನು ನೀಡುತ್ತದೆ, ಹಾಗೂ ನಿಮ್ಮ ಹಣಕಾಸು ಅಗತ್ಯಗಳಿಗೆ ತಕ್ಕಂತೆ ಅವಧಿಯನ್ನು ಆರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಈಗ FD ಅಕೌಂಟನ್ನು ತೆರೆಯಲು ಬಯಸುವಿರಾ? ಫಿಕ್ಸೆಡ್‌ ಡೆಪಾಸಿಟ್ ಅಕೌಂಟನ್ನು ತೆರೆಯುವುದು ಹೇಗೆ ಎಂಬುದನ್ನು ಓದಿ.