ಬಜಾಜ್ ಫೈನಾನ್ಸ್ ಉತ್ತಮ ಹೂಡಿಕೆ ಯೋಜನೆಗಳು

ಫಿಕ್ಸೆಡ್ ಡೆಪಾಸಿಟ್ ವೆರ್ಸಸ್ ಲೈಫ್ ಇನ್ಶೂರೆನ್ಸ್

ಫಿಕ್ಸೆಡ್ ಡೆಪಾಸಿಟ್ ವೆರ್ಸಸ್ ಲೈಫ್ ಇನ್ಶೂರೆನ್ಸ್

ಫಿಕ್ಸೆಡ್‌ ಡೆಪಾಸಿಟ್‌ ಮತ್ತು ಲೈಫ್ ಇನ್ಶೂರೆನ್ಸ್ ಎರಡೂ ಹಣವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ ಎಂಬುದು ಸಾಮಾನ್ಯ ಜ್ಞಾನ. ನಿಮಗೆ ಯಾವುದು ಹೆಚ್ಚು ಸೂಕ್ತವಾಗಿದೆ ಎಂಬುದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಓದಿ.

ಬ್ಯಾಂಕ್‌ಗಳು, NBFC ಗಳು ಮತ್ತು ಇತರ ಕಂಪನಿಗಳು FD ಯ, ಇನ್ಶೂರೆನ್ಸ್ ಕಂಪನಿಗಳು ಕೇವಲ ವಿಮೆಯನ್ನು ಮಾತ್ರ ನೀಡುತ್ತದೆ. ಇವೆರೆಡರ ಮುಖ್ಯ ವ್ಯತ್ಯಾಸವೆಂದರೆ ಮೊದಲನೆಯದು ಕೇವಲ ಹೂಡಿಕೆ ಮಾತ್ರ ಆದರೆ ಎರಡನೆಯದು ಅಪಾಯದ ವಿರುದ್ದ ರಕ್ಷಣೆ ನೀಡುತ್ತದೆ.

ಫಿಕ್ಸೆಡ್ ಡೆಪಾಸಿಟ್ ಮತ್ತು ಲೈಫ್ ಇನ್ಶೂರೆನ್ಸ್ ಪಾಲಿಸಿ ನಡುವಿನ ತ್ವರಿತ ಹೋಲಿಕೆ ಇಲ್ಲಿದೆ.

ಅವಧಿ:

• 12 ರಿಂದ 60 ತಿಂಗಳವರೆಗಿನ ಅಲ್ಪಾವಧಿ ಹೂಡಿಕೆಗಳಿಗೆ ಫಿಕ್ಸೆಡ್‌ ಡೆಪಾಸಿಟ್‌ಗಳು ಸೂಕ್ತವಾಗಿದೆ.

• ಮತ್ತೊಂದೆಡೆ ಇನ್ಶೂರೆನ್ಸಿನ ಅವಧಿ 10 ವರ್ಷಗಳಾಗಿದ್ದು ಅದು ಜೀವನದ ಅವಧಿಗೆ ವಿಸ್ತರಿಸಲ್ಪಡುತ್ತದೆ.


ಹೂಡಿಕೆಯಾಗಿ:

• ಸಾಮಾನ್ಯವಾಗಿ ನೀವು ರೂ. 25,000. ನಂತಹ ಅತ್ಯಲ್ಪ ಮೊತ್ತದೊಂದಿಗೆ ಫಿಕ್ಸೆಡ್ ಡೆಪಾಸಿಟ್ ತೆರೆಯಬಹುದು ನೀವು ಎಷ್ಟು ಹೂಡಿಕೆ ಮಾಡಬಹುದು ಎಂಬುದಕ್ಕೆ ಗರಿಷ್ಠ ಮಿತಿಯಿಲ್ಲ.

• ನೀವು ಎಷ್ಟು ಹೂಡಿಕೆ ಮಾಡಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ; ಬ್ಯಾಂಕ್ ನಿಮ್ಮ ಬಡ್ಡಿಯನ್ನು ಲೆಕ್ಕಾಚಾರ ಮಾಡುತ್ತದೆ. ಥಂಬ್ ರೂಲ್ ಪ್ರಕಾರ, ನೀವು ಹೆಚ್ಚು ಹಣ ಹೂಡಿಕೆ ಮಾಡಿದರೆ, ನಿಮಗೆ ಹೆಚ್ಚಿನ ಆದಾಯ ದೊರೆಯುವುದು.

FD ಬಡ್ಡಿ ದರಗಳುಸೇವಿಂಗ್ ಅಕೌಂಟ್ ನೀಡುವುದಕ್ಕಿಂತಲೂ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ.

• ನಿಮಗೆ ತುರ್ತಾಗಿ ಹಣದ ಅಗತ್ಯವಿದ್ದರೆ ಆಗ ನೀವು FD ಅನ್ನು ಮೆಚ್ಯೂರಿಟಿಗೆ ಮುಂಚಿತವಾಗಿಯೇ ತೆಗೆದುಕೊಳ್ಳಬಹುದು.

• ಇನ್ಶೂರೆನ್ಸ್ ಪ್ರೀಮಿಯಂಗಳು ಇನ್ಶೂರೆನ್ಸ್ ಪಾಲಿಸಿಯ ಮೌಲ್ಯವನ್ನು ಅವಲಂಬಿಸಿರುತ್ತದೆ. ನಿಮ್ಮ ವಯಸ್ಸು ಮತ್ತು ಆರೋಗ್ಯ ಸ್ಥಿತಿ ಇವುಗಳು ಇನ್ಶೂರೆನ್ಸ್ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳಾಗಿವೆ.

• ಪಾಲಿಸಿಯು ಮೆಚ್ಯೂರ್‌ ಆದಾಗ ಮಾತ್ರ ನಿಮಗೆ ಅದರ ಪ್ರಯೋಜನವು ದೊರೆಯುವುದು ಹಾಗೂ ಅದು ಸಾಮಾನ್ಯವಾಗಿ 20 ನಿಂದ 25 ವರ್ಷಗಳು ಇರುತ್ತದೆ.


ಖಾತರಿ ಆದಾಯ:

• FD ಗೆ ಸಿಗುವ ಬಡ್ಡಿಯ ದರಗಳು ಹಾಗೂ ಮೆಚ್ಯೂರಿಟಿಯ ಸಮಯದಲ್ಲಿ ದೊರಕುವ ಮೊತ್ತವು ನಿಮಗೆ ಮುಂಚಿತವಾಗಿಯೇ ಸಿಗುತ್ತದೆ. ಇದು ಯಾವುದೇ ಮಾರುಕಟ್ಟೆಯ ಏರಿಳಿತಗಳಿಗೆ ಒಳಗಾಗುವುದಿಲ್ಲ ಮತ್ತು ಮಾರುಕಟ್ಟೆಯ ಅಪಾಯಗಳು FD ಯಲ್ಲಿ ಇಲ್ಲ. ನಿಮ್ಮ ಅಂತಿಮ ಮೆಚ್ಯೂರಿಟಿ ಮೊತ್ತವನ್ನು ತಿಳಿದುಕೊಳ್ಳಲು ನೀವು FD ಕ್ಯಾಲ್ಕುಲೇಟರ್ ಬಳಸಬಹುದು.

• ಲೈಫ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ಬೋನಸ್ ಅನ್ನು ವರ್ಷದ ಕೊನೆಯಲ್ಲಿ ಘೋಷಿಸಲಾಗುತ್ತದೆ. ಅಲ್ಲದೆ, ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪಾಲಿಸಿ (ULIP) ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ, ಇದರಿಂದಾಗಿ ನಿಮ್ಮ ಆದಾಯವು ಅನಿಶ್ಚಿತವಾಗಿರುತ್ತದೆ


ಅನುಕೂಲಕ್ಕೆ ತಕ್ಕಂತೆ ಹಿಂಪಡೆಯುವಿಕೆ:

• ನಿಫಿಕ್ಸೆಡ್ ಡೆಪಾಸಿಟ್‌ ಸಂದರ್ಭದಲ್ಲಿ, ನೀವು ಮೆಚ್ಯೂರಿಟಿಗೆ ಮುಂಚಿತವಾಗಿ ಅದನ್ನು ಅಂತ್ಯಗೊಳಿಸಬಹುದು. ಆದರೆ ಬಡ್ಡಿಯ ಗಳಿಕೆ ಕಡಿಮೆ ಎಂದು ನೆನಪಿಡಿ.

• ಇನ್ಶೂರೆನ್ಸ್ ಪಾಲಿಸಿಯಲ್ಲಿ, 3 ವರ್ಷಗಳ -ಇನ್ ಅವಧಿಯ ಕಳೆದ ನಂತರ ನೀವು ಹಣವನ್ನು ಹಿಂತೆಗೆದುಕೊಳ್ಳಬಹುದು. ULIP ಸಂದರ್ಭದಲ್ಲಿ, ಲಾಕ್ ಇನ್ ಅವಧಿ 5 ವರ್ಷಗಳು.

ತೆರಿಗೆ:

• ಒಂದು ವೇಳೆ ನೀವು ಗಳಿಸಿದ ಬಡ್ಡಿಯು ವರ್ಷಕ್ಕೆ ರೂ. 10,000 ಆಗಿದ್ದರೆ, ಫಿಕ್ಸೆಡ್‌ ಡೆಪಾಸಿಟ್‌ ತೆರಿಗೆಗೆ ಒಳಪಡುತ್ತದೆ.

• ಇನ್ಶೂರೆನ್ಸ್ ಪಾಲಿಸಿ ಸಂಪೂರ್ಣವಾಗಿ ತೆರಿಗೆ ವಿನಾಯಿತಿಗೆ ಒಳಪಟ್ಟಿರುತ್ತದೆ.

ಹೂಡಿಕೆಯ ಮೇಲೆ ಲೋನ್:

• ಕಡಿಮೆ ಬಡ್ಡಿದರದಲ್ಲಿ ನೀವು ಫಿಕ್ಸೆಡ್‌ ಡೆಪಾಸಿಟ್ ಮೇಲೆ ಲೋನ್ ತೆಗೆದುಕೊಳ್ಳಬಹುದು.

• ನೀವು ಕೆಲವು ಲೈಫ್ ಇನ್ಶೂರೆನ್ಸ್ ಪಾಲಿಸಿಗಳ ಮೇಲೆ ಲೋನ್ ತೆಗೆದುಕೊಳ್ಳಬಹುದು.


ವಿವಿಧ ಬಗೆಯ FD ಗಳು ಹಾಗೂ ಲೈಫ್ ಇನ್ಶೂರೆನ್ಸ್ ಪಾಲಿಸಿಗಳು:

• ಎರಡು ರೀತಿಯ ಫಿಕ್ಸೆಡ್‌ ಡೆಪಾಸಿಟ್‌ಗಳಿವೆ. ಒಗ್ಗೂಡಿಸಿದ ಫಿಕ್ಸೆಡ್‌ ಡೆಪಾಸಿಟ್‌ ಹಾಗೂ ಒಗ್ಗೂಡಿಸದ ಫಿಕ್ಸೆಡ್‌ ಡೆಪಾಸಿಟ್‌ ಒಗ್ಗೂಡಿಸಿದ ಫಿಕ್ಸೆಡ್‌ ಡೆಪಾಸಿಟ್‌ಗಳಲ್ಲಿ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳು ಬಡ್ಡಿಯನ್ನು ವಾರ್ಷಿಕವಾಗಿ ನೀಡುತ್ತವೆ. ಒಗ್ಗೂಡಿಸದ ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ಬಡ್ಡಿಯನ್ನು ಕಡಿಮೆ ಅಂತರದಲ್ಲಿ ನೀಡಲಾಗುತ್ತದೆ. ನಿಮ್ಮ ಹಣಕಾಸಿನ ಅಗತ್ಯಗಳನ್ನು ಹಾಗೂ ನಿಮ್ಮ ಹೂಡಿಕೆಯ ಗುರಿಯನ್ನು ಆಧಾರವಾಗಿರಿಸಿಕೊಂಡು ನೀವು ಆರಿಸಿಕೊಳ್ಳಬಹುದು.

• ಇನ್ಶೂರೆನ್ಸ್‌ನಲ್ಲಿ ಕೂಡ ಎರಡು ವಿಧಗಳಿವೆ. ಹೋಲ್ ಲೈಫ್ ಇನ್ಶೂರೆನ್ಸ್ ಹಾಗೂ ಟರ್ಮ್ ಲೈಫ್‌ ಇನ್ಶೂರೆನ್ಸ್ ಹಾಗೂ ಇದು ಅಗತ್ಯವಾಗಿ ದೀರ್ಘಾವಧಿಯ ಹೂಡಿಕೆಯಾಗಿದೆ. ಇನ್ಶೂರೆನ್ಸ್ ನಲ್ಲಿ ಮುಖ್ಯವಾದ ಅಂಶವೆಂದರೆ ಅಪಾಯದ ವಿರುಧ್ದ ರಕ್ಷಣೆ ನೀಡುವುದು, ಪಾಲಿಸಿಯನ್ನು ತೆಗೆದುಕೊಂಡವರ ಮೇಲೆ ಯಾರು ಆಧಾರ ಹೊಂದಿರುವರೋ ಅವರಿಗೆ ಆಕಸ್ಮಿಕ ಮರಣದ ಸಂದರ್ಭದಲ್ಲಿ ಪಾಲಿಸಿಯ ಮೊತ್ತವನ್ನು ನೀಡಲಾಗುತ್ತದೆ. ಮೆಚ್ಯೂರಿಟಿಯ ವೇಳೆಯಲ್ಲಿ ಇದು ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ಕೂಡ ನೀಡುತ್ತದೆ. ಪಾಲಿಸಿಯ ಒಂದು ಅಪಾಯದ ಅಂಶವು ಏನೆಂದರೆ ನೀವು ಲಾಕ್ ಇನ್ ಅವಧಿಯಲ್ಲಿ ನೀವು ಏನಾದರೂ ಪ್ರೀಮಿಯಂ ಕಟ್ಟದಿದ್ದರೆ ನಿಮಗೆ ಯಾವುದೇ ರೀತಿಯ ಪ್ರತಿಫಲವು ಸಿಗುವುದಿಲ್ಲ


ಸಂಗ್ರಹಗೊಂಡ ಅನುಕೂಲಗಳು:

• ಕನಿಷ್ಠ ಪ್ರಯತ್ನದಲ್ಲಿ ನಿಶ್ಚಿತ ಅವಧಿಗೆ FD ಗಳು ನಿಮಗೆ ಹೂಡಿಕೆ ಮಾಡಲು ಅನುಕೂಲ ಒದಗಿಸುತ್ತದೆ. ಉದಾಹರಣೆಗೆ ನಿಮ್ಮ ಬಳಿ ರೂ. 50,000 ಇದ್ದರೆ ನೀವು ಸುರಕ್ಷಿತವಾಗಿ FD ಯನ್ನು ತೆರೆಯಬಹುದು ಮತ್ತು ನಿಮ್ಮ ಬಡ್ಡಿಯು ಬೆಳೆಯುವುದನ್ನು ನಿಮ್ಮ ಹಣವು ಬೆಳೆಯುವುದನ್ನು ಗಮನಿಸಿ. ನೀವು ಮತ್ತೆ ಮತ್ತೆ ಇದಕ್ಕಾಗಿ ಪಾವತಿಸಬೇಕಿಲ್ಲ

• ನೀವು ನಗದು ಹರಿವಿನ ತೊಂದರೆಯನ್ನು ಅನುಭವಿಸಿದರೆ ನಿಮ್ಮ FD ಯನ್ನು ಮೆಚ್ಯೂರಿಟಿಗೆ ಮುಂಚಿತವಾಗಿಯೇ ಹಿಂತೆಗೆದುಕೊಳ್ಳಬಹುದು, ಆದ್ದರಿಂದ ನಿಮ್ಮ ಹಣವು ನಿಮಗೆ ಸುಲಭವಾಗಿ ಸಿಗುವುದು.

• ಇನ್ಶೂರೆನ್ಸ್‌ನಲ್ಲಿ ನಿಮಗೆ ಮೆಚ್ಯೂರಿಟಿಯ ನಂತರ ತೆರಿಗೆಯ ವಿನಾಯಿತಿ ದೊರೆಯುತ್ತದೆ ಹಾಗೂ ಇಡುಗಂಟು ಮೊತ್ತವು ದೊರೆಯುತ್ತದೆ.