ಡ್ರಾಡೌನ್ ಕೋರಿಕೆ ಎಂದರೇನು?

ಡ್ರಾಡೌನ್ ಕೋರಿಕೆಯು ಗ್ರಾಹಕರಿಗೆ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮ ಲೋನ್ ಮೊತ್ತವನ್ನು ವಿತ್‌ಡ್ರಾ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಮರುಪಾವತಿಸಲು ಅನುವು ಮಾಡಿಕೊಡುವ ಸೌಲಭ್ಯವಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಸೌಲಭ್ಯದ ಅಡಿಯಲ್ಲಿ, ಹಣಕಾಸು ಸಂಸ್ಥೆಗಳು ತಮ್ಮ ಮಹತ್ವಾಕಾಂಕ್ಷಿ ಸಾಲಗಾರರಿಗೆ ಲೈನ್ ಆಫ್ ಕ್ರೆಡಿಟ್ ಅನ್ನು ವಿಸ್ತರಿಸುತ್ತಿದ್ದು ಅದನ್ನು ಸಾಲಗಾರರು ತಮ್ಮ ಹಣಕಾಸಿನ ಅಗತ್ಯಗಳಿಗೆ ಅನುಗುಣವಾಗಿ ಬಳಸಬಹುದಾಗಿದೆ.

ಬಜಾಜ್ ಫಿನ್‌ಸರ್ವ್‌ ಡ್ರಾಡೌನ್ ಕೋರಿಕೆಯು ಇತರವುಗಳಂತೆ ಕಾರ್ಯನಿರ್ವಹಿಸುತ್ತದೆ, ಅದರಲ್ಲಿ ವ್ಯಕ್ತಿಗಳು ತಾವು ಬಳಸುವ ಹಣದ ಮೇಲೆ ಮಾತ್ರ ಬಡ್ಡಿಯನ್ನು ಮರುಪಾವತಿಸಲು ಜವಾಬ್ದಾರರಾಗಿರುತ್ತಾರೆ ಮತ್ತು ಒಟ್ಟು ಲೋನ್ ಮೊತ್ತದ ಮೇಲೆ ಅಲ್ಲ. ಈ ಸೌಲಭ್ಯವು ವೆಚ್ಚವನ್ನು ಯೋಜಿಸುವ ಸಾಲಗಾರರಿಗೆ ಪ್ರಯೋಜನಕಾರಿಯಾಗಿದೆ, ಆದರೆ ಒಮ್ಮೆಲೇ ಹಣವನ್ನು ಪಡೆಯಲು ಬಯಸುವವರಿಗೆ ಅಲ್ಲ.

ಮಹತ್ವಾಕಾಂಕ್ಷಿ ಸಾಲಗಾರರು ಬಜಾಜ್ ಫಿನ್‌ಸರ್ವ್‌ನಿಂದ ಡ್ರಾಡೌನ್ ಕೋರಿಕೆಗಳ ಬಗ್ಗೆ ಇನ್ನಷ್ಟು ತಿಳಿಯಲು ಓದಿಕೊಳ್ಳಬಹುದು.

ಬಜಾಜ್ ಫಿನ್‌ಸರ್ವ್‌ ಡ್ರಾಡೌನ್ ಕೋರಿಕೆಯನ್ನು ಸಲ್ಲಿಸುವ ಮಾರ್ಗಗಳು

ಬಜಾಜ್ ಫಿನ್‌ಸರ್ವ್‌ನೊಂದಿಗೆ ಈ ಸೌಲಭ್ಯವನ್ನು ಆರಂಭಿಸುವ ಪ್ರಕ್ರಿಯೆಯ ಬಗ್ಗೆ ಹಂತವಾರು ಮಾರ್ಗದರ್ಶಿ ಇಲ್ಲಿದೆ –

ಹಂತ 1: ಬಜಾಜ್ ಫಿನ್‌ಸರ್ವ್‌ ಗ್ರಾಹಕ ಪೋರ್ಟಲ್ ಎಕ್ಸ್‌ಪೀರಿಯ ಗೆ ಲಾಗಿನ್ ಮಾಡಿ

ಹಂತ 2: ನಿಮ್ಮ ಫ್ಲೆಕ್ಸಿ ಲೋನ್ ಅಕೌಂಟ್‌ನಲ್ಲಿ 'ವಿವರಗಳನ್ನು ನೋಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅಥವಾ ನೀವು 'ನನ್ನ ಸಂಬಂಧಗಳು' ಟ್ಯಾಬ್ ಮೇಲೆ ಕ್ಲಿಕ್ ಮಾಡಬಹುದು ಮತ್ತು ನಿಮ್ಮ ಫ್ಲೆಕ್ಸಿ ಲೋನ್ ಆಯ್ಕೆಯನ್ನು ಆರಿಸಿಕೊಳ್ಳಬಹುದು

ಹಂತ 3: ಮುಂದಿನ ಮರುನಿರ್ದೇಶಿತ ಪುಟದಲ್ಲಿ, ನಿಮ್ಮ ಲೋನ್ ಅಕೌಂಟ್ ನಂಬರ್‌ ಮೇಲಿನ 'ವಿವರಗಳನ್ನು ನೋಡಿ' ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 4: ಡ್ರಾಪ್‌ಡೌನ್ ಮೆನುವಿನಿಂದ 'ಡ್ರಾಡೌನ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 5: ಸಂಬಂಧಿತ ವಿವರಗಳೊಂದಿಗೆ ಈ ಡ್ರಾಡೌನ್ ಕೋರಿಕೆ ಫಾರ್ಮ್ ಭರ್ತಿ ಮಾಡಿ ಮತ್ತು ನೀವು ವಿತ್‌ಡ್ರಾ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ

ಹಂತ 6: ಅದರ ನಂತರ, ಒಟಿಪಿ ಜನರೇಟ್ ಮಾಡಿ ಮತ್ತು 'ನಾನು ನಿಯಮ ಮತ್ತು ಷರತ್ತುಗಳನ್ನು ಒಪ್ಪುತ್ತೇನೆ' ಎಂದು ಹೇಳುವ ಬಾಕ್ಸ್ ಅನ್ನು ಪರಿಶೀಲಿಸಿ

ಹಂತ 7: ಕೆಲವೇ ಗಂಟೆಗಳ ಒಳಗೆ ಬಜಾಜ್ ಫಿನ್‌ಸರ್ವ್‌ನೊಂದಿಗೆ ನೋಂದಣಿಯಾದ ಅಕೌಂಟ್‌ನಲ್ಲಿ ಅಗತ್ಯವಿರುವ ಮೊತ್ತವನ್ನು ಪಡೆಯಿರಿ.

ಬಜಾಜ್ ಫಿನ್‌ಸರ್ವ್‌ನಿಂದ ಡ್ರಾಡೌನ್ ಕೋರಿಕೆಯನ್ನು ಆರಂಭಿಸುವ ಮೊದಲು, ಫ್ಲೆಕ್ಸಿ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಸಂಬಂಧಿತ ಹಂತಗಳು ಇಲ್ಲಿವೆ –

ಹಂತ 1: ವೈಯಕ್ತಿಕ, ಉದ್ಯೋಗ ಮತ್ತು ಹಣಕಾಸಿನ ಮಾಹಿತಿಯೊಂದಿಗೆ ಲೋನ್ ಅಪ್ಲಿಕೇಶನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ

ಹಂತ 2: ಅಗತ್ಯವಿರುವ ಲೋನ್ ಮೊತ್ತ ಮತ್ತು ಆದ್ಯತೆಯ ಅವಧಿಯನ್ನು ಆಯ್ಕೆ ಮಾಡಿ

ಹಂತ 3: ಲೋನ್ ಪರಿಶೀಲನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

ಹಂತ 4: ಯಶಸ್ವಿ ಪರಿಶೀಲನೆಯ ನಂತರ ಲೋನ್ ಮೊತ್ತವನ್ನು 24 ಗಂಟೆಗಳ ಒಳಗೆ ಕ್ರೆಡಿಟ್ ಮಾಡಲಾಗುತ್ತದೆ

ಬಜಾಜ್ ಫಿನ್‌ಸರ್ವ್‌ ಡ್ರಾಡೌನ್ ಕೋರಿಕೆಯು ನಿಮ್ಮ ಲೋನ್ ಅನ್ನು ಉತ್ತಮವಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ, ಹೇಗೆಂದರೆ ನೀವು ಲೋನ್ ಪಡೆಯುವ ಹಣದ ಮೇಲೆ ಹೆಚ್ಚು ನಿಯಂತ್ರಣವನ್ನು ಪಡೆಯುತ್ತೀರಿ ಮತ್ತು ನೀವು ಮರುಪಾವತಿ ಮಾಡಬೇಕಾದ ಹಣವನ್ನು ಪಡೆಯುತ್ತೀರಿ.

ಆಗಾಗ ಕೇಳುವ ಪ್ರಶ್ನೆಗಳು

ಬಜಾಜ್ ಫಿನ್‌ಸರ್ವ್‌ ಡ್ರಾಡೌನ್ ಕೋರಿಕೆ ಎಂದರೇನು?

ಬಜಾಜ್ ಫಿನ್‌ಸರ್ವ್‌ ಡ್ರಾಡೌನ್ ಕೋರಿಕೆಯು ಸಾಲಗಾರರಿಗೆ ತಮ್ಮ ಅವಶ್ಯಕತೆಗೆ ಅನುಗುಣವಾಗಿ ಹಣವನ್ನು ಪಡೆಯಲು ಮತ್ತು ಅವರು ಬಳಸುವ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಲು ಅನುವು ಮಾಡಿಕೊಡುವ ಸೌಲಭ್ಯವಾಗಿದೆ. ಸಣ್ಣದಾಗಿ, ಇದು ಕ್ರೆಡಿಟ್ ಲೈನ್ ಸೌಲಭ್ಯದಂತೆ ಕೆಲಸ ಮಾಡುತ್ತದೆ.

ನಾನು ಡ್ರಾಡೌನ್ ಅಕೌಂಟನ್ನು ಹೇಗೆ ಬದಲಾಯಿಸಬಹುದು?

ನೀವು ಅವರ ಬಜಾಜ್ ಫಿನ್‌ಸರ್ವ್‌ ಗ್ರಾಹಕ ಪೋರ್ಟಲ್ ಮೂಲಕ ನಿಮ್ಮ ಡ್ರಾಡೌನ್ ಅಕೌಂಟ್ ಅನ್ನು ಬದಲಾಯಿಸಬಹುದು. ನಿಮ್ಮ ಅಕೌಂಟ್‌ನ ವಿರುದ್ಧ ಈ ಪೋರ್ಟಲ್‌ನಲ್ಲಿ ನಿಮ್ಮ ಅಕೌಂಟ್ ವಿವರಗಳನ್ನು ನೀವು ಅಪ್ಡೇಟ್ ಮಾಡಬೇಕು. ಹೆಚ್ಚುವರಿಯಾಗಿ, ನೀವು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬೇಕು ಮತ್ತು ಈ ಉದ್ದೇಶಕ್ಕಾಗಿ ನಿಮ್ಮ ಹಿಂದಿನ ಎನ್‌ಎಸಿಎಚ್ ಮ್ಯಾಂಡೇಟ್ ರದ್ದುಪಡಿಸುವ ಮೂಲಕ ಹೊಸ ಮ್ಯಾಂಡೇಟನ್ನು ಸಲ್ಲಿಸಬೇಕು.

ಬಜಾಜ್ ಫಿನ್‌ಸರ್ವ್‌ನಲ್ಲಿ ನಾನು ಎಷ್ಟು ಡ್ರಾಡೌನ್ ತೆಗೆದುಕೊಳ್ಳಬಹುದು?

ಸಾಮಾನ್ಯವಾಗಿ, ನಿಮ್ಮ ಬಜಾಜ್ ಫಿನ್‌ಸರ್ವ್‌ ಡ್ರಾಡೌನ್‌ನ ಗರಿಷ್ಠ ಮಿತಿಯು ನಿಮಗೆ ಮಂಜೂರಾದ ಒಟ್ಟು ಲೋನ್ ಮೊತ್ತವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ನೀವು ರೂ. 10 ಲಕ್ಷದ ಲೋನ್ ಮೊತ್ತಕ್ಕೆ ಅರ್ಹರಾಗಿದ್ದರೆ, ಅದು ನಿಮ್ಮ ಡ್ರಾಡೌನ್ ಮಿತಿಯಾಗಿರುತ್ತದೆ.

ಡ್ರಾಡೌನ್ ಶೆಡ್ಯೂಲ್ ಎಂದರೇನು?

ಬಜಾಜ್ ಫಿನ್‌ಸರ್ವ್‌ ಡ್ರಾಡೌನ್ ಶೆಡ್ಯೂಲ್ ಪೂರ್ವ-ನಿಗದಿತ ಅವಧಿಯಲ್ಲಿ ಲೋನ್ ಮೊತ್ತಗಳ ನಿಯತಕಾಲಿಕ ವಿತರಣೆಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ, ಸಾಲಗಾರರು ಈ ಕಾಲಾವಧಿಯನ್ನು ನಿರ್ಧರಿಸುತ್ತಾರೆ ಮತ್ತು ಆತ/ಆಕೆಗೆ ಹಣದ ಅಗತ್ಯವಿದ್ದಾಗ, ಮತ್ತು ಒಮ್ಮೆ ತಿಳಿಸಿದ ನಂತರ, ಸಾಲದಾತರು ಅದಕ್ಕೆ ಅನುಗುಣವಾಗಿ ಮೊತ್ತವನ್ನು ವಿತರಿಸುತ್ತಾರೆ.

ಇನ್ನಷ್ಟು ಓದಿರಿ ಕಡಿಮೆ ಓದಿ