ಮೇಲ್ನೋಟ

play

ನಿಮ್ಮ ಬಿಡುವಿಲ್ಲದ ಶೆಡ್ಯೂಲಿನಲ್ಲಿ ರಜೆಯಲ್ಲಿ ಹೋಗುವುದು ಬ್ರೇಕ್ ತೆಗೆದುಕೊಳ್ಳಲು ಮತ್ತು ಸ್ವಲ್ಪ ಆರಾಮ ಮತ್ತು ವಿಶ್ರಾಂತಿಯನ್ನು ಪಡೆಯಲು ಸರಿಯಾದ ಮಾರ್ಗವಾಗಿದೆ. ಆದರೂ, ಪ್ರಯಾಣವೂ ಕೂಡ ಯಾವುದೇ ಹೋಟೆಲ್ ಬುಕ್ಕಿಂಗ್ ಮಾಡದೆ ಸಿಕ್ಕಿ ಹಾಕಿಕೊಳ್ಳುವುದು, ನಿಮ್ಮ ವಾಲೆಟ್ ಅನ್ನು ಕಳೆದುಕೊಳ್ಳುವುದು ಅಥವಾ ಆಕ್ಸಿಡೆಂಟ್ ಪ್ರಕರಣದಂತಹ ಒತ್ತಡದ ಸಂದರ್ಭಗಳನ್ನು ತರುತ್ತವೆ.

ಬಜಾಜ್ ಫಿನ್‌ಸರ್ವ್ ಡೊಮೆಸ್ಟಿಕ್ ಹಾಲಿಡೆ ಕವರ್ ಜತೆಗೆ, ನೀವು ಈ ಅನಿರೀಕ್ಷಿತ ಘಟನೆಗಳನ್ನು ನೀವು ಸುಲಭವಾಗಿ ಮತ್ತು ಯಾವುದೇ ತೊಂದರೆಗಳಿಲ್ಲದೆ ನಿರ್ವಹಿಸಬಹುದು.

 • ತುರ್ತು ಪ್ರಯಾಣ ಸಹಾಯ

  ನೀವು ರಜಾದಿನಗಳ ಸಂದರ್ಭದಲ್ಲಿ ಸಿಲುಕಿ ಹಾಕಿಕೊಂಡರೆ, ನೀವು ಭಾರತದಲ್ಲಿ ರೂ. 50,000 ದವರೆಗೆ ತುರ್ತು ಪ್ರಯಾಣ ಮತ್ತು ಹೋಟೆಲ್ ಸಹಾಯಕ್ಕಾಗಿ ಮತ್ತು ವಿದೇಶದಲ್ಲಿದ್ದರೆ ನಿಮ್ಮ ಹೋಟೆಲ್ ಬಿಲ್‌‌ಗಳು, ವಾಪಸ್ ಪ್ರಯಾಣ ಮತ್ತು ಇತರೆ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಲು ರೂ. 1,00,000 ಅನ್ನು ಪಡೆಯಬಹುದು.

 • ರಸ್ತೆಬದಿಯ ನೆರವು

  ನಿಮ್ಮ ರಜಾ ದಿನದಲ್ಲಿ ಕಾರು ಹಾಳಾಗುವುದರೊಂದಿಗೆ ತೊಂದರೆಯಲ್ಲಿ ಸಿಲುಕಿದ್ದೀರಾ? ಭಾರತದ ಸುಮಾರು 700 ಸ್ಥಳಗಳಲ್ಲಿ ವಾಹನ ರಿಪೇರಿಗಳಿಗಾಗಿ ರಸ್ತೆ ಬದಿಯ ಸಹಾಯವನ್ನು ಪಡೆಯಿರಿ.

 • ಕಾಂಪ್ಲಿಮೆಂಟರಿ ಇನ್ಶೂರೆನ್ಸ್

  ಖಾಸಗಿ ಆಕ್ಸಿಡೆಂಟ್, ಆಕಸ್ಮಿಕ ಆಸ್ಪತ್ರೆ ದಾಖಲು, ಟ್ರಿಪ್ ಕ್ಯಾನ್ಸಲ್ ಮೇಲೆ, ಮನೆ ಕಳ್ಳತನ ಮತ್ತು ಬ್ಯಾಗೇಜ್ ಕಳೆದುಕೊಂಡರೆ ರೂ. 3,00,000 ದವರೆಗಿನ ಕಾಂಪ್ಲಿಮೆಂಟರಿ ಇನ್ಶೂರೆನ್ಸ್ ಕವರ್ ಪಡೆಯಿರಿ. ಇದು ನೀವು ರಜೆಯಲ್ಲಿರುವಾಗ ಎಲ್ಲಾ ರೀತಿಯ ತುರ್ತು ಸ್ಥಿತಿಗಳಲ್ಲೂ ರಕ್ಷಣೆ ಪಡೆದುಕೊಳ್ಳುತ್ತೀರಿ ಎಂಬ ಭರವಸೆಯನ್ನು ನೀಡುತ್ತದೆ.

 • 24/7 ಕಾರ್ಡ್ ಬ್ಲಾಕ್ ಸರ್ವಿಸ್

  ರಜಾ ದಿನಗಳಲ್ಲಿ ವಾಲೆಟ್ ಕಳೆದು ಹೋದರೆ ನಿರ್ವಹಣೆ ಮಾಡುವುದು ಕಷ್ಟ. ಕಳೆದುಹೋದ ಸಂದರ್ಭದಲ್ಲಿ ಒಂದು ಫೋನ್ ಕರೆಯ ಮೂಲಕ, ನಿಮ್ಮ ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳನ್ನು ಬ್ಲಾಕ್ ಮಾಡುವ ಸೌಲಭ್ಯವನ್ನು ಪಡೆಯಿರಿ. ನೀವು ಉಚಿತ ಬದಲಿ PAN ಕಾರ್ಡನ್ನು ಕೂಡ ಪಡೆದುಕೊಳ್ಳಬಹುದು.

ಟ್ರಾವೆಲ್ ಸೇಫ್ ಸದಸ್ಯತ್ವ

ಬಜಾಜ್ ಫಿನ್‌ಸರ್ವ್‌‌ನಿಂದ ಡೊಮೆಸ್ಟಿಕ್ ಹಾಲಿಡೆ ಕವರ್ ಒಂದು ವರ್ಷದ ಟ್ರಾವೆಲ್ ಸೇಫ್ ಮೆಂಬರ್‌‌ಶಿಪ್ ಅನ್ನು ಕೂಡ ಒಳಗೊಂಡಿದ್ದು ಅದು ಈ ಎಲ್ಲಾ ಪ್ರಯೋಜನಗಳನ್ನು ಹೊಂದಿದೆ:

• ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳನ್ನು ಕಳೆದುಕೊಂಡ ಅಥವಾ ಕಳ್ಳತನವಾದ ಸಂದರ್ಭದಲ್ಲಿ ಅವುಗಳ ದುರ್ಬಳಕೆಯನ್ನು ತಡೆಗಟ್ಟಲು ನೀವು ಬ್ಲಾಕ್ ಮಾಡಬಹುದು.

• ಕಳೆದುಕೊಂಡ ಸಂದರ್ಭದಲ್ಲಿ ನೀವು ಭಾರತದಲ್ಲಿ ಇದ್ದರೆ, ಯಾವುದೇ ತುರ್ತು ಪ್ರಯಾಣ ಅಗತ್ಯತೆಗಳನ್ನು ಕವರ್ ಮಾಡಲು ನೀವು ರೂ. 50,000 ದವರೆಗೆ ಹಣಕಾಸಿನ ಸಹಾಯವನ್ನು ಪಡೆಯುತ್ತೀರಿ. ನೀವು ವಿದೇಶದಲ್ಲಿದ್ದರೆ, ಕವರೇಜ್ ಮೊತ್ತ ರೂ. 1,00,000 ದವರೆಗೆ ಇರುತ್ತದೆ. ಇದು ಗರಿಷ್ಠ 28 ದಿನಗಳವರೆಗೆ ಬಡ್ಡಿ- ರಹಿತ ಅಡ್ವಾನ್ಸ್ ಆಗಿದೆ. 28 ದಿನಗಳ ಒಳಗೆ ನೀವು ಮೊತ್ತವನ್ನು ಮರುಪಾವತಿ ಮಾಡಲೇಬೇಕು.

• ನಿಮ್ಮ ಕಾರು ಬ್ರೇಕ್‌‌ಡೌನ್ ಆದ ಸಂದರ್ಭದಲ್ಲಿ ಈ ಕವರ್ ರಸ್ತೆ - ಸಹಾಯವನ್ನು ಒದಗಿಸುತ್ತದೆ.

• ನೀವು ಕಾರಿಗೆ 5 ಲೀಟರ್‌‌ಗಳ ಫ್ಯೂಯಲ್ ವೆಚ್ಚ ಮತ್ತು ದ್ವಿ ಚಕ್ರ ವಾಹನಗಳಿಗೆ 2 ಲೀಟರ್‌‌ ವೆಚ್ಚವನ್ನು ಕೂಡ ಪಡೆಯಬಹುದು.

• ನೀವು ನಿಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದರೆ ಇತರ ಕಾರ್ಡ್‌ಗಳು ಮತ್ತು ಡಾಕ್ಯುಮೆಂಟ್‌ಗಳೊಂದಿಗೆ ನೀವು ಅದನ್ನು ಬದಲಿಸುವ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

• ನೀವು ರೂ. 3 ಲಕ್ಷದವರೆಗಿನ ಕಾಂಪ್ಲಿಮೆಂಟರಿ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಕವರ್ ಅನ್ನು ಕೂಡ ಪಡೆಯಬಹುದಾಗಿದ್ದು ಅದು ಬ್ಯಾಗೇಜ್ ಕಳೆದುಕೊಂಡ ಸಂದರ್ಭಕ್ಕೂ ಅನ್ವಯವಾಗುತ್ತದೆ.

 

ಯಾವುದು ಕವರ್ ಆಗಿಲ್ಲ?

• ನೀವು ಮತ್ತಿನಲ್ಲಿದ್ದಾಗ ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡರೆ, ಇನ್ಶೂರೆನ್ಸ್ ಕ್ಲೈಮ್ ಅನ್ನು ಪರಿಗಣಿಸಲಾಗುವುದಿಲ್ಲ.

• ನಿಮ್ಮ ಕಡೆಯಿಂದಾದ ಟ್ರಾಫಿಕ್ ನಿಯಮಗಳ ಉಲ್ಲಂಘನೆಯಿಂದ ಉಂಟಾಗುವ ವೆಹಿಕಲ್ ಡ್ಯಾಮೇಜ್ ಒಳಗೊಳ್ಳುವುದಿಲ್ಲ.

ಅಗತ್ಯವಿರುವ ಡಾಕ್ಯುಮೆಂಟ್‌ಗಳು

• KYC ಡಾಕ್ಯುಮೆಂಟ್‌ಗಳು

• ಟ್ರಾವೆಲ್ ಸೇಫ್ ಸದಸ್ಯತ್ವದ ಪತ್ರ

ಅಪ್ಲೈ ಮಾಡುವುದು ಹೇಗೆ

• ನೀವು ಡೊಮೆಸ್ಟಿಕ್ ಹಾಲಿಡೇ ಕವರ್‌‌ಗೆ ನೀವು ಸುಲಭವಾಗಿ ಅಪ್ಲೈ ಮಾಡಬಹುದು. ಕೇವಲ ಬಜಾಜ್ ಫಿನ್‌ಸರ್ವ್ ವೆಬ್‌‌ಸೈಟಿಗೆ ಲಾಗಿನ್ ಆಗಿ, ಅಪ್ಲಿಕೇಶನ್ ಫಾರಂನಲ್ಲಿ ಅಗತ್ಯವಾದ ವಿವರಗಳನ್ನು ಭರ್ತಿ ಮಾಡಿ ಮತ್ತು ಆನ್ಲೈನಿನಲ್ಲಿ ತ್ವರಿತವಾಗಿ ಪ್ರೀಮಿಯಂ ಮೊತ್ತವನ್ನು ಪಾವತಿಸಿ.

ಕ್ಲೈಮ್ ಪ್ರಕ್ರಿಯೆ

• ಕಾರ್ಡ್‌ಗಳು ಕಳೆದುಹೋದಲ್ಲಿ, 24 ಗಂಟೆಗಳ ಒಳಗೆ ನಮ್ಮ ಟೋಲ್-ಫ್ರೀ ನಂಬರ್ 1800-419-4000 ಗೆ ಕರೆ ಮಾಡಿ.

• ನಿಮ್ಮ ತುರ್ತು ಅಗತ್ಯಗಳ ಸಹಾಯಕ್ಕಾಗಿ ನೀವು ಸಾಕ್ಷಿಯನ್ನು ಕೂಡ ಸಲ್ಲಿಸಬೇಕಾಗಬಹುದು.