image

ಕ್ಯಾನ್ಸರ್ ಇನ್ಶೂರೆನ್ಸ್

ಕ್ಯಾನ್ಸರ್ ಇನ್ಶೂರೆನ್ಸ್ ಎಂದರೇನು?

ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವು ನೀವು ನಿರೀಕ್ಷಿಸಿದಕ್ಕಿಂತ ಅಧಿಕವಾಗಿರಬಹುದು. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗೆ ಸರಿಯಾದ ಆರೈಕೆ ಮತ್ತು ಚಿಕಿತ್ಸೆಯ ಅಗತ್ಯವಿದೆ. ಸೂಕ್ತ ಕ್ಯಾನ್ಸರ್ ಇನ್ಶೂರೆನ್ಸ್ ಪ್ಲಾನ್ ಪಡೆಯುವ ಮೂಲಕ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗೆ ಕವರ್ ನೀಡುವ ಹೆಲ್ತ್ ಇನ್ಶೂರೆನ್ಸ್‌‌ಗೆ ಪೂರಕವಾಗಿದೆ ಹೆಲ್ತ್ ಇನ್ಶೂರೆನ್ಸ್ ಅದು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯನ್ನು ಕವರ್‌ ಮಾಡುತ್ತದೆ.

ಭಾರತದಲ್ಲಿ ಕ್ಯಾನ್ಸರ್ ಇನ್ಶೂರೆನ್ಸ್ ಕ್ಯಾನ್ಸರ್ ರೋಗದಿಂದ ಉಂಟಾಗುವ ವೈದ್ಯಕೀಯ ಖರ್ಚು ಅಥವಾ ಆದಾಯದ ನಷ್ಟಕ್ಕೆ ಕವರ್ ನೀಡುತ್ತದೆ. ಕ್ಯಾನ್ಸರ್ ಇನ್ಶೂರೆನ್ಸ್ ಕ್ಯಾನ್ಸರ್ ಡಯಾಗ್ನಸ್ಟಿಕ್ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳಿಗೆ ಕವರೇಜನ್ನು ಒದಗಿಸುತ್ತದೆ. ಪಾಲಿಸಿಯು ಕೀಮೋಥೆರಪಿ, ಆಸ್ಪತ್ರೆ ದಾಖಲಾತಿ, ಕೀಮೋಥೆರಪಿಯನ್ನು ಮತ್ತು ಶಸ್ತ್ರಚಿಕಿತ್ಸೆಯನ್ನೂ ಒಳಗೊಂಡಿರುತ್ತದೆ ಮತ್ತು ಅವುಗಳಿಗೆ ಪಾವತಿಸುತ್ತದೆ.

ಕ್ಯಾನ್ಸರ್ ಇನ್ಶೂರೆನ್ಸ್ ಪ್ಲಾನ್‌ ಅಡಿಯಲ್ಲಿ ಈ ಕೆಳಗಿನ ಕ್ಯಾನ್ಸರ್ ಪ್ರಕಾರಗಳು ಒಳಗೊಂಡಿವೆ:
• ಶ್ವಾಸಕೋಶದ ಕ್ಯಾನ್ಸರ್
• ಸ್ತನ ಕ್ಯಾನ್ಸರ್
• ಹೊಟ್ಟೆಯ ಕ್ಯಾನ್ಸರ್
• ಪ್ರಾಸ್ಟೇಟ್ ಕ್ಯಾನ್ಸರ್
• ಅಂಡಾಶಯದ ಕ್ಯಾನ್ಸರ್
• ಹೈಪೋಫಾರಿಂಕ್ಸ್ ಕ್ಯಾನ್ಸರ್

ನೀವು ಆನ್‌ಲೈನ್‌ನಲ್ಲಿ ಪ್ಲಾನ್‌ಗಳನ್ನು ಹೋಲಿಸಿ ಖರೀದಿಸಬಹುದು ಮತ್ತು ಭಾರತದಲ್ಲಿ ಲಭ್ಯವಿರುವ ಉತ್ತಮ ಕ್ಯಾನ್ಸರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು. ಕೆಲವು ಸರಳ ಹಂತಗಳಲ್ಲಿ ಆನ್‌ಲೈನ್‌ನಲ್ಲಿ ಕ್ಯಾನ್ಸರ್ ಪಾಲಿಸಿಯನ್ನು ಖರೀದಿಸಬಹುದು ಮತ್ತು ನವೀಕರಿಸಬಹುದು.

ಒಂದು ಕ್ಯಾನ್ಸರ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳುವ ಪ್ರಯೋಜನಗಳು

  • 1. ಕ್ಯಾನ್ಸರ್ ಇನ್ಶೂರೆನ್ಸ್ ಅನೇಕ ಹಂತಗಳಲ್ಲಿ ಕ್ಯಾನ್ಸರ್ ಸಂಬಂಧಿತ ವೆಚ್ಚಗಳಿಗೆ ಕವರ್ ನೀಡುತ್ತದೆ.
    2. ಡಯಗ್ನಾಸ್ಟಿಕ್‌ಗೆ ಸಂಬಂಧಿಸಿದ ಖರ್ಚುಗಳಿಗೂ ಕವರ್ ನೀಡಲಾಗುತ್ತದೆ.
    3. ಕ್ಯಾನ್ಸರ್ ರೋಗ ಪತ್ತೆಯಾಗಿದ್ದರೆ, ಒಟ್ಟಾರೆ ಮೊತ್ತವನ್ನು ಪಾವತಿಸಲಾಗುತ್ತದೆ.
    4. ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾದಲ್ಲಿ ಪ್ರೀಮಿಯಂ ಅನ್ನು ವಜಾಗೊಳಿಸಬಹುದು.
    5. ಮೈನರ್, ಮೇಜರ್ ಅಥವಾ ಕ್ರಿಟಿಕಲ್ ಹಂತದಂತ ಕ್ಯಾನ್ಸರ್‌ನ ವಿವಿಧ ಹಂತಗಳಲ್ಲಿ ಹಣವನ್ನು ಪಾವತಿಸಲಾಗುತ್ತದೆ.
    6. ಒಂದು ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡದಿದ್ದರೆ ಇನ್ಶೂರೆನ್ಸ್ ಮೊತ್ತ ಹೆಚ್ಚಾಗುತ್ತದೆ.
    7. ಪ್ರಮುಖ ಕ್ಯಾನ್ಸರ್ ಅನಾರೋಗ್ಯವಿದ್ದಲ್ಲಿ, ಮಾಸಿಕ ಖರ್ಚುಗಳನ್ನು ಭರಿಸಲು ಮಾಸಿಕ ಮೊತ್ತವನ್ನು ಪಾವತಿಸಲಾಗುತ್ತದೆ.
    8. ಪಾವತಿಸಿದ ಪ್ರೀಮಿಯಂಗೆ ತೆರಿಗೆಯ ಪ್ರಯೋಜನಗಳು ಲಭ್ಯವಿದೆ.
    9. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ, ತಜ್ಞರ ವೈದ್ಯಕೀಯ ಸಲಹೆ, ಅಥವಾ ಔಷಧಿಗಳಿಗೆ ಪಾವತಿಸುವುದಕ್ಕಾಗಿ ಪಾಲಿಸಿ ಕವರ್.

ಕ್ಯಾನ್ಸರ್ ಇನ್ಶೂರೆನ್ಸ್ ಹೊರತುಪಡಿಸುವಿಕೆಗಳು

1. ಚರ್ಮದ ಕ್ಯಾನ್ಸರ್ ಈ ಇನ್ಶೂರೆನ್ಸ್ ಪ್ಲಾನ್‌ ಅಡಿಯಲ್ಲಿ ಒಳಗೊಂಡಿರುವುದಿಲ್ಲ.
2. ಲೈಂಗಿಕವಾಗಿ ಹರಡುವ ರೋಗಗಳಿಂದ ಉಂಟಾದ ನೇರವಾದ ಅಥವಾ ಪರೋಕ್ಷವಾದ ಯಾವುದೇ ಕ್ಯಾನ್ಸರ್.
3. ಮೊದಲೇ ಅಸ್ತಿತ್ವದಲ್ಲಿರುವ ಯಾವುದೇ ಪರಿಸ್ಥಿತಿಯಿಂದ ಉಂಟಾಗುವ ಕ್ಯಾನ್ಸರನ್ನು ಹೊರತುಪಡಿಸಲಾಗುತ್ತದೆ. ಜೈವಿಕ ಅಥವಾ ಅಣ್ವಸ್ತ್ರ ಮಾಲಿನ್ಯದಿಂದಾಗಿ ಅಥವಾ ವಿಕಿರಣದ ಸಂಪರ್ಕದಿಂದಾಗಿ ಉಂಟಾದ ಕ್ಯಾನ್ಸರನ್ನೂ ಹೊರತುಪಡಿಸಲಾಗುತ್ತದೆ.

ಹಕ್ಕುತ್ಯಾಗ - *ಷರತ್ತುಗಳು ಅನ್ವಯ. ಬಜಾಜ್ ಫೈನಾನ್ಸ್ ಲಿಮಿಟೆಡ್ ಮಾಸ್ಟರ್ ಪಾಲಿಸಿದಾರರಾಗಿರುವ ಗ್ರೂಪ್ ಇನ್ಶೂರೆನ್ಸ್ ಯೋಜನೆಯಡಿ ಈ ಪ್ರಾಡಕ್ಟ್ ಆಫರ್ ಮಾಡಲಾಗುತ್ತದೆ. ನಮ್ಮ ಪಾಲುದಾರ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಕವರೇಜನ್ನು ಒದಗಿಸಲಾಗುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್ ಅಪಾಯದ ಹೊಣೆ ಹೊರುವುದಿಲ್ಲ. IRDAI ಕಾರ್ಪೊರೇಟ್ ಏಜೆನ್ಸಿ ನೋಂದಣಿ ನಂಬರ್ CA0101. ಮೇಲೆ ತಿಳಿಸಲಾದ ಪ್ರಯೋಜನಗಳು ಮತ್ತು ಪ್ರೀಮಿಯಂ ಮೊತ್ತವು ವಿಮಾದಾರರ ವಯಸ್ಸು, ಜೀವನಶೈಲಿ ಹವ್ಯಾಸಗಳು, ಆರೋಗ್ಯ ಇತ್ಯಾದಿಗಳಂತಹ ವಿವಿಧ ಅಂಶಗಳಿಗೆ ಒಳಪಟ್ಟಿರುತ್ತದೆ (ಅನ್ವಯವಾದರೆ). ವಿತರಣೆ, ಗುಣಮಟ್ಟ, ಸೇವೆಯ ಸಾಮರ್ಥ್ಯ, ನಿರ್ವಹಣೆ ಮತ್ತು ಮಾರಾಟದ ನಂತರದ ಯಾವುದೇ ಕ್ಲೈಮ್‌ಗಳಿಗೆ BFL ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಈ ಪ್ರಾಡಕ್ಟ್ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಈ ಪ್ರಾಡಕ್ಟ್ ಖರೀದಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಯಾವುದೇ ಥರ್ಡ್ ಪಾರ್ಟಿ ಪ್ರಾಡಕ್ಟ್‌ಗಳನ್ನು ಕಡ್ಡಾಯವಾಗಿ ಖರೀದಿಸಲು BFL ತನ್ನ ಯಾವುದೇ ಗ್ರಾಹಕರನ್ನು ಒತ್ತಾಯಿಸುವುದಿಲ್ಲ.”