ನಿಮ್ಮ Android ಡಿವೈಸ್‌ನಲ್ಲಿ ಬಜಾಜ್ ಫೈನಾನ್ಸ್ BLU ಜೊತೆ ಮಾತನಾಡುವುದು ಹೇಗೆ

ನೀವು ಇದನ್ನು ಮೂರು ಸರಳ ಹಂತಗಳಲ್ಲಿ ಮಾಡಬಹುದು:

ಹಂತ 1: ನಿಮ್ಮ ಡಿವೈಸಿನಲ್ಲಿ Google Assistant ಲಾಂಚ್ ಮಾಡಿ ಮತ್ತು "ಬಜಾಜ್ ಫೈನಾನ್ಸ್‌ನೊಂದಿಗೆ ಮಾತನಾಡಿ" ಎಂದು ಹೇಳಿ." ನಿಮ್ಮ ಪ್ರಶ್ನೆಗಳಿಗೆ ಸಹಾಯ ಮಾಡಲು ನೀವು BLU ನಿಂದ ಸ್ವಾಗತ ಸಂದೇಶವನ್ನು ಸ್ವೀಕರಿಸುತ್ತೀರಿ, ಮತ್ತು Google ನೊಂದಿಗೆ ನಿಮ್ಮ ಬಜಾಜ್ ಫೈನಾನ್ಸ್ ಅಕೌಂಟ್ ವಿವರಗಳನ್ನು ಲಿಂಕ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ಫೋನ್ ಆಂಡ್ರಾಯ್ಡ್ ವರ್ಷನ್ 6 ಅಥವಾ ಅದಕ್ಕಿಂತ ಹೆಚ್ಚಿನದನ್ನು ಹೊಂದಿದ್ದರೆ, ನೀವು Google Assistant ಆ್ಯಪನ್ನು Play Store ಅಥವಾ App Store ನಿಂದ ಡೌನ್ಲೋಡ್ ಮಾಡಬಹುದು.

ಹಂತ 2: ಸಲಹೆ ಚಿಪ್‌ನಿಂದ "ಹೌದು" ಎಂದು ಹೇಳಿ ಅಥವಾ "ಹೌದು" ಆಯ್ಕೆಮಾಡಿ.

ಹಂತ 3: ನಿಮ್ಮ ಮೊಬೈಲ್ ನಂಬರ್ ನಮೂದಿಸಲು ನೀವು ಪ್ರಾಂಪ್ಟ್ ಹೊಂದಿರುವ ಸ್ಕ್ರೀನ್ ಅನ್ನು ನೋಡುತ್ತೀರಿ. ನಿಮ್ಮ ಮೊಬೈಲ್ ನಂಬರ್ ಈಗಾಗಲೇ ಬಜಾಜ್ ಫೈನಾನ್ಸ್‌ನೊಂದಿಗೆ ನೋಂದಣಿಯಾಗಿದ್ದರೆ, ನಿಮ್ಮ ಪ್ರೊಫೈಲನ್ನು ಒಟಿಪಿಯೊಂದಿಗೆ ದೃಢೀಕರಿಸಲು ನಿಮ್ಮನ್ನು ಕೇಳಲಾಗುತ್ತದೆ. ಒಮ್ಮೆ ಯಶಸ್ವಿಯಾಗಿ ಪರಿಶೀಲಿಸಿದ ನಂತರ, ನೀವು ಬ್ಲೂನಿಂದ ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ.

ಇದು ಸುಲಭ. ಈ ಮೂರು ಹಂತಗಳನ್ನು ಅನುಸರಿಸಿ ಮತ್ತು ನಿಮ್ಮ ಬಜಾಜ್ ಫೈನಾನ್ಸ್ ಅಕೌಂಟನ್ನು ಇಂದೇ Google Assistant ಗೆ ಲಿಂಕ್ ಮಾಡಿ.

Google Assistant ಅನ್ನು ನೀವು ಏನು ಕೇಳಬಹುದು?

Google Assistant ನಲ್ಲಿ BLU ಸಹಾಯದಿಂದ ನೀವು ಪರಿಹರಿಸಬಹುದಾದ ಕೆಲವು ಮಾದರಿ ಪ್ರಶ್ನೆಗಳು ಇಲ್ಲಿವೆ:

  • “ನಾನು ಗ್ರಾಹಕ ಪೋರ್ಟಲ್‌ಗೆ ಹೇಗೆ ಲಾಗಿನ್ ಮಾಡಬಹುದು?”
  • “ಫೋರ್‌ಕ್ಲೋಸರ್ ಶುಲ್ಕಗಳು ಯಾವುವು?”
  • “ನನ್ನ ಫ್ಲೆಕ್ಸಿ ಹೈಬ್ರಿಡ್ ಲೋನಿನಿಂದ ನಾನು ಹೇಗೆ ಡ್ರಾಡೌನ್ ಮಾಡಬಹುದು?”
  • “ನನ್ನ ಬ್ಯಾಂಕ್ ಅಕೌಂಟ್ ನಂಬರನ್ನು ಬದಲಾಯಿಸುವುದು ಹೇಗೆ?"
  • “ನನ್ನ ಬಡ್ಡಿ ಪ್ರಮಾಣಪತ್ರವನ್ನು ಹೇಗೆ ಪಡೆಯುವುದು ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ.”
  • “ನನ್ನ ಲೋನನ್ನು ಫೋರ್‌ಕ್ಲೋಸ್ ಮಾಡುವುದು ಹೇಗೆ?”
  • “ನನ್ನ ಫ್ಲೆಕ್ಸಿ ಲೋನನ್ನು ಭಾಗಶಃ-ಮುಂಪಾವತಿ ಮಾಡುವುದು ಹೇಗೆ?”
  • “ಗ್ರಾಹಕ ಸಹಾಯವಾಣಿ ಸಂಖ್ಯೆಯನ್ನು ನನಗೆ ತಿಳಿಸಿ.”
  • “ನನ್ನ ಟರ್ಮ್ ಲೋನನ್ನು ಫ್ಲೆಕ್ಸಿ ಹೈಬ್ರಿಡ್ ಲೋನ್ ಆಗಿ ಪರಿವರ್ತಿಸುವ ಅನುಕೂಲಗಳ ಬಗ್ಗೆ ನನಗೆ ತಿಳಿಸಿ.”