ಆಗಾಗ ಕೇಳುವ ಪ್ರಶ್ನೆಗಳು

ಇಎಂಐ ಎಂದರೇನು?

ಇಎಂಐ ಎಂದರೆ ಸಮಾನ ಮಾಸಿಕ ಕಂತು. ಅದು ನಿಮ್ಮ ಟೂ ವೀಲರ್ ಮತ್ತು ಥ್ರೀ ವೀಲರ್ ಲೋನ್‌ ಅನ್ನು ನಿರ್ದಿಷ್ಟ ಅವಧಿಯಲ್ಲಿ ಸಣ್ಣ ನಿಗದಿತ ಮಾಸಿಕ ಕಂತುಗಳಲ್ಲಿ ಸುಲಭವಾಗಿ ಮರುಪಾವತಿಸಲು ಅನುವು ಮಾಡಿಕೊಡುತ್ತದೆ. ಪ್ರತಿ ಕಂತು ಅಸಲು ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಕಂತುಗಳು ಸಮವಾಗಿ ಇಲ್ಲದಿರಬಹುದು ಮತ್ತು ಮೂರು ತಿಂಗಳಿಗೊಮ್ಮೆ ಕಟ್ಟುವಂತೆಯೂ ಇರಬಹುದು.

ಮರುಪಾವತಿ ಶೆಡ್ಯೂಲ್ ಎಂದರೇನು?

ಮರುಪಾವತಿಯ ಶೆಡ್ಯೂಲ್ ಎಂದರೆ ಅಸಲು ಮತ್ತು ಬಡ್ಡಿಯನ್ನು ಒಳಗೊಂಡ ಕಂತಿನ ಮೊತ್ತವನ್ನು ಹೊಂದಿರುವ ವೇಳಾಪಟ್ಟಿಯಾಗಿದೆ. ಇದು ಗಡುವಿನ ದಿನಾಂಕಗಳು ಹಾಗೂ ಕಂತಿನ ಪ್ರತಿ ಹಂತದಲ್ಲಿ ಬಾಕಿ ಇರುವ ಅಸಲಿನ ವಿವರಗಳನ್ನು ಒದಗಿಸುತ್ತದೆ.

ನನ್ನ ಬಾಕಿಯಿರುವ ಅಥವಾ ಫೋರ್‌ಕ್ಲೋಸರ್ ಮೊತ್ತವನ್ನು ನಾನು ತಕ್ಷಣವೇ ಹೇಗೆ ಪರಿಶೀಲಿಸಬಹುದು?

9223192235 ಗೆ ಎಸ್ಎಮ್ಎಸ್ ಕಳುಹಿಸುವ ಮೂಲಕ ನೀವು ನಿಮ್ಮ ಬಾಕಿ ಕಂತುಗಳು ಅಥವಾ ಫೋರ್‌ಕ್ಲೋಸರ್ ಮೊತ್ತವನ್ನು ತಕ್ಷಣವೇ ಕಂಡುಕೊಳ್ಳಬಹುದು. ನೀವು ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನಿಂದ due ಅಥವಾ fc ಎಂದು ಟೈಪ್ ಮಾಡಿ, ಇಲ್ಲಿ ಕೊಟ್ಟಿರುವ ನಂಬರಿಗೆ ಕಳುಹಿಸಬಹುದು.

ಎನ್ಒಸಿ ಕೋರಿಕೆಯನ್ನು ತಕ್ಷಣವೇ ಸಲ್ಲಿಸಲು ಯಾವುದೇ ಮಾರ್ಗವಿದೆಯೇ?

ನಮ್ಮ ಎಸ್ಎಂಎಸ್ ಸೇವೆಯೊಂದಿಗೆ ನೀವು ಸುಲಭವಾಗಿ ಎನ್ಒಸಿ ಗಾಗಿ ಕೋರಿಕೆಗಳನ್ನು ಸಲ್ಲಿಸಬಹುದು. ನೀವು noc ಎಂದು ಟೈಪ್ ಮಾಡಿ ಮತ್ತು ಅದನ್ನು ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಿಂದ 9223192235 ಗೆ ಕಳುಹಿಸಬಹುದು. ಲೋನ್ ಅವಧಿ ಮುಗಿದ ನಂತರ ಮತ್ತು ಎಲ್ಲಾ ಬಾಕಿಗಳನ್ನು ಪಡೆದ ನಂತರ ಎನ್ಒಸಿ ಅನ್ನು ನೀಡಲಾಗುತ್ತದೆ. ಇದರ ಜೊತೆಗೆ, ನಿಮ್ಮ ವಾಹನದ ಆರ್‌ಸಿ ಸಂಖ್ಯೆಯನ್ನು ನಮ್ಮಲ್ಲಿ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ.

ನಾನು ಇಮೇಲ್ ಮೂಲಕ ಆ ಕೂಡಲೇ ನನ್ನ ಅಕೌಂಟ್ ಸ್ಟೇಟ್ಮೆಂಟನ್ನು ಪಡೆಯಬಹುದೇ?

ಸುಲಭವಾಗಿ ಅಕೌಂಟ್ ಸ್ಟೇಟ್‍ಮೆಂಟ್ ಪಡೆಯಲು, ನಮ್ಮ ಎಸ್‌ಎಂಎಸ್‌ ಸೇವೆಯನ್ನು ಬಳಸಬಹುದು. ತಕ್ಷಣವೇ ಪ್ರತಿಕ್ರಿಯೆ ಪಡೆಯಲು soa ಎಂದು ಟೈಪ್ ಮಾಡಿ ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಿಂದ 9223192235 ಗೆ ಕಳುಹಿಸಬಹುದು.

ನಾನು ವೆಬ್‌ಸೈಟ್‌ನಲ್ಲಿ ನನ್ನ ಅಕೌಂಟ್ ಮಾಹಿತಿಯನ್ನು ಪರಿಶೀಲಿಸಬಹುದೇ?

ವೆಬ್‌ಸೈಟ್‌ನಲ್ಲಿ ನಿಮ್ಮ ಅಕೌಂಟ್ ಮಾಹಿತಿಯನ್ನು ನೋಡಲು, ನೋಂದಾಯಿತ ಮೊಬೈಲ್ ನಂಬರ್, ಲೋನ್ ಅಕೌಂಟ್ ನಂಬರ್ ಮತ್ತು ಹುಟ್ಟಿದ ದಿನಾಂಕದಂತಹ ಲಾಗಿನ್ ಕ್ರೆಡೆನ್ಶಿಯಲ್‍ಗಳೊಂದಿಗೆ ನಮ್ಮ ವೆಬ್‌ಸೈಟ್ ಗೆ ಲಾಗಿನ್ ಆಗಬೇಕು. ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ಪಡೆಯುವ ಓಟಿಪಿ ಯನ್ನು ಬಳಸಿಯೂ ಲಾಗಿನ್ ಆಗಬಹುದು. ಲಾಗಿನ್ ಆದ ನಂತರ, ನಿಮ್ಮ ಲೋನ್ ಅಕೌಂಟ್ ಮಾಹಿತಿಯು ಸ್ಕ್ರೀನ್‌ ಮೇಲೆ ಕಾಣುತ್ತದೆ.

ನಾನು ಆನ್ಲೈನಿನಲ್ಲಿ ನನ್ನ ಕಂತು ಮತ್ತು ಇತರ ಬಾಕಿಗಳನ್ನು ಹೇಗೆ ಪಾವತಿಸಬಹುದು?

ನಿಮ್ಮ ಲೋನ್ ಅಕೌಂಟಿಗೆ ಲಾಗಿನ್ ಆಗುವ ಮೂಲಕ ಅಥವಾ ತ್ವರಿತ ಪಾವತಿ ಆಯ್ಕೆಯ ಮೂಲಕ ಕಂತು ಮತ್ತು ಇತರ ಬಾಕಿಗಳನ್ನು ಆನ್‍ಲೈನ್‌ನಲ್ಲಿ ಪಾವತಿಸಬಹುದು. ಲಾಗಿನ್ ಆದ ನಂತರ, 'ಪಾವತಿ ಮಾಡಿ' ಆಯ್ಕೆಯನ್ನು ಕ್ಲಿಕ್ ಮಾಡಿ ನಮ್ಮ ಸುರಕ್ಷಿತ ಪಾವತಿ ಗೇಟ್‌ವೇ ಮೂಲಕ ಬಾಕಿ ಮೊತ್ತಗಳನ್ನು ಪಾವತಿಸಿ.

ನನ್ನ ಲೋನಿನ ಭಾಗಶಃ-ಮುಂಪಾವತಿಯನ್ನು ನಾನು ಆನ್ಲೈನ್‌ನಲ್ಲಿ ಮಾಡಬಹುದೇ?

ನಮ್ಮ ಸರಳ ಆನ್‍ಲೈನ್ ಪ್ರಕ್ರಿಯೆಯೊಂದಿಗೆ ನಿಮ್ಮ ಲೋನನ್ನು ಭಾಗಶಃ ಮುಂಗಡ ಪಾವತಿ ಮಾಡಬಹುದು. ನಿಮ್ಮ ಕ್ರೆಡೆನ್ಶಿಯಲ್‌ಗಳೊಂದಿಗೆ ಇಲ್ಲಿ ಲಾಗಿನ್ ಆಗಿ ಮತ್ತು 'ಪಾರ್ಟ್ ಫೋರ್‌ಕ್ಲೋಸರ್' ಮೇಲೆ ಕ್ಲಿಕ್ ಮಾಡಿ'. ಈಗ, ನಮ್ಮ ಸುರಕ್ಷಿತ ಪಾವತಿ ಗೇಟ್‌ವೇ ಮೂಲಕ ಲೋನನ್ನು ಭಾಗಶಃ ಮುಂಗಡ ಪಾವತಿ ಮಾಡಿ.

ನನ್ನ ಲೋನ್ ಸಾರಾಂಶ ಮತ್ತು ಭವಿಷ್ಯದ ಕಂತುಗಳನ್ನು ನಾನು ಆನ್ಲೈನಿನಲ್ಲಿ ನೋಡಬಹುದೇ?

ನಿಮ್ಮ ಲಾಗಿನ್ ಕ್ರೆಡೆನ್ಶಿಯಲ್‌ಗಳೊಂದಿಗೆ ನಮ್ಮ ವೆಬ್‌ಸೈಟ್ ಗೆ ಲಾಗಿನ್ ಆಗುವ ಮೂಲಕ ಲೋನ್ ಸಾರಾಂಶ ಮತ್ತು ಮುಂಬರುವ ಕಂತುಗಳನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು. ಲಾಗಿನ್ ಆದ ನಂತರ, ನಿಮ್ಮ ಲೋನ್ ಅಕೌಂಟ್ ಮಾಹಿತಿಯನ್ನು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ.

ಹೆಚ್ಚಿನ ವಿಚಾರಣೆಗಳಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ