ಥರ್ಡ್-ಪಾರ್ಟಿ ಟೂ-ವೀಲರ್ ಇನ್ಶೂರೆನ್ಸ್

ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಅಪಘಾತ ಅಥವಾ ದುರ್ಘಟನೆಯಿಂದ ಉಂಟಾಗುವ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ವಿರುದ್ಧ ನಿಮ್ಮನ್ನು ರಕ್ಷಿಸಲು ತ್ವರಿತ ಮತ್ತು ಸರಳ ಮಾರ್ಗವಾಗಿದೆ. ಆನ್ಲೈನ್ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಖರೀದಿಸುವುದು ಕನಿಷ್ಠ ಡಾಕ್ಯುಮೆಂಟ್‌ಗಳ ಅಗತ್ಯವಿರುವ ಸುಲಭವಾದ ಪ್ರಕ್ರಿಯೆಯಾಗಿದೆ. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಿಮ್ಮ ಸಮಯ ಮತ್ತು ಹಣವನ್ನು ಉಳಿಸುತ್ತದೆ, ಯಾವುದೇ ದುರದೃಷ್ಟಕರ ಸಂದರ್ಭದಲ್ಲಿ ನಿಮ್ಮನ್ನು ಒತ್ತಡದಿಂದ ರಕ್ಷಿಸುತ್ತದೆ.

ಫೀಚರ್‌ಗಳು ಮತ್ತು ಪ್ರಯೋಜನಗಳು

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಕೆಲವು ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು ಇಲ್ಲಿವೆ:

 • ಯಾವುದೇ ಹಣಕಾಸಿನ ಜವಾಬ್ದಾರಿ ಇಲ್ಲ (ವಿಮಾ ಮೊತ್ತದವರೆಗೆ)

  ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಿಮ್ಮ ಇನ್ಶೂರೆನ್ಸ್ ಮಾಡಿದ ಟೂ ವೀಲರ್ ವಾಹನದಿಂದ ವ್ಯಕ್ತಿ, ವಾಹನ ಅಥವಾ ಆಸ್ತಿಗೆ ಉಂಟಾದ ಹಾನಿಗಳಿಗೆ ನಿಮ್ಮ ಹಣಕಾಸಿನ ಹೊಣೆಗಾರಿಕೆಯನ್ನು ಕವರ್ ಮಾಡುತ್ತದೆ. ನಿಮ್ಮ ಜೇಬಿನಿಂದ ಈ ಎಲ್ಲಾ ವೆಚ್ಚಗಳನ್ನು ಕವರ್ ಮಾಡುವುದು ದೊಡ್ಡ ಹಣಕಾಸಿನ ಜವಾಬ್ದಾರಿಯಾಗಬಹುದು.

 • ಆನ್‌ಲೈನ್‌ ​​ಪ್ರಕ್ರಿಯೆ

  ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ನೀವು ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಬಹುದು. ಪ್ರಕ್ರಿಯೆಯು ತ್ವರಿತ ಮತ್ತು ಸುಲಭವಾಗಿದೆ.

 • ಕೈಗೆಟುಕುವ ಆಯ್ಕೆ

  ಸಾಮಾನ್ಯವಾಗಿ, ಇತರ ಇನ್ಶೂರೆನ್ಸ್ ಕವರ್‌ಗಳು ಮತ್ತು ಆ್ಯಡ್-ಆನ್‌ಗಳಿಗೆ ಹೋಲಿಸಿದರೆ ಟೂ ವೀಲರ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅತ್ಯಂತ ಅಗ್ಗವಾಗಿದೆ. ಹೀಗಾಗಿ, ಸಣ್ಣ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ನೀವು ಹೆಚ್ಚಿನ ರಿಸ್ಕ್ ಕವರ್ ಪಡೆಯುತ್ತೀರಿ.

 • ಮನಃಶಾಂತಿ

  ಟೂ ವೀಲರ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ ಇದು ಪಾಕೆಟ್ ಸ್ನೇಹಿಯಾಗಿದೆ. ಹೀಗಾಗಿ, ಸಣ್ಣ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ನೀವು ಹೆಚ್ಚಿನ ರಿಸ್ಕ್ ಕವರ್ ಪಡೆಯುತ್ತೀರಿ.

ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಅಡಿಯಲ್ಲಿ ಏನನ್ನು ಕವರ್ ಮಾಡಲಾಗುತ್ತದೆ?

ಸಮಗ್ರ ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಅಡಿಯಲ್ಲಿ ಇವುಗಳನ್ನು ಕವರ್ ಮಾಡಲಾಗುತ್ತದೆ:


ಮೂರನೇ ವ್ಯಕ್ತಿಯ ಮರಣ ಅಥವಾ ಗಾಯಗಳು: ದುರದೃಷ್ಟಕರ ಸಂದರ್ಭದಲ್ಲಿ, ನಿಮ್ಮ ಇನ್ಶೂರ್ ಮಾಡಲಾದ ಟೂ- ವ್ಹೀಲರ್‌‌ನಲ್ಲಿ ಆಕ್ಸಿಡೆಂಟ್ ಆಗಿ ಯಾರಾದರೂ ಗಾಯಗೊಂಡರೆ ಅಥವಾ ಮರಣ ಹೊಂದಿದರೆ ಥರ್ಡ್-ಪಾರ್ಟಿ ಟೂ- ವ್ಹೀಲರ್‌‌ ಇನ್ಶೂರೆನ್ಸ್ ಅನ್ನು ಬಳಸಬಹುದು. ಅಂಗವಿಕಲತೆ ಅಥವಾ ಮರಣದಿಂದಾಗಿ ಉಂಟಾದ ವೈದ್ಯಕೀಯ ಖರ್ಚುಗಳು ಅಥವಾ ಆದಾಯ ನಷ್ಟಕ್ಕಾಗಿ ಈ ಇನ್ಶೂರೆನ್ಸ್ ಮೂಲಕ ಕ್ಲೈಮ್ ಮಾಡಬಹುದು. ದೈಹಿಕ ಅಂಗವಿಕಲತೆಯಿಂದಾಗಿ ಆದಾಯದ ನಷ್ಟಕ್ಕೆ ಪರಿಹಾರವನ್ನು ಕೂಡ ಕ್ಲೈಮ್ ಮಾಡಬಹುದು.

ಥರ್ಡ್-ಪಾರ್ಟಿ ಆಸ್ತಿ ಹಾನಿ: ಒಂದು ವೇಳೆ ನಿಮ್ಮ ಟೂ ವ್ಹೀಲರ್ ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಹಾನಿ ಉಂಟು ಮಾಡಿದರೆ, ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಬಳಸಿ ವೆಚ್ಚಗಳನ್ನು ಪಾವತಿಸಬಹುದು. IRDA ಪ್ರಕಾರ, ರೂ. 1 ಲಕ್ಷದವರೆಗಿನ ಥರ್ಡ್ ಪಾರ್ಟಿ ಪ್ರಾಪರ್ಟಿ ಹಾನಿಗಳನ್ನು ಥರ್ಡ್ ಪಾರ್ಟಿ ಟೂ- ವ್ಹೀಲರ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.

ಇನ್ಶೂರೆನ್ಸ್ ಮಾಡಿದ ಟೂವೀಲರ್ ವಾಹನದ ಮಾಲೀಕರು ಅಥವಾ ಸವಾರರ ಸಾವು: ದುರದೃಷ್ಟಕರ ಸಂದರ್ಭದಲ್ಲಿ, ಇನ್ಶೂರೆನ್ಸ್ ಮಾಡಿದ ಟೂ ವೀಲರ್ ವಾಹನದ ಮಾಲೀಕರು ಅಥವಾ ರೈಡರ್ ಅಪಘಾತದಿಂದಾಗಿ ಸಾಯುತ್ತಾರೆ, ಅವರ ಅವಲಂಬಿತರಿಗೆ ಹಠಾತ್ ಆದಾಯದ ನಷ್ಟಕ್ಕೆ ಪರಿಹಾರ ನೀಡಲಾಗುತ್ತದೆ.

ಇನ್ಶೂರೆನ್ಸ್ ಮಾಡಿದ ಟೂ ವೀಲರ್ ವಾಹನದ ಮಾಲೀಕರು ಅಥವಾ ಸವಾರರ ಶಾಶ್ವತ ಒಟ್ಟು ಅಂಗವಿಕಲತೆ: ದುರದೃಷ್ಟಕರ ಸಂದರ್ಭದಲ್ಲಿ, ಇನ್ಶೂರೆನ್ಸ್ ಮಾಡಿದ ಟೂ ವೀಲರ್ ವಾಹನದ ಮಾಲೀಕರು ಅಥವಾ ರೈಡರ್ ಅಪಘಾತದಿಂದಾಗಿ ಶಾಶ್ವತ ಸಂಪೂರ್ಣ ಅಂಗವಿಕಲತೆಯನ್ನು ಹೊಂದಿದ್ದರೆ, ಹಠಾತ್ ಆದಾಯದ ನಷ್ಟಕ್ಕೆ ಅವರಿಗೆ ಪರಿಹಾರ ನೀಡಲಾಗುತ್ತದೆ.

ಮೂರನೆಯ ಪಕ್ಷದ ಟೂ ವೀಲರ್ ವಾಹನದ ಇನ್ಶೂರೆನ್ಸ್ ಅಡಿಯಲ್ಲಿ ಏನನ್ನು ಕವರ್ ಮಾಡಲಾಗಿಲ್ಲ

ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಅಡಿಯಲ್ಲಿ ಹೊರಗಿಡುವಿಕೆಗಳು ಇಲ್ಲಿವೆ:
• ವೇಗದ ಕಾರಣದಿಂದಾಗಿ ಟೂ ವೀಲರ್‌ಗಳಿಗೆ ಉಂಟಾದ ಯಾವುದೇ ಹಾನಿ ಅಥವಾ ನಷ್ಟ.
• ಕೀಗಳನ್ನು ಕಳೆದುಕೊಳ್ಳುವುದು ಅಥವಾ ಮದ್ಯ ಅಥವಾ ಮಾದಕದ್ರವ್ಯ ಪ್ರಭಾವದಲ್ಲಿ ಚಾಲನೆ ಮಾಡುವಂತಹ ಹೊಣೆಗಾರಿಕೆರಹಿತ ವರ್ತನೆಯಿಂದಾಗಿ ಉಂಟಾದ ನಷ್ಟ ಅಥವಾ ಹಾನಿ.
• ಹೇಳಲಾದ ಭೌಗೋಳಿಕ ಪ್ರದೇಶದ ಹೊರಗೆ ಉಂಟಾಗುವ ಟೂ ವೀಲರ್‌ಗಳು ಅಥವಾ ಥರ್ಡ್ ಪಾರ್ಟಿ ಹೊಣೆಗಾರಿಕೆಗೆ ಉಂಟಾದ ಯಾವುದೇ ಹಾನಿ ಅಥವಾ ನಷ್ಟ.
• ಅನಧಿಕೃತ ರೈಡರ್ ಅಥವಾ ಕಡಿಮೆ ವಯಸ್ಸಿನ ಸವಾರರಿಂದ ಟೂ ವೀಲರ್‌ಗಳಿಗೆ ಉಂಟಾದ ನಷ್ಟ ಅಥವಾ ಹಾನಿ.
• ಯಾಂತ್ರಿಕ ಅಥವಾ ವಿದ್ಯುತ್ ವೈಫಲ್ಯ.
• ಹೇಳಲಾದ ಉದ್ದೇಶಗಳನ್ನು ಹೊರತುಪಡಿಸಿ ಟೂವೀಲರ್ ವಾಹನವನ್ನು ಬಳಸಿದರೆ. ವಿಮಾದಾತರಿಗೆ ತಿಳಿಸದೆ ವಾಣಿಜ್ಯ ಉದ್ದೇಶಗಳಿಗಾಗಿ ಟೂವೀಲರ್ ವಾಹನವನ್ನು ಬಳಸುವುದು.
• ಯುದ್ಧ, ಆಕ್ರಮಣ, ಭಯೋತ್ಪಾದಕ ದಾಳಿ, ಗಲಭೆಗಳು ಅಥವಾ ಪರಮಾಣು ಶಸ್ತ್ರಾಸ್ತ್ರಗಳ ಕಾರಣದಿಂದಾಗಿ ಉಂಟಾಗುವ ನಷ್ಟ, ಹಾನಿ, ಹೊಣೆಗಾರಿಕೆ.

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಖರೀದಿಸುವ ಕಾರಣಗಳು

ತ್ವರಿತ ಮತ್ತು ಸುಲಭವಾದ ಖರೀದಿ: ದೀರ್ಘವಾದ ಮತ್ತು ಕಠಿಣ ಪಾಲಿಸಿ ಪ್ರಕ್ರಿಯೆಗಳು ಹಿಂದಿನ ಕಾಲದ ವಿಷಯವಾಗಿವೆ. ಬಜಾಜ್ ಫೈನಾನ್ಸ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈಗ ನಿಮ್ಮ ಆದ್ಯತೆಯ ಇನ್ಶೂರೆನ್ಸ್ ಅನ್ನು ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಆನ್ಲೈನಿನಲ್ಲಿ ಪಡೆಯಿರಿ.

ಹಣಕಾಸಿನ ನೆರವು ಮತ್ತು ಕಾನೂನು ಕವರೇಜ್: ಥರ್ಡ್ ಪಾರ್ಟಿಯ ಗಾಯ/ಮರಣ ಅಥವಾ ಆಸ್ತಿ ಹಾನಿಯ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವುದರ ಜೊತೆಗೆ, ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಗಾಯ ಅಥವಾ ಹಾನಿಯ ಪರಿಣಾಮವಾಗಿ ಉಂಟಾಗುವ ಯಾವುದೇ ಕಾನೂನು ಮತ್ತು ಹಣಕಾಸಿನ ತೊಂದರೆಗಳಿಗೆ ಕವರ್ ಒದಗಿಸುತ್ತದೆ.

ಕನಿಷ್ಠ ವೆಚ್ಚದ ಇನ್ಶೂರೆನ್ಸ್ ಪಾಲಿಸಿ: ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಪ್ರಯೋಜನವನ್ನು ಒದಗಿಸುತ್ತದೆ. ಎಲ್ಲಾ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂಗಳನ್ನು IRDAI ನಿಯಂತ್ರಿಸುತ್ತದೆ, ಇದು ಪ್ರೀಮಿಯಂ ದರಗಳನ್ನು ಆಕರ್ಷಕ ಮತ್ತು ಕೈಗೆಟಕುವಂತೆ ಮಾಡುತ್ತದೆ.

ಅನಿರೀಕ್ಷಿತ ದಂಡವನ್ನು ವಜಾಗೊಳಿಸುವುದು: ಪ್ರತಿ ಟೂ ವೀಲರ್ ವಾಹನದ ಖರೀದಿಯ ಮೇಲೆ ವಿಮೆ ಮಾಡಬೇಕು ಎಂದು ಮೋಟಾರ್ ವಾಹನ ಕಾಯ್ದೆಯು ನಿರ್ದಿಷ್ಟಪಡಿಸುತ್ತದೆ. ಕನಿಷ್ಠ ಅವಶ್ಯಕತೆ ಥರ್ಡ್ ಪಾರ್ಟಿ ಇನ್ಶೂರೆನ್ಸ್. ಇದು ದಂಡದಿಂದ ನಿಮ್ಮನ್ನು ಉಳಿಸುತ್ತದೆ.

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್‌ಗೆ ಅಪ್ಲೈ ಮಾಡುವುದು ಹೇಗೆ

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವ ಹಂತಗಳು ಇಲ್ಲಿವೆ:


• ಮೇಲ್ಭಾಗದಲ್ಲಿ 'ಈಗಲೇ ಅಪ್ಲೈ ಮಾಡಿ' ಬಟನ್ ಕ್ಲಿಕ್ ಮಾಡಿ

• ವೈಯಕ್ತಿಕವಾಗಿ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು 'ಸಲ್ಲಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ

• ಆನ್ಲೈನಿನಲ್ಲಿ ಶುಲ್ಕದ ಪಾವತಿ ಮಾಡಿ

• ಅಗತ್ಯವಿದ್ದರೆ ನಮ್ಮ ಪ್ರತಿನಿಧಿಗಳಿಂದ ವಾಪಸ್ ಕರೆಯನ್ನು ಆಯ್ಕೆ ಮಾಡಿ ಅಥವಾ 'ಈಗ ಖರೀದಿಸಿ' ಮೇಲೆ ಕ್ಲಿಕ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ'

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್‌ಗಾಗಿ ಆಗಾಗ್ಗೆ ಕೇಳುವ ಪ್ರಶ್ನೆಗಳು (FAQ)

1 ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಎಂದರೇನು?

ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಒಳಗೊಳ್ಳುವಿಕೆಯಿಂದ ಉಂಟಾಗುವ ಯಾವುದೇ ಹೊಣೆಗಾರಿಕೆಗಳ ವಿರುದ್ಧ ರಕ್ಷಿಸಲು ಸರಳವಾದ ಮಾರ್ಗವಾಗಿದೆ. ಪಾಲಿಸಿದಾರರ ಟೂ ವೀಲರ್ ಮತ್ತು ಥರ್ಡ್ ಪಾರ್ಟಿಯನ್ನು ಒಳಗೊಂಡ ಅಪಘಾತದ ಸಂದರ್ಭದಲ್ಲಿ, ಥರ್ಡ್ ಪಾರ್ಟಿಗೆ ಉಂಟಾಗುವ ಎಲ್ಲಾ ಹಾನಿಗಳನ್ನು ಇನ್ಶೂರೆನ್ಸ್ ಪಾಲಿಸಿಯಿಂದ ಕವರ್ ಮಾಡಲಾಗುತ್ತದೆ. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅಥವಾ ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಕವರ್ ಪಡೆಯುವುದು ಸುಲಭ ಮತ್ತು ಕೈಗೆಟಕುವಂತಿದೆ.

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್‌ನ ಒಳಗೊಳ್ಳುವಿಕೆಗಳು
• ಥರ್ಡ್ ಪಾರ್ಟಿಯ ಗಾಯ ಅಥವಾ ಮರಣಕ್ಕೆ ಕವರ್ (ನ್ಯಾಯಾಲಯದಿಂದ ನಿರ್ಧರಿಸಲಾದ ಪರಿಹಾರದ ಮೊತ್ತ)
• ಥರ್ಡ್ ಪಾರ್ಟಿಯ ಆಸ್ತಿ ಹಾನಿಗೆ ಕವರ್ (ಗರಿಷ್ಠ 1 ಲಕ್ಷದ ಪರಿಹಾರವನ್ನು ನೀಡಲಾಗುತ್ತದೆ)
• ಥರ್ಡ್ ಪಾರ್ಟಿಯ ಗಾಯ ಅಥವಾ ಆಸ್ತಿ ಹಾನಿಯಿಂದಾಗಿ ಕಾನೂನು ಪ್ರಕ್ರಿಯೆಗೆ ಕವರ್
• ಥರ್ಡ್ ಪಾರ್ಟಿಯ ಗಾಯ ಅಥವಾ ಆಸ್ತಿ ಹಾನಿಯಿಂದ ಉಂಟಾಗುವ ವೆಚ್ಚಗಳಿಗೆ ಕವರ್
• ಇನ್ಶೂರೆನ್ಸ್ ಮಾಡದ ಥರ್ಡ್ ಪಾರ್ಟಿಯ ಪಾಲಿಸಿದಾರರ ವಾಹನ ಹಾನಿಗೆ ಕವರ್

2 ಶೂನ್ಯ ಸವಕಳಿಯಲ್ಲಿ ನಾನು ನನ್ನ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಅಪ್ಡೇಟ್ ಮಾಡಬಹುದೇ?

ಶೂನ್ಯ-ಸವಕಳಿ ಆ್ಯಡ್ ಆನ್ ಕವರ್ ಸಮಗ್ರ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಮಾತ್ರ ಲಭ್ಯವಿದೆ.

3 ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್‌ನಲ್ಲಿ ಕ್ಲೈಮ್ ಪ್ರಕ್ರಿಯೆ ಏನು?

ಬೈಕ್‌ಗಳಿಗಾಗಿ ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ಕ್ಲೈಮ್ ಪ್ರಕ್ರಿಯೆಯು ಸರಳವಾಗಿದೆ ಮತ್ತು ಸುಲಭವಾಗಿದೆ. ಪಾಲಿಸಿದಾರರು ಮತ್ತು ಮೂರನೇ ವ್ಯಕ್ತಿ ಎರಡರ ಕ್ಲೈಮ್ ಪ್ರಕ್ರಿಯೆಗಳು ಇಲ್ಲಿವೆ:

1 ಅಪಘಾತದ ನಂತರ ಆಗಿರುವ ಹಾನಿಗಳ ಸ್ಪಷ್ಟ ಚಿತ್ರಗಳನ್ನು ತೆಗೆದುಕೊಳ್ಳಿ.
2 ಹಾನಿಗೊಳಗಾದ ವಾಹನ ಅಥವಾ ವಾಹನಗಳ ಎಲ್ಲಾ ಅಗತ್ಯ ವಿವರಗಳನ್ನು ಗಮನಿಸಿ.
3 ಅಪಘಾತ ಸಂದರ್ಭದಲ್ಲಿದ್ದ ಸಾಕ್ಷಿ, ಆತ ಅಥವಾ ಆಕೆಯ ಸಂಪರ್ಕ ವಿವರಗಳನ್ನು ನೋಟ್ ಮಾಡಿ.
4 ಅಪಘಾತದ ಬಗ್ಗೆ ಇನ್ಶೂರೆನ್ಸ್ ಒದಗಿಸುವವರಿಗೆ ತಿಳಿಸಿ ಮತ್ತು ಅವರ ಮಾರ್ಗದರ್ಶನದ ಪ್ರಕಾರ ಕಾರ್ಯನಿರ್ವಹಿಸಿ.
5 ಆ ನಿರ್ದಿಷ್ಟ ಅಧಿಕಾರ ವ್ಯಾಪ್ತಿಯ ಪೊಲೀಸ್ ಸ್ಟೇಷನ್‌ನಲ್ಲಿ ಮೊದಲ ಮಾಹಿತಿ ವರದಿಯನ್ನು (FIR) ನೋಂದಾಯಿಸಿ.
6 ವಕೀಲರ ಸಹಾಯದೊಂದಿಗೆ ಮೋಟಾರ್ ಅಪಘಾತದ ಕ್ಲೈಮ್‌ಗಳ ಟ್ರಿಬ್ಯೂನಲ್ ಕೋರ್ಟ್‌ನಲ್ಲಿ ಕೇಸ್ ಫೈಲ್ ಮಾಡಿ.
7 ನ್ಯಾಯಾಲಯದ ಕಾರ್ಯವಿಧಾನಗಳಲ್ಲಿ ಹಾಜರಾಗಿ, ಘಟನೆ ನಡೆದ ಬಗ್ಗೆ ಮಾಹಿತಿ ಹಂಚಿಕೊಳ್ಳಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌‌ಗಳು ಮತ್ತು ವಿವರಗಳನ್ನು ಸಲ್ಲಿಸಿ.
8 ಇನ್ಶೂರೆನ್ಸ್ ಒದಗಿಸುವವರೊಂದಿಗೆ ನ್ಯಾಯಾಲಯದ ಆರ್ಡರನ್ನು ಹಂಚಿಕೊಳ್ಳಿ ಮತ್ತು ಥರ್ಡ್ ಪಾರ್ಟಿಯ ದೈಹಿಕ ಗಾಯಗಳು ಮತ್ತು ಆಸ್ತಿ ಹಾನಿಗಳ ವೆಚ್ಚಗಳಿಗೆ ಪರಿಹಾರ ಪಡೆಯಿರಿ.

ಥರ್ಡ್ ಪಾರ್ಟಿಯಿಂದ (ಬಲಿಯಾದವರು) ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯು ಈ ಕೆಳಗಿನಂತಿದೆ:
1 ಘಟನೆಯಲ್ಲಿ ಒಳಗೊಂಡಿರುವ ಥರ್ಡ್ ಪಾರ್ಟಿಯ ಇನ್ಶೂರೆನ್ಸ್ ವಿವರಗಳನ್ನು ತೆಗೆದುಕೊಳ್ಳಿ ಮತ್ತು ಘಟನೆಯ ಬಗ್ಗೆ ತಮ್ಮ ವಿಮಾದಾತರಿಗೆ ತಿಳಿಸಿ.
2 ಪ್ರಕರಣದ ಅರ್ಹತೆಗಳ ಆಧಾರದ ಮೇಲೆ, ಇನ್ಶೂರೆನ್ಸ್ ಒದಗಿಸುವವರು ಅದನ್ನು ಮೋಟಾರ್ ಇನ್ಶೂರೆನ್ಸ್ ಕ್ಲೈಮ್ ಟ್ರಿಬ್ಯುನಲ್‌ಗೆ ವರ್ಗಾಯಿಸುತ್ತಾರೆ.
3 ನ್ಯಾಯಾಲಯದ ಪ್ರೊಸೀಡಿಂಗ್‌‌ಗೆ ಹಾಜರಾಗಿ ಮತ್ತು ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳು, FIR ಪ್ರತಿ ಮತ್ತು ಘಟನೆ ಸಂಬಂಧಿತ ಪುರಾವೆಗಳನ್ನು ಸಲ್ಲಿಸಿ.
4 ನ್ಯಾಯಾಲಯದಲ್ಲಿ ನಿಮ್ಮ ವಿಷಯವನ್ನು ಸರಿಪಡಿಸಲು ಅಪಘಾತದ ಸಂದರ್ಭವನ್ನು ಸಾಕ್ಷಿಯಾದವರನ್ನು ಕರೆತನ್ನಿ.
5 ಸಲ್ಲಿಸಿದ ಎಲ್ಲಾ ಅಂಶಗಳ ಆಧಾರದ ಮೇಲೆ, ಟ್ರಿಬ್ಯೂನಲ್ ಪಾವತಿಸಬೇಕಾದ ಪರಿಹಾರದ ಮೊತ್ತವನ್ನು ನಿರ್ಧರಿಸುತ್ತದೆ.
ಗಮನಿಸಿ: ನಮೂದಿಸಿದ ಕ್ಲೈಮ್ ಪ್ರಕ್ರಿಯೆಯು ಪಾಲಿಸಿಯ ಪ್ರಕಾರ ಬದಲಾಗಬಹುದು.

4 ಆನ್‌ಲೈನ್‌ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಯಾವುವು?

ಆನ್‌ಲೈನ್‌ನಲ್ಲಿ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಖರೀದಿಸಲು ಬೇಕಾದ ಡಾಕ್ಯುಮೆಂಟ್‌ಗಳು ಮತ್ತು ವಿವರಗಳು ಇಲ್ಲಿವೆ:

ವಾಹನದ ವಿವರಗಳು:
• ರಿಜಿಸ್ಟ್ರೇಷನ್ ನಂಬರ್
• ಇಂಜಿನ್ ನಂಬರ್
• ಚಾಸಿಸ್ ನಂಬರ್
• ತಯಾರಿಸಿದ ಮತ್ತು ಮಾಡೆಲ್ ಹೆಸರು
• ಹಿಂದಿನ ಪಾಲಿಸಿ ನಂಬರ್ (ನಿಮ್ಮ ಬಳಿ ಯಾವುದಾದರೂ ಇದ್ದರೆ)
• ವಾಹನ ತಯಾರಿಸಿದ ದಿನಾಂಕ (mm/yy)
• ಖರೀದಿಯ ದಿನಾಂಕ ಮತ್ತು ನಗರ

ವೈಯುಕ್ತಿಕ ವಿವರಗಳು:
• ಸಂಪರ್ಕ ವಿವರಗಳು (ವಿಳಾಸ, ಫೋನ್ ನಂಬರ್ ಮತ್ತು ಇಮೇಲ್ id)
• ನಿಮ್ಮ ವಾಹನದ RC ಪುಸ್ತಕದ ಪ್ರತಿ.

5 ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್‌ನೊಂದಿಗೆ ನಾನು ಯಾವುದೇ ಸಂಖ್ಯೆಯ ಆ್ಯಡ್-ಆನ್‌ಗಳನ್ನು ಖರೀದಿಸಬಹುದೇ?

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಆ್ಯಡ್ ಆನ್ ಆಗಿ ವೈಯಕ್ತಿಕ ಅಪಘಾತ ಕವರ್ ಮಾತ್ರ ಹೊಂದಿದೆ.

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?