image

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್

ಥರ್ಡ್ ಪಾರ್ಟಿ ಇನ್ಶೂರೆನ್ಸ್

ಕಾರು ಅಪಘಾತದ ಸಂದರ್ಭದಲ್ಲಿ, ಗಂಭೀರವಾದ ಗಾಯಗಳು ಮತ್ತು ಹಾನಿಗಳಾಗುವ ಸಾಧ್ಯತೆಗಳಿವೆ. ಮೂರನೇ ವ್ಯಕ್ತಿ ಕಾರ್ ಇನ್ಶೂರೆನ್ಸ್ ಅಪಘಾತದಲ್ಲಿ ಇತರ ಜನರಿಗೆ ಹಾನಿಯಾಗಿದ್ದರೆ ಕವರ್ ಮಾಡುತ್ತದೆ. ಬಜಾಜ್ ಫಿನ್‌ಸರ್ವ್‌ನಿಂದ ಮೂರನೆಯ ಪಾರ್ಟಿ ಕಾರ್ ಇನ್ಶೂರೆನ್ಸಿನೊಂದಿಗೆ ವಾಹನ ಚಾಲನೆ ಮಾಡುವಾಗ ಸಂಪೂರ್ಣ ಮನಃಶಾಂತಿಯನ್ನು ಪಡೆಯಿರಿ. ಅಪಘಾತದ ಸಮಯದಲ್ಲಿ ಸಂಭವಿಸಿದ ಗಾಯಗಳು, ಮರಣ, ಅಥವಾ ಆಸ್ತಿ ಹಾನಿಗಳಿಗೆ ನಿಮ್ಮ ಇನ್ಸೂರೆನ್ಸ್ ಕಾರಣದಿಂದಾಗಿ ಈ ಇನ್ಶೂರೆನ್ಸ್ ಮೂರನೇ ವ್ಯಕ್ತಿಗೆ ಪರಿಹಾರವನ್ನು ಪಾವತಿಸುತ್ತದೆ.

 • ಸಮಗ್ರ ಕವರೇಜ್

  ಅಪಘಾತದಲ್ಲಿ ನಿಮ್ಮ ಕಾರಿನ ಮೂಲಕ ಮೂರನೇ ವ್ಯಕ್ತಿಗೆ ಉಂಟಾದ ಹಾನಿಗಳಿಂದ ಸಂಪೂರ್ಣ ರಕ್ಷಣೆಯನ್ನು ಪಡೆಯಿರಿ. ಈ ಇನ್ಶೂರೆನ್ಸ್ ತೃತೀಯ ಪಕ್ಷಗಳಿಂದ ಉಂಟಾದ ಗಾಯಗಳು, ಸಾವು ಮತ್ತು ಸ್ವತ್ತು ಹಾನಿಗೆ ಪಾವತಿ ಮಾಡುತ್ತದೆ.

 • ಸುರಕ್ಷತೆಯನ್ನು ಪಡೆಯಿರಿ

  ನಿಮ್ಮ ಸೇವಿಂಗ್ಸ್‌ಗಳನ್ನು ಬಳಸಿಕೊಳ್ಳಬೇಡಿ, ಅಪಘಾತದಿಂದಾಗಿ ಉದ್ಭವಿಸಬಹುದಾದ ಯಾವುದೇ ಅನಿಶ್ಚಿತ ಆರ್ಥಿಕ ಬಾಧ್ಯತೆಗಳಿಗೆದುರಾಗಿ ಸುರಕ್ಷತಾ ಜಾಲವನ್ನು ಪಡೆದುಕೊಳ್ಳಿ.

 • ಸುಲಭ ಕ್ಲೈಮ್ ಪರಿಹಾರ

  ಬಜಾಜ್ ಫಿನ್‌ಸರ್ವ್‌ನ ತೊಂದರೆ ಇಲ್ಲದ ಸೇವೆಯಿಂದ ಸುಲಭವಾಗಿ ನಿಮ್ಮ ಕ್ಲೈಮ್‌ಗಳನ್ನು ಸೆಟಲ್‌ ಮಾಡಿಕೊಳ್ಳಿ.

 • ಆನ್‌ಲೈನ್‌‌ನಲ್ಲಿ ​​ಲಭ್ಯವಿದೆ

  ಥರ್ಡ್ ಪಾರ್ಟಿ ಇನ್ಶೂರೆನ್ಸ್‌ಗಳನ್ನು ನಿಮ್ಮ ಮನೆ ಅಥವಾ ಕಛೇರಿಯಿಂದಲೇ ಆನ್‌ಲೈನ್‌ನಲ್ಲಿ ಖರೀದಿಸಿ.

 • ಕೈಗೆಟಕುವ ಪ್ರೀಮಿಯಂ

  ಹೆಚ್ಚಿನ ಹಣಕಾಸಿನ ಹೊಣೆಗಾರಿಕೆಯನ್ನು ನಿಭಾಯಿಸಲು ನಿಗದಿತ ಸಾಧಾರಣ ಪ್ರೀಮಿಯಂ ಅನ್ನು ಪಾವತಿಸಿ.

 • ಆಯ್ಕೆಗೆ ಬಿಟ್ಟ ಅಪ್ಗ್ರೇಡ್‌ಗಳು

  ನಿಮ್ಮ ಕಾರಿಗೆ ಕವರೇಜನ್ನು ಒಳಗೊಳ್ಳಲು ಮತ್ತು ಮಾಲೀಕರು-ಚಾಲಕರಿಗೆ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಸೇರಿಸಲು ಆ್ಯಡ್-ಆನ್‌ಗಳನ್ನು ಖರೀದಿಸಿ ಮತ್ತು ನಿಮ್ಮ ಪಾಲಿಸಿಯನ್ನು ಅಪ್ಗ್ರೇಡ್ ಮಾಡಿ.

 • ಕಾನೂನನ್ನು ಪಾಲಿಸಿ

  ಮೋಟರ್ ವೆಹಿಕಲ್ಸ್ ಕಾಯ್ದೆ 1988 ಅಡಿಯಲ್ಲಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಖರೀದಿಸುವುದು ಕಡ್ಡಾಯವಾಗಿದೆ.

ಅರ್ಹತೆ

ಬಜಾಜ್ ಫಿನ್‌ಸರ್ವ್‌ನ ಲೋನ್‌ಗಳೊಂದಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್‌ಗಳನ್ನು ಗ್ರಾಹಕರು ಸುಲಭವಾಗಿ ಮತ್ತು ಶೀಘ್ರವಾಗಿ ಪಡೆದುಕೊಳ್ಳಬಹುದು. ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆ ಆರಂಭಿಸುವ ಮೊದಲು ಸರಳ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು:


• ನಿಮ್ಮಲ್ಲಿ ಅಧಿಕೃತ ಭಾರತೀಯ ವಾಹನ ಚಾಲನಾ ಪರವಾನಿಗೆ ಇರಬೇಕು.
• ನಿಮ್ಮ ಕಾರು ಕಡ್ಡಾಯವಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ನೋಂದಣಿಯಾಗಿರಬೇಕು.

ನಿರಾಕರಣೆಗಳು

ಥರ್ಡ್ ಪಾರ್ಟಿ ಇನ್ಶೂರೆನ್ಸಿನಲ್ಲಿ ಕೆಲವು ವಿನಾಯಿತಿಗಳಿವೆ, ಅವುಗಳೆಂದರೆ:

• ಅಪಘಾತದಲ್ಲಿ ಅಥವಾ ಕಳವು ಅಥವಾ ಅಗ್ನಿ ಅನಾಹುತದಿಂದಾಗಿ ನಿಮ್ಮ ಸ್ವಂತದ ಕಾರು ಅಥವಾ ವಸ್ತುಗಳಿಗೆ ಹಾನಿ.
• ಇನ್ಶೂರೆನ್ಸ್ ಮಾಡಿದ ಕಾರಿನ ಚಾಲಕ-ಮಾಲೀಕರಿಗೆ ಆಗುವ ಯಾವುದೇ ಗಾಯ ಅಥವಾ ಮರಣ.
• ಚಾಲಕನು ಡ್ರಗ್ಸ್‌ ಅಥವಾ ಮದ್ಯ ಪ್ರಭಾವದಲ್ಲಿದ್ದಾಗ ಉಂಟಾಗುವ ಮೂರನೇ ವ್ಯಕ್ತಿಯ ಹಾನಿ.
• ಅಪಘಾತವನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದ್ದರೆ ಅಥವಾ ಇನ್ಶೂರೆನ್ಸ್ ಮಾಡಲಾದ ಕಾರನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿದ್ದರೆ.
• ಚಾಲಕರು 18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿದ್ದರೆ ಅಥವಾ ಮಾನ್ಯವಾದ ಡ್ರೈವಿಂಗ್ ಲೈಸನ್ಸ್ ಇಲ್ಲದಿದ್ದರೆ ಅಥವಾ ರಸ್ತೆಯ ತಪ್ಪು ಭಾಗದಲ್ಲಿ ಚಲಾಯಿಸುತ್ತಿದ್ದರೆ.