ನಿಮ್ಮ ಮ್ಯಾಂಡೇಟ್ ನಿರ್ವಹಿಸುವ ಪ್ರಯೋಜನಗಳು
ನೀವು ನಮ್ಮಿಂದ ಯಾವುದೇ ಲೋನ್ ತೆಗೆದುಕೊಳ್ಳುವಾಗ, ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಿ, ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್ (ಎಸ್‌ಡಿಪಿ) ನಲ್ಲಿ ಹೂಡಿಕೆ ಮಾಡಿ ಅಥವಾ ನಮ್ಮ ಯಾವುದೇ ಪ್ರಾಡಕ್ಟ್‌ಗಳನ್ನು ಪಡೆಯಿರಿ, ನಿಮ್ಮ ಇಎಂಐ ಗಳು ಅಥವಾ ಮಾಸಿಕ ಹೂಡಿಕೆಗಳನ್ನು ಸಮಯಕ್ಕೆ ಸರಿಯಾಗಿ ಡೆಬಿಟ್ ಮಾಡಲಾಗುವುದನ್ನು ಖಚಿತಪಡಿಸಿಕೊಳ್ಳಲು ನೀವು ಬ್ಯಾಂಕ್ ಅಕೌಂಟನ್ನು ನೋಂದಾಯಿಸಬೇಕು. ಈ ಪ್ರಕ್ರಿಯೆಯನ್ನು ಮ್ಯಾಂಡೇಟ್ ನೋಂದಣಿ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಮ್ಯಾಂಡೇಟ್ ನಿಮ್ಮ ಬ್ಯಾಂಕಿಗೆ ನೀಡಲಾದ ಸರಳ ಇನ್‌ಸ್ಟ್ರಕ್ಷನ್ ಆಗಿದ್ದು, ಇದು ನಿಮ್ಮ ಇಎಂಐ ಅಥವಾ ಮಾಸಿಕ ಹೂಡಿಕೆಗಳನ್ನು ಪೂರ್ವ-ನಿಗದಿತ ದಿನಾಂಕದಂದು ನಿಮ್ಮ ಅಕೌಂಟಿನಿಂದ ಡೆಬಿಟ್ ಮಾಡಲು ನಮಗೆ ಅನುಮತಿ ನೀಡುತ್ತದೆ.
ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಲೋನ್ ಮತ್ತು ಎಸ್‌ಡಿಪಿ ಗಳನ್ನು ನೀವು ಸುಲಭವಾಗಿ ಮ್ಯಾಂಡೇಟ್ ಅನ್ನು ನಿರ್ವಹಿಸಬಹುದು.
ನಿಮ್ಮ ಮ್ಯಾಂಡೇಟ್ ಅನ್ನು ಅಪ್ಡೇಟ್ ಮಾಡುವ ಪ್ರಯೋಜನಗಳು ಇಲ್ಲಿವೆ:
-
ಸಮಯಕ್ಕೆ ಸರಿಯಾದ ಇಎಂಐ ಪಾವತಿ
ಗಡುವು ದಿನಾಂಕದಂದು ನಿಮ್ಮ ಮಾಸಿಕ ಲೋನ್ ಕಂತುಗಳ ತೊಂದರೆ ರಹಿತ ಡೆಬಿಟ್.
-
ನಿಮ್ಮ ಸಿಬಿಲ್ ಸ್ಕೋರನ್ನು ಚನ್ನಾಗಿಟ್ಟುಕೊಳ್ಳಿ
ಸಮಯಕ್ಕೆ ಸರಿಯಾಗಿ ನಿಮ್ಮ ಇಎಂಐಗಳನ್ನು ಪಾವತಿಸುವುದರಿಂದ ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.
-
ಎಸ್‌ಡಿಪಿಯ ತೊಂದರೆ ರಹಿತ ಪಾವತಿ
ನಿಮ್ಮ ಎಸ್‌ಡಿಪಿ ಮೊತ್ತವನ್ನು ಮಿಸ್ ಮಾಡದೆ ಡೆಬಿಟ್ ಮಾಡಲಾಗುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಇ-ಮ್ಯಾಂಡೇಟ್ ಅಪ್ಡೇಟ್ ಮಾಡಿ.
-
ನಿಮ್ಮ ಲೋನ್ ಅರ್ಹತೆಯನ್ನು ಸುಧಾರಿಸುತ್ತದೆ
ಸಮಯಕ್ಕೆ ಸರಿಯಾಗಿ ಇಎಂಐಗಳ ಪಾವತಿಯು ನಿಮ್ಮ ಸಿಬಿಲ್ ಸ್ಕೋರನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಉತ್ತಮ ಆಫರ್‌ಗಳನ್ನು ಒದಗಿಸುತ್ತದೆ.
-
ಬೌನ್ಸ್ ಶುಲ್ಕಗಳನ್ನು ತಪ್ಪಿಸಿ
ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸುವುದರಿಂದ ಗಡುವು ಮೀರಿದ ಕಂತುಗಳ ಸಂದರ್ಭದಲ್ಲಿ ಅನ್ವಯವಾಗುವ ದಂಡ ಶುಲ್ಕಗಳನ್ನು ಪಾವತಿಸುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ.
ನಿಮ್ಮ ಇ-ಮ್ಯಾಂಡೇಟ್ ನೋಂದಣಿ ಮಾಡಿ
ನೀವು ನಮ್ಮಿಂದ ಲೋನ್ ಪಡೆದಾಗ, ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಮ್ಯಾಂಡೇಟ್ ನೋಂದಣಿಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ನೀವು ಹಂಚಿಕೊಳ್ಳುತ್ತೀರಿ. ಎಸ್‌ಡಿಪಿ ತೆರೆಯುವಾಗ, ಹಣವನ್ನು ಹೂಡಿಕೆ ಮಾಡಲು ನೀವು ಬ್ಯಾಂಕ್ ಅಕೌಂಟನ್ನು ಬಳಸುತ್ತೀರಿ, ಇದು ನಿಮ್ಮ ಮಾಸಿಕ ಹೂಡಿಕೆಗಾಗಿ ನಿಮ್ಮ ನೋಂದಾಯಿತ ಬ್ಯಾಂಕ್ ಅಕೌಂಟ್ ಆಗುತ್ತದೆ.
ಆದಾಗ್ಯೂ, ನೀವು ನಮ್ಮ ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಿದಾಗ, ಅದನ್ನು ಆ್ಯಕ್ಟಿವೇಟ್ ಮಾಡಲು ನೀವು ನಿಮ್ಮ ಇ-ಮ್ಯಾಂಡೇಟ್ ನೋಂದಣಿ ಮಾಡಬೇಕು. ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಮ್ಯಾಂಡೇಟ್ ನೋಂದಣಿ ಮಾಡಬಹುದು.
-
ನಿಮ್ಮ ಇ-ಮ್ಯಾಂಡೇಟ್ ನೋಂದಣಿ ಮಾಡಲು ಹಂತವಾರು ಮಾರ್ಗದರ್ಶಿ
ಮೈ ಅಕೌಂಟಿನಲ್ಲಿ ನಿಮ್ಮ ಮ್ಯಾಂಡೇಟ್ ನೋಂದಣಿ ಮಾಡಲು ನೀವು ಈ ಸರಳ ಹಂತಗಳನ್ನು ಅನುಸರಿಸಬಹುದು
- ನಮ್ಮ ಗ್ರಾಹಕ ಪೋರ್ಟಲ್‌ಗೆ ಹೋಗಲು ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸೈನ್-ಇನ್ ಮಾಡಲು ಒಟಿಪಿ ಸಲ್ಲಿಸಿ.
- 'ನನ್ನ ಸಂಬಂಧಗಳು' ವಿಭಾಗದಿಂದ ನೀವು ಮ್ಯಾಂಡೇಟ್ ನೋಂದಣಿ ಮಾಡಲು ಬಯಸುವ ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಆಯ್ಕೆಮಾಡಿ.
- 'ಈಗಲೇ ನೋಂದಣಿ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಮ್ಯಾಂಡೇಟ್ ನೋಂದಣಿಯೊಂದಿಗೆ ಮುಂದುವರೆಯಿರಿ.
- ನಿಮ್ಮ ಬ್ಯಾಂಕ್ ವಿವರಗಳು, ಐಎಫ್‌ಎಸ್‌ಸಿ ಮತ್ತು ಇತರ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಇ-ಮ್ಯಾಂಡೇಟ್ ಪೂರ್ಣಗೊಳಿಸಿ.
ಪರ್ಯಾಯವಾಗಿ, ಈ ಕೆಳಗಿನ 'ನಿಮ್ಮ ಇ-ಮ್ಯಾಂಡೇಟ್ ನೋಂದಣಿ ಮಾಡಿ' ಆಯ್ಕೆಯ ಮೇಲೆ ಕೂಡ ನೀವು ಕ್ಲಿಕ್ ಮಾಡಬಹುದು. ಮೈ ಅಕೌಂಟಿಗೆ ಸೈನ್-ಇನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಸೈನ್-ಇನ್ ಮಾಡಿದ ನಂತರ, ನೀವು 'ನನ್ನ ಸಂಬಂಧಗಳು' ವಿಭಾಗದಿಂದ ನಿಮ್ಮ ಇನ್ಸ್ಟಾ ಇಎಂಐ ಕಾರ್ಡನ್ನು ಆಯ್ಕೆ ಮಾಡಬಹುದು. ಈಗ, 'ಈಗಲೇ ನೋಂದಣಿ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಮ್ಯಾಂಡೇಟ್ ನೋಂದಣಿಯೊಂದಿಗೆ ಮುಂದುವರೆಯಿರಿ. -
ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ, ನಿಮ್ಮ ಲೋನ್, ಇನ್ಸ್ಟಾ ಇಎಂಐ ಕಾರ್ಡ್ ಅಥವಾ ಎಸ್‌ಡಿಪಿಯ ಎನ್‌ಎಸಿಎಚ್ ಮ್ಯಾಂಡೇಟ್ ಅನ್ನು ಕೂಡ ನೀವು ಅಪ್ಡೇಟ್ ಮಾಡಬಹುದು. ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ, ನಿಮ್ಮ ಲೋನ್, ಇನ್ಸ್ಟಾ ಇಎಂಐ ಕಾರ್ಡ್ ಅಥವಾ ಎಸ್‌ಡಿಪಿಯ ಮ್ಯಾಂಡೇಟ್ ಅನ್ನು ಕೂಡ ನೀವು ಅಪ್ಡೇಟ್ ಮಾಡಬಹುದು.
-
ನಿಮ್ಮ ಪ್ರಾಡಕ್ಟ್‌ಗಾಗಿ ಮ್ಯಾಂಡೇಟ್ ಪರಿಶೀಲಿಸಿ
ಲೋನ್‌ಗಳು, ಕಾರ್ಡ್‌ಗಳು ಅಥವಾ ಎಸ್‌ಡಿಪಿ ಗಾಗಿ ಮ್ಯಾಂಡೇಟ್ ವಿವರಗಳನ್ನು ನೋಡಲು ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಿ.
ನಿಮ್ಮ ಇ-ಮ್ಯಾಂಡೇಟ್ ಅನ್ನು ಬದಲಾಯಿಸುವುದು ಹೇಗೆ

ಲೋನ್‌ಗಳು, ಎಸ್‌ಡಿಪಿಗಳು ಮತ್ತು ಇನ್ನೂ ಹೆಚ್ಚಿನವುಗಳಿಗೆ ನಿಮ್ಮ ಮ್ಯಾಂಡೇಟ್ ಬದಲಾಯಿಸಿ
ನಿಮ್ಮ ಇಎಂಐ ಗಳು ಅಥವಾ ಮಾಸಿಕ ಎಸ್‌ಡಿಪಿ ಹೂಡಿಕೆಗಳನ್ನು ಸಮಯಕ್ಕೆ ಸರಿಯಾಗಿ ಡೆಬಿಟ್ ಮಾಡಲು ನೀವು ನಿಮ್ಮ ನೋಂದಾಯಿತ ಬ್ಯಾಂಕ್ ಅಕೌಂಟನ್ನು ಅಪ್ಡೇಟ್ ಮಾಡಬಹುದು ಮತ್ತು ನಿಮ್ಮ ಯಾವುದೇ ಕಂತುಗಳನ್ನು ನೀವು ತಪ್ಪಿಸಿಕೊಳ್ಳುವುದಿಲ್ಲ.
-
ಮೈ ಅಕೌಂಟಿನಲ್ಲಿ ನಿಮ್ಮ ಮ್ಯಾಂಡೇಟ್ ಅಪ್ಡೇಟ್ ಮಾಡಿ
- ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸೈನ್-ಇನ್ ಮಾಡಲು ಒಟಿಪಿ ಸಲ್ಲಿಸಿ.
- ನೀವು ನಿಮ್ಮ ಮ್ಯಾಂಡೇಟ್ ಅಪ್ಡೇಟ್ ಮಾಡಲು ಬಯಸುವ ಅನ್ವಯವಾಗುವ ಪ್ರಾಡಕ್ಟ್ ಅನ್ನು ಆಯ್ಕೆಮಾಡಿ.
- ಅಕೌಂಟ್ ಹೋಲ್ಡರ್ ಹೆಸರು, ಬ್ಯಾಂಕ್ ಹೆಸರು ಮತ್ತು ಐಎಫ್‌ಎಸ್‌ಸಿ ನಂತಹ ವಿವರಗಳನ್ನು ನಮೂದಿಸಿ.
- ನೋಂದಣಿಯ ಪ್ರಕ್ರಿಯೆಯನ್ನು ಆಯ್ಕೆಮಾಡಿ ಮತ್ತು ಮುಂದುವರೆಯಿರಿ.
ಪರ್ಯಾಯವಾಗಿ, ನಿಮ್ಮ ಮ್ಯಾಂಡೇಟ್ ಬದಲಾಯಿಸಲು ನೀವು ಕೆಳಗೆ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.
ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ಎಲ್ಲವನ್ನೂ ತಿಳಿಯಿರಿ
ನೀವು ನಿಮ್ಮ ಲೋನ್ ಅಥವಾ ಇನ್ಸ್ಟಾ ಇಎಂಐ ಕಾರ್ಡಿಗೆ ಹೊಸ ಮ್ಯಾಂಡೇಟ್ ನೋಂದಾಯಿಸಿದಾಗ, ಮ್ಯಾಂಡೇಟ್ ನೋಂದಣಿ ಶುಲ್ಕ ಎಂದು ಕರೆಯಲ್ಪಡುವ ಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ.
ನೀವು ನಿಮ್ಮ ಪ್ರಸ್ತುತ ಮ್ಯಾಂಡೇಟ್ ಅಪ್ಡೇಟ್ ಮಾಡಲು ಬಯಸಿದರೆ, ನೀವು ಸಾಮಾನ್ಯವಾಗಿ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಅದನ್ನು ಮಾಡಬಹುದು. ಆದಾಗ್ಯೂ, ಇದು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗಬಹುದು, ಒಂದು ವೇಳೆ ನಿಮ್ಮ ಬ್ಯಾಂಕಿಗೆ ಮ್ಯಾಂಡೇಟ್ ನೋಂದಣಿ ಶುಲ್ಕವನ್ನು ಪಾವತಿಸಬೇಕಾದರೆ, ನಿಮ್ಮನ್ನು ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಕೇಳಬಹುದು.
ಫೀಸ್ ಮತ್ತು ಶುಲ್ಕಗಳ ಸಂಪೂರ್ಣ ಪಟ್ಟಿಯ ಬಗ್ಗೆ ತಿಳಿದುಕೊಳ್ಳಲು ನೀವು ನಮ್ಮ ವೆಬ್‌ಸೈಟ್, ಆ್ಯಪ್ ಅಥವಾ ಲೋನ್ ಒಪ್ಪಂದವನ್ನು ಪರಿಶೀಲಿಸಬಹುದು.
ಫೀಸ್ ಮತ್ತು ಶುಲ್ಕಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ
-
ಮ್ಯಾಂಡೇಟ್ ನೋಂದಣಿ ಶುಲ್ಕ
ನೀವು ಯಾವುದೇ ಲೋನ್ ಪಡೆದಾಗ ಅಥವಾ ನಮ್ಮ ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಿದಾಗ, ನೀವು ಮ್ಯಾಂಡೇಟ್ ನೋಂದಣಿ ಮಾಡಬೇಕು. ಮ್ಯಾಂಡೇಟ್ ನೋಂದಣಿ ಮಾಡಲು, ನಿಮ್ಮ ಬ್ಯಾಂಕ್ ಒಂದು ಬಾರಿಯ ಶುಲ್ಕವನ್ನು ವಿಧಿಸುತ್ತದೆ, ಇದನ್ನು ಮ್ಯಾಂಡೇಟ್ ನೋಂದಣಿ ಶುಲ್ಕ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಶುಲ್ಕಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರಬಹುದು.
-
ಮ್ಯಾಂಡೇಟ್ ತಿರಸ್ಕಾರ ಶುಲ್ಕಗಳು
ನೀವು ಮ್ಯಾಂಡೇಟ್‌ಗಾಗಿ ನೋಂದಣಿ ಮಾಡಿದಾಗ ಮತ್ತು ಪ್ರಕ್ರಿಯೆಯ ಸಮಯದಲ್ಲಿ, ನಿಮ್ಮ ಬ್ಯಾಂಕ್ ಅದನ್ನು ತಿರಸ್ಕರಿಸಿದರೆ, ನಿಮ್ಮನ್ನು ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಕೇಳಬಹುದು, ಇದನ್ನು ಮ್ಯಾಂಡೇಟ್ ತಿರಸ್ಕಾರ ಶುಲ್ಕ ಎಂದು ಕರೆಯಲಾಗುತ್ತದೆ.
ಆಗಾಗ ಕೇಳುವ ಪ್ರಶ್ನೆಗಳು
ಒಂದೇ ಲೋನ್ ಅಥವಾ ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್ (ಎಸ್‌ಡಿಪಿ) ಗಾಗಿ, ನೀವು ಮ್ಯಾಂಡೇಟ್ ಆಗಿ ಒಂದು ಬ್ಯಾಂಕ್ ಅಕೌಂಟನ್ನು ಮಾತ್ರ ನೋಂದಣಿ ಮಾಡಬಹುದು. ಆದಾಗ್ಯೂ, ನೀವು ಅನೇಕ ಲೋನ್‌ಗಳು ಮತ್ತು ಎಸ್‌ಡಿಪಿ ಗಳಿಗಾಗಿ ಒಂದೇ ಬ್ಯಾಂಕ್ ಅಕೌಂಟನ್ನು ಬಳಸಬಹುದು, ಆದರೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಸಾಕಷ್ಟು ಬ್ಯಾಲೆನ್ಸ್ ನಿರ್ವಹಿಸುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
ನೀವು ಯಾವುದೇ ಸಮಯದಲ್ಲಿ ನಿಮ್ಮ ಮ್ಯಾಂಡೇಟ್ ಅನ್ನು ಬದಲಾಯಿಸಬಹುದು, ಮತ್ತು ಪ್ರತಿ ಲೋನ್ ಅಕೌಂಟಿಗೆ ನೀವು ಪ್ರತ್ಯೇಕ ಮರುಪಾವತಿ ಬ್ಯಾಂಕ್ ಅಕೌಂಟನ್ನು ಸೆಟಪ್ ಮಾಡಬಹುದು.
ಇ-ಮ್ಯಾಂಡೇಟ್ ನೋಂದಣಿಯು ಕಷ್ಟಕರ ಸೇವೆಯಲ್ಲದಿದ್ದರೂ, ಕೆಲವೊಮ್ಮೆ, ನಿಮ್ಮ ಬ್ಯಾಂಕ್ ಮ್ಯಾಂಡೇಟ್ ವಿವರಗಳನ್ನು ಪರಿಶೀಲಿಸಬೇಕಾದ ಕಾರಣ ವಿಳಂಬಗಳು ಉಂಟಾಗಬಹುದು. ಸಾಮಾನ್ಯವಾಗಿ, ಇದು 72 ಕೆಲಸದ ಗಂಟೆಗಳವರೆಗಿನ ಸಮಯವನ್ನು ತೆಗೆದುಕೊಳ್ಳಬಹುದು. ನಿಮ್ಮ ಮ್ಯಾಂಡೇಟ್ ಅನುಮೋದನೆಗೊಂಡ ನಂತರ ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಎಸ್‌ಎಂಎಸ್ ಕಳುಹಿಸಲಾಗುತ್ತದೆ.
ಒಂದು ವೇಳೆ ನೀವು ನಿಮ್ಮ ಇ-ಮ್ಯಾಂಡೇಟ್ ನೋಂದಣಿ ಮಾಡಲು ಪ್ರಯತ್ನಿಸುತ್ತಿದ್ದರೆ, ಟೋಕನ್ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿನಿಂದ ಡೆಬಿಟ್ ಮಾಡಲಾಗುತ್ತದೆ.
ಆದಾಗ್ಯೂ, ನೀವು ಇನ್ನೂ ವಿಚಾರಣೆಯನ್ನು ಹೊಂದಿದ್ದರೆ, ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ನಮ್ಮೊಂದಿಗೆ ಕೋರಿಕೆಯನ್ನು ಸಲ್ಲಿಸಬಹುದು:
- ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಈ ಕೆಳಗಿನ 'ಕೋರಿಕೆಯನ್ನು ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಒಟಿಪಿ ಸಲ್ಲಿಸಿ.
- ನೀವು ವಿಚಾರಣೆಯನ್ನು ಸಲ್ಲಿಸಲು ಬಯಸುವ ಪ್ರಾಡಕ್ಟ್ ಆಯ್ಕೆಮಾಡಿ.
- ಸಂಬಂಧಿತ 'ವಿಚಾರಣೆ ಪ್ರಕಾರ' ಮತ್ತು 'ಉಪ-ವಿಚಾರಣೆ ಪ್ರಕಾರ' ನಮೂದಿಸಿ’.
- ಅಗತ್ಯವಿದ್ದರೆ ಬೆಂಬಲಿತ ಡಾಕ್ಯುಮೆಂಟನ್ನು ಅಪ್ಲೋಡ್ ಮಾಡಿ ಮತ್ತು ಕೋರಿಕೆಯನ್ನು ಸಲ್ಲಿಸಿ.
ನೀವು ನಿಮ್ಮ ಕೋರಿಕೆಯನ್ನು ಸಲ್ಲಿಸಿದ ನಂತರ, ಮುಂದಿನ ಹಂತಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲು ಪ್ರತಿನಿಧಿ 48 ಕೆಲಸದ ಗಂಟೆಗಳ ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ.
ಒಮ್ಮೆ ನೀವು ನಿರ್ದಿಷ್ಟ ಲೋನ್ ಇಎಂಐ ಅಥವಾ ಎಸ್‌ಡಿಪಿಯ ಆಟೋ-ಡೆಬಿಟ್‌ಗಾಗಿ ಬ್ಯಾಂಕ್ ಅಕೌಂಟ್ ವಿವರಗಳನ್ನು ಅಪ್ಡೇಟ್ ಮಾಡಿದ ನಂತರ, ಆ ಅಕೌಂಟಿನ ಹಳೆಯ ಮ್ಯಾಂಡೇಟ್ ರದ್ದುಗೊಳ್ಳುತ್ತದೆ ಮತ್ತು ಹೊಸದನ್ನು ನಮ್ಮ ದಾಖಲೆಗಳಲ್ಲಿ ಅಪ್ಡೇಟ್ ಮಾಡಲಾಗುತ್ತದೆ.
ದಯವಿಟ್ಟು ಗಮನಿಸಿ: ನಿಮ್ಮ ಮ್ಯಾಂಡೇಟ್ ಅನ್ನು ಯಶಸ್ವಿಯಾಗಿ ಬದಲಾಯಿಸುವ ಮತ್ತು ನೋಂದಾಯಿಸುವವರೆಗೆ, ನಿಮ್ಮ ಇಎಂಐ/ಹೂಡಿಕೆಯು ನಿಮ್ಮ ಹಳೆಯ ಬ್ಯಾಂಕ್ ಅಕೌಂಟಿನಿಂದ ಡೆಬಿಟ್ ಮಾಡುವುದನ್ನು ಮುಂದುವರೆಸುತ್ತದೆ.
ನಿಮ್ಮ ಮ್ಯಾಂಡೇಟ್ ತಿರಸ್ಕೃತವಾದರೆ, ನೀವು ನಮ್ಮ ಪ್ರತಿನಿಧಿಯಿಂದ 24 ಕೆಲಸದ ಗಂಟೆಗಳ ಒಳಗೆ ಕರೆಯನ್ನು ಸ್ವೀಕರಿಸುತ್ತೀರಿ, ಮತ್ತು ನಿಮ್ಮ ಮ್ಯಾಂಡೇಟ್ ನೋಂದಣಿಯ ವಿವರಗಳನ್ನು ಮರುಸಲ್ಲಿಸಲು ಅವರು ನಿಮಗೆ ಸಹಾಯ ಮಾಡುತ್ತಾರೆ. ಬೇರೆ ಬ್ಯಾಂಕ್ ಅಕೌಂಟ್ ಬಳಸಿಕೊಂಡು ಕೂಡ ನೀವು ನಿಮ್ಮ ಮ್ಯಾಂಡೇಟ್ ನೋಂದಣಿ ಮಾಡಲು ಪ್ರಯತ್ನಿಸಬಹುದು.
ಆದಾಗ್ಯೂ, ಕ್ಯಾನ್ಸಲ್ಡ್ ಚೆಕ್‌ನೊಂದಿಗೆ ನೀವು ನಿಮ್ಮ ಹತ್ತಿರದ ನಮ್ಮ ಬ್ರಾಂಚ್‌ಗೆ ಕೂಡ ಭೇಟಿ ನೀಡಬಹುದು ಮತ್ತು ಮುಂದಿನ ಹಂತಗಳ ಬಗ್ಗೆ ನಮ್ಮ ಪ್ರತಿನಿಧಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ.