2 ನಿಮಿಷದ ಓದು
25 ಮೇ 2021

ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಆರಂಭಿಸಲು, ನೀವು ಸ್ಟಾಕ್‌ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಬೇಕು. ಡಿಮ್ಯಾಟ್ ಅಕೌಂಟ್ ತೆರೆದ ನಂತರ, ನಿಮ್ಮ ಬ್ಯಾಂಕ್ ಅಕೌಂಟಿಗೆ ಲಾಗಿನ್ ಮಾಡುವ ಮೂಲಕ ನೀವು ಹಣವನ್ನು ಸೇರಿಸಬಹುದು. ಅತ್ಯುತ್ತಮ ಶೇರ್ ಟ್ರೇಡಿಂಗ್ ವೇದಿಕೆಯು ಸ್ಟಾಕ್ ಬೆಲೆಗಳು, ಐತಿಹಾಸಿಕ ಡೇಟಾ, ಚಾರ್ಟ್‌ಗಳನ್ನು ನೋಡಲು ಮತ್ತು ಭಾರತದಲ್ಲಿ ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಭಾರತದಲ್ಲಿ ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಹೇಗೆ ಆರಂಭಿಸುವುದು ಎಂಬುದರ ಹಂತಗಳನ್ನು ಕೆಳಗೆ ವಿವರಿಸಲಾಗಿದೆ:

ಭಾರತದಲ್ಲಿ ಆನ್ಲೈನ್ ಟ್ರೇಡಿಂಗ್ ಆರಂಭಿಸಲು ನಾಲ್ಕು ಹಂತಗಳು

1. ಸ್ಟಾಕ್‌ಬ್ರೋಕರ್ ಹುಡುಕಿ

ಮೊದಲ ಹಂತವಾಗಿ ನೀವು ಆನ್ಲೈನ್ ಸ್ಟಾಕ್‌ಬ್ರೋಕರ್ ಅನ್ನು ಹುಡುಕಬೇಕು. ಅವರು ನಿಮಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯುವ ಸೌಲಭ್ಯವನ್ನು ಒದಗಿಸುತ್ತಾರೆ. ಟ್ರೇಡಿಂಗ್ ಅಕೌಂಟ್ ಸ್ಟಾಕ್ ಮಾರುಕಟ್ಟೆಯಲ್ಲಿ ಖರೀದಿ ಅಥವಾ ಮಾರಾಟದ ಆರ್ಡರ್ ಮಾಡಲು ನಿಮಗೆ ಸಹಾಯ ಮಾಡುತ್ತದೆ, ಹಾಗೆಯೇ ಡಿಮ್ಯಾಟ್ ಅಕೌಂಟ್ ನೀವು ಖರೀದಿಸುವ ಷೇರುಗಳನ್ನು ಡಿಜಿಟಲ್ ಫಾರ್ಮ್ಯಾಟ್‌ನಲ್ಲಿ ಸ್ಟೋರ್ ಮಾಡುತ್ತದೆ.

ಹೆಚ್ಚುವರಿ ಓದು: ಡಿಮ್ಯಾಟ್ ಅಕೌಂಟ್ ತೆರೆಯುವುದು ಹೇಗೆ?

ಸ್ಟಾಕ್‌ಬ್ರೋಕರ್ ಅನ್ನು ಆಯ್ಕೆ ಮಾಡುವಾಗ, ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯುವ ಶುಲ್ಕಗಳು ಮತ್ತು ಡಿಮ್ಯಾಟ್ ವಾರ್ಷಿಕ ನಿರ್ವಹಣಾ ಶುಲ್ಕಗಳನ್ನು (ಎಎಂಸಿ) ಪರಿಶೀಲಿಸಿ. ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್ ಅದರ ಫ್ರೀಡಂ ಪ್ಯಾಕ್ ಮೂಲಕ 1ನೇ ವರ್ಷಕ್ಕೆ ಶೂನ್ಯ ಅಕೌಂಟ್ ತೆರೆಯುವ ಶುಲ್ಕಗಳು ಮತ್ತು ಶೂನ್ಯ ಎಎಂಸಿಯೊಂದಿಗೆ ಉಚಿತ* ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯುವ ಆಯ್ಕೆಯನ್ನು ನಿಮಗೆ ಒದಗಿಸುತ್ತದೆ (ಎರಡನೇ ವರ್ಷದಿಂದ ರೂ. 365+ಜಿಎಸ್‌ಟಿ ಎಎಂಸಿ ಅನ್ವಯವಾಗುತ್ತದೆ).

ಮುಂದೆ, ನೀವು ಬ್ರೋಕರೇಜ್ ಶುಲ್ಕಗಳನ್ನು ಪರಿಶೀಲಿಸಬೇಕು. ಸ್ಟಾಕ್ ಮಾರುಕಟ್ಟೆಯಲ್ಲಿ ಮಾಡಲಾದ ಆರ್ಡರ್ ಕಾರ್ಯಗತಗೊಳ್ಳುವಾಗ ಬ್ರೋಕರ್ ನಿಮಗೆ ಬ್ರೋಕರೇಜ್ ಶುಲ್ಕವನ್ನು ವಿಧಿಸುತ್ತಾರೆ. ಈ ಶುಲ್ಕವು ನಿಮ್ಮ ಆರ್ಡರ್‌ನ ಟ್ರೇಡಿಂಗ್ ಪ್ರಮಾಣವನ್ನು ಅವಲಂಬಿಸಿರುತ್ತದೆ, ಅಥವಾ ಟ್ರೇಡಿಂಗ್ ಪ್ರಮಾಣವನ್ನು ಹೊರತುಪಡಿಸಿ ಇದು ಪ್ರತಿ ಟ್ರೇಡ್‌ಗೆ ವಿಧಿಸುವ ಫ್ಲಾಟ್ ಶುಲ್ಕವಾಗಿರಬಹುದು. ಸಾಂಪ್ರದಾಯಿಕ ಬ್ರೋಕರ್‌ಗಳು ವ್ಯಾಪಾರ ಪ್ರಮಾಣಕ್ಕೆ ಶೇಕಡಾವಾರು-ಆಧಾರಿತ ಬ್ರೋಕರೇಜ್ ಅನುಪಾತವನ್ನು ವಿಧಿಸುತ್ತಾರೆ. ನೀವು ಹೆಚ್ಚು ಹೆಚ್ಚು ಟ್ರೇಡ್ ಮಾಡಿದರೆ ಬ್ರೋಕರೇಜ್ ವೆಚ್ಚಗಳು ಹೆಚ್ಚುತ್ತವೆ. ಪ್ರತಿ ಆರ್ಡರ್‌ನ ಫ್ಲಾಟ್ ಶುಲ್ಕದೊಂದಿಗೆ, ಬ್ರೋಕರೇಜ್ ವೆಚ್ಚಗಳ ಮೇಲೆ ನೀವು ಗಮನಾರ್ಹವಾಗಿ ಉಳಿತಾಯ ಮಾಡಬಹುದು. ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಗಳು ಪ್ರತಿ ಟ್ರೇಡಿಗೆ ಫ್ಲಾಟ್ ಶುಲ್ಕವನ್ನು ಒದಗಿಸುತ್ತಿದ್ದು, ಇದರಿಂದ ಬ್ರೋಕರೇಜ್ ಶುಲ್ಕಗಳ ಮೇಲೆ ನೀವು ಸಾಕಷ್ಟು ಉಳಿಸಬಹುದು.

ಹೆಚ್ಚುವರಿ ಓದು: ಡಿಮ್ಯಾಟ್ ಅಕೌಂಟ್ ಮತ್ತು ಟ್ರೇಡಿಂಗ್ ಅಕೌಂಟ್ ನಡುವಿನ ವ್ಯತ್ಯಾಸ

2. ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟನ್ನು ತೆರೆಯಿರಿ

ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಲು, ನೀವು ಬ್ರೋಕರ್‌ನೊಂದಿಗೆ ಆನ್ಲೈನ್ ಅಕೌಂಟ್ ತೆರೆಯುವ ಫಾರ್ಮ್ ಭರ್ತಿ ಮಾಡಬೇಕು. ಫಾರ್ಮ್ ಭರ್ತಿ ಮಾಡುವ ಪ್ರಕ್ರಿಯೆಯು ಸುಲಭವಾಗಿದೆ ಮತ್ತು ನೀವು ಅದನ್ನು 15 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದು. ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಗಳೊಂದಿಗೆ, ನೀವು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅಕೌಂಟ್ ತೆರೆಯಬಹುದು:

  1. ಅಕೌಂಟ್ ತೆರೆಯುವ ಫಾರ್ಮ್‌ ಲಿಂಕ್ ಗೆ ಭೇಟಿ ನೀಡಿ.
  2. ಹೆಸರು, ಇಮೇಲ್ ಐಡಿ, ಪ್ಯಾನ್ ನಂಬರ್, ಹುಟ್ಟಿದ ದಿನಾಂಕ ಮುಂತಾದ ನಿಮ್ಮ ಮೂಲಭೂತ ವಿವರಗಳನ್ನು ನಮೂದಿಸಿ.
  3. ನಿಮ್ಮ ವಿಳಾಸ ಮತ್ತು ಬ್ಯಾಂಕ್ ವಿವರಗಳನ್ನು ಒದಗಿಸಿ.
  4. ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
  5. ದಯವಿಟ್ಟು ನಮ್ಮ ಕೈಗೆಟುಕುವ ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳಿಂದ ಆಯ್ಕೆಮಾಡಿ. ನೀವು ಉಚಿತ* ಅಕೌಂಟ್ ತೆರೆಯಲು ಬಯಸಿದರೆ, ನೀವು ಫ್ರೀಡಂ ಪ್ಲಾನ್ ಆಯ್ಕೆ ಮಾಡಬಹುದು.
  6. ನಿಮ್ಮ ಸಣ್ಣ ವಿಡಿಯೋವನ್ನು ರೆಕಾರ್ಡ್ ಮಾಡುವ ಮೂಲಕ ಮತ್ತು ಅದನ್ನು ಸಲ್ಲಿಸುವ ಮೂಲಕ ಸ್ವಯಂ-ಪರಿಶೀಲನೆಯನ್ನು ಮಾಡಿ.
  7. ನಿಮ್ಮ ಆಧಾರ್ ಲಿಂಕ್ ಆದ ಮೊಬೈಲ್ ನಂಬರ್‌ಗೆ ಕಳುಹಿಸಲಾದ ಒಟಿಪಿ ಮೂಲಕ ನಿಮ್ಮ ಫಾರ್ಮ್ ಅನ್ನು ಇ-ಸೈನ್ ಮಾಡಿ.
  8. ಅಪ್ಲಿಕೇಶನ್ ಸಲ್ಲಿಸಿ, ಮತ್ತು ಸ್ವಲ್ಪ ಸಮಯದಲ್ಲಿಯೇ ನಿಮ್ಮ ಅಕೌಂಟ್ ತೆರೆಯುವಿಕೆ ಮತ್ತು ಲಾಗಿನ್ ಕ್ರೆಡೆನ್ಶಿಯಲ್‌ಗಳಿಗೆ ಸಂಬಂಧಿಸಿದಂತೆ ನೀವು ದೃಢೀಕರಣವನ್ನು ಪಡೆಯುತ್ತೀರಿ.

ಹೆಚ್ಚುವರಿ ಓದುಭಾರತದಲ್ಲಿ ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಅಕೌಂಟ್ ತೆರೆಯುವುದು ಹೇಗೆ

3. ನಿಮ್ಮ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್‌ಗೆ ಲಾಗಿನ್ ಮಾಡಿ ಮತ್ತು ಹಣ ಸೇರಿಸಿ

ನಿಮ್ಮ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಲಾಗಿನ್ ಮತ್ತು ಪಾಸ್ವರ್ಡ್ ಹೊಂದಿದ ನಂತರ, ನೀವು ನಿಮ್ಮ ಅಕೌಂಟ್‌ಗೆ ಲಾಗಿನ್ ಆಗಬಹುದು ಮತ್ತು ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಅನ್ನು ಅನ್ವೇಷಿಸಬಹುದು ನೀವು ನಮ್ಮೊಂದಿಗೆ ಸೈನ್ ಅಪ್ ಮಾಡಿದ್ದರೆ, ತಡೆರಹಿತ ಟ್ರೇಡಿಂಗ್ ಅನುಭವಕ್ಕಾಗಿ ನಮ್ಮ ಮೊಬೈಲ್ ಟ್ರೇಡಿಂಗ್ ಆ್ಯಪ್ ಡೌನ್ಲೋಡ್ ಮಾಡಬಹುದು.

ಈಗ ನಿಮ್ಮ ಅಕೌಂಟ್ ರಚನೆಯಾಗಿದ್ದರೆ, ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ನಿಮ್ಮ ಟ್ರೇಡಿಂಗ್ ಅಕೌಂಟ್‌ಗೆ ನೀವು ಹಣವನ್ನು ಸೇರಿಸಬಹುದು. ನಿಮ್ಮ ಟ್ರೇಡಿಂಗ್ ಅಕೌಂಟ್‌ನಿಂದಲೂ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ನೀವು ಹಣವನ್ನು ಟ್ರಾನ್ಸ್‌ಫರ್ ಮಾಡಬಹುದು ಎಂಬುದನ್ನು ಗಮನಿಸಿ.

4. ಸ್ಟಾಕ್ ವಿವರಗಳನ್ನು ನೋಡಿ ಮತ್ತು ಟ್ರೇಡಿಂಗ್ ಆರಂಭಿಸಿ

ಈಗ ನೀವು ಭಾರತದಲ್ಲಿ ಆನ್ಲೈನ್ ಟ್ರೇಡಿಂಗ್ ಪ್ರಾರಂಭಿಸಲು ಸಿದ್ಧರಾಗಿದ್ದೀರಿ. ನಿಮ್ಮ ಟ್ರೇಡಿಂಗ್ ಅಕೌಂಟ್‌ನಲ್ಲಿ ಷೇರುಗಳ ಲೈವ್ ಮಾರುಕಟ್ಟೆ ಬೆಲೆಗಳನ್ನು ನೀವು ನೋಡಬಹುದು. ನೀವು ಷೇರನ್ನು ಆಯ್ಕೆ ಮಾಡಬಹುದು ಮತ್ತು ಅದರ ಆಳವಾದ ವಿವರ, ಐತಿಹಾಸಿಕ ಬೆಲೆಗಳು, ಚಾರ್ಟ್‌ಗಳು ಇತ್ಯಾದಿಗಳನ್ನು ನೋಡಬಹುದು. ಒಮ್ಮೆ ನೀವು ನಿಮ್ಮ ವಿಶ್ಲೇಷಣೆಗಳನ್ನು ಪರಿಶೀಲಿಸಿದ ನಂತರ, ನೀವು ಷೇರುಗಳನ್ನು ಖರೀದಿಸಲು ಆರಂಭಿಸಬಹುದು ಮತ್ತು ನಿಮ್ಮ ಹೂಡಿಕೆಯ ಪ್ರಯಾಣವನ್ನು ಪ್ರಾರಂಭಿಸಬಹುದು.

*ಫ್ರೀಡಂ ಪ್ಯಾಕ್ ಮೂಲಕ 1ನೇ ವರ್ಷಕ್ಕೆ ಶೂನ್ಯ ವಾರ್ಷಿಕ ನಿರ್ವಹಣಾ ಶುಲ್ಕದೊಂದಿಗೆ (ಎಎಂಸಿ) ಅಕೌಂಟ್ ತೆರೆಯುವುದು ಉಚಿತವಾಗಿದೆ ಮತ್ತು ಎರಡನೇ ವರ್ಷದಿಂದ ಶುಲ್ಕವು ರೂ. 365+ಜಿಎಸ್‌ಟಿ ಆಗಿರುತ್ತದೆ.

ಹೆಚ್ಚುವರಿ ಓದು: ಇಂಟ್ರಾಡೇ ಟ್ರೇಡಿಂಗ್ ಎಂದರೇನು?

ಆಗಾಗ ಕೇಳಲಾದ ಪ್ರಶ್ನೆಗಳು (FAQಗಳು)

ಆನ್ಲೈನ್‌ನಲ್ಲಿ ಟ್ರೇಡ್ ಮಾಡುವುದು ಸುರಕ್ಷಿತವೇ?

ಹೌದು. ಭದ್ರತೆಗಳು ಮತ್ತು ದೃಢೀಕರಣದ ಅನೇಕ ಸುಧಾರಿತ ಕ್ರಮಗಳೊಂದಿಗೆ, ಆನ್‌ಲೈನ್‌ನಲ್ಲಿ ಟ್ರೇಡ್ ಮಾಡುವುದು ಸಂಪೂರ್ಣ ಸುರಕ್ಷಿತವಾಗಿದೆ ಈಗ ಎಲ್ಲಾ ಬ್ರೋಕರೇಜ್ ಹೌಸ್‌ಗಳು ಸಿಡಿಎಸ್‌ಎಲ್ ಜನರೇಟ್ ಮಾಡಿದ ಟಿ-ಪಿನ್ ಆಧಾರಿತ ದೃಢೀಕರಣ ಕಾರ್ಯವಿಧಾನವನ್ನು ಬಳಸುತ್ತವೆ ಟಿ-ಪಿನ್ ಒಂದು ಬಾರಿಯ ಬಳಕೆದಾರ-ರಚಿಸಿದ ಪಿನ್ ಆಗಿದ್ದು, ಒಮ್ಮೆ ಇದನ್ನು ಪರಿಶೀಲಿಸಿದ ನಂತರ, ಸಿಡಿಎಸ್ಎಲ್‌ನ ಡಿಮ್ಯಾಟ್ ಅಕೌಂಟ್‌ಗಳ ಮೂಲಕ ಆರ್ಡರ್‌ಗಳನ್ನು ಮಾಡಲು ಬಳಸಬಹುದು ನಿಮ್ಮ ಬ್ರೋಕರ್ ಸಿಡಿಎಸ್‌ಎಲ್ ನೊಂದಿಗೆ ನಿಮ್ಮ ಅಕೌಂಟ್ ತೆರೆದರೆ ನೀವು ಈ ಸೌಲಭ್ಯವನ್ನು ಬಳಸಬಹುದು.

ಸ್ಟಾಕ್ ಹೂಡಿಕೆಯು ಆರಂಭಕಾರರಿಗೆ ಸುರಕ್ಷಿತವಾಗಿದೆಯೇ?

ಇಂದಿನ ದಿನಗಳಲ್ಲಿ ಷೇರ್ ಟ್ರೇಡಿಂಗ್ ಆರಂಭಕಾರರಿಗೆ ಸರಳವಾಗಿದ್ದು, ತಂತ್ರಜ್ಞಾನದ ಪ್ರಗತಿಗೆ ಧನ್ಯವಾದ ಹೇಳಬೇಕು. ಆದಾಗ್ಯೂ, ಇದು ಹಣವನ್ನು ಒಳಗೊಂಡಿರುವುದನ್ನು ಪರಿಗಣಿಸಿ, ನೀವು ಹೂಡಿಕೆ ಮಾಡಲು ಪ್ರಾರಂಭಿಸುವ ಮೊದಲು ಎಲ್ಲಾ ಅಪಾಯಗಳು ಮತ್ತು ರಿವಾರ್ಡ್‌ಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ವಾಸ್ತವವಾಗಿ, ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟೀಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡುವುದು ಸರಳವಾಗಿದೆ. 'ಪಿಕ್‌ರೈಟ್‌' ರಚಿಸಿದ ಸ್ಟಾಕ್‌ಗಳ ಬಾಸ್ಕೆಟ್‌ನಲ್ಲಿ ನೀವು ಹೂಡಿಕೆ ಮಾಡಬಹುದು. ಇದು ನೀವು ಗಂಟೆಗಳವರೆಗೆ ಸಂಶೋಧನೆ ಮಾಡುವ ತೊಂದರೆಯನ್ನು ನಿವಾರಿಸುತ್ತದೆ ಮತ್ತು ಸರಿಯಾದ ಸಲಹೆಯೊಂದಿಗೆ ನಿಮ್ಮ ಪೋರ್ಟ್‌ಫೋಲಿಯೋವನ್ನು ಬೆಳೆಸಲು ಸಹಾಯ ಮಾಡುತ್ತದೆ. ಅಕ್ಸೆಸ್ ಮಾಡಲು ಕ್ಲಿಕ್ ಮಾಡಿ

ಸ್ಟಾಕ್ ಹೂಡಿಕೆಯು ಆರಂಭಕಾರರಿಗೆ ಸುರಕ್ಷಿತವೇ?

ಹೌದು, ಯಾರು ಬೇಕಾದರೂ ಸ್ಟಾಕ್ ಟ್ರೇಡಿಂಗ್ ಮಾಡಬಹುದು ಮತ್ತು ಸ್ಟಾಕ್ ಟ್ರೇಡಿಂಗ್ ಮಾಡಲು ನಿಮಗೆ ಯಾವುದೇ ನಿರ್ದಿಷ್ಟ ಅರ್ಹತೆಯ ಅಗತ್ಯವಿಲ್ಲ. ಆದರೆ, ಟ್ರೇಡಿಂಗ್‌ಗೆ ಕಂಪನಿಯ ಬ್ಯಾಲೆನ್ಸ್ ಶೀಟ್ ಮತ್ತು ಅದರ ಬೆಲೆಯ ಮಾದರಿಗಳ ವಿಶ್ಲೇಷಣೆ, ಸಂಶೋಧನೆ ಮತ್ತು ಅರ್ಥೈಸುವಿಕೆಯ ಅಗತ್ಯವೂ ಇದೆ. ಈ ಪರಿಕಲ್ಪನೆಗಳ ಅಧ್ಯಯನವನ್ನು ತಾಂತ್ರಿಕ ವಿಶ್ಲೇಷಣೆ ಮತ್ತು ಮೂಲಭೂತ ವಿಶ್ಲೇಷಣೆ ಎಂದು ಕರೆಯಲಾಗುತ್ತದೆ. ಈ ಕೌಶಲ್ಯಗಳನ್ನು ಪಡೆಯಲು ಮಾರುಕಟ್ಟೆಯನ್ನು ಅಧ್ಯಯನ ಮಾಡುವ ವ್ಯಕ್ತಿಯು ಉತ್ತಮ ಟ್ರೇಡರ್ ಆಗುತ್ತಾರೆ. ಇಂಟರ್ನೆಟ್ ಯುಗದಲ್ಲಿ, ಮಾಹಿತಿಯನ್ನು ಪಡೆಯುವುದು ಸುಲಭ ಮತ್ತು ಕೆಲವೊಮ್ಮೆ ಉಚಿತವಾಗಿರುವುದರಿಂದ ಇವುಗಳನ್ನು ಕಲಿಯುವುದು ಕಷ್ಟವಲ್ಲ. ಈ ಕೌಶಲ್ಯಗಳನ್ನು ಕಲಿಯಲು ಸಮಯ ಬೇಕಾಗುತ್ತದೆ ಮತ್ತು ಸ್ಟಾಕ್ ಟ್ರೇಡರ್ ಅದಕ್ಕೆ ಅನುಗುಣವಾಗಿ ಅಪಾಯಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

ಹೂಡಿಕೆ ಮಾಡಲು ಆರಂಭಿಸುತ್ತಿರುವವರಿಗೆ ಸ್ಟಾಕ್‌ಗಳು ಉತ್ತಮ ಆಯ್ಕೆಯೇ?

ಹೂಡಿಕೆಯನ್ನು ಆರಂಭಿಸುತ್ತಿರುವವರಿಗೆ ಸ್ಟಾಕ್‌ಗಳು ಅತ್ಯಂತ ಆಕರ್ಷಕ ಹೂಡಿಕೆ ಪ್ರಕಾರಗಳಲ್ಲಿ ಒಂದಾಗಿವೆ. ಪ್ರಾಥಮಿಕವಾಗಿ ಆನ್ಲೈನ್ ಜಗತ್ತಿನಲ್ಲಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಸರಳವಾಗಿದೆ ಮತ್ತು ಆರಂಭಕಾರರು ಕೇವಲ ರೂ. 100 ರೊಂದಿಗೆ ಹೂಡಿಕೆ ಮಾಡಲು ಆರಂಭಿಸಬಹುದು. ಸ್ಟಾಕ್ ಮಾರುಕಟ್ಟೆಯು ಬಂಡವಾಳದ ಕಡಿಮೆ ಮಾನ್ಯತೆಯೊಂದಿಗೆ ಹೂಡಿಕೆ ಮಾಡುವಾಗ ಆರಂಭಕಾರರಿಗೆ ಕಲಿಯಲು ಅವಕಾಶ ಮಾಡಿಕೊಡುತ್ತದೆ. ಹೆಚ್ಚುತ್ತಿರುವ ಹಣದುಬ್ಬರದೊಂದಿಗೆ, ಫಿಕ್ಸೆಡ್ ಡೆಪಾಸಿಟ್‌ಗಳಂತಹ ಸಾಂಪ್ರದಾಯಿಕ ಹೂಡಿಕೆಗಳ ಮೂಲಗಳು ಸ್ಟಾಕ್ ಮಾರುಕಟ್ಟೆಗಿಂತ ಕಡಿಮೆ ಆದಾಯವನ್ನು ನೀಡಿವೆ. ವಿಶೇಷವಾಗಿ ಪ್ಯಾಂಡೆಮಿಕ್ ನಂತರ, ಹೂಡಿಕೆಯ ಮಹತ್ವವನ್ನು ಅರಿತುಕೊಂಡ ಹೂಡಿಕೆದಾರರು ಸ್ಟಾಕ್ ಮಾರುಕಟ್ಟೆ ಕಡೆಗೆ ಮುಖ ಮಾಡಿದ್ದಾರೆ.

ನಾನು ಆನ್‌ಲೈನ್‌ನಲ್ಲಿ ಹೇಗೆ ಟ್ರೇಡ್ ಮಾಡಬಹುದು?

  • ನಿಮ್ಮ ಸ್ಟಾಕ್‌ಬ್ರೋಕರ್ ಅನ್ನು ಗುರುತಿಸಿ: ಮೊದಲ ಹಂತವೆಂದರೆ, ಸಿಎಸ್‌ಡಿಎಲ್ ಅಥವಾ ಎನ್‌ಎಸ್‌ಡಿಎಲ್- ಈ ಎರಡು ಡೆಪಾಸಿಟರಿಗಳಲ್ಲಿ ಯಾವುದಾದರೂ ಒಂದರಲ್ಲಿ ನೋಂದಣಿಯಾದ ಸ್ಟಾಕ್‌ಬ್ರೋಕರ್ ಅನ್ನು ಗುರುತಿಸುವುದು.
  • ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಿರಿ: ನಿಮ್ಮ ಸ್ಟಾಕ್‌ಬ್ರೋಕರ್‌ನೊಂದಿಗೆ ಡಿಮ್ಯಾಟ್ ಅಕೌಂಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಿರಿ. ಬಿಎಫ್ಎಸ್ಎಲ್ ಫ್ರೀಡಂ ಪ್ಯಾಕಿನೊಂದಿಗೆ ನೀವು ಉಚಿತ ಡಿಮ್ಯಾಟ್ ಅಕೌಂಟನ್ನು ತೆರೆಯಬಹುದು.
  • ನಿಮ್ಮ ಟ್ರೇಡಿಂಗ್ ಅಕೌಂಟ್‌ಗೆ ಹಣ ಸೇರಿಸಿ: ನಿಮ್ಮ ಟ್ರೇಡಿಂಗ್ ಅಕೌಂಟ್‌‌ಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ ಮತ್ತು ಸ್ಟಾಕ್ ಮಾರುಕಟ್ಟೆಯಲ್ಲಿ ಖರೀದಿ ಮತ್ತು ಮಾರಾಟವನ್ನು ಆರಂಭಿಸಿ.

ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡಲು ನೀವು ಸ್ಟಾಕ್ ವಿವರಗಳು, ಇತಿಹಾಸ, ವಿಶ್ಲೇಷಣೆ ಮತ್ತು ಚಾರ್ಟ್‌ಗಳನ್ನು ನೋಡಬಹುದು.

ನಾನು ಸ್ಟಾಕ್‌ಗಳಲ್ಲಿ ಸಣ್ಣ ಪ್ರಮಾಣದ ಹಣವನ್ನು ಹೂಡಿಕೆ ಮಾಡಬಹುದೇ?

ಹೌದು, ಸ್ಟಾಕ್ ಮಾರುಕಟ್ಟೆಯ ವೈಶಿಷ್ಟ್ಯವೇನೆಂದರೆ ನೀವು ನಿಮ್ಮ ಸ್ವಂತ ನಿಯಮಗಳ ಪ್ರಕಾರ ಮತ್ತು ನಿಮ್ಮ ಕೈಲಾದ ಮೊತ್ತದೊಂದಿಗೆ ಹೂಡಿಕೆ ಮಾಡಬಹುದು. ನೀವು ರೂ. 100 ರಷ್ಟು ಸಣ್ಣ ಮೊತ್ತದೊಂದಿಗೆ ಸ್ಟಾಕ್ ಮಾರುಕಟ್ಟೆಯಲ್ಲಿ ನಿಮ್ಮ ಹೂಡಿಕೆಯನ್ನು ಆರಂಭಿಸಬಹುದು. ಸಣ್ಣ ಪ್ರಮಾಣದ ಹಣವನ್ನು ಹೂಡಿಕೆ ಮಾಡುವಾಗ ನೀವು ಕಲಿಯಬಹುದು. ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಗಳ ಮೂಲಕ ಆರಂಭಕಾರರು ಕೂಡಾ ದೀರ್ಘಾವಧಿಯ ಹೂಡಿಕೆಗಾಗಿ (Pickright* ಮೂಲಕ ನೀಡಲಾಗುತ್ತದೆ) ಆಯ್ದ ಸ್ಟಾಕ್ ಬಾಸ್ಕೆಟ್‌ಗಳನ್ನು ಅಕ್ಸೆಸ್ ಮಾಡಬಹುದು ಮತ್ತು ತೊಂದರೆ ರಹಿತವಾಗಿ ಹೂಡಿಕೆ ಮಾಡಬಹುದು. ಈಗಲೇ ಹೂಡಿಕೆ ಮಾಡಲು ಆರಂಭಿಸಿ!

ಆನ್ಲೈನ್ ಟ್ರೇಡಿಂಗ್‌ನ ಪ್ರಯೋಜನಗಳು ಏನೇನು?

ವೆಚ್ಚಗಳ ಹೊರತಾಗಿ ಆನ್ಲೈನ್ ಟ್ರೇಡಿಂಗ್ನಲ್ಲಿ ಅನೇಕ ಪ್ರಯೋಜನಗಳಿವೆ. ಇದು ಸಮಯದ ವಿಳಂಬವಿಲ್ಲದೆ ನಷ್ಟ ಮತ್ತು ಕಳ್ಳತನದ ಅಪಾಯವನ್ನು ಕಡಿಮೆ ಮಾಡುವ ಫೈನಾನ್ಷಿಯಲ್ ಸೆಕ್ಯೂರಿಟಿಗಳ ಟ್ರೇಡಿಂಗ್‌ನ ಸುರಕ್ಷಿತ, ಆನ್ಲೈನ್ ವಿಧಾನವಾಗಿದೆ. ನೀವು ಭೌಗೋಳಿಕ ಗಡಿಗಳ ಅಡೆತಡೆಯಿಲ್ಲದೆ ನೀವು ಸುಲಭವಾಗಿ ಸೆಕ್ಯೂರಿಟಿಗಳನ್ನು ಟ್ರೇಡ್ ಮಾಡಬಹುದು ಮತ್ತು ಎಚ್ಚರಿಕೆಯಿಂದ ಸಂಶೋಧನೆ ಮತ್ತು ವಿಶ್ಲೇಷಣೆ ಮಾಡಿ ನಿಮ್ಮ ಸಂಪತ್ತನ್ನು ಹೆಚ್ಚಿಸಬಹುದು, ಇದು ಸದೃಢ ಟ್ರೇಡಿಂಗ್ ಸಿಸ್ಟಮ್ ಅನ್ನು ಬೆಂಬಲಿಸುತ್ತದೆ.

ಆನ್ಲೈನ್ ಟ್ರೇಡಿಂಗ್, ಭೌತಿಕ ಟ್ರೇಡಿಂಗ್ ವಾತಾವರಣದಲ್ಲಿ ನಿಮಗೆ ಸಾಧ್ಯವಾಗದಿರುವ ವಿವಿಧ ಸೆಕ್ಯೂರಿಟಿಗಳು ಮತ್ತು ಟ್ರೇಡಿಂಗ್ ತಂತ್ರಗಳನ್ನು ಪ್ರಯೋಗಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಕೆಲವೇ ಸೆಕೆಂಡ್‌ಗಳಲ್ಲಿ ಆನ್ಲೈನ್ ಟ್ರೇಡಿಂಗ್‌ನೊಂದಿಗೆ ಅನೇಕ ಸಂಕೀರ್ಣ ಮತ್ತು ಲಾಭದಾಯಕ ಕಾರ್ಯತಂತ್ರಗಳನ್ನು ನಿರ್ಮಿಸಬಹುದು, ಮತ್ತು ಬಾಟ್ ಟ್ರೇಡಿಂಗ್ ಕೂಡ ಈಗ ಲಾಭದ ಉತ್ಪಾದನೆಗೆ ಸ್ವೀಕಾರಾರ್ಹ ವಿಧಾನವಾಗಿದೆ.

ಆನ್ಲೈನ್‌ನಲ್ಲಿ ಟ್ರೇಡಿಂಗ್ ಆರಂಭಿಸಲು ನನಗೆ ಅನುಭವ ಇರಬೇಕೇ?

ಇಲ್ಲ. ಭಾರತದಲ್ಲಿ ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಆರಂಭಿಸಲು ನೀವು ಅನುಭವ ಹೊಂದಿರಬೇಕಿಲ್ಲ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಅಕೌಂಟ್‌ಗೆ ಅಪ್ಲೈ ಮಾಡುವ ಮೂಲಕ ನೀವು ಹಂತಗಳನ್ನು ಕಲಿಯಬಹುದು ಒಮ್ಮೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆದ ನಂತರ, ಡೆಲಿವರಿ-ಆಧಾರಿತ ಟ್ರೇಡಿಂಗ್‌ಗಾಗಿ ಸರಳ ಸೂಚನೆಗಳನ್ನು ಬಳಸಿಕೊಂಡು ನೀವು ಭಾರತದಲ್ಲಿ ಟ್ರೇಡಿಂಗ್ ಆರಂಭಿಸಬಹುದು ಆನ್ಲೈನ್‌ನಲ್ಲಿ ಡೆಮೋ ವಿಡಿಯೋಗಳು ಮತ್ತು ಸರಳವಾಗಿ ವಿವರಿಸುವ ಸೆಷನ್‌ಗಳು ಲಭ್ಯವಿವೆ.

ಆನ್ಲೈನ್ ಟ್ರೇಡಿಂಗ್‌ನಲ್ಲಿ ವಿಷಯಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೀವು ವಿವಿಧ ರೀತಿಯ ಟ್ರೇಡಿಂಗ್ ತಂತ್ರಗಳು ಮತ್ತು ಟ್ರೇಡಿಂಗ್ ಪ್ರಕ್ರಿಯೆಯ ಬಗ್ಗೆ ಕೂಡ ಓದಬಹುದು.

ಭಾರತದಲ್ಲಿ ಸ್ಟಾಕ್‌‌ಗಳಲ್ಲಿ ಟ್ರೇಡಿಂಗ್ ಪ್ರಾರಂಭಿಸಲು ನನಗೆ ಎಷ್ಟು ಹಣ ಬೇಕಾಗುತ್ತದೆ?

ಸ್ಟಾಕ್ ಮಾರುಕಟ್ಟೆಯಲ್ಲಿ ಸಾವಿರಾರು ಕಂಪನಿಗಳ ಷೇರುಗಳನ್ನು ಲಿಸ್ಟ್ ಮಾಡಲಾಗಿದೆ ಈ ಷೇರುಗಳ ಬೆಲೆಗಳು ರೂ. 10 ಕ್ಕಿಂತ ಕಡಿಮೆಯಿಂದ ಹಿಡಿದು ರೂ. 50,000 ವರೆಗೆ ಇರಬಹುದು ಆದ್ದರಿಂದ, ನೀವು ರೂ. 100 ರಷ್ಟು ಕಡಿಮೆ ಬಂಡವಾಳದೊಂದಿಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಭಾಗವಹಿಸಲು ಆರಂಭಿಸಬಹುದು ನೀವು ಷೇರು ಬೆಲೆ ಮತ್ತು ಸಂಬಂಧಿತ ಬ್ರೋಕರೇಜ್ ವೆಚ್ಚಗಳನ್ನು ಪೂರೈಸಬೇಕು.
 

ಹಕ್ಕುತ್ಯಾಗ:
ಮಾಹಿತಿ, ಪ್ರಾಡಕ್ಟ್‌‌ಗಳು ಮತ್ತು ಸೇವೆಗಳನ್ನು ಅಪ್ಡೇಟ್ ಮಾಡಲು ಅಥವಾ ಇಲ್ಲಿ ಲಭ್ಯವಿರುವ ಸೇವೆಗಳನ್ನು ಅಪ್ಡೇಟ್ ಮಾಡಲು ಕಾಳಜಿ ವಹಿಸುತ್ತದೆ ನಮ್ಮ ವೆಬ್‌ಸೈಟ್ ಮತ್ತು ಸಂಬಂಧಿತ ವೇದಿಕೆಗಳು/ವೆಬ್‌ಸೈಟ್‌ಗಳು, ಮಾಹಿತಿಯನ್ನು ಅಪ್ಡೇಟ್ ಮಾಡುವಲ್ಲಿ ಅಸಮರ್ಥ ದೋಷಗಳು ಅಥವಾ ಟೈಪೋಗ್ರಾಫಿಕಲ್ ದೋಷಗಳು ಅಥವಾ ವಿಳಂಬಗಳು ಇರಬಹುದು. ಈ ಸೈಟಿನಲ್ಲಿರುವ ಮತ್ತು ಸಂಬಂಧಿತ ವೆಬ್ ಪೇಜ್‌ಗಳಲ್ಲಿ ವಸ್ತು ವಿಷಯಗಳು ಉಲ್ಲೇಖ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಇರುತ್ತದೆ ಮತ್ತು ಯಾವುದೇ ಅಸಂಗತತೆಯ ಸಂದರ್ಭದಲ್ಲಿ ಆಯಾ ಪ್ರಾಡಕ್ಟ್/ಸೇವಾ ದಾಖಲೆಯಲ್ಲಿ ನಮೂದಿಸಲಾದ ವಿವರಗಳು ಅಸ್ತಿತ್ವದಲ್ಲಿರುತ್ತವೆ. ಇದರಲ್ಲಿರುವ ಮಾಹಿತಿಯ ಆಧಾರದಲ್ಲಿ ಕ್ರಮ ಕೈಗೊಳ್ಳುವ ಮೊದಲು ವೃತ್ತಿಪರ ಸಲಹೆಯನ್ನು ಸಬ್ಸ್ಕ್ರೈಬರ್ಗಳಿಗೆ ಮತ್ತು ಬಳಕೆದಾರರಿಗೆ ಸಲ್ಲಿಸಬೇಕು. ಸಂಬಂಧಿತ ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್ ಮತ್ತು ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ನೋಡಿದ ನಂತರ ದಯವಿಟ್ಟು ಯಾವುದೇ ಪ್ರಾಡಕ್ಟ್ ಅಥವಾ ಸೇವೆಗೆ ಸಂಬಂಧಿಸಿದಂತೆ ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಿ. ಯಾವುದೇ ಅಸಂಗತತೆ ಕಂಡುಬಂದರೆ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ ನಮ್ಮನ್ನು ತಲುಪಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ